Sunday , September 23 2018
ಕೇಳ್ರಪ್ಪೋ ಕೇಳಿ
Home / News NOW (page 46)

News NOW

ಸುಪಾರಿ ಹಂತಕರಿಂದ ಭಾಸ್ಕರ್ ಶೆಟ್ಟಿ ಕೊಲೆ…? : ಮುಂಬೈಯಲ್ಲಿದೆಯಾ ಪ್ರಕರಣದ ಬೇರು…?

ಉಡುಪಿ : ಬಹುಕೋಟಿ ಮೌಲ್ಯದ ಆಸ್ತಿ ಒಡೆಯ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ರಹಸ್ಯ ದಿನದಿಂದ ದಿನಕ್ಕೆ ಸಡಿಲವಾಗುತ್ತಾ ಬರುತ್ತಿದೆ… ಹೋಮಕುಂಡದಲ್ಲಿ ಹೆಣ ಸುಟ್ಟ ಕತೆ ಬರೀ ಸೃಷ್ಟಿ ಎಂಬ ಆರೋಪ ಕೇಳಿ ಬಂದ ಬೆನ್ನಲ್ಲೇ ಈಗ ಮುಂಬೈ ಮೂಲದ ಸುಪಾರಿ ಹಂತಕರಿಂದ ಭಾಸ್ಕರ್ ಶೆಟ್ಟಿಯನ್ನು ಕೊಲ್ಲಿಸಲಾಗಿದೆ ಎಂಬ ಮಾತುಗಳೂ ಕೇಳಿ ಬರುತ್ತಿವೆ. ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿರುವ ಸಿಐಡಿ ಕೂಡಾ ಇದೇ ದಿಶೆಯಲ್ಲಿ ಚಿಂತನೆ ಮಾಡಿದ್ದು, ತನಿಖೆಯ ದಾರಿ ಈಗ …

Read More »

ರವಿ ಬೆಳಗೆರೆ ಮನದ ನೋವು : ಮೋಸ ಹೋದ ಬಗ್ಗೆ ಬೇಸರ

ಬೆಂಗಳೂರು : ಹಿರಿಯ ಪತ್ರಕರ್ತ ರವಿ ಬೆಳಗೆರೆ ಮೊನ್ನೆ ತನಗಾದ ನೋವನ್ನು ಫೇಸ್‍ಬುಕ್‍ನಲ್ಲಿ ಬರೆದುಕೊಂಡಿದ್ದರು. (Read Also : ಫೇಸ್‍ಬುಕ್‍ನಲ್ಲಿ ಮನದ ನೋವು ಬರೆದುಕೊಂಡ ರವಿ ಬೆಳಗೆರೆ)ಈಗ ಮತ್ತೊಂದು ಭಾರಿ ತನಗಾದ ಮೋಸದ ಬಗ್ಗೆ ರವಿ ಬರೆದುಕೊಂಡಿದ್ದಾರೆ… ಇಲ್ಲಿದೆ, ರವಿ ಬರಹದ ಪೂರ್ಣ ಪಾಠ… ನಾನು ಕಿರಿ ಕಿರಿ ಮನುಷ್ಯ ಅಲ್ಲ. ಸಿಡಿಮಿಡಿ ಇಲ್ಲ. ಸಿಟ್ಟು ಮೊದಲಿತ್ತು. ಈಗ ಮರೆತೇ ಹೋಗಿದೆ. ಈಗಲೂ ಒಮ್ಮೊಮ್ಮೆ ಗುರ್ರ್ ಅಂತೀನಿ. ದ್ವೇಷ ನನ್ನ …

Read More »

