Wednesday , March 20 2019
ಕೇಳ್ರಪ್ಪೋ ಕೇಳಿ
Home / News NOW (page 45)

News NOW

ಸಿಕ್ಕಿದ್ದು ಭಾಸ್ಕರ್ ಶೆಟ್ಟಿ ಅವರ ಮೂಳೆನಾ…?

ಉಡುಪಿ : ಬಹುಕೋಟಿ ಆಸ್ತಿಯ ಒಡೆಯ ಭಾಸ್ಕರ್ ಶೆಟ್ಟಿ ಹತ್ಯೆ ಪ್ರಕರಣದ ತನಿಖೆಗೆ ಪೂರಕವಾದ ಮತ್ತೊಂದು ಸಾಕ್ಷಿ ಲಭ್ಯವಾಗಿದೆ. ಉಡುಪಿ ಪೊಲೀಸರ ತನಿಖೆ ವೇಳೆ ಸಿಕ್ಕ ಮೂಳೆ ಮನುಷ್ಯರದ್ದೇ ಎಂಬುದು ದೃಢಪಟ್ಟಿದೆ. ಎಫ್‍ಎಸ್‍ಎಲ್ ವರದಿಯಿಂದ ಇದು ದೃಢಪಟ್ಟಿದ್ದು, ಭಾಸ್ಕರ ಶೆಟ್ಟಿ ಹತ್ಯೆ ಪ್ರಕರಣದ ತನಿಖೆಗೆ ಇನ್ನೊಂದು ಆಯಾಮ ಸಿಕ್ಕಿದೆ. ಭಾಸ್ಕರ್ ಶೆಟ್ಟಿ ಹತ್ಯೆ ಪ್ರಕರಣ ಬಯಲಾಗುತ್ತಿದ್ದಂತೆಯೇ ಪೊಲೀಸರು ಅವಶೇಷಗಳಿಗಾಗಿ ಶೋಧ ನಡೆಸಿದ್ದರು. ಈ ಸಂದರ್ಭದಲ್ಲಿ ಮೂಳೆಯೊಂದು ಪತ್ತೆಯಾಗಿತ್ತು. ಆದರೆ, ಈ …

Read More »

ಭಾಸ್ಕರ ಶೆಟ್ಟಿ ಕೊಲೆ ಪ್ರಕರಣ : ಸಿಐಡಿ ಕಸ್ಟಡಿಗೆ ನಿರಂಜನ್ ಭಟ್

ಉಡುಪಿ : ಬಹುಕೋಟಿ ಆಸ್ತಿ ಒಡೆಯ ಭಾಸ್ಕರ್ ಶೆಟ್ಟಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ನಿರಂಜನ್ ಭಟ್‍ನನ್ನು ಎರಡು ದಿನ ಸಿಐಡಿ ಕಸ್ಟಡಿಗೆ ಒಪ್ಪಿಸಲಾಗಿದೆ. ಸಿಐಡಿ ಅಧಿಕಾರಿಗಳ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ ನಿನ್ನೆ ನಿರಂಜನ್ ಭಟ್‍ನನ್ನು ಸಿಐಡಿ ವಶಕ್ಕೆ ನೀಡಿ ಆದೇಶ ನೀಡಿದೆ. ಪೊಲೀಸರಿಂದ ಪ್ರಕರಣದ ತನಿಖೆಯ ಜವಾಬ್ದಾರಿಯನ್ನು ಹೊತ್ತುಕೊಂಡ ಬಳಿಕ ಸಿಐಡಿ ಈ ರೀತಿಯ ಅಚ್ಚರಿಯ ನಡೆ ಪ್ರದರ್ಶಿಸಿದೆ. ಇದೇ ಮೊದಲ ಬಾರಿಗೆ ಪ್ರಕರಣದ ಪ್ರಮುಖ ಆರೋಪಿಯೊಬ್ಬನ್ನನ್ನು ಸಿಐಡಿ …

Read More »

ಮೆಟ್ರೋ ಸುಗಮ ಸಂಚಾರ ಶುರು: ಸಂಜೆಯಿಂದ ಆರಂಭವಾಗಿದೆ ಸಂಚಾರ

ಬೆಂಗಳೂರು : ಕಾವೇರಿ ಗಲಾಟೆ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ನಮ್ಮ ಮೆಟ್ರೋ ಸೇವೆ ಪುನರಾರಂಭಗೊಂಡಿದೆ. ರಾತ್ರಿ 7.15 ಗಂಟೆ ನಂತರ ಮೆಟ್ರೋ ಸೇವೆ ಆರಂಭವಾಗಿದ್ದು, ಪ್ರತೀ 15 ನಿಮಿಷಕ್ಕೊಂದರಂತೆ ಮೆಟ್ರೋ ಓಡಿಸಲು ತೀರ್ಮಾನಿಸಲಾಗಿದೆ. ಇನ್ನು, ನಾಳೆ ಎಂದಿನಂತೆ ಮೆಟ್ರೋ ಸಂಚಾರ ಇರಲಿದೆ.

