Monday , February 18 2019
ಕೇಳ್ರಪ್ಪೋ ಕೇಳಿ
Home / News NOW (page 3)

News NOW

ಬಂಟ್ವಾಳ : ಸುದ್ದಿ ರೌಂಡ್ ಅಪ್ ; ಸೆಪ್ಟೆಂಬರ್ 7

ಕ್ಷೀರ ಸಾಗರ ಉದ್ಘಾಟನೆ : ಹೈನುಗಾರಿಕೆ ಜೀವನದ ಒಂದು ಭಾಗವಾಗಿ ಬೆಳೆಯಬೇಕು. ಅದಕ್ಕೆ ಪೂರಕವಾದ ವಾತಾವರಣವನ್ನು ಒಕ್ಕೂಟದ ಮೂಲಕ ಮಾಡಬೇಕಾಗಿದೆ ಎಂದು ಸಂಸದ ನಳಿನ್ ಕುಮಾರ್ ಹೇಳಿದರು. ವಗ್ಗ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ವಿಸ್ತೃತ ಕಟ್ಟಡ `ಕ್ಷೀರ ಸಾಗರ’ದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕಾರ್ಯಕ್ರಮ ಉದ್ಘಾಟನೆ ಮಾಡಿದ ಬಳಿಕ ಮಾತನಾಡಿದ ಶಾಸಕ ರಾಜೇಶ್ ನಾಯಕ್, ರಾಜ್ಯದಲ್ಲಿ ಅತ್ಯುತ್ತಮ ಲಾಭದಾಯಕ ಒಕ್ಕೂಟವಾಗಿ ನಮ್ಮ ಜಿಲ್ಲೆಯ ಒಕ್ಕೂಟ …

Read More »

ಬಂಟ್ವಾಳ : ವಿವಿಧ ಸುದ್ದಿಗಳ ಒಂದು ನೋಟ

ಸೋಣ ಅಮಾವಾಸ್ಯೆ ತೀರ್ಥಸ್ನಾನ : ಭೂಲೋಕದ ಕೈಲಾಸವೆಂದೇ ಪ್ರಖ್ಯಾತವಾದ ನರಹರಿ ಪರ್ವತದಲ್ಲಿ ಸೆಪ್ಟೆಂಬರ್ 9ರ ಭಾನುವಾರ ಬೆಳಗ್ಗೆ 5 ಗಂಟೆಯಿಂದ ಸಂಜೆ 4 ಗಂಟೆಯ ತನಕ ಸೋಣ ಅಮಾವಾಸ್ಯೆ ಪವಿತ್ರ ತೀರ್ಥಸ್ನಾನ ಹಾಗೂ ಶ್ರೀ ದೇವರಿಗೆ ವಿಶೇಷ ಅಭಿಷೇಕ ಪೂಜೆಗಳು ಜರಗಲಿದೆ. ಅಂದು ಮುಂಜಾನೆಯಿಂದಲೇ ನವ ವಧು ವರರು ಪರ್ವತವೇರಿ ಪವಿತ್ರ ತೀರ್ಥ ಕೆರೆಗಳಲ್ಲಿ ಮಿಂದು ಶ್ರೀದೇವರಿಗೆ ಸೇವೆ ಸಲ್ಲಿಸಿ ಪುನೀತರಾಗುತ್ತಾರೆ. ಶಿಕ್ಷಕರ ದಿನಾಚರಣೆ : ತುಂಬೆ ಪದವಿ ಪೂರ್ವ …

Read More »

ದಂಪತಿ ಬೈಕ್‍ನಿಂದ ಬಿದ್ದಿದ್ದರು, ಯಾರೂ ಇಲ್ಲದೆ ಮಗುವೊಂದೇ ಬೈಕ್‍ನಲ್ಲಿ ಹೋಗಿತ್ತು…! : ಇಲ್ಲಿದೆ ಎದೆಯೇ ಝಲ್ ಅನ್ನೋ ದೃಶ್ಯ…!