ಹುಬ್ಬಳ್ಳಿಯಲ್ಲಿ ಸಿಕ್ಕ ಪೂಜಿತಾ

ಹುಬ್ಬಳ್ಳಿ : ಬೆಂಗಳೂರಿನ ಶ್ರೀರಾಮಪುರದಿಂದ ನಾಪತ್ತೆಯಾಗಿದ್ದ 8ನೇ ಕ್ಲಾಸ್ ವಿದ್ಯಾರ್ಥಿನಿ ಪೂಜಿತಾ ಹುಬ್ಬಳ್ಳಿಯಲ್ಲಿ ಸಿಕ್ಕಿದ್ದಾಳೆ. ಹುಬ್ಬಳ್ಳಿಯ ರೈಲ್ವೇ ನಿಲ್ದಾಣದಲ್ಲಿ ಪೂಜಿತಾ ಸಿಕ್ಕಿದ್ದು, ಬಳಿಕ ಸಂಬಂಧಿಕರು ಕರೆದುಕೊಂಡು ಹೋಗಿದ್ದಾರೆ… 13 ವರ್ಷದ ಪೂಜಿತಾ ಶ್ರೀ ರಾಮಪುರದ ಮಧುಕಿರಣ್ ಹಾಗೂ ಪದ್ಮಿನಿ ದಂಪತಿ ಪುತ್ರಿ… ಗಣಿತ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂತೆಂದು ಮನೆ ಬಿಟ್ಟು ಹೋಗಿದ್ದಳು. ಇದೇ ತಿಂಗಳ 24ರಂದು ಪೂಜಿತಾ ತನ್ನ ಶ್ರೀರಾಮಪುರದ ಮನೆಯಿಂದ ಶಾಲೆಗೆ ತೆರಳಿದ್ದಾಳೆ. ಆದರೆ, ಮನೆಯಿಂದ ಶಾಲೆಗೆ …

Read More »

ರವಿಶಂಕರ್ ಗುರೂಜಿ ಭೇಟಿಯಾದ ಉಗ್ರ ಬಹ್ರ್ರಾನ್ ವಾನಿ ತಂದೆ

ಬೆಂಗಳೂರು : ಜಮ್ಮು ಕಾಶ್ಮೀರದ ಪ್ರತಿಭಟನೆ ಸಂಬಂಧದಲ್ಲಿ ಹತ್ಯೆಯಾದ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಬಹ್ರ್ರಾನ್ ವಾನಿ ತಂದೆ ಮುಜಾಫರ್ ವಾನಿ ಬೆಂಗಳೂರಿನಲ್ಲಿ ರವಿಶಂಕರ್ ಗುರೂಜಿಯವರ ಆರ್ಟ್ ಆಫ್ ಲಿವಿಂಗ್ ಆಶ್ರಮಕ್ಕೆ ಭೇಟಿ ನೀಡಿದ್ದಾರೆ. ಶನಿವಾರ ರವಿಶಂಕರ್ ಗುರೂಜಿ ಈ ಫೋಟೋವನ್ನು ಟ್ವಿಟರ್‍ನಲ್ಲಿ ಅಪ್‍ಲೋಡ್ ಮಾಡಿದ್ದಾರೆ. ಕಳೆದ ಎರಡು ದಿನಗಳಿಂದ ಮುಜಾಫರ್ ವಾನಿ ಆಶ್ರಮದಲ್ಲಿ ವಾಸ್ತವ್ಯ ಹೂಡಿದ್ದಾಗಿ ರವಿಶಂಕರ್ ಗುರೂಜಿ ಹೇಳಿದ್ದಾರೆ. ಅಲ್ಲದೆ, ಹಲವು ವಿಚಾರಗಳ ಕುರಿತು ನಾವು ಚರ್ಚೆ ಮಾಡಿದ್ದಾಗಿ …

Read More »

ಹಳಿ ತಪ್ಪಿದ ಮಂಗಳೂರು – ತಿರುವನಂತಪುರಂ ಎಕ್ಸ್‍ಪ್ರೆಸ್

ತಿರುವನಂತಪುರಂ : ಮಂಗಳೂರು – ತಿರುವನಂತಪುರಂ ಎಕ್ಸ್‍ಪ್ರೆಸ್ ರೈಲಿನ 12 ಬೋಗಿಗಳು ಕೊಚ್ಚಿ ಸಮೀಪ ಹಳಿ ತಪ್ಪಿದೆ. ಕೊಚ್ಚಿಯಿಂದ 45 ಕಿಲೋ ಮೀಟರ್ ದೂರದ ಕರುಕುಟ್ಟಿ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಆದರೆ, ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ. ಮುಂಜಾನೆ 2.30ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಗೊತ್ತಾಗಿದೆ. ಎರ್ನಾಕುಲಂ ಜಿಲ್ಲೆಯ ಅಲ್ವಾ ಮತ್ತು ಕರುಕುಟ್ಟಿ ನಿಲ್ದಾಣ ಸಮೀಪ 16347 ರೈಲು ಹಳಿ ತಪ್ಪಿದೆ. ಈ ರೈಲು …

Read More »

ಬಂಟ್ವಾಳ : ಮೊಸರು ಕುಡಿಕೆಗೆ ಬಂದ ಟಿಬೇಟಿಯನ್ ಗುರುಗಳು…!