Read More »

ನಾಳೆ ಕರ್ನಾಟಕ ಬಂದ್ ಇಲ್ಲ : ನಾಡಿದ್ದು ರೈಲ್ ರೋಖೋಗೆ ವಾಟಾಳ್ ಕರೆ

ಬೆಂಗಳೂರು : ಕಾವೇರಿ ವಿವಾದ ಹಿನ್ನೆಲೆಯಲ್ಲಿ ನಾಳೆ ಕರ್ನಾಟಕ ಬಂದ್ ಎಂಬ ಸುದ್ದಿ ಹಬ್ಬುತ್ತಿದೆ. ಆದರೆ, ವಾಸ್ತವವಾಗಿ ನಾಳೆ ಕರ್ನಾಟಕ ಬಂದ್ ಇಲ್ಲ. ಹೀಗಾಗಿ, ಜನ ನಿರಾಳರಾಗಿ ಇರಬಹುದು. ಬೆಂಗಳೂರು ಕೂಡಾ ಈಗ ಸಹಜ ಸ್ಥಿತಿಗೆ ಮರಳುತ್ತಿದ್ದು, ಪೊಲೀಸರು ಕೂಡಾ ಭದ್ರತೆಯ ಅಭಯ ನೀಡಿದ್ದಾರೆ. ಇವತ್ತು ಯಾವುದೇ ಅಹಿತಕರ ಘಟನೆ ಆಗದಂತೆ ರಾಜ್ಯ ಪೊಲೀಸರು ಭದ್ರತೆಯನ್ನು ಒದಗಿಸಿದ್ದಾರೆ. ರೈಲ್ ರೋಖೋ : ಇನ್ನು, ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ನಾಡಿದ್ದು …

Read More »

ಬಹುತೇಕ ಸಹಜ ಸ್ಥಿತಿಗೆ ಮರಳಿದೆ ಬೆಂಗಳೂರು : ಇಲ್ಲಿದೆ ತುರ್ತು ಕರೆ ಸಂಖ್ಯೆ, ವಾಟ್ಸಾಪ್ ನಂಬರ್

ಬೆಂಗಳೂರು : ಕಾವೇರಿ ಗಲಾಟೆಯಲ್ಲಿ ಪ್ರಕ್ಷುಬ್ದವಾಗಿದ್ದ ಬೆಂಗಳೂರು ಇದೀಗ ಸಹಜ ಸ್ಥಿತಿಗೆ ಬರುತ್ತಿದೆ. ಪೊಲೀಸರು ಎಲ್ಲೆಲ್ಲೂ ಬಿಗಿ ಭದ್ರತೆ ಕೈಗೊಂಡಿದ್ದಾರೆ. ಬೆಂಗಳೂರಿನಲ್ಲಿ ನಾಳೆಯ ವರೆಗೆ ನಿಷೇಧಾಜ್ಞೆ ಜಾರಿಯಲ್ಲಿದೆ. ಹೀಗಾಗಿ, ಯಾವುದೇ ಸ್ಫೋಟಕ ವಸ್ತುಗಳನ್ನು ಸಿಡಿಸುವುದ, ಕಲ್ಲುಗಳನ್ನು ಕ್ಷಿಪಣಿಯಾಗಿ ಎಸೆಯುವ ಸಾಧನಗಳನ್ನು ಒಯ್ಯುವುದನ್ನು ನಿಷೇಧಿಸಲಾಗಿದೆ. ಇನ್ನು, ಐದು ಅಥವಾ ಅದಕ್ಕಿಂತ ಹೆಚ್ಚು ಜನರ ಗುಂಪು ಸೇರುವುದನ್ನು ಕೂಡಾ ನಿರ್ಬಂಧಿಸಲಾಗಿದೆ. 16 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಫ್ರ್ಯೂ : ಇನ್ನು, ನಿನ್ನೆಯ ಗಲಾಟೆ …

Read More »

