Wednesday , December 12 2018
ಕೇಳ್ರಪ್ಪೋ ಕೇಳಿ
Home / News NOW (page 41)

News NOW

ಸಿನೆಮಾ ಥಿಯೇಟರ್‍ಗಳಲ್ಲಿ ರಾಷ್ಟ್ರಗೀತೆ ಕಡ್ಡಾಯ : ಸುಪ್ರೀಂಕೋರ್ಟ್

ನವದೆಹಲಿ : ದೇಶದ ಎಲ್ಲಾ ಚಿತ್ರಮಂದಿರಗಳಲ್ಲಿ ಇನ್ನು ರಾಷ್ಟ್ರಗೀತೆ ಕಡ್ಡಾಯ. ಈ ಬಗ್ಗೆ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ. ಚಿತ್ರ ಪ್ರದರ್ಶನಕ್ಕೆ ಮುನ್ನ ರಾಷ್ಟ್ರಧ್ವಜವನ್ನು ಪ್ರದರ್ಶಿಸಿ ರಾಷ್ಟ್ರಗೀತೆಯನ್ನು ಪ್ರಸಾರ ಮಾಡುವುದು ಕಡ್ಡಾಯ ಎಂದು ಸುಪ್ರೀಂಕೋರ್ಟ್ ತನ್ನ ಆದೇಶದಲ್ಲಿ ಸ್ಪಷ್ಟವಾಗಿ ತಿಳಿಸಿದೆ. ಜೊತೆಗೆ, ರಾಷ್ಟ್ರಗೀತೆ ಪ್ರಸಾರ ಸಂದರ್ಭದಲ್ಲಿ ಚಿತ್ರಮಂದಿರದಲ್ಲಿ ಇರುವ ಪ್ರತಿಯೊಬ್ಬರು ಎದ್ದು ನಿಂತು ಗೌರವ ನೀಡಬೇಕು ಎಂದೂ ನ್ಯಾಯಾಲಯ ತಿಳಿಸಿದೆ. ರಾಷ್ಟ್ರಗೀತೆಯನ್ನು ಪೂರ್ಣಪ್ರಮಾಣದಲ್ಲಿ ನುಡಿಸಬೇಕು. ಅದಕ್ಕೆ ಕತ್ತರಿ ಪ್ರಯೋಗ ಮಾಡಬಾರದು …

Read More »

ದಾಂಪತ್ಯಕ್ಕೆ ಕಾಲಿಟ್ಟ ಯುವರಾಜ್ ಸಿಂಗ್ : ಬಾಳ ಸಂಗಾತಿಯಾಗಿ ಬಂದ ಹಝೀಲ್

ನವದೆಹಲಿ : ಕ್ರಿಕೆಟಿಗ ಯುವರಾಜ್ ಸಿಂಗ್ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ಹಝೀಲ್ ಕೀಚ್ ಯುವಿ ಬಾಳ ಸಂಗಾತಿಯಾಗಿ ಬಂದಿದ್ದಾರೆ. ಕಳೆದ ಎರಡು ವರ್ಷದಿಂದ ಪ್ರೀತಿಯಲ್ಲಿ ವಿಹರಿಸುತ್ತಿದ್ದ ಈ ಜೋಡಿಯ ಪ್ರೇಮ ಈಗ ಪರಿಣಯದಲ್ಲಿ ಸಾರ್ಥಕ್ಯ ಕಂಡಿದೆ. ನಿನ್ನೆ ಸಂಭ್ರಮದ ಮೆಹಂದಿ ಕಾರ್ಯಕ್ರಮ ನಡೆದಿದ್ದು, ಅನೇಕರು ಈ ಸಂಭ್ರಮಕ್ಕೆ ಸಾಕ್ಷಿಯಾಗಿದ್ದರು. ಸಿಖ್ ಸಮುದಾಯದ ಸಂಪ್ರದಾಯದಂತೆ ದೇರಾದ ಬಾಬಾ ರಾಮ್ ಸಿಂಗ್ ಗಂದ್ವಾಲ್ ವಾಲೇಯಲ್ಲಿ ಇವತ್ತು ಮದುವೆ ನಡೆದಿದೆ. ಇನ್ನು, ಡಿಸೆಂಬರ್ 2 ರಂದು …

Read More »