ಬೆಂಗಳೂರು : ಇದೊಂದು ಭೀಕರ ದೃಶ್ಯ. ಬೈಕ್‍ನಲ್ಲಿ ಐದು ವರ್ಷದ ಮಗುವಿನ್ನೊಟ್ಟಿಗೆ ದಂಪತಿ ಹೋಗ್ತಿದ್ದರು. ಈ ವೇಳೆ, ಬೇರೊಂದು ಬೈಕ್ ಅಡ್ಡ ಬಂದು ಡಿಕ್ಕಿಯಾಗಿತ್ತು. ಹೀಗೆ ಬೈಕ್ ಡಿಕ್ಕಿಯಾಗಿದ್ದರಿಂದ ದಂಪತಿ ಬೈಕ್‍ನಿಂದ ಬಿದ್ದಿದ್ದರು. ಆದರೆ, ಬೈಕ್‍ನಲ್ಲಿ ಮಗು ಮಾತ್ರ ಇತ್ತು. ಅಪಘಾತದ ತೀವ್ರತೆಗೆ ಬೈಕ್ 300 ಮೀಟರ್‍ನಷ್ಟು ದೂರ ಹಾಗೆಯೇ ಸಾಗಿತ್ತು…! ಈ ದೃಶ್ಯವೇ ಭೀಕರವಾಗಿತ್ತು… ಆದರೆ, ಅದೃಷ್ಟವಶಾತ್ ಮಗು ದೂರ ಹೋಗಿ ಬಿದ್ದಿದ್ದು ತಕ್ಷಣ ಸ್ಥಳೀಯರು ಕಂದನನ್ನು ರಕ್ಷಿಸಿದ್ದಾರೆ. …

Read More »

ಶೀರೂರು ಶ್ರೀಗಳದ್ದು ಕೊಲೆ ಅಲ್ಲ… ಸಹಜ ಸಾವು

ಉಡುಪಿ : ತೀವ್ರ ಕುತೂಹಲ ಮತ್ತು ಚರ್ಚೆಗೆ ಗ್ರಾಸವಾಗಿದ್ದ ಉಡುಪಿ ಅಷ್ಟಮಠಗಳಲ್ಲಿ ಒಂದಾದ ಶೀರೂರು ಮಠದ ಲಕ್ಷ್ಮೀವರ ತೀರ್ಥರ ಸಾವಿನ ಪ್ರಕರಣದ ತನಿಖೆ ತಾರ್ಕಿಕ ಅಂತ್ಯಕ್ಕೆ ಬಂದಿದೆ. ಶ್ರೀಗಳದ್ದು ಸಹಜ ಸಾವು ಎಂಬುದು ತನಿಖೆಯಿಂದ ಸ್ಪಷ್ಟವಾಗಿದೆ. ಶ್ರೀಗಳಿಗೆ ಯಾವುದೇ ವಿಷ ಪ್ರಾಶನವಾಗಿಲ್ಲ ಎಂಬ ಅಂಶ ಮರಣೋತ್ತರ ಪರೀಕ್ಷೆ ಹಾಗೂ ಎಫ್‍ಎಸ್‍ಎಲ್ ವರದಿಯಿಂದ ದೃಢಪಟ್ಟಿದೆ. ಲಕ್ಷ್ಮೀವರ ತೀರ್ಥರು ಲಿವರ್ ಸಿರೋಸಿಸ್ ಎಂಬ ಸಮಸ್ಯೆಯಿಂದ ಬಳಲುತ್ತಿದ್ದರು. ಈ ಸಮಸ್ಯೆ ಉದ್ಭಣಿಸಿ ಸ್ವಾಮೀಜಿ ಸಾವನ್ನಪ್ಪಿದ್ದಾರೆ …

Read More »