ನೋಡಿ ಇವರೇ ಬೆಂಗಳೂರಿನ ಸರಗಳ್ಳರು…! : ಸಿಕ್ಕರೆ ಪೊಲೀಸರಿಗೆ ಮಾಹಿತಿ ನೀಡಿ

ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಸರಗಳ್ಳರ ಹಾವಳಿ ಅಧಿಕವಾಗಿದೆ… ಹಾಡಹಗಲೇ ಸರ ದೋಚಿ ಹೋಗುವುದು ಬೆಂಗಳೂರಿನಲ್ಲಿ ಸಾಮಾನ್ಯ ಎಂಬಂತಾಗಿದೆ… ಪೊಲೀಸರು ಎಷ್ಟೇ ಪ್ರಯತ್ನಿಸಿದರೂ ಸರಗಳ್ಳರ ಹಾವಳಿಯನ್ನು ತಡೆಗಟ್ಟಲು ಆಗುತ್ತಿಲ್ಲ. ನಗರದಲ್ಲಿ ಒಂದಲ್ಲ ಒಂದು ಕಡೆ ಸರಗಳ್ಳತನ ನಡೆದೇ ನಡೆಯುತ್ತದೆ. ಹೀಗಾಗಿ, ಪೊಲೀಸರು ಸಾರ್ವಜನಿಕ ನೆರವು ಕೋರಿದ್ದಾರೆ. ಬೈಕ್‍ನಲ್ಲಿ ಬರುವ ಶಂಕಿತ ಸರಗಳ್ಳರ ಫೋಟೋವನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ… ಒಂದೊಮ್ಮೆ ನಿಮಗೆ ಈ ಇಬ್ಬರ ಮಾಹಿತಿ ಸಿಕ್ಕರೆ ಅದನ್ನು ಪೊಲೀಸರಿಗೆ ತಿಳಿಸಿ…

Read More »

ಬಸ್, ಲಾರಿಗೆ ಬೆಂಕಿ ಇಡುವ ಮುನ್ನ ಒಮ್ಮೆ ಯೋಚಿಸಿರಿ ಯುವಕರೇ… : ನಿಮ್ಮ ಭವಿಷ್ಯಕ್ಕೂ ಬರಬಹುದು ಕುತ್ತು…!

ಬೆಂಗಳೂರು : ಕಾವೇರಿ ನೀರು ತಮಿಳುನಾಡಿಗೆ ಹರಿಯುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಉದ್ವಿಗ್ನವಾಗಿದೆ. ಮೂವತ್ತೈದಕ್ಕೂ ಹೆಚ್ಚು ಬಸ್‍ಗಳು, ಮೂವತ್ತಕ್ಕೂ ಹೆಚ್ಚು ಲಾರಿಗಳು, ವಾಹನಗಳು ಬೆಂಕಿಗಾಹುತಿಯಾಗಿವೆ. ಜೊತೆಗೆ, ಪೊಲೀಸ್ ಗುಂಡೇಟಿಗೆ ಯುವಕನ ಬಲಿಯೂ ಆಗಿದೆ. ಪರಿಣಾಮ ಬೆಂಗಳೂರು ಅಕ್ಷರಶಃ ಬೆಂದ ಊರಾಗಿದೆ. ಆದರೆ, ಆಕ್ರೋಶದಿಂದ ಯುವಕರು ಬಸ್‍ಗೆ ಬೆಂಕಿ ಇಡುವಂತಹ ಯತ್ನ ಮಾಡುತ್ತಿದ್ದಾರೆ. ಇದು ಆ ಯುವಕರ ಭವಿಷ್ಯಕ್ಕೆ ನಿಜವಾಗಿಯೂ ಕುತ್ತು ತರುತ್ತದೆ ಎಂಬುದನ್ನು ಅವರು ಆ ಕ್ಷಣ ಯೋಚಿಸುವುದೇ ಇಲ್ಲ. ಸ್ವತಃ …

Read More »

ಕಟೀಲು ದೇವರಿಗೆ ಅಪಮಾನ : ಆರೋಪಿಯ ಸುಳಿವು ಪತ್ತೆ ಹಚ್ಚಿದ ಪೊಲೀಸರು…? : ಗಲ್ಫ್ ರಾಷ್ಟ್ರಕ್ಕೂ ಹಬ್ಬಿದೆಯಂತೆ ಬೇರು…!?

