Wednesday , January 24 2018
Home / News NOW (page 2)

News NOW

ಗಲ್ಲು ಶಿಕ್ಷೆಯಿಂದ ಸೈನೈಡ್ ಮೋಹನ್ ಪಾರು : ಸಾಯುವವರೆಗೆ ಜೈಲು : ಹೈಕೋರ್ಟ್ ಆದೇಶ

ಬೆಂಗಳೂರು : ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಸೈನೈಡ್ ಮೋಹನ್ ಗಲ್ಲು ಶಿಕ್ಷೆಯಿಂದ ಪಾರಾಗಿದ್ದಾನೆ. ಆದರೆ, ಈತ ಸಾಯುವ ವರೆಗೆ ಜೈಲಿನಲ್ಲೇ ಇರುವಂತೆ ಶಿಕ್ಷೆ ವಿಧಿಸಿ ರಾಜ್ಯ ಹೈಕೋರ್ಟ್ ಆದೇಶ ಹೊರಡಿಸಿದೆ. ಈತ ಸಮಾಜಕ್ಕೆ ಮಾರಕ. ಹೀಗಾಗಿ, ಈತನಿಗೆ ಯಾವುದೇ ಕಾರಣಕ್ಕೂ ಕ್ಷಮಾದಾನ ನೀಡಬಾರದು ಎಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದೆ. ನ್ಯಾ. ರವಿ ಮಳಿಮಠ್ ಮತ್ತು ನ್ಯಾ. ಜಾನ್ ಮೈಕಲ್ ಕುನ್ನಾ ಅವರಿದ್ದ ವಿಭಾಗೀಯ ಪೀಠ ಈ ಆದೇಶ …

Read More »

ಡೊನಾಲ್ಡ್​ ಟ್ರಂಪ್ ಪತ್ನಿಯರ ಕಿತ್ತಾಟ : ‘ಫಸ್ಟ್​ ಲೇಡಿ’ ಪಟ್ಟಕ್ಕೆ ಜಗಳ

ನ್ಯೂಯಾರ್ಕ್​ : ಅಮೇರಿಕಾದ ಅಧ್ಯಕ್ಷ ಡೊನ್ಯಾಲ್ಡ್​ ಟ್ರಂಪ್​ ಈಗ ಪೀಕಲಾಟಕ್ಕೆ ಸಿಲುಕಿದ್ದಾರೆ. ಇವರ ಪತ್ನಿಯರು ‘ಫಸ್ಟ್​ ಲೇಡಿ’ ಪಟ್ಟಕ್ಕೆ ಜಗಳ ಶುರು ಮಾಡಿದ್ದಾರೆ. ಅಮೇರಿಕಾದ ಅಧ್ಯಕ್ಷರ ಪತ್ನಿಯನ್ನು ‘ಪ್ರಥಮ ಮಹಿಳೆ’ ಎಂದೇ ಗುರುತಿಸಲಾಗುತ್ತದೆ. ಮೊನ್ನೆ ಸೋಮವಾರ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಡೊನಾಲ್ಡ್​ ಟ್ರಂಪ್ ಮೊದಲ ಪತ್ನಿ ಇವಾನಾ ಟ್ರಂಪ್​ ತಾನೇ ‘ಪ್ರಥಮ ಮಹಿಳೆ’ ಎಂದು ಹೇಳಿಕೊಂಡಿದ್ದಾರೆ. ತನ್ನ ‘ರೈಸಿಂಗ್ ಟ್ರಂಪ್’ ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ಇವಾನಾ ಈ ಹೇಳಿಕೆ ನೀಡಿದ್ದರು. ಇದು …

Read More »

