Monday , January 22 2018
Home / News NOW (page 5)

News NOW

ಮೆಡಿಕಲ್ ಸೀಟ್ ಪಡೆದಿಲ್ಲವೆಂದು ಪತ್ನಿಗೇ ಬೆಂಕಿ ಇಟ್ಟುಕೊಂದ ಪಾಪಿ!

ಹೈದರಾಬಾದ್‌ : ಪತ್ನಿ ಮೆಡಿಕಲ್ ಸೀಟ್ ಪಡೆಯಲು ವಿಫಲವಾಗಿದ್ದಾಳೆ ಎಂದು ಸಿಟ್ಟಾದ ಪಾಪಿ ಪತಿಯೊಬ್ಬ ಆಕೆಗೆ ಬೆಂಕಿ ಇಟ್ಟು ಕೊಂದಿದ್ದಾನೆ…! ಹೈದರಾಬಾದ್ನಲ್ಲಿ ಇಂತಹದ್ದೊಂದು ಆಘಾತಕಾರಿ ಘಟನೆ ನಡೆದಿದೆ. ಹರಿಕಾ ಮೃತಪಟ್ಟ ಗೃಹಿಣಿ. ಈಕೆಯ ಪತಿ ರಿಷಿ ಕುಮಾರ್ ಈ ಕೃತ್ಯವೆಸಗಿದ ನಿರ್ದಯಿ. ಮಗಳ ಸಾವಿನ ಬಳಿಕ ಪೋಷಕರು ಎಲ್ಬಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ರಿಷಿ ಹರಿಕಾಗೆ ನಿರಂತರ ವರದಕ್ಷಿಣೆ ಕಿರುಕುಳ ಕೂಡಾ …

Read More »

ಪದ್ಮನಾಭಸ್ವಾಮಿ ದೇಗುಲ ಪ್ರವೇಶಿಸಲು ಖ್ಯಾತ ಗಾಯಕ ಕೆ.ಜೆ.ಯೇಸುದಾಸ್ ಅವರಿಗೆ ಅನುಮತಿ

ತಿರುವನಂತಪುರಂ  : ಕೇರಳದ ಪ್ರಸಿದ್ಧ ಶ್ರೀ ಪದ್ಮನಾಭ ದೇಗುಲಕ್ಕೆ ಪ್ರವೇಶಿಸಲು ಖ್ಯಾತ ಗಾಯಕ ಕೆ.ಜೆ.ಯೇಸುದಾಸ್ ಅವರಿಗೆ ಅನುಮತಿ ಸಿಕ್ಕಿದೆ. ದೇಗುಲ ಪ್ರವೇಶಕ್ಕೆ ಅನುಮತಿ ಕೋರಿ ಯೇಸುದಾಸ್ ಅವರು ಮೊನ್ನೆ ದೇವಾಲಯದ ಟ್ರಸ್ಟ್​ಗೆ ಮನವಿ ಮಾಡಿಕೊಂಡಿದ್ದರು. ಹಿಂದೂಗಳು ಮತ್ತು ಹಿಂದುತ್ವದ ಮೇಲೆ ನಂಬಿಕೆ ಇಟ್ಟವರಿಗೆ ಮಾತ್ರ ದೇಗುಲ ಪ್ರವೇಶ ಎಂಬ ಕಟ್ಟುನಿಟ್ಟಿನ ನಿಯಮದ ಹಿನ್ನೆಲೆ ಇರುವುದರಿಂದ ಯೇಸುದಾಸ್ ಅವರು ಈ ಅರ್ಜಿಯನ್ನು ಸಲ್ಲಿಸಿದ್ದರು. ಈ ಅರ್ಜಿಯ ಬಗ್ಗೆ ಪರಿಶೀಲನೆ ನಡೆಸಿದ ದೇವಾಲಯದ …

Read More »

