Sunday , July 22 2018
ಕೇಳ್ರಪ್ಪೋ ಕೇಳಿ
Home / News NOW (page 44)

News NOW

ವಿಶ್ವದಾಖಲೆಗೆ ಅಂತರ್ಮನ ‘ರಕ್ಷಾಬಂಧನ’

ಬೆಂಗಳೂರು: ಅಲ್ಲಿ ಅಸೂಯೆ ಬದಲು ಸ್ನೇಹ ಮನೆ ಮಾಡಿತ್ತು. ಅಹಂ ಬದಲು ವಿನಮ್ರತೆ ಮೇಳೈಸಿತ್ತು. ದ್ವೇಷಿಸುವ ಬದಲು ಪ್ರೀತಿಸುವ ಸಾವಿರಾರು ಹೃದಯಗಳು ಒಂದೆಡೆ ಸೇರಿದ್ದವು. ಹೀಗೆ ಸಾವಿರಾರು ಮನಸ್ಸುಗಳನ್ನು ಒಂದೆಡೆ ಸೇರಿದ್ದು, ಒಂದಾಗಿಸಿದ್ದು ಸ್ನೇಹದ ಸೂತ್ರವಾಗಿರುವ, ಸಹೋದರತೆಯ ಶ್ರೋತವಾಗಿರುವ ರಾಖಿಹಬ್ಬ. ಶ್ರಾವಣ ಹುಣ್ಣಿಮೆಯ ಪವಿತ್ರ ದಿನವಾದ ಗುರುವಾರ ಬಸವನಗುಡಿಯ ನ್ಯಾಷನಲ್‍ಕಾಲೇಜು ಮೈದಾನ ಅಭೂತಪೂರ್ವ ಸ್ನೇಹಪರ್ವಕ್ಕೆ, ಅಣ್ಣ-ತಂಗಿಯರ ಸಹೋದರತೆಗೆ ಸಾಕ್ಷಿಯಾಯಿತು. ದಿಗಂಬರ ಸಂತ ಅಂತರ್‍ಮನ ಶ್ರೀ 108 ಪ್ರಸನ್ನ ಸಾಗರಜೀ ಮಹಾರಾಜರ …

Read More »

ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ತನಿಖೆ ಸಿಐಡಿಗೆ

ಬೆಂಗಳೂರು: ಉಡುಪಿಯ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ತನಿಖೆಯನ್ನು ಸಿಐಡಿಗೆ ನೀಡಲಾಗಿದೆ. ಈ ಬಗ್ಗೆ ಸರ್ಕಾರ ಆದೇಶ ನೀಡಿದೆ. ಈ ಹಿಂದೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಕೂಡಾ ಪ್ರಕರಣವನ್ನು ಸಿಐಡಿಗೆ ನೀಡುವಂತೆ ಒತ್ತಾಯ ಮಾಡಿದ್ದರು. ಸ್ಥಳೀಯ ಪೊಲೀಸರ ಬಗ್ಗೆ ಭಾಸ್ಕರ ಶೆಟ್ಟಿ ತಾಯಿ ಸೇರಿದಂತೆ ಸಂಬಂಧಿಕರು ಅನುಮಾನ ವ್ಯಕ್ತಪಡಿಸಿದ್ದರು. ಆರೋಪಿಗಳೊಂದಿಗೆ ಕೆಲ ಪೊಲೀಸರು ಕೈಜೋಡಿಸಿದ್ದಾರೆ ಎಂಬ ಅನುಮಾನ ಇವರದ್ದು. ಹೀಗಾಗಿ. ಪ್ರಕರಣದ ತನಿಖೆಯನ್ನು ಬೇರೆ …

Read More »

ಆತ್ಮರಕ್ಷಣೆಗಾಗಿ ಭಾಸ್ಕರ್ ಶೆಟ್ಟಿ ಹತ್ಯೆ…! : ರಾಜೇಶ್ವರಿ ಶೆಟ್ಟಿ ತಾಯಿಯ ಮಾತು…!