ಪಂಚಕುಲ ಗಲಭೆಯಲ್ಲಿ ತನ್ನ ಪಾತ್ರ ಒಪ್ಪಿಕೊಂಡ ಹನಿಪ್ರೀತ್ ಸಿಂಗ್

ಚಂಡೀಗಡ : ಅತ್ಯಾಚಾರ ಆರೋಪದಲ್ಲಿ ಡೇರಾ ಸಚ್ಛಾ ಸೌಧದ ಮುಖ್ಯಸ್ಥ ರಾಮ್ ರಹೀಂ ಸಿಂಗ್ನ ಬಂಧನ ವೇಳೆ ನಡೆದಿದ್ದ ಹಿಂಸಾಚಾರದ ಮಾಸ್ಟರ್ ಮೈಂಡ್ ತಾನೇ ಎಂದು ರಾಮ್ ರಹೀಂನ ದತ್ತು ಪುತ್ರಿ ಹನಿಪ್ರೀತ್ ಸಿಂಗ್ ಒಪ್ಪಿಕೊಂಡಿದ್ದಾಳೆ. ಅಂದು ಪಂಚಕುಲದಲ್ಲಿ ನಡೆದಿದ್ದ ಹಿಂಸಾಚಾರದಲ್ಲಿ 38 ಜನ ಬಲಿಯಾಗಿದ್ದರು. ಇದಾದ ಬಳಿಕ ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರು ಸಾಕಷ್ಟು ಕಷ್ಟಪಟ್ಟಿದ್ದರು. ಈ ಘಟನೆಯ ನಂತರ ಹನಿಪ್ರೀತ್ ಸಿಂಗ್ ತಲೆ ಮರೆಸಿಕೊಂಡಿದ್ದರು. ಈಕೆಯನ್ನು ಇತ್ತೀಚೆಗಷ್ಟೇ …

Read More »

ಉಗ್ರರಿಗೆ ಶಸ್ತ್ರಾಸ್ತ್ರ ಪೂರೈಕೆ : ಇಬ್ಬರು ಪೊಲೀಸರು ಸೇರಿ ಮೂವರು ಅರೆಸ್ಟ್

ಶ್ರೀನಗರ: ಹಿಜ್ಬುಲ್ ಮುಜಾಹಿದ್ದೀನ್ ಉಗ್ರಗಾಮಿ ಸಂಘಟನೆಗೆ ಶಸ್ತ್ರಾಸ್ತ್ರ ಪೂರೈಕೆ ಮತ್ತು ನೆರವು ನೀಡಿದ ಆರೋಪದಲ್ಲಿ ಇಬ್ಬರು ಪೊಲೀಸರು ಸೇರಿ ಮೂವರನ್ನು ಬಂಧಿಸಲಾಗಿದೆ. ಶೋಪಿಯಾನ್ನಲ್ಲಿ ಈ ಮೂವರನ್ನು ಸೆರೆ ಹಿಡಿಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಂಧಿತ ಮೂವರಲ್ಲಿ ಒಬ್ಬ ಉಗ್ರಗಾಮಿ ಸಂಘಟನೆಯ ಸಕ್ರಿಯ ಕಾರ್ಯಕರ್ತನಾಗಿದ್ದು, ಈತನನ್ನು ಆದೀಲ್ ಅಹಮದ್ ನಿಗ್ರೂ ಎಂದು ಗುರುತಿಸಲಾಗಿದೆ. ಈತ ಆಶಿಂಪೋರಾದ ಪೊಲೀಸ್ ಪೇದೆಯಾದ ಶಬೀರ್ ಅಹಮದ್ ಮಲೀಕ್ ನಿಂದ ಒಂದು ಎಕೆ 47 ಹಾಗೂ 40 …

Read More »

18ಕ್ಕಿಂತ ಕಡಿಮೆ ವಯಸ್ಸಿನ ಪತ್ನಿಯೊಂದಿಗೆ ಲೈಂಗಿಕ ಸಂಪರ್ಕ ಅತ್ಯಾಚಾರಕ್ಕೆ ಸಮ : ಸುಪ್ರೀಂಕೋರ್ಟ್​ ತೀರ್ಪು

ನವದೆಹಲಿ : ಬಾಲ್ಯ ವಿವಾಹ ತಡೆಗೆ ಸುಪ್ರೀಂಕೋರ್ಟ್​ ಮಹತ್ವದ ತೀರ್ಪು ಪ್ರಕಟಿಸಿದೆ. 18 ವರ್ಷ ಕೆಳಗಿನ ಪತ್ನಿಯೊಂದಿಗೆ ಲೈಂಗಿಕ ಸಂಪರ್ಕವನ್ನು ಅತ್ಯಾಚಾರವೆಂದೇ ಪರಿಗಣಿಸಲಾಗುವುದು ಎಂದು ನ್ಯಾಯಾಲಯ ಹೇಳಿದೆ. ಇಂತಹ ಪ್ರಕರಣ ಶಿಕ್ಷಾರ್ಹ ಎಂದೂ ನ್ಯಾಯಪೀಠ ತಿಳಿಸಿದೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಸಂದರ್ಭದಲ್ಲಿ ನ್ಯಾಯಾಲಯ ಈ ತೀರ್ಪು ಪ್ರಕಟಿಸಿದ್ದು, 15 ರಿಂದ 18 ವರ್ಷದೊಳಗಿನ ವಿವಾಹಿತೆಯನ್ನು ಲೈಂಗಿಕ ಕ್ರಿಯೆಗೆ ಒತ್ತಾಯಿಸಿದರೆ ಅದನ್ನು ಅತ್ಯಾಚಾರವೆಂದು ಎಫ್​ಐಆರ್ ದಾಖಲಿಸಿಕೊಳ್ಳಬಹುದು ಎಂದು ನ್ಯಾಯಾಲಯ ಸ್ಪಷ್ಟವಾಗಿ …