ಚೆನ್ನೈ ಏರ್‍ಪೋರ್ಟ್‍ನಲ್ಲಿ ಟೀಂ ಇಂಡಿಯಾ ಆಟಗಾರರ ಖುಷಿ…

ಚೆನ್ನೈ : ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ 1-0 ಮುನ್ನಡೆ ಕಾಯ್ದುಕೊಂಡು ಬೀಗುತ್ತಿರುವ ಟೀಂ ಇಂಡಿಯಾ ಆಟಗಾರರು ಈಗ ರಿಲ್ಯಾಕ್ಸ್ ಮೂಡ್‍ನಲ್ಲಿದ್ದಾರೆ. ಚೆನ್ನೈನ ಚಿದಂಬರಂ ಕ್ರೀಡಾಂಗಣದಲ್ಲಿ ಆಸೀಸ್ ಹೆಡೆಮುರಿ ಕಟ್ಟಿದ ಬ್ಲೂಬಾಯ್ಸ್ ಖುಷಿಯ ಅಲೆಯಲ್ಲಿ ತೇಲಾಡುತ್ತಿದ್ದಾರೆ. ಚೆನ್ನೈ ಏರ್‍ಪೋರ್ಟ್‍ನಲ್ಲಿ ಆಟಗಾರರು ಖುಷಿಯಲ್ಲಿ ಇರುವ ಕ್ಷಣಗಳನ್ನು ಬಿಸಿಸಿಐ ತನ್ನ ಟ್ವಿಟರ್ ಪೇಜ್‍ನಲ್ಲಿ ಹಾಕಿಕೊಂಡಿದೆ. ಈ ಫೋಟೋದಲ್ಲಿ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಏರ್‍ಪೋರ್ಟ್ ನೆಲದ ಮೇಲೆ ಮಲಗಿರುವ ಮತ್ತು ಬಾಕಿ ಆಟಗಾರರು …

Read More »

ಅನಿವಾಸಿ ಭಾರತೀಯರೇ ಎಚ್ಚರ…! : ಹೆಂಡತಿಗೆ ಹಿಂಸೆ ಕೊಟ್ಟರೆ ಪಾಸ್‍ಪೋರ್ಟ್ ಕ್ಯಾನ್ಸಲ್…?

ನವದೆಹಲಿ : ಪತ್ನಿ ಪೀಡಕ ಅನಿವಾಸಿ ಭಾರತೀಯರ ಮೇಲೆ ಸರ್ಕಾರ ಸಿಡಿದೆದ್ದಿದೆ. ಕೇಂದ್ರ ವಿದೇಶಾಂಗ ಇಲಾಖೆ ರಚಿಸಿದ ಉನ್ನತ ಮಟ್ಟದ ಸಮಿತಿಯು ಪತ್ನಿ ಪೀಡಕ ಅನಿವಾಸಿ ಭಾರತೀಯರ ಮೇಲೆ ಕ್ರಮಕ್ಕೆ ಶಿಫಾರಸು ಮಾಡಿದೆ. ಒಂದೊಮ್ಮೆ ಸರ್ಕಾರ ಶಿಫಾರಸ್ಸನ್ನು ಒಪ್ಪಿದರೆ ಎನ್‍ಆರ್‍ಐಗಳಿಗೆ ಸಂಕಷ್ಟ ತಪ್ಪಿದಲ್ಲ. ಯಾಕೆಂದರೆ, ಪತ್ನಿಗೆ ಹಿಂಸೆ ನೀಡುವ ಮತ್ತು ಪತ್ನಿಯನ್ನು ಬಿಟ್ಟು ಬರುವ ಎನ್‍ಆರ್‍ಐಗಳ ಪಾಸ್‍ಪೋರ್ಟ್ ರದ್ದು ಮಾಡುವುದು ಈ ಉನ್ನತ ಸಮಿತಿ ಮಾಡಿರುವ ಪ್ರಮುಖ ಶಿಫಾರಸು. ಈ …

Read More »

ಮೂರನೇ ಪತಿಯ ವಿರುದ್ಧವೂ ವರದಕ್ಷಿಣೆ ಕಿರುಕುಳ ಕೇಸ್​ : ಮಹಿಳೆ ಬಂಧನ…! ಕರ್ನಾಟಕದಲ್ಲೂ ಈಕೆ ಮಾಡಿದ್ದಾಳೆ ವಂಚನೆ!

ಹೈದರಾಬಾದ್ : ವರದಕ್ಷಿಣೆ ಕಿರುಕುಳ ತಡೆಗೆ ತಂದ ಕಾನೂನು ಕೆಲವು ಸಂದರ್ಭದಲ್ಲಿ ದುರ್ಬಳಕೆ ಆಗಿರುವುದನ್ನು ನೀವೆಲ್ಲಾ ನೋಡಿರುತ್ತೀರಿ ಅಥವಾ ಕೇಳಿರುತ್ತೀರಿ. ಇದೀಗ ಆಂಧ್ರದಲ್ಲಿ ಇದೇ ಕಾನೂನು ದುರ್ಬಳಕೆಯ ಮತ್ತೊಂದು ಪ್ರಕರಣ ದಾಖಲಾಗಿದೆ. ವಸಂತಪಲ್ಲಿಪುರಂ ಪೊಲೀಸರು 37 ವರ್ಷದ ಮಹಿಳೆಯೊಬ್ಬರನ್ನು ಬಂಧಿಸಿದ್ದಾರೆ. ತನ್ನ ಮೂರನೇ ಗಂಡನ ವಿರುದ್ಧವೂ ಈಕೆ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿ ವಂಚಿಸಲು ಹೋಗಿ ಸಿಕ್ಕಿಬಿದ್ದಿದ್ದಾಳೆ. ಬಂಧಿತ ಮಹಿಳೆಯನ್ನು ಸಿ.ಸರಿತಾ ಎಂದು ಗುರುತಿಸಲಾಗಿದೆ. ಇತ್ತೀಚೆಗೆ ಈಕೆಯ ಗಂಡ ರಾವ್ …

