Tuesday , October 16 2018
ಕೇಳ್ರಪ್ಪೋ ಕೇಳಿ
Home / News NOW (page 20)

News NOW

ರಸ್ತೆಯಲ್ಲೇ ಹೆರಿಗೆ…!!! : ಶಾಪಿಂಗ್‍ಗೆಂದು ಬಂದಾಕೆ ಮಗುವಿನೊಂದಿಗೆ ಮನೆಗೆ ಹೋದರು! : ಇಲ್ಲಿದೆ ವೀಡಿಯೋ

ಬೀಜಿಂಗ್ : ಚೀನಾದಲ್ಲೊಬ್ಬರು ರಸ್ತೆಯಲ್ಲೇ ಮಗುವಿಗೆ ಜನ್ಮ ನೀಡಿದ್ದಾರೆ. ಶಾಪಿಂಗ್‍ಗೆಂದು ಬಂದಿದ್ದ ಆ ಗರ್ಭಿಣಿ ತನ್ನ ಕಂದನೊಂದಿಗೆ ಮನೆಗೆ ತೆರಳಿದ್ದಾರೆ. ಈ ಹೆರಿಗೆಯ ವೀಡಿಯೋ ಈಗ ವೈರಲ್ ಆಗಿದೆ. ಯೂನ್ಫ್‍ನ ಗುವಾಂಗ್ದಾಂಗ್ ಎಂಬ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಸೆಪ್ಟೆಂಬರ್ 2 ರಂದು ಈ ಘಟನೆ ನಡೆದಿದ್ದು, ಸ್ಥಳೀಯರು ಮಹಿಳೆಯ ಸಹಾಯಕ್ಕೆ ಬಂದಿದ್ದರು. ಅಲ್ಲದೆ, ವೈದ್ಯಕೀಯ ಸಹಾಯವೂ ತಕ್ಷಣ ಈ ಮಹಿಳೆಗೆ ಸಿಕ್ಕಿತ್ತು. ಅಂದು ಏನಾಯ್ತು…? ಈ ವೀಡಿಯೋ ನೋಡಿ…

Read More »

ಬಂಟ್ವಾಳ : ವಿವಿಧ ವಿದ್ಯಮಾನಗಳ ಒಂದು ವರದಿ

ವಾಣಿಜ್ಯ ಸಂಘ ಉದ್ಘಾಟನೆ : ಶ್ರೀವೆಂಕಟರಮಣ ಸ್ವಾಮಿ ಕಾಲೇಜಿನ ಸ್ನಾತಕೋತ್ತರ ವಿಭಾಗದ 2017-18ನೇ ಸಾಲಿನ ವಾಣಿಜ್ಯ ಸಂಘವನ್ನು ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಧ್ಯಾಪಕ ಡಾ.ಅಬೂಬಕ್ಕರ್ ಸಿದ್ದಿಕ್ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ| ಪಾಂಡುರಂಗ ನಾಯಕ್ ವಹಿಸಿದ್ದರು. ಸ್ನಾತಕೋತ್ತರ ವಿಭಾಗದ ಅಧ್ಯಕ್ಷರಾದ ಶ್ರೀ ನೆಲ್ಸನ್ ಮರ್ವಿನ್ ಫೆರ್ನಾಂಡೀಸ್, ವಾಣಿಜ್ಯ ಸ್ನಾತಕೋತ್ತರ ಸಂಘದ ಪ್ರಾಮುಖ್ಯತೆ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ವಿಭಾಗದ ಎಲ್ಲಾ ಉಪನ್ಯಾಸಕರು ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ಕುಮಾರಿ …

Read More »