ಪೆಟ್ರೋಲ್ ಬಂಕ್‍ನಲ್ಲಿ 2,000 ರೂಪಾಯಿ ಹಣ ಡ್ರಾ ಮಾಡಬಹುದು

ನವದೆಹಲಿ : 500, 1000 ನೋಟು ಬ್ಯಾನ್ ಬಳಿಕ ದೇಶದ ಜನ ಕಷ್ಟ ಅನುಭವಿಸುತ್ತಿದ್ದಾರೆ. ಹಣದ ವಿನಿಮಯಕ್ಕೆ ಜನ ಬ್ಯಾಂಕ್‍ನಲ್ಲಿ ಸರದಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಈ ಕಷ್ಟ ಪರಿಹರಿಸಲು ಕೇಂದ್ರ ಸರ್ಕಾರ ಮತ್ತೊಂದು ಹೆಜ್ಜೆ ಇಟ್ಟಿದೆ. ಇನ್ನು ಮುಂದೆ 2000 ರೂಪಾಯಿಯನ್ನು ಪೆಟ್ರೋಲ್ ಬಂಕ್‍ನಲ್ಲಿ ಡ್ರಾ ಮಾಡಿಕೊಳ್ಳಬಹುದು. ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಬಳಸಿ ಪೆಟ್ರೋಲ್ ಬಂಕ್‍ನಲ್ಲಿ ಹಣ ವಿತ್ ಡ್ರಾ ಮಾಡಬಹುದು. ಈ ಬಗ್ಗೆ ಮೂರು ಆಯಿಲ್ ಕಂಪೆನಿಯೊಂದಿಗೆ …

Read More »

ನಾಳೆ ಬ್ಯಾಂಕ್‍ಗಳಿಗೆ ರಜೆ ಇಲ್ಲ

ಬೆಂಗಳೂರು : 500, 1000 ರೂಪಾಯಿ ನೋಟುಗಳ ರದ್ದು ಹಿನ್ನೆಲೆಯಲ್ಲಿ ಜನ ಸಾಕಷ್ಟ ಕಷ್ಟ ಅನುಭವಿಸುತ್ತಿದ್ದಾರೆ. ನೋಟುಗಳ ವಿನಿಮಯಕ್ಕೆ ಬ್ಯಾಂಕ್‍ಗಳು ಮುಂದೆ ದೊಡ್ಡ ದೊಡ್ಡ ಕ್ಯೂ ಇದೆ. ಈ ಹಿನ್ನೆಲೆಯಲ್ಲಿ ನಾಳೆ ಕನಕಜಯಂತಿ ಇದ್ದರೂ ಬ್ಯಾಂಕ್‍ಗಳಿಗೆ ರಜೆ ಇಲ್ಲ. ಜನರಿಗೆ ತೊಂದರೆ ಆಗಬಾರದು ಎಂಬ ನಿಟ್ಟಿನಲ್ಲಿ ಸರ್ಕಾರ ಬ್ಯಾಂಕ್‍ಗಳ ರಜೆಯನ್ನು ರದ್ದು ಮಾಡಿದೆ. ಹೀಗಾಗಿ, ನಾಳೆ ಕೂಡಾ ಬ್ಯಾಂಕ್‍ಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ.

Read More »

500, 1000 ರೂಪಾಯಿ ನೋಟ್ ಬಂದ್…!

ನವದೆಹಲಿ : ಇನ್ನು ಮುಂದೆ 500, 1000 ರೂಪಾಯಿ ನೋಟುಗಳು ಬರೀ ಪೇಪರ್ ತುಂಡುಗಳು…! ಯಾಕೆಂದರೆ, ಈ ನೋಟ್‍ಗಳ ಚಲಾವಣೆಯನ್ನು ಸರ್ಕಾರ ಬಂದ್ ಮಾಡಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟಪಡಿಸಿದ್ದಾರೆ. ತುರ್ತು ಸುದ್ದಿಗೋಷ್ಠಿ ನಡೆಸಿದ ಪ್ರಧಾನಿ ಈ ವಿಷಯ ಸ್ಪಷ್ಟಪಡಿಸಿದ್ದಾರೆ. ಕಪ್ಪು ಹಣ ಮತ್ತು ನಕಲಿ ನೋಟಿಗೆ ಬ್ರೇಕ್ ಹಾಕುವ ಸಲುವಾಗಿ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ನೋಟುಗಳನ್ನು ವಾಪಸ್ ನೀಡಲು 50 ದಿನಗಳ ಗಡುವು …