Read More »

ಮಾಜಿ ಪ್ರಿಯತಮೆಯ ಕತ್ತು ಸೀಳಿದ ಪಾಪಿ ಭಗ್ನ ಪ್ರೇಮಿ

ಹೈದರಾಬಾದ್ : ಆಂಧ್ರ ಪ್ರದೇಶದ ಪ್ರಕಾಸಂ ಜಿಲ್ಲೆಯ ರಾಮನಗರ ಪಟ್ಟಣದಲ್ಲಿ ಭೀಕರ ಕೊಲೆ ನಡೆದಿದೆ. ದುಷ್ಕರ್ಮಿಯೊಬ್ಬ ಯುವತಿಯ ಕತ್ತು ಸೀಳಿದ್ದಾನೆ. ಮಾಜಿ ಪ್ರಿಯಕರನಿಂದಲೇ ಈ ಕೃತ್ಯ ನಡೆದಿದೆ ಎಂದು ಹೇಳಲಾಗುತ್ತಿದೆ. ಶನಿವಾರ ರಾತ್ರಿ ಈ ಘಟನೆ ನಡೆದಿದ್ದು ಎನ್ನಲಾಗಿದೆ. ಕೊಲೆಯಾದ ಯುವತಿ ದ್ವಿಚಕ್ರ ವಾಹನ ಶೋರೂಮ್​ನಲ್ಲಿ ಕೆಲಸಕ್ಕಿದ್ದಳು. ಆರೋಪಿ ಮತ್ತು ಕೊಲೆಯಾದಾಕೆ ಎರಡು ವರ್ಷದಿಂದ ಪ್ರೀತಿಸುತ್ತಿದ್ದು, ಕೆಲವು ದಿನಗಳ ಹಿಂದೆ ಜಗಳ ಮಾಡಿಕೊಂಡು ಬೇರ್ಪಟ್ಟಿದ್ದರು ಎಂದು ತಿಳಿದು ಬಂದಿದೆ.

Read More »

ಯುವ ಪತ್ರಕರ್ತ ಮಂಜು ಹೊನ್ನಾವರ ದುರ್ಮರಣ

ಹೊನ್ನಾವರ : ಯುವ ಪತ್ರಕರ್ತ ಮಂಜುನಾಥ್ ಹೊನ್ನಾವರ ದುರ್ಮರಣಕ್ಕೀಡಾಗಿದ್ದಾರೆ. ಬಂದರಿನಲ್ಲಿ ಕಾಲು ಜಾರಿ ಬಿದ್ದು ಇವರು ಕೊನೆಯುಸಿರೆಳೆದಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕಾಸರಕೋಡು ಬಂದರಿನಲ್ಲಿ ಈ ಘಟನೆ ನಡೆದಿದೆ. ಹಲವು ಮಾಧ್ಯಮ ಸಂಸ್ಥೆಯಲ್ಲಿ ಸಿನೆಮಾ ವಿಭಾಗದಲ್ಲಿ ಕೆಲಸ ಮಾಡಿದ್ದ ಮಂಜು ಹೊನ್ನಾವರ ಅವರ ಅಗಲಿಕೆಗೆ ಹಲವರು ಸಂತಾಪ ವ್ಯಕ್ತಪಡಿಸಿದ್ದಾರೆ.

Read More »

ಪ್ರಧಾನಿ ಮೋದಿ ಅವರಿಗೆ 68 ಪೈಸೆಗಳ 400 ಚೆಕ್​ ಕಳುಹಿಸಿದ ರೈತರು…!