ಮಂಗಳೂರು : ಕರಾವಳಿಗಳ ಆರಾಧ್ಯ ದೈವ ಕಟೀಲು ದುರ್ಗಾಪರಮೇಶ್ವರಿ ದೇವಿಗೆ ಅಪಮಾನ ಮಾಡಿದ್ದ ಆರೋಪಿಯ ಸುಳಿವು ಪತ್ತೆ ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ತೆರೆ ಮರೆಯಲ್ಲಿ ನಿಂತು ಅಗತ್ಯ ಮಾಹಿತಿಯನ್ನು ನೀಡಿ ಯಾರೋ ಬೇರೆಯವರ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ದೇವಿಯ ಬಗ್ಗೆ ಅಸಹ್ಯವಾಗಿ ಬರೆಸಿದ್ದ ಆರೋಪಿಯ ಮೂಲ ಈಗ ಪೊಲೀಸರಿಗೆ ಸಿಕ್ಕಿದೆ ಎನ್ನಲಾಗುತ್ತಿದೆ. ಒಂದು ಮೂಲಗಳ ಪ್ರಕಾರ ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಒಬ್ಬನನ್ನು ಸೆರೆ ಹಿಡಿದಿದ್ದು, …

Read More »

`ಶಿಕ್ಷಣದಿಂದ ದೇಶದ ಅಭಿವೃದ್ಧಿ ಸಾಧ್ಯ’

ಬಂಟ್ವಾಳ ; ಜನಸಂಖ್ಯಾ ಸ್ಥಿರತೆಯನ್ನು ಕಾಪಾಡಿಕೊಳ್ಳುವ ಜೊತೆಗೆ ಎಲ್ಲರಿಗೂ ಶಿಕ್ಷಣ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಶ್ರಮಿಸಿದಾಗ ದೇಶದ ಅಭಿವೃದ್ಧಿ ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ. ಬಿ.ಸಿ.ರೋಡು ಲಯನ್ಸ್ ಸೇವಾ ಮಂದಿರದಲ್ಲಿ ನಡೆದ ತಾಲೂಕು ವಿಶ್ವ ಜನಸಂಖ್ಯಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರತೀ ಹಂತದಲ್ಲಿ ಭ್ರಷ್ಟಾಚಾರ ಮುಕ್ತ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಿದಾಗ ದೇಶದ ಅಭಿವೃದ್ಧಿ ಸಾಧ್ಯ ಎಂದರು. ಜಿಲ್ಲಾ ಪಂಚಾಯತ್ ಸದಸ್ಯ ಎಂ.ಎಸ್.ಮಹಮ್ಮದ್ ಮಾತನಾಡಿ, ಯುವ …

Read More »

ವಿಶ್ವಕರ್ಮ ಪೂಜಾ ಮಹೋತ್ಸವಕ್ಕೆ ಸಿದ್ಧತೆ

ಬಂಟ್ವಾಳ; ವಿಶ್ವಕರ್ಮ ಸಮಾಜ ಸೇವಾ ಸಂಘ ಜೋಡುಮಾರ್ಗ, ವಿಶ್ವಜ್ಯೋತಿ ಮಹಿಳಾ ಮಂಡಳಿ ಜೋಡುಮಾರ್ಗ ಇವರ ಆಶ್ರಯದಲ್ಲಿ ವಿಶ್ವಕರ್ಮ ಪೂಜಾ ಮಹೋತ್ಸವದ ಪೂರ್ವಭಾವಿ `ಕ್ರೀಡೋತ್ಸವ`ವು  ಇತ್ತೀಚೆಗೆ ಬಂಟ್ವಾಳ ಎಸ್‍ವಿಎಸ್ ಕಾಲೇಜು ಕ್ರೀಡಾಂಗಣದಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಸುಧಾಕರ ಆಚಾರ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಶ್ವಕರ್ಮ ಸಮಾಜದಲ್ಲಿರುವ ಯುವ ಹಾಗೂ ಎಳೆಯ ಕ್ರೀಡಾಪ್ರತಿಭೆಗಳನ್ನು ಗುರುತಿಸಿ ಪೆÇ್ರೀತ್ಸಾಹಿಸುವ ನಿಟ್ಟಿನಲ್ಲಿ ಪ್ರತೀವರ್ಷ ಕ್ರೀಡಾಕೂಟ ಆಯೋಜಿಸುತ್ತಿರುವುದಾಗಿ ತಿಳಿಸಿದರು. ವೇದಿಕೆಯಲ್ಲಿ ಕೆನರಾ ಇಂಜಿನಿಯರಿಂಗ್ ಕಾಲೇಜು ಉಪನ್ಯಾಸಕ ಸದಾಶಿವ ಆಚಾರ್ಯ  …

Read More »
error: Content is protected !!