Tuesday , August 21 2018
ಕೇಳ್ರಪ್ಪೋ ಕೇಳಿ
Home / News NOW (page 30)

News NOW

ಈ ವರ್ಷಾಂತ್ಯಕ್ಕೆ ಜಹೀರ್​ – ಸಾಗರಿಕ ಘಾಟ್ಗೆ ವಿವಾಹ…?

ಮುಂಬೈ : ಕ್ರಿಕೆಟಿಗ ಜಹೀರ್ ಖಾನ್ ಮತ್ತು ಚಕ್​ದೇ ಇಂಡಿಯಾ ನಟಿ ಸಾಗರಿಕಾ ಘಾಟ್ಗೆ ಪ್ರೀತಿಗೆ ಬಿದ್ದದ್ದು ಹಳೆಯ ವಿಷಯ. ಗಾಸಿಪ್ ಕಾಲಂಗಳಲ್ಲಿ ಇವರಿಬ್ಬರ ಪ್ರೇಮದ ಸುದ್ದಿ ಬಲು ಜೋರಾಗಿಯೇ ಓಡಾಡುತ್ತಿತ್ತು. ಇದಾದ ಬಳಿಕ ಕಳೆದ ಏಪ್ರಿಲ್​ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಇಬ್ಬರು ಈ ವರ್ಷಾಂತ್ಯ ಅಥವಾ ಅದಕ್ಕಿಂತಲೂ ಬೇಗನೇ ಮದುವೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಇವರಿಬ್ಬರ ಪ್ರೀತಿಯ ಸುದ್ದಿ ಗೊತ್ತಾಗುವುದಕ್ಕೆ ಮುಂಚೆ ಆಗೊಮ್ಮೆ ಈಗೊಮ್ಮೆ ಜೊತೆಯಾಗಿ ಸುತ್ತಾಡುತ್ತಿದ್ದ ಈ ಜೋಡಿ …

Read More »

ಏರ್​ಫೋರ್ಸ್​ನ ಮಾನವ ರಹಿತ ವಿಮಾನ ಪತನ

ಶ್ರೀನಗರ : ಭಾರತೀಯ ವಾಯುಸೇನೆಗೆ ಸೇರಿದ ಮಾನವ ರಹಿತ ವಿಮಾನ ಜಮ್ಮು ಕಾಶ್ಮೀರದ ಗಡಿ ಭಾಗದಲ್ಲಿ ಅಪಘಾತಕ್ಕೀಡಾಗಿದೆ. ರಾಡರ್​ ಸಂಪರ್ಕ ಕಳೆದುಕೊಂಡ ಕೆಲ ಹೊತ್ತಿನಲ್ಲಿಯೇ ಈ ವಿಮಾನ ಪತನವಾಗಿದೆ ಎಂದು ಹೇಳಲಾಗುತ್ತಿದೆ. ಕಠುವಾ ಜಿಲ್ಲೆಯ ಲಡೋಲ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಈ ವಿಮಾನ ಪತನಕ್ಕೆ ಸಂಬಂಧಿಸಿದಂತೆ ತನಿಖೆಗೂ ಆದೇಶ ನೀಡಲಾಗಿದೆ.

Read More »

ಬ್ಯಾಂಕ್​ಗಳಿಗೆ ನಾಲ್ಕು ದಿನ ಸರಣಿ ರಜೆ..

ನವದೆಹಲಿ : ಗ್ರಾಹಕರೇ ನಿಮ್ಮ ಕೈಯಲ್ಲಿ ದುಡ್ಡು ಇಲ್ಲದಿದ್ದರೆ ಬೇಗ ಎಟಿಎಂಗೆ ಹೋಗಿ ಡ್ರಾ ಮಾಡಿಕೊಳ್ಳಿ.. ಯಾಕೆಂದರೆ, ಇನ್ನು, ನಾಲ್ಕು ದಿನ ಬ್ಯಾಂಕ್​ಗಳು ತೆರೆದಿರುವುದಿಲ್ಲ. ಬ್ಯಾಂಕ್​ಗಳಿಗೆ ನಾಲ್ಕು ದಿನ ಸಾಲು ಸಾಲು ರಜೆ ಇದೆ. ಆಗಸ್ಟ್ 12 ಎರಡನೇ ಶನಿವಾರವಾಗಿದ್ದು, ಆ.13 ಭಾನುವಾರ, ಆ.14 ಕೃಷ್ಣ ಜನ್ಮಾಷ್ಠಮಿ ಹಾಗೂ ಆ.15 ಸ್ವಾತಂತ್ರ್ಯ ದಿನಾಚರಣೆ. ಹೀಗಾಗಿ, ಈ ಎಲ್ಲಾ ದಿನ ಬ್ಯಾಂಕ್ ವ್ಯವಹಾರ ಇರುವುದಿಲ್ಲ. ಇನ್ನು, ಸಾಲು ಸಾಲು ರಜೆ ಇರುವುದರಿಂದ …

