Sunday , June 24 2018
ಕೇಳ್ರಪ್ಪೋ ಕೇಳಿ
Home / News NOW (page 4)

News NOW

ಶಾಸಕ ಹ್ಯಾರಿಸ್ ಪುತ್ರನಿಂದ ಹಲ್ಲೆ : ಪ್ರಕರಣಕ್ಕೆ ದಿನಕ್ಕೊಂದು ಟ್ವಿಸ್ಟ್…!

ಬೆಂಗಳೂರು : ಪದೇ ಪದೇ ಗೂಂಡಾಗಿರಿಯಂತಹ ಕೃತ್ಯದಲ್ಲಿ ಪಾಲ್ಗೊಂಡು ಸುದ್ದಿಯಾಗುತ್ತಿರುವ ಶಾಂತಿನಗರ ಶಾಸಕ ಎನ್.ಎ.ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಈಗ ಬಂಧಿ. ಮಾಡಿದ ತಪ್ಪಿಗೆ ನಲಪಾಡ್ ಶಿಕ್ಷೆ ಅನುಭವಿಸಬೇಕಾಗಿದೆ. ಈ ನಡುವೆ, ಈ ಪ್ರಕರಣ ಕ್ಷಣಕ್ಷಣಕ್ಕೂ ಟ್ವಿಸ್ಟ್ ಪಡೆದುಕೊಳ್ತಿದೆ. ಶಾಸಕರ ಪುತ್ರನ ರಕ್ಷಣೆಗೆ ಸ್ವತಃ ಪೊಲೀಸರೇ ನಿಂತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿರುವ ಜೊತೆಜೊತೆಗೇ ಇದೀಗ ಮಾರಣಾಂತಿಕವಾಗಿ ಹಲ್ಲೆಗೊಳಗಾಗಿ ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದ್ವತ್ ಮೇಲೂ ಪೊಲೀಸರು ಎಫ್‍ಐಆರ್ …

Read More »

ರೈತ ನಾಯಕ, ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಇನ್ನಿಲ್ಲ

ಮಂಡ್ಯ : ರೈತ ಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ವಿಧಿವಶರಾಗಿದ್ದಾರೆ. ಹೃದಯಾಘಾತದಿಂದ ಪುಟ್ಟಣ್ಣಯ್ಯ ಕೊನೆಯುಸಿರೆಳೆದಿದ್ದಾರೆ. ಮಂಡ್ಯ ಜಿಲ್ಲೆ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಸರ್ವೋದಯ ಪಕ್ಷದಿಂದ ಶಾಸಕರಾಗಿದ್ದ ಪುಟ್ಟಣ್ಣಯ್ಯ ಜನಪ್ರತಿನಿಧಿಯಾಗಿಯೂ ಗಮನ ಸೆಳೆದಿದ್ದರು. ಮಂಡ್ಯ ನಗರದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಕಬಡ್ಡಿ ಪಂದ್ಯ ವೀಕ್ಷಿಸುತ್ತಿದ್ದಾಗ ಪುಟ್ಟಣ್ಣಯ್ಯ ಎದೆನೋವಿನಿಂದ ಕುಸಿದು ಬಿದ್ದರು. ತಕ್ಷಣ ಇವರನ್ನು ಮಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಯ್ತು. ಆದರೆ, ಚಿಕಿತ್ಸೆ ಫಲಿಸದೆ ಮಿಮ್ಸ್‌ ಆಸ್ಪತ್ರೆಯಲ್ಲೇ ಪುಟ್ಟಣ್ಣಯ್ಯ ಕೊನೆಯುಸಿರೆಳೆದಿದ್ದಾರೆ. ಇನ್ನು, ಪುಟ್ಟಣ್ಣಯ್ಯ …

Read More »