ಮೂಡಬಿದಿರೆಯಲ್ಲಿ ನಾಪತ್ತೆಯಾದ ಯುವಕನ ಶವ ಪತ್ತೆ : ತಮ್ಮನಿಂದಲೇ ಕೊಲೆಯಾಗಿರುವ ಶಂಕೆ

ಮೂಡಬಿದಿರೆ : ಆಗಸ್ಟ್ 11 ರಿಂದ ನಾಪತ್ತೆಯಾಗಿದ್ದ ಮೂಡಬಿದಿರೆಯ ಸುದರ್ಶನ್ ಜೈನ್ ಎಂಬ ಯುವಕ ಶವವಾಗಿ ಪತ್ತೆಯಾಗಿದ್ದಾರೆ. ಸುದರ್ಶನ್‍ಗೆ 28 ವರ್ಷ ವಯಸ್ಸಾಗಿತ್ತು. ಇಲ್ಲಿನ ಪ್ರಭಾತ್ ಟೆಕ್ಸ್ ಟೈಲ್ಸ್ ನಲ್ಲಿ ಕೆಲಸ ಮಾಡುತ್ತಿದ್ದ ಸುದರ್ಶನ್ ಆಗಸ್ಟ್ 11 ರಿಂದ ನಾಪತ್ತೆಯಾಗಿದ್ದರು. ತಮ್ಮನೊಂದಿಗೆ ಬೈಕ್‍ನಲ್ಲಿ ಹೋಗಿದ್ದ ಸುದರ್ಶನ್ ನಂತರ ನಾಪತ್ತೆಯಾಗಿದ್ದರು. ಬಳಿಕ ತಮ್ಮನ ಬಳಿ ವಿಚಾರಿಸಿದಾಗ ಅಣ್ಣ ಅರ್ಧದಲ್ಲೇ ಬೈಕ್‍ನಿಂದ ಇಳಿದು ಜಗಳ ಮಾಡಿಕೊಂಡು ಹೋಗಿದ್ದಾಗಿ ಹೇಳಿದ್ದ. ಆದರೆ, ಇದೀಗ ಸುದರ್ಶನ್ …

Read More »

ಮಳೆಯಿಂದ ಸಂಕಷ್ಟಕ್ಕೀಡಾಗಿದೆ ಕರುನಾಡ ಸ್ವರ್ಗ : ಇಲ್ಲಿದೆ ಹೆಲ್ಪ್ ಲೈನ್ ನಂಬರ್

ಮಡಿಕೇರಿ : ಕಳೆದ ಮೂರು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಗೆ ಕೊಡಗು ಜಿಲ್ಲೆಯ ಬಹುಭಾಗ ತತ್ತರಿಸಿ ಹೋಗಿದೆ. ಕಣ್ಣೆದುರೇ ಮನೆಗಳು ಕುಸಿಯುತ್ತಿವೆ, ಗುಡ್ಡಗಳು ಧರಾಶಯಿ ಆಗುತ್ತಿದೆ. ಸಾಕಷ್ಟು ಬೆಳೆ ನಾಶ ಸಂಭವಿಸಿದೆ. ಬೆಟ್ಟ ಗುಡ್ಟದ ಮೇಲೆ ಕುಳಿತು ಜನ ಸಹಾಯಕ್ಕಾಗಿ ಮೊರೆ ಇಡುತ್ತಿದ್ದಾರೆ. ಕೆಲವರು ಊಟ ನಿದ್ದೆ ಇಲ್ಲದೆ ಪರದಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಹರಿಯುತ್ತಿದ್ದ ಸಣ್ಣ ಪುಟ್ಟ ನದಿಗಳೂ ಈಗ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಹೀಗಾಗಿ, ಈ ನೀರು …

Read More »

ನಾಳೆ ಎಲ್ಲಾ ಶಾಲಾ, ಕಾಲೇಜು, ಸರ್ಕಾರಿ ಕಚೇರಿಗಳಿಗೆ ರಜೆ

ಬೆಂಗಳೂರು : ಮಾಜಿ ಪ್ರಧಾನಿ, ದೇಶದ ಅಪ್ರತಿಮ ನಾಯಕ ಅಟಲ್ ಬಿಹಾರಿ ವಾಜಪೇಯಿ ನಿಧನ ಹಿನ್ನೆಲೆಯಲ್ಲಿ ನಾಳೆ ರಾಜ್ಯಾದ್ಯಂತ ಎಲ್ಲಾ ಶಾಲಾ ಕಾಲೇಜು ಮತ್ತು ಸರ್ಕಾರಿ ಕಚೇರಿಗಳಿಗೆ ರಜೆ ಘೋಷಿಸಲಾಗಿದೆ. ಅಲ್ಲದೆ, ಏಳು ದಿನಗಳ ಕಾಲ ಶೋಕಾಚರಣೆಗೂ ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಆದರೆ, ಪ್ರಸ್ತುತ ರಾಜ್ಯದ ಹಲವೆಡೆ ಭಾರೀ ಮಳೆಯಿಂದ ಪ್ರೆವಾಹ ಪರಿಸ್ಥಿತಿ ಇರುವ ಕಾರಣ ತುರ್ತು ಪರಿಸ್ಥಿತಿಯನ್ನು ನಿಭಾಯಿಸುವ ಮತ್ತು …

Read More »