ಹೈದರಾಬಾದ್​ : ಪ್ರಧಾನಿ ಮೋದಿ ಅವರಿಗೆ ಆಂಧ್ರ ಪ್ರದೇಶದ ರೈತರು 67 ಪೈಸೆಗಳ 400 ಚೆಕ್​ ಕಳುಹಿಸಿದ್ದಾರೆ. ಬರ ಪೀಡಿತ ರಾಯಲಸೀಮ ಪ್ರಾಂತ್ಯದಿಂದ ಈ ಚೆಕ್ ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ 67 ವರ್ಷಕ್ಕೆ ಕಾಲಿಟ್ಟಿದ್ದರು. ಈ ಹಿನ್ನೆಲೆಯಲ್ಲಿ ರಾಯಲಸೀಮಾ ಸಗುಣೀತಿ ಸಾಧನಾ ಸಮಿತಿ(ಆರ್​ಎಸ್​ಎಸ್​ಎಸ್​​​) ಎಂಬ ಸಂಘಟನೆಯ ಈ ಚೆಕ್ ಕಳುಹಿಸುವ ಮೂಲಕ ರೈತರ ಆಕ್ರೋಶವನ್ನು ಸಾರಿದೆ. ಜೊತೆಗೆ, ನಿಮ್ಮ ಹುಟ್ಟುಹಬ್ಬಕ್ಕೆ ನಮ್ಮಿಂದ ಕೊಡಲು ಸಾಧ್ಯವಿರುವ ಗರಿಷ್ಠ …

Read More »

ಮಾಜಿ ಸಚಿವ ಖಮರುಲ್​ ಇಸ್ಲಾಂ ಇನ್ನಿಲ್ಲ

ಬೆಂಗಳೂರು : ಮಾಜಿ ಸಚಿವ ಖಮರುಲ್​ ಇಸ್ಲಾಂ ಇನ್ನಿಲ್ಲ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಅವರಿಗ 69 ವರ್ಷ ವಯಸ್ಸಾಗಿತ್ತು. 1948ರ ಜನವರಿ 27 ರಂದು ಜನಿಸಿದ್ದ ಖಮರುಲ್​ ಅವರು ಆರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಒಂದು ಬಾರಿ ಸಂಸದರಾಗಿಯೂ ಇವರು ಕಾರ್ಯನಿರ್ವಹಿಸಿದ್ದಾರೆ. ಸಿದ್ದರಾಮಯ್ಯ ಅವರ ಮಂತ್ರಿ ಮಂಡಲದಲ್ಲಿ ವಕ್ಫ್​ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಖಮರುಲ್​ ಇಸ್ಲಾಂ ಸಚಿವ ಸಂಪುಟ ಪುನಾರಚನೆ ವೇಳೆ ಸಚಿವ ಸ್ಥಾನ …

Read More »

ಒಬ್ಬ VIPಯ ರಕ್ಷಣೆಗೆ ಮೂವರು ಪೊಲೀಸರು, 663 ಸಾಮಾನ್ಯ ಪ್ರಜೆಯ ರಕ್ಷಣೆಗಿರುವುದು ಬರೀ ಒಬ್ಬ…!!!

ನವದೆಹಲಿ : ಭಾರತದಲ್ಲಿ ವಿಐಪಿ ಸಂಸ್ಕೃತಿ ಅನ್ನುವುದು ಬಲು ಜೋರಾಗುತ್ತಿದೆ. ವಿಐಪಿ ಸಂಸ್ಕೃತಿ ತೊಡೆದು ಹಾಕುತ್ತೇವೆ ಎಂದು ರಾಜಕಾರಣಿಗಳು ಹೇಳುತ್ತಿದ್ದರೂ ಅದು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಅದಕ್ಕೊಂದು ಅಂಕಿ ಅಂಶಗಳು ಇಲ್ಲಿವೆ ನೋಡಿ… ದೇಶದಲ್ಲಿ ಸುಮಾರು 20 ಸಾವಿರಕ್ಕೂ ಅಧಿಕ ವಿಐಪಿಗಳು ತಲಾ ಒಬ್ಬೊಬ್ಬರು ಕನಿಷ್ಟ ಮೂವರು ಪೊಲೀಸರಿಂದ ರಕ್ಷಣೆ ಪಡೆಯುತ್ತಿದ್ದಾರೆ. ಆದರೆ, ದೇಶದ ಸಾಮಾನ್ಯ ನಾಗರಿಕನಿಗೆ ಇಂತಹ ರಕ್ಷಣೆ ಕಡಿಮೆ…! ಗೃಹ ಇಲಾಖೆಯ ಬ್ಯುರೋ ಆಫ್​ ಪೊಲೀಸ್​ …

Read More »
error: Content is protected !!