ಖುಷಿ ಕೊಟ್ಟಳು ಕಾವೇರಿ : ಕರ್ನಾಟಕಕ್ಕೆ 14.5 ಟಿಎಂಸಿ ಹೆಚ್ಚುವರಿ ನೀರು

ನವದೆಹಲಿ : ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕಕ್ಕೆ ಸಮಾಧಾನ ತರುವಂತಹ ತೀರ್ಪು ಬಂದಿದೆ. ನದಿ ನೀರು ಹಂಚಿಕೆ ಸಂಬಂಧಿಸಿದಂತೆ ಇವತ್ತು ತೀರ್ಪು ಪ್ರಕಟಿಸಿದ ಸುಪ್ರೀಂಕೋರ್ಟ್ ಕರ್ನಾಟಕಕ್ಕೆ 14.5 ಟಿಎಂಸಿ ಹೆಚ್ಚುವರಿ ನೀರು ಹಂಚಿಕೆ ಮಾಡಿದೆ. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾ, ಅಮಿತಾವ್ ರಾಯ್ ಮತ್ತು ನ್ಯಾ. ಎ ಎಂ ಕಾನ್ವಿಲ್ಕರ್ ಅವರ ತ್ರಿಸದಸ್ಯ ಪೀಠ ಶುಕ್ರವಾರ ಈ ತೀರ್ಪು ನೀಡಿದೆ. ಜೊತೆಗೆ 192 …

Read More »

ಕೃಷಿ ಸಂಗಮಕ್ಕೆ ಸಂಭ್ರಮದ ತೆರೆ

ಮಂಗಳೂರು : ಅರುಣ್ಯ ಫೌಂಡೇಶನ್ ಆಯೋಜಿಸಿದ ಕೃಷಿ ಸಂಗಮಕ್ಕೆ ತೆರೆ ಬಿದ್ದಿದೆ. ಈ ಕೃಷಿ ಸಂಗಮದಲ್ಲಿ ಅನೇಕ ವಿಚಾರಗಳ ಕುರಿತು ಚಿಂತನ ಮಂಥನ ನಡೆಯಿತು. `ಕೃಷಿ ಮತ್ತು ಯುವಜನತೆ: ಸವಾಲುಗಳು-ಸಾಧ್ಯತೆಗಳ’ ಬಗ್ಗೆಯೂ ಉಪನ್ಯಾಸ ನಡೆಯಿತು. ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ. ಎಲ್. ಎಚ್. ಮಂಜುನಾಥ್, “ಕೃಷಿ ಲಾಭದಾಯಕ, ಆದರೆ ಅದನ್ನು ಆಧುನಿಕ ನೆಲೆಗಟ್ಟಿನಲ್ಲಿ ಮಾಡಬೇಕು” ಎಂದರು. ವಾರಣಾಶಿ ರಿಸರ್ಚ್ ಫೌಂಡೇಶನ್ ಮ್ಯಾನೆಜಿಂಗ್ …

Read More »

ಯುಎಇ ಎಕ್ಸ್ ಚೇಂಜ್‍ನಲ್ಲಿ ಗ್ರಾಹಕರ ಸಮಾಗಮ…

ಮಂಗಳೂರು : ಸಾರ್ವಜನಿಕ ಸೇವೆಯಲ್ಲಿ ಒಳ್ಳೆಯ ಹೆಸರು ಗಳಿಸಿರುವ ಯುಇಎ  ಎಕ್ಸ್ ಚೇಂಜ್‍ನ ಕಂಕನಾಡಿ ಬ್ರ್ಯಾಂಚ್‍ನಲ್ಲಿ ವಾರ್ಷಿಕ ಗ್ರಾಹಕರ ಸಮಾವೇಶ ನಡೆಯಿತು. ಸಂಸ್ಥೆಯ ಗ್ರಾಹಕರು ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಗ್ರಾಹಕರು ಮತ್ತು ಸಂಸ್ಥೆ ನಡುವಣ ಬಾಂಧವ್ಯ ವೃದ್ಧಿ ನಿಟ್ಟಿನಲ್ಲಿ ಈ ಕಾರ್ಯಕ್ರಮ ನಡೆದಿದ್ದು, ಗ್ರಾಹಕರಿಂದಲೂ ಉತ್ತಮ ಸ್ಪಂದನೆ ಸಿಕ್ಕಿತ್ತು. ಯುಇಎ  ಎಕ್ಸ್ ಚೇಂಜ್ ನ ಝೋನಲ್ ಹೆಡ್ ಶರತ್ ಶೆಟ್ಟಿ ಮತ್ತು ಬ್ರ್ಯಾಂಚ್‍ನ ಮುಖ್ಯಸ್ಥ ಉದಯ್ ಶೆಟ್ಟಿ ಗ್ರಾಹಕರನ್ನು ಸ್ವಾಗತಿಸಿ ಪ್ರಾಸ್ತವಿಕವಾಗಿ …