Read More »

ಒಂದು ಬೈಕ್​​ನಲ್ಲಿ ಐದು ಜನ : ಕೈ ಮುಗಿದ ಪೊಲೀಸ್ ಅಧಿಕಾರಿ : ವೈರಲ್ ಆಗಿದೆ ಫೋಟೋದ ಹಿಂದಿನ ಕತೆ

ಹೈದರಾಬಾದ್ : ಒಂದು ಬೈಕ್​​ನಲ್ಲಿ ಐದು ಜನ ಹೋಗುತ್ತಿದ್ದ ವೇಳೆ ಅವರಿಗೆ ಕೈ ಮುಗಿಯುವ ಪೊಲೀಸ್ ಅಧಿಕಾರಿಯ ಫೋಟೋವೊಂದು ಈಗ ವೈರಲ್ ಆಗಿದೆ. ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿರುವ ಈ ಐವರಿಗೆ ಪೊಲೀಸ್ ಅಧಿಕಾರಿ ತನ್ನದೇ ಈ ಶೈಲಿಯಲ್ಲಿ ಚಾಟಿ ಬೀಸಿದ್ದಾರೆ. ಒಂದು ಬೈಕ್​​ನಲ್ಲಿ ಮೂವರು ಹೋಗುವುದೇ ಅಪರಾಧ. ಅಂತಹದರಲ್ಲಿ ಈ ಬೈಕ್​​ನಲ್ಲಿ ಐದು ಜನರಿದ್ದಾರೆ. ಅದೂ ಅಲ್ಲದೆ, ಯಾರೊಬ್ಬರೂ ಹೆಲ್ಮೆಟ್ ಧರಿಸಿಲ್ಲ. ಇದು ಟ್ರಾಫಿಕ್ ನಿಯಮದ ಸಂಪೂರ್ಣ ಉಲ್ಲಂಘನೆ. ಈ …

Read More »

ಅಪಘಾತ ಪ್ರಕರಣ : ಆಸ್ಪತ್ರೆಯಿಂದ ಆರೋಪಿ ವಿಷ್ಣು ಎಸ್ಕೇಪ್​…!

ಬೆಂಗಳೂರು : ಜಯನಗರದ ಸೌತ್​ ಎಂಡ್ ಸರ್ಕಲ್​ ಬಳಿ ಬುಧವಾರ ಮಧ್ಯರಾತ್ರಿ ಬೇಕಾಬಿಟ್ಟಿ ವಾಹನ ಚಲಾಯಿಸಿ ಅಪಘಾತ ನಡೆಸಿದ್ದ ಉದ್ಯಮಿ ಆದಿಕೇಶವಲು ಅವರ ಮೊಮ್ಮಗ ವಿಷ್ಣು ಆಸ್ಪತ್ರೆಯಿಂದಲೇ ಪರಾರಿಯಾಗಿದ್ದಾನೆ. ಅಪಘಾತದಿಂದ ಸಣ್ಣಪುಟ್ಟ ಗಾಯಗೊಳಗಾಗಿದ್ದ ವಿಷ್ಣು ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಆದರೆ, ಬೆಳಗ್ಗೆ ಯಾರಿಗೂ ಗೊತ್ತಾಗದಂತೆ ವಿಷ್ಣು ಎಸ್ಕೇಪ್ ಆಗಿದ್ದಾನೆ ಎಂದು ಗೊತ್ತಾಗಿದೆ. ಆಸ್ಪತ್ರೆಯ ತುರ್ತು ನಿರ್ಗಮನ ದ್ವಾರದಿಂದ ವಿಷ್ಣು ಪರಾರಿಯಾಗಿದ್ದಾನೆ. ಪಕ್ಕಾ ಪ್ಲ್ಯಾನ್ ಮಾಡಿಕೊಂಡೇ ಈ ಕೆಲಸ ನಡೆದಿದೆ. …

Read More »

ಎಸ್​​ಬಿಐ ಯಡವಟ್ಟು…! : 100 ಕೋಟಿ ರೂಪಾಯಿ ಬೇರೆಯವರ ಖಾತೆಗೆ ಜಮಾ…!