ದೇಶಕಂಡ ಅಪ್ರತಿಮ ನಾಯಕ, ಅಜಾತ ಶತ್ರು ಇನ್ನಿಲ್ಲ

ನವದೆಹಲಿ : ಮಾಜಿ ಪ್ರಧಾನಿ, ಅಜಾತ ಶತ್ರು ಅಟಲ್ ಬಿಹಾರಿ ವಾಜಪೇಯಿ ವಿಧಿವಶರಾಗಿದ್ದಾರೆ. ಏಮ್ಸ್ ಆಸ್ಪತ್ರೆಯಲ್ಲಿ ವಾಜಪೇಯಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 93 ವರ್ಷ ಆಗಿತ್ತು. ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿದ್ದ ವಾಜಪೇಯಿ ಅವರಿಗೆ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಾಜಪೇಯಿ ಅವರು ಗುರುವಾರ ಸಂಜೆ 5 ಗಂಟೆ 5 ನಿಮಿಷಕ್ಕೆ ಕೊನೆಯುಸಿರೆಳೆದಿದ್ದಾಗಿ ಏಮ್ಸ್ ಆಸ್ಪತ್ರೆ ವೈದ್ಯರು ಸ್ಪಷ್ಟಪಡಿಸಿದ್ದಾರೆ. ಇನ್ನು, ಹಿರಿಯ ನಾಯಕನ ಅಗಲಿಕೆಗೆ …

Read More »

ಮಡಿಕೇರಿಯಲ್ಲಿ ಮಳೆಯ ರೌದ್ರಾವತಾರ : ಇಲ್ಲಿದೆ ಮನೆ ಬೀಳುವ ಭೀಕರ ದೃಶ್ಯ…!

ಮಡಿಕೇರಿ : ಕೊಡಗಿನಲ್ಲಿ ಮಳೆ ತನ್ನ ರೌದ್ರಾವತಾರ ಮೆರೆಯುತ್ತಿದೆ. ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಅದೆಷ್ಟೋ ಜನ ನಿರಾಶ್ರಿತರಾಗಿದ್ದಾರೆ. ಈ ನಡುವೆ ಹಲವಾರು ಮನೆಗಳು ಧರೆಗುರುಳಿವೆ. ಇದರಲ್ಲಿ ಮುತ್ತಪ್ಪ ದೇವಸ್ಥಾನದ ಬಳಿಕಯದ್ದು ಎನ್ನಲಾದ ಮನೆಯೊಂದು ಕುಸಿಯುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವೀಡಿಯೋ ಕೂಡಾ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಇನ್ನು, ಮಳೆಗೆ ನೂರಾರು ಮಂದಿ ನಾಪತ್ತೆಯಾಗಿದ್ದು, ಹಲವಾರು ಸಾವು ನೋವುಗಳು ಸಂಭವಿಸಿದೆ ಎಂಬ ಸುದ್ದಿಯೂ ಹಬ್ಬಿದೆ. ಈ …

Read More »

ಬೆಂಗಳೂರಿನಲ್ಲಿ ಭೂಕಂಪ ಆಗಿಲ್ಲ… : ಯಾರೂ ಭಯಪಡಬೇಕಾಗಿಲ್ಲ

ಬೆಂಗಳೂರು : ರಾಜಧಾನಿಯ ಹಲವೆಡೆ ಭಾರೀ ಸದ್ದು ಕೇಳಿ ಬಂದಿದೆ. ಹೀಗಾಗಿ, ಜನರೆಲ್ಲಾ ಇದು ಭೂಕಂಪ ಅಂತ ಭಯಭೀತರಾಗಿದ್ದರು. ಆದರೆ, ಇದು ಭೂಕಂಪ ಅಲ್ಲ ಎಂದು ಭೂಗರ್ಭ ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ. ಜಯನಗರ, ಶ್ರೀನಗರ, ರಾಜರಾಜೇಶ್ವರಿ ನಗರ ಸೇರಿದಂತೆ ಹಲವು ಕಡೆ ಈ ಸದ್ದು ಕೇಳಿ ಬಂದಿದೆ. ಇದು ಗಾಳಿಯ ಸ್ಥಾನಪಲ್ಲಟದಿಂದ ಹೀಗೆ ಸದ್ದು ಕೇಳಿ ಬಂದಿರಬಹುದು ಎಂದು ಭೂಗರ್ಭ ತಜ್ಞರು ಹೇಳಿದ್ದಾರೆ. ಬಂಡೆ ಒಡೆಯಲು ಬಳಸುವ ಸ್ಫೋಟಕದಿಂದ ಬರುವಂತಹ ಸದ್ದು …

Read More »
error: Content is protected !!