ವಿಧಾನಸೌಧಕ್ಕೆ ಸೂಟ್​ಕೇಸ್​ ತೆಗೆದುಕೊಂಡು ಹೋದರೆ ಮಾತ್ರ ಕೆಲಸ : ಡಾ.ಮಲ್ಲಿಕಾ ಘಂಟಿ

ಬಳ್ಳಾರಿ : ವಿಧಾನಸೌಧಕ್ಕೆ ಸೂಟ್​ಕೇಸ್​ ತುಂಬಾ ಹಣ ತುಂಬಿಕೊಂಡು ಹೋದರೆ ಮಾತ್ರ ಯಾವುದೇ ಕೆಲಸ ಆಗುತ್ತದೆ. ಇದರಿಂದಾಗಿಯೇ ವಿಶ್ವ ವಿದ್ಯಾನಿಲಯದ ಅಭಿವೃದ್ಧಿಯಾಗುತ್ತಿಲ್ಲ ಎಂದು ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಮಲ್ಲಿಕಾ ಘಂಟಿ ಆರೋಪಿಸಿದ್ದಾರೆ. ಹಂಪಿ ವಿಶ್ವವಿದ್ಯಾನಿಲಯದ ಬೆಳ್ಳಿಹಬ್ಬದ ಅಂಗವಾಗಿ ಆಯೋಜಿಸಿದ್ದ ನುಡಿ ಹಬ್ಬದಲ್ಲಿ ಮಾತನಾಡಿದ ಮಲ್ಲಿಕಾ ಘಂಟಿ ಈ ಆರೋಪ ಮಾಡಿದ್ದಾರೆ. ಮಂಗಳವಾರ ಈ ನುಡಿಹಬ್ಬವನ್ನು ಸ್ವತಃ ಸಿಎಂ ಸಿದ್ದರಾಮಯ್ಯ ಅವರೇ ಉದ್ಘಾಟನೆ ಮಾಡಿದ್ದರು. ಈ ವೇಳೆ, ವಿವಿಯ ಸಿಬ್ಬಂದಿ …

Read More »

ಆದಾಯ ತೆರಿಗೆ ಇಲಾಖೆ ಅಧಿಕಾರಿ ಪುತ್ರನ ಅಪಹರಣ : ವೀಡಿಯೋ ಮೂಲಕ 50 ಲಕ್ಷ ರೂಪಾಯಿಗೆ ಬೇಡಿಕೆ

ಬೆಂಗಳೂರು : ದುಷ್ಕರ್ಮಿಗಳು ಆದಾಯ ತೆರಿಗೆ ಇಲಾಖೆ ಅಧಿಕಾರಿಯ ಪುತ್ರನನ್ನು ಅಪಹರಿಸಿ 50 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, 19 ವರ್ಷದ ಶರತ್​​ ಅಪಹರಣಕ್ಕೊಳಗಾದ ಯುವಕ ಎಂದು ಗೊತ್ತಾಗಿದೆ. ಶರತ್​ ಕೆಂಗೇರಿ ಉಳ್ಳಾಲದಲ್ಲಿರುವ ಐಟಿ ಅಧಿಕಾರಿ ನಿರಂಜನ್ ಎಂಬವರ ಪುತ್ರ . 2 ದಿನಗಳ ಹಿಂದೆ ದುಷ್ಕರ್ಮಿಗಳು ಶರತ್​ನನ್ನು ಅಪಹರಿಸಿದ್ದು, 50 ಲಕ್ಷ ರೂಪಾಯಿಗೆ ಬೇಡಿಕೆ …

Read More »