ಬಂಟ್ವಾಳ ; ಕಲ್ಲಡ್ಕದಲ್ಲಿ ವರ್ಷಂಪ್ರತಿ ನಡೆಯುವ ಮೊಸರು ಕುಡಿಕೆ ಉತ್ಸವ ವಿಜೃಂಭನೆಯಿಂದ ನಡೆಯಿತು… ಈ ಬಾರಿ ಈ ಉತ್ಸವದಲ್ಲಿ ಗಮನ ಸೆಳೆದದ್ದು ಟಿಬೇಟಿಯನ್ ಗುರುಗಳು ಮತ್ತು ಅವರ ಕಲಾ ತಂಡ… ಕಲ್ಲಡ್ಕದ ಶಿಲ್ಪಾಗೊಂಬೆ ಬಳಗ ಈ ಬಾರಿ ವಿನೂತನವಾಗಿ ಟಿಬೇಟಿಯನ್ ಗುರುಗಳ ಪರಿಕಲ್ಪನೆಯಲ್ಲಿ ಕಲಾನೈಪುಣ್ಯತೆಯನ್ನು ಮೆರೆದಿದೆ… ಗುರುವಿನ ಪಾತ್ರದಲ್ಲಿ ಶಿಲ್ಪಾ ಗೊಂಬೆ ಬಳಗದ ಮಾಲಕ ರಮೇಶ್ ಕಲ್ಲಡ್ಕ ಮಿಂಚಿದರೆ, 35ಕ್ಕೂ ಅಧಿಕ ಸಹಕಲಾವಿದರು ಅವರಿಗೆ ಸಾಥ್ ನೀಡಿದರು. ಟಿಬೇಟಿಯನ್ ಮೂಲದ …

Read More »

ಭಾಸ್ಕರ್ ಶೆಟ್ಟಿ ಪ್ರಕರಣ : ನಿರಂಜನ್ ಭಟ್ ಆತ್ಮಹತ್ಯೆ ಪ್ರಯತ್ನನೂ ನಾಟಕನಾ…?!!!!!

ಉಡುಪಿ : ಬಹುಕೋಟಿ ಮೌಲ್ಯದ ಆಸ್ತಿ ಒಡೆಯ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ರಹಸ್ಯ ಬಗೆದಷ್ಟು ಹೊರಬರುತ್ತಿದೆ. ಪಕ್ಕಾ ಪ್ಲಾನ್ ಮಾಡಿಕೊಂಡೇ ಆರೋಪಿಗಳು ಭಾಸ್ಕರ್ ಶೆಟ್ಟಿ ಕತೆಯನ್ನು ಮುಗಿಸಿದ್ದಾರೆ. ಅದೆಷ್ಟೋ ಜಾಣತನದಿಂದ ಭಾಸ್ಕರ್ ಶೆಟ್ಟಿ ಹತ್ಯೆ ಮಾಡಲಾಗಿದೆ ಎಂದರೆ ಶವದ ಅವಶೇಷಗಳೂ ಇನ್ನೂ ಸಿಕ್ಕಿಲ್ಲ…! ಯಾವುದೇ ಪತ್ತೆಧಾರಿ ಕತೆಗಿಂತ ಕಮ್ಮಿ ಇಲ್ಲ ಈ ಹತ್ಯಾ ಪ್ರಕರಣ… ಈ ನಡುವೆ, ಭಾಸ್ಕರ್ ಶೆಟ್ಟಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ನಿರಂಜನ್ ಭಟ್‍ನ …

Read More »