Read More »

ಐಸಿಸ್‍ಗೆ ಮಹಿಳೆಯ ಮಾರಾಟ ಯತ್ನ : ಬೆಂಗಳೂರಿನ ಮೂವರು ಸೇರಿ 9 ಮಂದಿ ಬಂಧನ

ಬೆಂಗಳೂರು : ರಕ್ತ ಪಿಪಾಸು ಐಸಿಸ್ ಉಗ್ರ ಸಂಘಟನೆಗೆ ಕೇರಳ ಮೂಲದ ಮಹಿಳೆಯೊಬ್ಬರನ್ನು ಮಾರಾಟ ಮಾಡಲು ಯತ್ನಿಸಿದ 9 ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಲ್ಲಿ ಮೂವರು ಬೆಂಗಳೂರಿಗರೂ ಸೇರಿದ್ದಾರೆ. ಬೆಂಗಳೂರಿನ ನಿವಾಸಿಗಳಾದ ದಾನೀಶ್ ನಜೀಬ್, ಇಲಿಯಾಸ್ ಮೊಹಮ್ಮದ್ ಮತ್ತು ಗಾಜಿಲಾ ಬಂಧಿತ ಆರೋಪಿಗಳು. ಇವರೊಂದಿಗೆ ಮೊಹಮ್ಮದ್ ರಿಯಾಸ್ ರಶೀದ್, ನಹಾಸ್ ಅಬ್ದುಲ್ ಖಾದರ್, ಮೊಹಮ್ಮದ್ ನಾಜೀಶ್, ಟಿ.ಕೆ. ಅಬ್ದುಲ್ ಮುಹಾಸಿನ್, ಕೆ. ಫವಾಸ್ ಜಮಾಲ್, ಮೊಯಿನ್ ಪಟೇಲ್ ಎಂಬುವವರನ್ನೂ ಬಂಧಿಸಲಾಗಿದೆ. ಇವರ …

Read More »

ಸಿರಿವಂತ ದೇಶಗಳ ಪಟ್ಟಿಯಲ್ಲಿ ಭಾರತಕ್ಕೆ 6ನೇ ಸ್ಥಾನ

ನವದೆಹಲಿ : ವಿಶ್ವದ ಶ್ರೀಮಂತ ದೇಶಗಳ ಪಟ್ಟಿಯಲ್ಲಿ ಭಾರತ ಆರನೇ ಸ್ಥಾನ ಪಡೆದಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. `ನ್ಯೂ ವಲ್ರ್ಡ್ ವೆಲ್ತ್’ ಈ ವರದಿ ಮಾಡಿದ್ದು, ಭಾರತದ ಒಟ್ಟು ಖಾಸಗಿ ಸಂಪತ್ತು ರೂಪಾಯೊ 534 ಲಕ್ಷ ಕೋಟಿಗಳಿಯಾಗಿದೆ ಎಂದು ಉಲ್ಲೇಖಿಸಿದೆ. ಇದೇ ಪಟ್ಟಿಯಲ್ಲಿ ಭಾರತ ಕಳೆದ ವರ್ಷ ಏಳನೇ ಸ್ಥಾನದಲ್ಲಿತ್ತು. ಇನ್ನು, ಪಟ್ಟಿಯಲ್ಲಿ 64,584 ಡಾಲರ್ ಖಾಸಗಿ ಸಂಪತ್ತಿನ ಮೂಲಕ ಅಮೇರಿಕಾ ಮೊದಲ ಸ್ಥಾನದಲ್ಲಿ ಇದೆ ಎಂದು ಉಲ್ಲೇಖಿಸಲಾಗಿದೆ. …

Read More »