ರಾಂಚಿ : ದೇಶದ ಪ್ರಮುಖ ಬ್ಯಾಂಕ್​ ಸ್ಟೇಟ್​ ಬ್ಯಾಂಕ್ ಆಫ್​ ಇಂಡಿಯಾ(ಎಸ್​ಬಿಐ) ದೊಡ್ಡ ಯಡವಟ್ಟು ಮಾಡಿಕೊಂಡಿದೆ. 100 ಕೋಟಿ ರೂಪಾಯಿ ಹಣವನ್ನು ತಪ್ಪಾಗಿ ಬೇರೆಯವರ ಖಾತೆಗೆ ಬ್ಯಾಂಕ್ ಜಮಾ ಮಾಡಿದೆ. ಜಾರ್ಖಂಡ್​​ನ ಮಧ್ಯಾಹ್ನದ ಬಿಸಿಯೂಟಕ್ಕೆ ಬಳಕೆಯಾಗಬೇಕಾಗಿದ್ದ 100 ಕೋಟಿ ಹಣವನ್ನು ಬ್ಯಾಂಕ್​​ ನಿರ್ಮಾಣ ಸಂಸ್ಥೆಯ ಖಾತೆಗೆ ಜಮಾ ಮಾಡಿದೆ. ಎಸ್​ಬಿಐ ಅಧಿಕಾರಿಗಳ ನಿರ್ಲಕ್ಷ್ಯ ಇಲ್ಲಿ ಎದ್ದು ಕಾಣುತ್ತಿದೆ. ಆಗಸ್ಟ್​ 5 ರಿಂದ ಸೆಪ್ಟೆಂಬರ್ 19ರ ನಡುವೆ ಈ ಹಣ ಜಮಾ …

Read More »

`ಜಯಲಲಿತಾ ಇದ್ದ ವಾರ್ಡ್ ನಲ್ಲಿ ಸಿಸಿ ಟಿವಿ ಇರಲಿಲ್ಲ…’

ಚೆನ್ನೈ : ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಸಾವು ಇನ್ನೂ ನಿಗೂಢವಾಗಿದ್ದು, ಅನುಮಾನಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಮೊನ್ನೆಯಷ್ಟೇ ತಮಿಳುನಾಡಿನ ಅರಣ್ಯ ಸಚಿವ ದಿಂಡಗಲ್ ಶ್ರೀನಿವಾಸನ್ ಜಯಲಲಿತಾ ಇಡ್ಲಿ ತಿನ್ನುತ್ತಿದ್ದರು ಎಂದು ನಾವು ಸುಳ್ಳು ಹೇಳಿದ್ದೇವು ಎಂದು ಹೇಳಿದ್ದರು. ಈ ಮಧ್ಯೆ, ಜಯಲಲಿತಾ ಆಸ್ಪತ್ರೆಯಲ್ಲಿ ಇರುವ ದೃಶ್ಯಗಳು ಎಂದು ಕೆಲವು ವೀಡಿಯೋ ಕೂಡಾ ಹರಿದಾಡುತ್ತಿತ್ತು. ಆದರೆ, ಇದೀಗ ಇವೆಲ್ಲದಕ್ಕೆ ಉತ್ತರ ಎಂಬಂತೆ ಅಪೋಲೋ ಆಸ್ಪತ್ರೆ ಒಂದು ಸ್ಪಷ್ಟನೆ …

Read More »

ನಾಗಾ ಬಂಡುಕೋರರ ಶಿಬಿರದ ಮೇಲೆ ಸೇನೆಯ ದಾಳಿ

ನವದೆಹಲಿ : ಭಾರತ ಮಯಾನ್ಮಾರ್ ಗಡಿ ಭಾಗದಲ್ಲಿ ಬೀಡು ಬಿಟ್ಟಿದ್ದ ನಾಗಾ ಬಂಡುಕೋರರಿಗೆ ಭಾರತ ತಕ್ಕ ಶಾಸ್ತಿ ಮಾಡಿದೆ. ಮಹತ್ವದ ಬೆಳವಣಿಗೆಯಲ್ಲಿ ಭಾರತೀಯ ಸೇನೆ ಬಂಡುಕೋರರ ಶಿಬಿರ ಮೇಲೆ ಹಠಾತ್ ದಾಳಿ ಮಾಡಿದೆ. ಈ ದಾಳಿಯಿಂದ ಹಲವಾರು ಬಂಡುಕೋರರು ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆದರೆ, ತಾವು ಅಂತಾರಾಷ್ಟ್ರೀಯ ಗಡಿಯನ್ನು ದಾಟಿ ಹೋಗಿ ದಾಳಿ ಮಾಡಿಲ್ಲ ಎಂಬ ವಿಷಯವನ್ನು ಸೇನೆಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. Detailed statement attached pic.twitter.com/nbLYMLCqxQ …

Read More »
error: Content is protected !!