Read More »

ಟೌಮ್ಸ್ ನೌ ನಿಂದ ಅರ್ನಬ್ ಗೋಸ್ವಾಮಿ ದೂರ

ಮುಂಬೈ : ಪತ್ರಿಕೋದ್ಯಮದಲ್ಲಿ ಸಾಕಷ್ಟು ಹೆಸರು ಮಾಡಿರುವ ಟೌಮ್ಸ್ ನೌ ವಾಹಿನಿಯ ಪ್ರಧಾನ ಸಂಪಾದಕ ಅರ್ನಬ್ ಗೋಸ್ವಾಮಿ ಟೌಮ್ಸ್ ನೆಟ್ ವರ್ಕನ್ನು ತೊರೆಯಲಿದ್ದಾರೆ. ಆದರೆ, ಪತ್ರಿಕೋದ್ಯಮದಲ್ಲೇ ಮುಂದುವರಿಯಲಿರುವ ಅರ್ನಬ್ ಅವರ ಮುಂದಿನ ಯೋಜನೆ ಏನು ಎಂಬುದು ಇನ್ನೂ ಗೊತ್ತಾಗಿಲ್ಲ. ಒಂದು ಮೂಲಗಳ ಪ್ರಕಾರ ಅರ್ನಬ್ ಅವರೇ ಸ್ವಂತ ಸಂಸ್ಥೆಯನ್ನು ಹುಟ್ಟುಹಾಕಲಿದ್ದಾರಂತೆ. ಇದು ಟಿವಿಯಾ ಅಥವಾ ಡಿಜಿಟಲಾ ಎಂಬುದು ಇನ್ನೂ ಗೊತ್ತಾಗಿಲ್ಲ. ದಿ ಟೆಲಿಗ್ರಾಫ್ ಸಂಸ್ಥೆಯಲ್ಲಿ ಗೋಸ್ವಾಮಿ ವೃತ್ತಿ ಜೀವನ ಆರಂಭಿಸಿದರು. …

Read More »

ಅಪಘಾತ : ಟ್ರಕ್‍ನಡಿಗೆ ಬಿದ್ದ ಶಿಕ್ಷಕ : ಭೀಕರವಾಗಿದೆ ವೀಡಿಯೋ

ನವದೆಹಲಿ : ಶಾಲಾ ಶಿಕ್ಷಕರೊಬ್ಬರು ಪ್ರಯಾಣಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಕಾರೊಂದು ಡಿಕ್ಕಿಯಾಗಿ ಕೆಳಗೆ ಬಿದ್ದ ಆ ಶಿಕ್ಷಕರ ಮೇಲೆ ಲಾರಿಯೊಂದು ಹರಿದ ಘಟನೆ ದೆಹಲಿಯಲ್ಲಿ ನಡೆದಿದೆ. ದಕ್ಷಿಣ ದೆಹಲಿಯ ಜಫರ್‍ಪುರ್ ಕಲ್ಯಾಣ್‍ನಲ್ಲಿ ಈ ಘಟನೆ ನಡೆದಿದೆ. ಇಲ್ಲಿದೆ ಆ ಭೀಕರ ಅಪಘಾತದ ವೀಡಿಯೋ… ಸ್ಪಷ್ಟನೆ : ಈ ವೀಡಿಯೋ ನೋಡುವಾಗಲೇ ಆಘಾತವಾಗುತ್ತದೆ. ಸುದ್ದಿಯ ಮಹತ್ವದ ದೃಷ್ಟಿಯಿಂದ ಮಾತ್ರ ಈ ವೀಡಿಯೋ ಪ್ರಕಟಿಸಿದ್ದೇವೆ.