ವಗ್ಗ : ಕಾಡಬೆಟ್ಟುವಿನ ಕಣ್ಮನ ಸೆಳೆದ ಬಾಲಕೃಷ್ಣರು…

ಬಂಟ್ವಾಳ: ಇಲ್ಲಿನ ವಗ್ಗ ಕಾಡಬೆಟ್ಟು ಬಾಲಗೋಕುಲ ಸಮಿತಿ ಮತ್ತು ಶ್ರೀ ಶಾರದಾಂಬಾ ಭಜನಾ ಮಂದಿರದ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವವು ಬುಧವಾರ ವಗ್ಗದ ಶ್ರೀ ಶಾರದಾಂಬಾ ಭಜನಾ ಮಂದಿರದಲ್ಲಿ ವಿಜೃಂಭಣೆಯಿಂದ ನಡೆಯಿತು. ಪ್ರಗತಿಪರ ಕೃಷಿಕ ಶಾಂತನ್ ಪಿಳ್ಳೆ ಕಾರ್ಯಕ್ರಮ ಉದ್ಘಾಟಿಸಿದರು. ಬಾಲಕೋಕುಲ ಸಮಿತಿ ಅಧ್ಯಕ್ಷೆ ಸುಮಿತ್ರ ದಿನೇಶ್ ಅಧ್ಯಕ್ಷತೆ ವಹಿಸಿದರು. ಕಾವಳಪಡೂರು ಗ್ರಾ.ಪಂ.ಅಧ್ಯಕ್ಷ ಪ್ರಮೋದ್ ಕುಮಾರ್ ರೈ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಗೌರವ ಸಲಹೆಗಾರರಾದ ಸುಗುಣ ಶಾಂತರಾಮ ಪ್ರಭು …

Read More »

ಬಂಟ್ವಾಳ : ಎಸ್‍ವಿಎಸ್‍ನಲ್ಲಿ `ಹೊಂಬೆಳಕು ಭಿತ್ತಿ ಪತ್ರಿಕೆ’ ಬಿಡುಗಡೆ

ಬಂಟ್ವಾಳ: ಕಲೆ, ಸಾಹಿತ್ಯದ ಅಭಿರುಚಿಯು ಮಾನವನ ಬದುಕನ್ನು ವಿಕಾಸಗೊಳಿಸಲು ಪೂರಕವಾಗಿದೆ. ಸುಖ, ನೆಮ್ಮದಿಯ ಬಾಳ್ವೆಗೆ ಸಾಹಿತ್ಯದ ಒಡನಾಟವು ಅತೀ ಅವಶ್ಯಕವಾದುದು. ಸಾಹಿತ್ಯದ ಚಿಕಿತ್ಸಕ ಗುಣವು ಸಮಾಜದಲ್ಲಿ ಮಾನವೀಯ ಸಂಬಂಧ ಹಾಗೂ ಸಹಬಾಳ್ವೆ ನೆಲೆಸುವುದಕ್ಕೆ ಪೋಷಕಶಕ್ತಿಯಾಗಿದೆ ಎಂದು ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ. ಮೋಹನರಾವ್ ತಿಳಿಸಿದ್ದಾರೆ. ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮಿ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಸಂಘ ಆಯೋಜಿಸಿದ್ದ `ಹೊಂಬೆಳಕು ಭಿತ್ತಿ ಪತ್ರಿಕೆ’ ಬಿಡುಗಡೆ ಸಮಾರಂಭದಲ್ಲಿ ಮುಖ್ಯ …

Read More »

ಸಂಗಬೆಟ್ಟು : ಪೋಡಿ ಮುಕ್ತ ಗ್ರಾಮಕ್ಕೆ ಚಾಲನೆ

ಬಂಟ್ವಾಳ: ತಾಲೂಕಿನ ಸಂಗಬೆಟ್ಟು ಗ್ರಾಮವನ್ನು ಪೋಡಿ ಮುಕ್ತ ಗ್ರಾಮವನ್ನಾಗಿ ಮಾಡುವುದರ ಮೂಲಕ ಪಟ್ಟಾ ಜಮೀನುದಾರರ ಪೈಕಿ ಸರ್ವೆ ನಂಬರ್ ತೆಗೆದು ಹಾಕಿ ಪ್ರತ್ಯೇಕ ನಕ್ಷೆ ಮತ್ತು ಪಹಣಿ ಪತ್ರಿಕೆ ವಿತರಿಸಲಾಗುವುದು ಎಂದು ಭೂ ದಾಖಲೆಗಳ ಸಹಾಯಕ ನಿರ್ದೆಶಕ ಮಂಜುನಾಥ ಅವರು ತಿಳಿಸಿದ್ದಾರೆ. ಸಂಗಬೆಟ್ಟು ಗ್ರಾ.ಪಂ. ಸಭಾಭವನದಲ್ಲಿ ಪೋಡಿಮುಕ್ತ ಸಂಗಬೆಟ್ಟು ಗ್ರಾಮಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಗ್ರಾ.ಪಂ. ಉಪಾಧ್ಯಕ್ಷ ಸತೀಶ್ ಪೂಜಾರಿ ವಹಿಸಿದ್ದರು. ಮುಖ್ಯ ಅತಿಥಿಯಾಗಿದ್ದ ತಾ.ಪಂ. …

Read More »
error: Content is protected !!