ಸ್ವದೇಶಿ ನಿರ್ಮಿತ ಜಲಾಂತರಗಾಮಿ ನೌಕೆ ಅಧಿಕೃತವಾಗಿ ಸೇರ್ಪಡೆ

ಮುಂಬೈ : ಸ್ಕಾರ್ಪಿಯನ್ ಸರಣಿಯ ಮತ್ತೊಂದು ಜಲಾಂತರಗಾಮಿ ನೌಕೆ ಅಧಿಕೃತವಾಗಿ ಸೇನೆಗೆ ಸೇರ್ಪಡೆಯಾಗಿದೆ. ಈ ಸರಣಿಯ 3 ನೇ ಸ್ವದೇಶಿ ನಿರ್ಮಿತ ಜಲಾಂತರಗಾಮಿ ನೌಕೆ `ಕಾರಂಜ್’ ಅನ್ನು ನೌಕಾಪಡೆಗೆ ಸೇರ್ಪಡೆಗೊಳಿಸಲಾಗಿದೆ. Erstwhile Karanj was commissioned in @indiannavy on 04 Sep 1969 and was retired on 01 Aug 2003. Today she is reborn in a new avatar pic.twitter.com/beodU1tZjA — SpokespersonNavy …

Read More »

ರಸ್ತೆ ದಾಟುತ್ತಿದ್ದ ಮಹಿಳೆಯನ್ನು ರಕ್ಷಿಸಲು ಹೋಗಿ ಸೇತುವೆಯಿಂದ ಬಿದ್ದ ಕಾರು : ತಮಿಳುನಾಡು ಕ್ರಿಕೆಟಿಗ ಸಾವು

ಚೆನ್ನೈ : ತಮಿಳುನಾಡಿನ ಕ್ರಿಕೆಟ್ ಆಟಗಾರ ಪ್ರಭಾಕರ್ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಬ್ರಿಡ್ಜ್ ಮೇಲೆ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ನೈನ್ ಲೀಗ್ ಆಟಗಾರರು ಈ ಕಾರಿನಲ್ಲಿ ಹೋಗುತ್ತಿದ್ದರು. ಈ ವೇಳೆ, ರಸ್ತೆ ದಾಟುತ್ತಿದ್ದ ಮಹಿಳೆಯಿಂದ ಕಾರನ್ನು ತಪ್ಪಿಸಲು ಹೋಗಿ ಕಾರು ಚಾಲಕನ ನಿಯಂತ್ರಣ ತಪ್ಪಿದೆ. ಪರಿಣಾಮ, ಬಿಡ್ಜ್‍ನಿಂದ ಕೆಳಗೆ ಬಿದ್ದ ಕಾರು ನಜ್ಜುಗುಜ್ಜಾಗಿದೆ. ಈ ಘಟನೆಯಲ್ಲಿ ಕಾರಿನಲ್ಲಿದ್ದ ಇತರ ಆರು ಆಟಗಾರರಿಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಮಕ್ಕಲ್ …

Read More »

100 ಕೋಟಿಯಷ್ಟು ಬ್ಯಾನ್ ಆದ ನೋಟು ಪತ್ತೆ…!

ಲಕ್ನೋ : 500, 1000 ರೂಪಾಯಿ ಮುಖಬೆಲೆಯ ನೋಟು ಬ್ಯಾನ್ ಆಗಿ ವರ್ಷ ಕಳೆದು ಹೋಗಿದೆ. ಆದರೂ ಹಳೇ ನೋಟುಗಳು ಪತ್ತೆಯಾಗುವುದು ಮಾತ್ರ ನಿಂತಿಲ್ಲ. ಕಾನ್ಪುರದಲ್ಲಿ ನಿರ್ಮಾಣ ಹಂತದ ಮನೆಯಲ್ಲಿ 100 ಕೋಟಿ ಮೌಲ್ಯದ ಹಳೇ ನೋಟುಗಳು ಸಿಕ್ಕಿವೆ. ನೋಟ್ ಬ್ಯಾನ್ ಬಳಿಕ ಇದೇ ಮೊದಲ ಬಾರಿಗೆ ಸಿಕ್ಕ ದೊಡ್ಡ ಮೊತ್ತದ ನಗದು ಇದಾಗಿದೆ. ರಾಷ್ಟ್ರೀಯ ಭದ್ರತಾ ಸಂಸ್ಥೆ(ಎನ್‍ಐಎ) ಹಾಗೂ ಉತ್ತರ ಪ್ರದೇಶ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಈ …

Read More »
error: Content is protected !!