Read More »

ಉಪ ರಾಷ್ಟ್ರಪತಿಯಾಗಿ ವೆಂಕಯ್ಯ ನಾಯ್ದು ಪ್ರಮಾಣವಚನ

ನವದೆಹಲಿ : ದೇಶದ 13ನೇ ಉಪರಾಷ್ಟ್ರಪತಿಯಾಗಿ ಮಾಜಿ ಸಚಿವ, ಬಿಜೆಪಿ ಮುಖಂಡ ವೆಂಕಯ್ಯ ನಾಯ್ಡು ಇಂದು ಪ್ರಮಾಣವಚನ ಸ್ವೀಕರಿಸಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ವೆಂಕಯ್ಯ ನಾಯ್ಡು ಪದಗ್ರಹಣ ನಡೆಯಿತು. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ವೆಂಕಯ್ಯನಾಯ್ಡು ಅವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ದೇವರ ಹೆಸರಲ್ಲಿ ವೆಂಕಯ್ಯ ನಾಯ್ಡು ಪ್ರಮಾಣ ವಚನ ಸ್ವೀಕರಿಸಿದರು. ಇನ್ನು ಪ್ರಮಾಣವಚನ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ರಾಜನಾಥ್ ಸಿಂಗ್, ಬಿಜೆಪಿ ರಾಜ್ಯಾಧ್ಯಕ್ಷ ಅಮಿತ್ ಶಾ, ಕೇಂದ್ರ …

Read More »

ಭಾಸ್ಕರ್​ ಶೆಟ್ಟಿ ಕೊಲೆ ಆರೋಪಿಗಳಿಗಿಲ್ಲ ಜಾಮೀನು

ನವದೆಹಲಿ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಉದ್ಯಮಿ ಭಾಸ್ಕರ್​ ಶೆಟ್ಟಿ ಕೊಲೆ ಆರೋಪಿಗಳ ಜಾಮೀನು ಅರ್ಜಿ ವಜಾ ಆಗಿದೆ. ಹೈಕೋರ್ಟ್​ನಲ್ಲಿ ಜಾಮೀನು ಅರ್ಜಿ ವಜಾ ಆದ ಹಿನ್ನೆಲೆಯಲ್ಲಿ ಜಾಮೀನು ನೀಡುವಂತೆ ಭಾಸ್ಕರ್ ಶೆಟ್ಟಿ ಪತ್ನಿ ರಾಜೇಶ್ವರಿ, ಪುತ್ರ ನವನೀತ್​ ಶೆಟ್ಟಿ ಮತ್ತು ನಿರಂಜನ್​ ಭಟ್​ ಸುಪ್ರೀಂಕೋರ್ಟ್​ ಮೊರೆ ಹೋಗಿದ್ದರು. ಆದರೆ, ಸರ್ವೋಚ್ಛ ನ್ಯಾಯಾಲಯ ಈ ಮೂವರಿಗೆ ಜಾಮೀನು ನಿರಾಕರಿಸಿದೆ. ಅದೂ ಅಲ್ಲದೆ, ಭಾಸ್ಕರ್ ಶೆಟ್ಟಿ …

Read More »

ಮಹಿಳೆ ಸರಗಳವಿಗೆ ಹೋಗಿ ಸಿಕ್ಕಿಬಿದ್ದ ಆಸ್ಪತ್ರೆ ರಿಸೆಷನಿಸ್ಟ್​​…!

ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಕೆಲದಿನಗಳ ಹಿಂದೆ ಸರಗಳ್ಳರ ಕಾಟ ಹೆಚ್ಚಾಗಿತ್ತು. ಮಹಿಳೆಯರು ಮನೆಯಿಂದ ಹೊರಗೆ ಹೋಗಲು ಹೆದರುತ್ತಿದ್ದರು. ಆದರೆ, ಬರೀ ರಸ್ತೆಯಲ್ಲಿ ಮಾತ್ರ ಅಲ್ಲ ಹೋದಲ್ಲೆಲ್ಲಾ ಈಗ ಮೈಯೆಲ್ಲಾ ಕಣ್ಣಾಗಿರಬೇಕಾದಂತಹ ಪರಿಸ್ಥಿತಿ ಇಲ್ಲಿ ನಿರ್ಮಾಣವಾಗಿದೆ. ಯಾಕೆಂದರೆ, ಮಹಿಳೆಯ ಸರಗಳವಿಗೆ ಯತ್ನಿಸಿದ್ದ ಆಸ್ಪತ್ರೆ ರಿಸೆಷ್ಷನಿಸ್ಟ್​ ಒಬ್ಬ ಈಗ ರೆಡ್​ ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದಾನೆ. ಯಲಹಂಕ ಉಪನಗರದ ಕೆ.ಕೆ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ರಿಸೆಷ್ಷನಿಸ್ಟ್​​ ಅಂಜಿನಪ್ಪನನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. …

Read More »

ಡೋಕ್ಲಾಮ್ ಗಡಿಯ ಹಳ್ಳಿಗಳಿಂದ ಜನರ ತೆರವು : ಭಾರತ, ಚೀನಾ ಭೂತಾನ್ ಗಡಿಯಲ್ಲಿ ಟೆನ್ಶನ್ ಟೆನ್ಶನ್..!

ನವದೆಹಲಿ : ಭಾರತ ಮತ್ತು ಚೀನಾ ನಡುವೆ ಮತ್ತೆ ಯುದ್ಧ ನಡೆಯುವ ಸಾಧ್ಯತೆ ಇದೆಯೇ..? ಈ ಅನುಮಾನಕ್ಕೆ ಪೂರಕವಾಗುವಂತಹ ಬೆಳವಣಿಗೆ ಭಾರತ, ಚೀನಾ, ಭೂತಾನ್ ಗಡಿಯಲ್ಲಿ ನಡೆದಿದೆ. ಡೋಕ್ಲಾಮ್ನಿಂದ 35 ಕಿ.ಮೀ. ದೂರದಲ್ಲಿರುವ ನಥಾಂಗ್ ಗ್ರಾಮ ಬಿಟ್ಟು ತಕ್ಷಣವೇ ತೆರಳುವಂತೆ ಸೇನೆ ಸೂಚನೆ ನೀಡಿದೆ. ಎಲ್ಲಾ ಜನರನ್ನು ಬೇರೆ ಸ್ಥಳಗಳಿಗೆ ಸೇನೆಯೇ ಕಳುಹಿಸುವ ವ್ಯವಸ್ಥೆ ಮಾಡುತ್ತಿದೆ. ಯುದ್ಧಕ್ಕೆ ಸನ್ನದ್ಧವಾಗುವ ದೃಷ್ಟಿಯಿಂದ ಭಾರೀ ಸಂಖ್ಯೆಯ ಸೈನಿಕರಿಗೆ ಇರಲು ಅನುಕೂಲವಾಗುವ ದೃಷ್ಟಿಯಿಂದ ಭಾರತೀಯ …

Read More »

ಮರಾಠಾ ಸಮುದಾಯಕ್ಕೆ ಮೀಸಲಾತಿಗೆ ಆಗ್ರಹ : ಮುಂಬೈ ಸಂಪೂರ್ಣ ಸ್ತಬ್ಧ

ಮುಂಬೈ : ವಾಣಿಜ್ಯ ನಗರಿ ಮುಂಬೈ ಬೃಹತ್ ಪ್ರತಿಭಟನೆ ಸಾಕ್ಷಿ ಆಗಿದೆ. ತಮಗೆ ಸರ್ಕಾರ ಮೀಸಲಾತಿ ನೀಡಬೇಕು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗಾಗಿ ಮರಾಠ ಸಮುದಾಯ ಬೀದಿಗಿಳಿದಿದೆ. ಮರಾಠ ಕ್ರಾಂತಿ ಮೋರ್ಚಾದಲ್ಲಿ ಲಕ್ಷಾಂತರ ಜನ ಸೇರಿದ್ದಾರೆ. ಈ ಪ್ರತಿಭಟನೆಯಿಂದ ಮುಂಬೈ ನಗರ ಸಂಪೂರ್ಣ ಸ್ತಬ್ಧವಾದಂತೆ ಬಾಸವಾಗುತ್ತಿದೆ. ಬೆಳಗ್ಗೆ 11 ಗಂಟೆಯಿಂದ ಈ ಬೃಹತ್ ಜಾಥಾ ಆರಂಭವಾಗಿ ಆಜಾದ್ ಮೈದಾನದಲ್ಲಿ ಸಮಾರೋಪಗೊಳ್ಳಲಿದೆ. ಹಲವು ಸಂಘಟನೆಗಳು ಈ ಪ್ರತಿಭಟನೆಗೆ ಬೆಂಬಲ ನೀಡಿವೆ. ಈ …