ಉಡುಪಿ : ಬಹುಕೋಟಿ ಮೌಲ್ಯದ ಆಸ್ತಿ ಒಡೆಯ ಭಾಸ್ಕರ್ ಶೆಟ್ಟಿ ಹತ್ಯೆ ಕೇಸ್‍ನ ರಹಸ್ಯ ಬಗೆದಷ್ಟು ಹೊರಬರುತ್ತಿದೆ. ಜೊತೆಗೆ ಅಷ್ಟೇ ಜಟಿಲವಾಗುತ್ತಿದೆ. ಕೊಲೆ ಆರೋಪ ಹೊತ್ತಿರುವ ಭಾಸ್ಕರ್ ಶೆಟ್ಟಿ ಪತ್ನಿ ರಾಜೇಶ್ವರಿ ತಾಯಿ ಈಗ ಬೇರೆಯದ್ದೇ ವಿಷಯವನ್ನು ಬಿಚ್ಚಿಟ್ಟಿದ್ದಾರೆ. ಆತ್ಮರಕ್ಷಣೆಗಾಗಿ ರಾಜೇಶ್ವರಿ ತನ್ನ ಗಂಡನನ್ನು ಹತ್ಯೆ ಕೊಂದಿರಬಹುದು ಎಂದು ರಾಜೇಶ್ವರಿ ತಾಯಿ ಸುಮತಿ ಶೆಟ್ಟಿ ಹೇಳಿದ್ದಾಗಿ ಸ್ಥಳೀಯ ಸುದ್ದಿ ವಾಹಿನಿಗಳು ವರದಿ ಮಾಡಿವೆ. ಭಾಸ್ಕರ್ ಶೆಟ್ಟಿ ತನ್ನ ಮಗಳು ಮತ್ತು …

Read More »

ಭಾಸ್ಕರ್ ಶೆಟ್ಟಿ ಪ್ರಕರಣ : ಅವಶೇಷಗಳು ಸಿಗದಿರುವಂತೆ ಮಾಡಲಾಗಿತ್ತಾ ಪ್ಲಾನ್…?

ಉಡುಪಿ : 200 ಕೋಟಿ ಮೌಲ್ಯದ ಆಸ್ತಿಗಳ ಒಡೆಯ ಉಡುಪಿಯ ಭಾಸ್ಕರ್ ಶೆಟ್ಟಿ ಹತ್ಯೆ ಪ್ರಕರಣ ದಿನದಿಂದ ದಿನಕ್ಕೆ ಕಂಗಂಟಾಗುತ್ತಿದೆ. ಹೋಮಕುಂಡದಲ್ಲಿ ಭಾಸ್ಕರ್ ಶೆಟ್ಟಿ ಹೆಣ ಸುಟ್ಟ ಬಳಿಕ ಆರೋಪಿಗಳ ಅವಶೇಷಗಳನ್ನು ವ್ಯವಸ್ಥಿತವಾಗಿ ವಿಲೇವಾರಿ ಮಾಡಿರುವುದು ಈಗ ಬಹಿರಂಗವಾಗಿದೆ… ಈಗಿನ ಸ್ಥಿತಿಯನ್ನು ನೋಡಿದರೆ ಈ ಅವಶೇಷಗಳು ಸಿಗುವುದು ಬಹಳ ಕಷ್ಟ ಎಂಬಂತಹ ಪರಿಸ್ಥಿತಿ ಈಗ ನಿರ್ಮಾಣವಾಗಿದೆ ಎಂದು ಹೇಳಲಾಗುತ್ತಿದೆ. ಯಾಕೆಂದರೆ, ಭಾಸ್ಕರ್ ಶೆಟ್ಟಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ …

Read More »

ಆಳ್ವಾಸ್‍ನಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ : ಕಣ್ಮನ ಸೆಳೆದ ದೃಶ್ಯ

ಮೂಡುಬಿದಿರೆ : ದಕ್ಷಿಣ ಕನ್ನಡ ಜಿಲ್ಲೆಯ ಖ್ಯಾತ ಶಿಕ್ಷಣ ಸಂಸ್ಥೆ ಆಳ್ವಾಸ್‍ನಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ ನಡೆಯಿತು. ಈ ಬಾರಿ ಇಲ್ಲಿ ಬರೋಬ್ಬರಿ 35 ಸಾವಿರ ಮಂದಿ ಧ್ವಜವಂದನೆ ಸಲ್ಲಿಸಿದರು. ಈ ದೃಶ್ಯವನ್ನು ನೋಡುವುದೇ ಕಣ್ಣಿಗೆ ಒಂದು ಹಬ್ಬದಂತಿತ್ತು. ಶಿಕ್ಷಣ ಮಾತ್ರವಲ್ಲದೆ ಕಲೆ, ಸಾಹಿತ್ಯ, ಸಾಂಸ್ಕøತಿಕ, ಕ್ರೀಡಾ ಕ್ಷೇತ್ರಕ್ಕೆ ಪ್ರೋತ್ಸಾಹ ನೀಡುತ್ತಾ ಹೆಸರು ಮಾಡಿರುವ ಈ ವಿದ್ಯಾಸಂಸ್ಥೆಯಲ್ಲಿ ಸ್ವಾತಂತ್ರ್ಯೋತ್ಸವವನ್ನು ತುಂಬಾ ಅದ್ದೂರಿಯಾಗಿ ಆಚರಣೆ ಮಾಡಿಕೊಂಡು ಬರಲಾಗುತ್ತದೆ. ಒಂದನೇ ತರಗತಿಯಿಂದ ಶುರುವಾಗಿ ಸ್ನಾತಕೋತ್ತರ …

Read More »

ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ : ಶವ ಸುಟ್ಟ ಬೂದಿ ಯಾವ ನದಿಗೆ ಎಸೆದಿದ್ದಾರೆ…?