ಯಮುನಾ ನದಿಯಲ್ಲಿ ಮುಳುಗಿದ ದೋಣಿ : 22 ಮಂದಿ ದುರ್ಮರಣ : ತಲಾ 2 ಲಕ್ಷ ರೂಪಾಯಿ ಪರಿಹಾರ ಘೋಷಣೆ

ಲಖ್ನೋ: ಉತ್ತರ ಪ್ರದೇಶದಲ್ಲಿ ಭೀಕರ ದೋಣಿ ದುರಂತ ಸಂಭವಿಸಿದೆ. ಇಲ್ಲಿನ  ಭಾಗ್ ಪತ್ ಬಳಿಯ ಯಮುನಾ ನದಿಯಲ್ಲಿ ದೋಣಿ ಮುಳುಗಿದ್ದು 22 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೆ, ಹಲವರು ನಾಪತ್ತೆಯಾಗಿದ್ದಾರೆ ಎಂದು ಗೊತ್ತಾಗಿದ್ದು, ಸಾವಿನ ಸಂಖ್ಯೆ ಏರುವ ಭೀತಿಯೂ ಹೆಚ್ಚಿದೆ. ದುರಂತಕ್ಕೀಡಾದ ದೋಣಿಯಲ್ಲಿ 60 ಮಂದಿ ಪ್ರಯಾಣಿಸುತ್ತಿದ್ದರು ಎಂದು ಜಿಲ್ಲಾ ದಂಡಾಧಿಕಾರಿ ಭವಾನಿ ಸಿಂಗ್ ತಿಳಿಸಿದ್ದಾರೆ. ಮಧ್ಯಾಹ್ನದ ವರೆಗೆ 22 ಮಂದಿಯ ಮೃತದೇಹ ಸಿಕ್ಕಿದ್ದು, 10 ಮಂದಿಯನ್ನು ರಕ್ಷಿಸಲಾಗಿತ್ತು. ಜಿಲ್ಲಾ ಕೇಂದ್ರದಿಂದ 20 …

Read More »

`ಸೈತಾನ’ನ ಮಗುವೆಂದು ತನ್ನದೇ ಕಂದನಿಗೆ ಇರಿದ ತಾಯಿ…!

ಪೀಟ್ಸ್‍ಬರ್ಗ್ : ಹೆತ್ತವರಿಗೆ ಹೆಗ್ಗಣ ಮುಂದು ಅಂತಾರೆ. ಆದರೆ, ಇಲ್ಲೊಬ್ಬಳು ತಾಯಿ ತನ್ನ 8 ದಿನಗಳ ಗಂಡು ಮಗುವಿಗೆ ಇರಿದಿದ್ದಾಳೆ. ಈ ಮಗು `ಸೈತಾನ’ನ ಮಗು ಎಂದು ತಿಳಿದ ಈ ತಾಯಿ ಮಗು ಮತ್ತು ತನ್ನ ಪತಿಗೆ ಇರಿದಿದ್ದಾಳೆ. ಅಲ್ಲದೆ, ಈ ರೀತಿ ಮಾಡಲು ನನಗೆ ದೇವರೇ ಹೇಳಿದ್ದು ಎಂದೂ ಈಕೆ ಹೇಳಿಕೊಂಡಿದ್ದಾಳೆ…! ಈ ತಾಯಿಯನ್ನು ಫೀಲ್ಡರ್ ಎಂದು ಗುರುತಿಸಲಾಗಿದೆ. ಈಕೆಯನ್ನು ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಇನ್ನು, ಮಗುವಿನ …

Read More »

ಕುಡಿಯುವುದಕ್ಕೆ 11 ತಿಂಗಳ ಮಗು ಮಾರಿದ ಅಪ್ಪ…!

ಒಡಿಸ್ಸಾ: ತಂದೆಯೊಬ್ಬ ಕುಡಿಯುವುದಕ್ಕಾಗಿ ತನ್ನ ಮಗುವನ್ನೇ ಮಾರಾಟ ಮಾಡಿದ್ದಾನೆ…! ಒಡಿಸ್ಸಾದ ಭದ್ರಕ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. 11 ತಿಂಗಳ ಗಂಡು ಮಗುವನ್ನು 25 ಸಾವಿರ ರೂಪಾಯಿಗೆ ಮಾರಾಟ ಮಾಡಿರುವ ಈತ ಬಂದ ಹಣದಲ್ಲಿ ಹೊಸ ಮೊಬೈಲ್ ಫೋನ್, ಬೆಳ್ಳಿಯ ಕಾಲ್ಗೆಜ್ಜೆ ಮತ್ತು ಬೇಕಾದಷ್ಟು ಮದ್ಯವನ್ನು ಖರೀದಿಸಿದ್ದಾನೆ. ಇದಾದ ಬಳಿಕ ವಿಷಯ ತಿಳಿದ ಪೊಲೀಸರು ಈತನನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಬಲರಾಮ್ ಮುಖಿ ಎಂದು ಗುರುತಿಸಲಾಗಿದೆ. ಮಗು ಮಾರಾಟದಿಂದ ಬಂದ …