Read More »

68 ದಿನಗಳ ಉಪವಾಸ ವ್ರತ : 13 ವರ್ಷದ ಬಾಲಕಿ ಸಾವು

ಹೈದರಾಬಾದ್: 68 ದಿನಗಳ ಕಠಿಣ ಉಪವಾಸ ವ್ರತ ಮಾಡಿರುವ 13 ವರ್ಷದ ಬಾಲಕಿ ಸಾವನ್ನಪ್ಪಿರುವ ಘಟನೆ ಹೈದರಾಬಾದ್‍ನಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಎಂಟನೇ ತರಗತಿ ವಿದ್ಯಾರ್ಥಿನಿ ಆರಾಧನಾ ಮೃತ ಬಾಲಕಿ. ಜೈನ ಧರ್ಮದ ಪವಿತ್ರ ಚೌಮಾಸ ಆಚರಣೆ ಹಿನ್ನೆಲೆಯಲ್ಲಿ ಆರಾಧನಾ 68 ದಿನಗಳ ಕಾಲ ಕಠಿಣ ಉಪವಾಸ ವ್ರತ ಕೈಗೊಂಡಿದ್ದಳು. ಈ ಕಠಿಣ ಉಪವಾಸ ಪೂರೈಸಿ ಎರಡು ದಿನಗಳ ಬಳಿಕ ಆರಾಧನಾಳನ್ನು ಆಸ್ಪತ್ರೆಗೆ ಸೇರಿಸಲಾಯಿತು. ಈ ವೇಳೆ, ಹೃದಯಾಘಾತದಿಂದ ಆರಾಧನಾ …

Read More »

ಭಾಸ್ಕರ್ ಶೆಟ್ಟಿ ಹತ್ಯೆ ಪ್ರಕರಣ : ಪತ್ನಿ ರಾಜೇಶ್ವರಿ ಜಾಮೀನಿಗೆ ಅರ್ಜಿ

ಉಡುಪಿ : ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯನ್ನು ಬೆಚ್ಚಿ ಬೀಳಿಸಿದ್ದ ಬಹುಕೋಟಿ ಆಸ್ತಿ ಒಡೆಯ ಭಾಸ್ಕರ್ ಶೆಟ್ಟಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಭಾಸ್ಕರ್ ಶೆಟ್ಟಿ ಪತ್ನಿ ರಾಜೇಶ್ವರಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಉಡುಪಿ ಜಿಲ್ಲಾ ನ್ಯಾಯಾಲಯದಲ್ಲಿ ರಾಜೇಶ್ವರಿ ಅರ್ಜಿ ಸಲ್ಲಿಸಿದ್ದು, ಅಕ್ಟೋಬರ್ 17 ರಂದು ಈ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ.

Read More »

ಭಾಸ್ಕರ್ ಶೆಟ್ಟಿ ಹತ್ಯೆ ಪ್ರಕರಣ : ಇಬ್ಬರಿಗೆ ಜಾಮೀನು ಮಂಜೂರು

ಉಡುಪಿ : ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿರುವ ಬಹುಕೋಟಿ ಆಸ್ತಿ ಒಡೆಯ ಭಾಸ್ಕರ್ ಶೆಟ್ಟಿ ಹತ್ಯೆ ಪ್ರಕರಣದ ಇಬ್ಬರು ಆರೋಪಿಗಳಿಗೆ ಜಾಮೀನು ಮಂಜೂರಾಗಿದೆ.ಪ್ರಕರಣದ ಪ್ರಮುಖ ಆರೋಪಿ ನಿರಂಜನ್ ಭಟ್ ತಂದೆ ಶ್ರೀನಿವಾಸ್ ಭಟ್ ಮತ್ತು ರಾಘವೇಂದ್ರಗೆ ಜಾಮೀನು ಸಿಕ್ಕಿದೆ. ಸಾಕ್ಷ್ಯ ನಾಶದ ಆರೋಪದಲ್ಲಿ ಈ ಇಬ್ಬರನ್ನು ಬಂಧಿಸಲಾಗಿತ್ತು. ಜೆಎಂಎಫ್‍ಸಿ ನ್ಯಾಯಾಲಯ ಇವರಿಗೆ ಜಾಮೀನು ಮಂಜೂರು ಮಾಡಿದೆ. ಪ್ರಕರಣದ ಸಂಬಂಧ ಭಾಸ್ಕರ್ ಶೆಟ್ಟಿ ಪತ್ನಿ ರಾಜೇಶ್ವರಿ, ಪುತ್ರ ನವನೀತ್ ಮತ್ತು ಜ್ಯೋತಿಷಿ …

Read More »
error: Content is protected !!