ಉಡುಪಿ : ಪತ್ನಿ ಮತ್ತು ಮಗನಿಂದಲೇ ಕೊಲೆಯಾಗುವ ಮೂಲಕ ತೀವ್ರ ಕುತೂಹಲಕ್ಕೆ ಮತ್ತು ಚರ್ಚೆಗೆ ಕಾರಣವಾಗಿರುವ ಉಡುಪಿಯ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ರಹಸ್ಯ ಬಗೆದಷ್ಟು ಸಿಗುತ್ತಿದೆ. ಕೊಲೆ ನಡೆದು ಇಷ್ಟು ದಿನ ಆದರೂ ಹತ್ಯೆಗೆ ಬಳಸಿದ್ದ ಆಯುಧಗಳು ಇನ್ನೂ ಪತ್ತೆಯಾಗಿಲ್ಲ. ಮೃತದೇಹದ ಕುರುಹುಗಳೂ ಇನ್ನೂ ಸಿಕ್ಕಿಲ್ಲ. ಅದೂ ಅಲ್ಲದೆ, ಶವ ಸುಟ್ಟ ಬೂದಿಯನ್ನು ಯಾವ ನದಿಗೆ ಎಸೆಯಲಾಗಿದೆ ಎಂಬ ಕುರಿತು ಈಗ ಚರ್ಚೆ ಶುರುವಾಗಿದೆ… ಯಾವ ನದಿಗೆ …

Read More »

ಬೆಂಗಳೂರಿನ ಕಾಲೇಜಿನಲ್ಲೂ ದೇಶ ವಿರೋಧಿ ಘೋಷಣೆ…?

ಬೆಂಗಳೂರು : ಇತ್ತೀಚೆಗಷ್ಟೇ ತೀವ್ರ ವಿವಾದ ಮತ್ತು ಆಕ್ರೋಶಕ್ಕೆ ಕಾರಣವಾಗಿದ್ದ ದೆಹಲಿಯ ಜೆಎನ್‍ಯು ವಿವಿ ಘಟನೆ ಮಾದರಿಯ ಪ್ರಕರಣ ಬೆಂಗಳೂರಿನಲ್ಲೂ ನಡೆದಿದೆ. ಭಾರತ ಸೇನೆ ವಿರುದ್ಧ ಕೆಲವರು ಘೋಷಣೆ ಕೂಗಿದ್ದಾರೆ ಎಂದು ಹೇಳಲಾಗುತ್ತಿದೆ. ದಿ ಯುನೈಟೆಡ್ ಥಿಯಾಲಾಜಿಕಲ್ ಕಾಲೇಜಿನಲ್ಲಿ ನಡೆದ ಕಾರ್ಯಾಗಾರದ ವೇಳೆ ಕೆಲವರು, ಜಮ್ಮು ಕಾಶ್ಮೀರ ನಮದಲ್ಲ ಪಾಕಿಸ್ತಾನಕ್ಕೆ ಕೊಡಿ ಎಂದು ಘೋಷಣೆ ಕೂಗಿದ್ದಾರೆ ಎಂದು ಆರೋಪಿಸಲಾಗಿದೆ. ಈ ವಿಷಯ ತಿಳಿಯುತ್ತಿದ್ದಂತೆಯೇ ಜಮಾಯಿಸಿದ ಎಬಿವಿಪಿ ಕಾರ್ಯಕರ್ತರು ಕಾಲೇಜು ಎದುರು …

Read More »

ಒಬ್ಬ ಹಿಟ್ ರನ್ ಮಾಡಿ ಓಡಿದ, ಇನ್ನೊಬ್ಬ ಸತ್ತವನ ಮೊಬೈಲ್ ಕದ್ದ : ಎಲ್ಲಿ ಹೋಯ್ತು ಮಾನವೀಯತೆ…? : ಇಲ್ಲಿದೆ ವೀಡಿಯೋ