Read More »

ಶೀಘ್ರದಲ್ಲೇ ಬರುತ್ತದೆ 100 ರೂಪಾಯಿ ನಾಣ್ಯ…

ನವದೆಹಲಿ : ತಮಿಳು ಚಿತ್ರರಂಗದ ದಿಗ್ಗಜ ಎಂ.ಜಿ.ರಾಮಚಂದ್ರನ್ ಮತ್ತು ಸಂಗೀತ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿರುವ ಡಾ.ಎಂ.ಎಸ್.ಸುಬ್ಬುಲಕ್ಷ್ಮಿ ಅವರ ಜನ್ಮಶತಮಾನೋತ್ಸವದ ಗೌರವ ಸಲ್ಲಿಕೆ ಹಿನ್ನೆಲೆಯಲ್ಲಿ ಶೀಘ್ರದಲ್ಲೇ 100 ರೂಪಾಯಿ ನಾಣ್ಯ ಬಿಡುಗಡೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಅಲ್ಲದೆ, ಕೇಂದ್ರ ಹಣಕಾಸು ಇಲಾಖೆ ಈ ಬಗ್ಗೆ ಅಧಿಸೂಚನೆಯನ್ನೂ ಪ್ರಕಟಿಸಿದೆ. ಈ ಮೂಲಕ ಇಷ್ಟು ದಿನ ಎದ್ದಿದ್ದ 100 ನಾಣ್ಯದ ಊಹಾಪೋಹಗಳಿಗೆ ಉತ್ತರ ಸಿಕ್ಕಿದೆ. ಈ 100 ರೂಪಾಯಿ ನಾಣ್ಯ 44 ಮಿ.ಮೀ …

Read More »

ಬಂಟ್ವಾಳ : ವಿವಿಧ ವಿದ್ಯಮಾನಗಳ ವರದಿ

ಬಂಟ್ವಾಳ : 2 ಕೋಟಿ ರೂಪಾಯಿ ಅನುದಾನದಲ್ಲಿ ಅಭಿವೃದ್ಧಿಗೊಂಡ ಮೆಲ್ಕಾರ್-ಮಾರ್ನಬೈಲು ರಸ್ತೆ ಹಾಗೂ ಹೈಮಾಸ್ಟ್ ದೀಪಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಲೋಕಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಪುರಸಭಾಧ್ಯಕ್ಷ ಪಿ ರಾಮಕೃಷ್ಣ ಆಳ್ವ, ಬುಡಾ ಅಧ್ಯಕ್ಷ ಸದಾಶಿವ ಬಂಗೇರ, ಬಂಟ್ವಾಳ ತಾ. ಪಂ. ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಬಿ. ಎಂ ಅಬ್ಬಾಸ್ ಅಲಿ, ಸದಸ್ಯ ಸಂಜೀವ ಪೂಜಾರಿ, ಎಪಿಎಂಸಿ ಅಧ್ಯಕ್ಷ ಕೆ ಪದ್ಮನಾಭ ರೈ, ಜಿ ಪಂ ಸದಸ್ಯರಾದ …

Read More »

ಯಲ್ಲಾಪುರದಲ್ಲಿ ಭೀಕರ ಅಪಘಾತ : 10 ಮಂದಿ ದುರ್ಮರಣ

ಕಾರವಾರ : ಲಾರಿ ಮತ್ತು ಝೈಲೋ ಕಾರು ಡಿಕ್ಕಿಯಾಗಿ ಸ್ಥಳದಲ್ಲೇ 10 ಜನರ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ನಡೆದಿದೆ. ಯಲ್ಲಾಪುರ ತಾಲೂಕಿನ ಅರಬೈಲು ಘಟ್ಟದ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಈ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ನಾಲ್ವರು ಮಕ್ಕಳು ಸೇರಿ 10 ಜನ ಸಾವಿಗೀಡಾಗಿದ್ದಾರೆ. ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »
error: Content is protected !!