Read More »

ಆರ್​ಟಿಪಿಎಸ್​ನಲ್ಲಿ ಸ್ಫೋಟ : ಇಬ್ಬರಿಗೆ ಗಾಯ

ರಾಯಚೂರು : ಇಲ್ಲಿನ ರಾಯಚೂರು ಶಾಖೋತ್ಪನ್ನ ವಿದ್ಯುತ್‌ ಕೇಂದ್ರದ 1 ನೇ ಘಟಕದ ಬಿಸಿ ನೀರಿನ ಟ್ಯೂಬ್‌ ಸ್ಫೋಟಗೊಂಡಿದೆ. ಇಂದು ಬೆಳಗ್ಗೆ ಈ ಘಟನೆ ನಡೆದಿದ್ದು, ಮಹಿಳಾ ಇಂಜಿನಿಯರ್ ಸೇರಿ ಇಬ್ಬರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಸ್ಥಳ ಪರಿಶೀಲನೆಗೆ ಹೋಗಿದ್ದ ಸಂದರ್ಭದಲ್ಲಿ ಟ್ಯೂಬ್ ಸ್ಫೋಟಗೊಂಡಿದೆ. ಗಾಯಗೊಂಡ ಇಂಜಿನಿಯರ್​ರನ್ನು ರಾಜಶ್ರೀ ಪಿಸ್ಸೆ ಎಂದು ಗುರುತಿಸಲಾಗಿದೆ. ಇನ್ನು, ಹೊರಗುತ್ತಿಗೆ ನೌಕರ ಶ್ರೀಕಾಂತ್​ ಕೂಡಾ ಗಾಯಗೊಂಡಿದ್ದು ಇವರನ್ನು ಶಕ್ತಿನಗರದ ಕೆಪಿಸಿಎಲ್ ಆಸ್ಪತ್ರೆಗೆ ದಾಖಲಿಸಿ …

Read More »

ಇಂಧನ ಸಚಿವ ಡಿ.ಕೆ.ಶಿವಕುಮಾರ್​ಗೆ ಮತ್ತೆ ಐಟಿ ಸಮನ್ಸ್

ಬೆಂಗಳೂರು : ಐಟಿ ದಾಳಿಗೆ ಒಳಗಾಗಿದ್ದ ಇಂಧನ ಸಚಿವ ಡಿ.ಕೆ.ಶಿವಕುಮಾರ್​ರಿಗೆ ಮತ್ತೆ ಆದಾಯ ತೆರಿಗೆ ಇಲಾಖೆ ಸಮನ್ಸ್ ನೀಡಿದೆ. ಹೀಗಾಗಿ, ಮೊನ್ನೆ ಒಂದು ಹಂತದ ವಿಚಾರಣೆಗೆ ಹಾಜರಾಗಿದ್ದ ಡಿಕೆಶಿ ಅವರು ಮತ್ತೆ ವಿಚಾರಣೆಗೆ ಬರುವಂತೆ ಐಟಿ ಅಧಿಕಾರಿಗಳು ಸಮನ್ಸ್​ ನೀಡಿದ್ದಾರೆ. ನಾಳೆ ಅಂದರೆ ಗುರುವಾರ ವಿಚಾರಣೆಗೆ ಬರುವಂತೆ ಸೂಚನೆ ಕೊಡಲಾಗಿದೆ. ಶಿವಕುಮಾರ್ ಅವರ ಮಾವ ತಿಮ್ಮಯ್ಯ, ಸೋದರಿ ಪದ್ಮ, ಗುರೂಜಿ ದ್ವಾರಕನಾಥ್, ಉದ್ಯಮಿ ಸಚಿನ್ ನಾರಾಯಣ್ ಮತ್ತವರ ಕುಟುಂಬದವರಿಗೆ ಸಮನ್ಸ್ …

Read More »
error: Content is protected !!