ಹೊಸದಿಲ್ಲಿ : ಮಾನವೀಯತೆಯೇ ಸತ್ತು ಹೋದ ಘಟನೆ ಇದು… ರಸ್ತೆ ಅಪಘಾತದಲ್ಲಿ ವ್ಯಕ್ತಿಯೊಬ್ಬ ಸಾಯುತ್ತಿದ್ದರೂ ಕೆಲವರು ಹೇಗೆಲ್ಲಾ ವರ್ತಿಸುತ್ತಾರೆ ಅನ್ನೋದಕ್ಕೆ ಸಾಕ್ಷಿ ಇದು… ಮೂಲತಃ ಪಶ್ಚಿಮ ಬಂಗಾಲದ ಮತಿಬಲ್ ಎಂಬಾತನ ಮೇಲೆ ಇವತ್ತು ಇಂದು ಆಟೋ ಡಿಕ್ಕಿ ಹೊಡೆದಿದೆ. ಆಟೋ ಡ್ರೈವರ್ ಕೆಳಗಿಳಿದು ಅಲ್ಲೇ ನೋಡ್ಕೊಂಡು ಮತ್ತೆ ಸುಮ್ಮನೆ ಹೋಗಿದ್ದಾನೆ. ಮತ್ತೊಬ್ಬ ನಡೆದುಕೊಂಡು ಬರುತ್ತಿದ್ದಾಗ ಗಾಯಗೊಂಡಾತನ ಮೊಬೈಲ್ ಫೋನ್ ಕದ್ದು ಹೋಗಿದ್ದಾನೆ… ಗಾಯಗೊಂಡ ಮತಿಬಲ್ 90 ನಿಮಿಷಗಳ ಕಾಲ ರಸ್ತೆಯಲ್ಲೇ …

Read More »

ಮೈಸೂರು ಜಿಲ್ಲಾಧಿಕಾರಿ ಸಿ.ಶಿಖಾ ವರ್ಗ

ಬೆಂಗಳೂರು : ಸಿಎಂ ಆಪ್ತ ಮರಿಗೌಡ ವಿರುದ್ಧ ಕೇಸ್ ಹಾಕಿ ಸುದ್ದಿಯಾಗಿದ್ದ ಮೈಸೂರು ಜಿಲ್ಲಾಧಿಕಾರಿ ಶಿಖಾ ವರ್ಗಾವಣೆ ಆಗಿದ್ದಾರೆ… ಇನ್ನು, ಮಂಡ್ಯ ಜಿಲ್ಲಾಧಿಕಾರಿ ಆಗಿದ್ದ ಶಿಖಾ ಪತಿ ಅಜಯ್ ನಾಗಭೂಷಣ್‍ರನ್ನು ಕೂಡಾ ಟ್ರಾನ್ಸ್‍ಫರ್ ಮಾಡಲಾಗಿದೆ. ಶಿಖಾ ಅವರನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಆಯುಕ್ತರಾಗಿ ವರ್ಗಾವಣೆ ಮಾಡಲಾಗಿದೆ… ಒಟ್ಟು 11 ಮಂದಿ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ… ತಮಗೆ ಧಮ್ಕಿ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮರಿಗೌಡ ವಿರುದ್ಧ ಶಿಖಾ …

Read More »

ಸಾನಿಯಾ – ಮಾರ್ಟಿನಾ ಹಿಂಗಿಸ್ ಜೋಡಿ ದೂರ ದೂರ

ನವದೆಹಲಿ : ವಿಶ್ವಕಂಡ ಅತ್ಯಂತ ಯಶಸ್ಸಿ ಟೆನಿಸ್ ಜೋಡಿ ಸಾನಿಯಾ ಮತ್ತು ಮಾರ್ಟಿನಾ ಹಿಂಗಿಸ್ ಜೋಡಿ ದೂರವಾಗುತ್ತಿದೆ… ಭಾರತ ಟೂರ್‍ನಲ್ಲಿ ಇನ್ನು ಮುಂದೆ ತಾನು ತಮ್ಮ ಜೋಡಿಯಾಗಿ ಮುಂದುವರಿಯುವುದಿಲ್ಲ ಎಂಬ ಸಂದೇಶವನ್ನು ಮಾರ್ಟಿನಾ ಸಾನಿಯಾಗೆ ನೀಡಿದ್ದಾರಂತೆ… ಕಳೆದ ಎರಡ್ಮೂರು ತಿಂಗಳಲ್ಲಿ ಈ ಜೋಡಿಯ ಕಳಪೆ ಸಾಧನೆಯ ಹಿನ್ನೆಲೆಯಲ್ಲಿ ಈ ಜೋಡಿ ದೂರವಾಗುತ್ತಿದೆ ಎಂಬ ಒಂದು ಮಾತಿದ್ದರೂ ಟೆನಿಸ್ ಕೋರ್ಟ್‍ನಲ್ಲಿ ಇವರಿಬ್ಬರ ಸಂಬಂಧ ಈಗ ಮುಂಚಿನಷ್ಟು ಚೆನ್ನಾಗಿಲ್ಲ ಎಂದೂ ಹೇಳಲಾಗುತ್ತಿದೆ… ಇದೇ …

Read More »
error: Content is protected !!