Saturday , November 17 2018
ಕೇಳ್ರಪ್ಪೋ ಕೇಳಿ
Home / News NOW (page 52)

News NOW

`ಗೂಡಂಗಡಿಗಳಲ್ಲಿ ಅಕ್ರಮ ಸಾರಾಯಿ ಮಾರಾಟ ತಡೆಗಟ್ಟಬೇಕು’

ಬಂಟ್ವಾಳ: ತಾಲೂಕಿನ ಬಹುತೇಕ ಗೂಡಂಗಡಿಗಳಲ್ಲಿ ಅಕ್ರಮವಾಗಿ ಸಾರಾಯಿ ಮಾರಾಟ ಮಾಡಲಾಗುತ್ತಿದ್ದು, ಇದನ್ನು ತಡೆಗಟ್ಟಲು ಅಬಕಾರಿ ಇಲಾಖೆಯ ಜೊತೆ ಪೊಲೀಸ್ ಇಲಾಖೆ ಕೈಜೋಡಿಸಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಎಂದು ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡದ ಸಭೆಯಲ್ಲಿ ಒತ್ತಾಯ ಕೇಳಿ ಬಂದಿದೆ. ಭಾನುವಾರ ಬಂಟ್ವಾಳ ನಗರ ಠಾಣೆ, ಬಂಟ್ವಾಳ ಗ್ರಾಮಾಂತರ ಠಾಣೆ ಮತ್ತು ಟ್ರಾಫಿಕ್ ಪೋಲೀಸ್ ಠಾಣಾ ವ್ಯಾಪ್ತಿಯ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡದ ಬಂಟ್ವಾಳ ನಗರ ಠಾಣೆಯಲ್ಲಿ ನಡೆದ ಕುಂದುಕೊರತೆಗಳ ಸಭೆಯಲ್ಲಿ ಈ …

Read More »

ಗ್ಯಾರೇಜು ಮಾಲಕರ ಸಂಘದಿಂದ ವನಮಹೋತ್ಸವ

ಬಂಟ್ವಾಳ: ದ.ಕ. ಜಿಲ್ಲಾ ಗ್ಯಾರೇಜು ಮಾಲಕರ ಸಂಘ ಬಂಟ್ವಾಳ ವಲಯದ ವತಿಯಿಂದ ವನಮಹೋತ್ಸವ ಕಾರ್ಯಕ್ರಮ ಭಾನುವಾರ ಬೆಳಿಗ್ಗೆ ಬಿ.ಸಿ.ರೋಡಿನ ಕೈಕಂಬದಲ್ಲಿ ನಡೆಯಿತು. ರಾಷ್ಟ್ರೀಯ ಹೆದ್ದಾರಿಯ ಮಧ್ಯೆ ಇರುವ ರಸ್ತೆ ವಿಭಜಕದಲ್ಲಿ ಆಕರ್ಷಕ ಹೂವಿನ ಗಿಡಗಳನ್ನು ನೆಟ್ಟು ಜಾನುವಾರುಗಳಿಂದ ರಕ್ಷಿಸಲು ತಂತಿ ಬೇಲಿಗಳನ್ನು ಅಳವಡಿಸಲಾಯಿತು. ಕೈಕಂಬದಿಂದ ತಲಪಾಡಿಯವರೆಗೆ ರಸ್ತೆ ವಿಭಜಕದಲ್ಲಿ ಗಿಡಗಳನ್ನು ನೆಡಲಾಯಿತು. ಈ ಸಂದರ್ಭ ಸಂಘದ ಗೌರವ ಸಲಹೆಗಾರ ಸುಧಾಕರ ಸಾಲ್ಯಾನ್ ಸುದ್ದಿಗಾರರೊಂದಿಗೆ ಮಾತಾನಾಡಿ ಗ್ಯಾರೇಜು ಮಾಲಕರ ಸಂಘ ಹಲವಾರು …

Read More »

ದಿನೇಶ್ ಅಮ್ಟೂರು ಆಯ್ಕೆ

ಬಂಟ್ವಾಳ: ದಕ್ಷಿಣಕನ್ನಡ ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾದ ಜಿಲ್ಲಾಧ್ಯಕ್ಷರಾಗಿ ದಿನೇಶ್ ಅಮ್ಟೂರು ಆಯ್ಕೆಯಾಗಿದ್ದಾರೆ. ಬಿಜೆಪಿಯ ಅಮ್ಟೂರು ಗ್ರಾಮಸಮಿತಿ ಸದಸ್ಯರಾಗಿ, ವಿಟ್ಲ ವಿಧಾನಸಭಾ ಕ್ಷೇತ್ರ ಸಮಿತಿ ಸದಸ್ಯರಾಗಿ, ಬಂಟ್ವಾಳ ವಿಧಾನಸಭಾ ಕ್ಷೇತ್ರದ ಎಸ್ಸಿ ಮೋರ್ಚದ ಪ್ರಧಾನಕಾರ್ಯದರ್ಶಿಯಾಗಿ, ಬಂಟ್ವಾಳ ತಾಲೂಕು ಪಂಚಾಯಿತಿ ಉಪಾಧ್ಯಕ್ಷರಾಗಿ, ಸಚೇತಕರಾಗಿ ಇವರು ಸೇವೆ ಸಲ್ಲಿಸಿದ್ದಾರೆ.

Read More »

ಸಚಿವ ರಮಾನಾಥ ರೈ ಪುತ್ರನ ವಿರುದ್ಧ ದಾಂಧಲೆ ಆರೋಪ

ಮಡಿಕೇರಿ ಪ್ರತಿನಿಧಿ ವರದಿ ಮಡಿಕೇರಿ : ಅರಣ್ಯ ಸಚಿವ ರಮಾನಾಥ ರೈ ಪುತ್ರ ದೀಪು ರೈ ವಿರುದ್ಧ ಈಗ ದಾಂಧಲೆ ಆರೋಪ ಕೇಳಿ ಬಂದಿದೆ. ತನ್ನ ಸ್ನೇಹಿತರೊಂದಿಗೆ ದೀಪು ರೈ ಕೊಡಗು ಜಿಲ್ಲೆ ಶ್ರೀಮಂಗಲ ತಾಲೂಕಿನಲ್ಲಿ ದಾಂಧಲೆ ಮಾಡಿದ್ದಾರೆ ಎಂದು ಸ್ಥಳೀಯರ ಆರೋಪ ಮಾಡಿದ್ದಾರೆ. ಅಲ್ಲದೆ, ತನ್ನ ತಂದೆ ಮಿನಿಸ್ಟರ್ ಎಂದು ಹೇಳಿಕೊಂಡು ದೀಪು ಸ್ಥಳೀಯರೊಂದಿಗೆ ವಾಗ್ವಾದಕ್ಕೆ ಇಳಿದಿದ್ದರು ಎಂದೂ ದೂರಲಾಗಿದೆ. ಶ್ರೀಮಂಗಲದ ತೇಜಪ್ಪ ಎಂಬುವವರ ಮನೆಗೆ ತೆರಳುವ ಖಾಸಗಿ …

Read More »

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ ಕಾಲೇಜಿಗೆ ಇಲ್ಲ ರಜೆ

ಮಂಗಳೂರು : ಸಾರಿಗೆ ಇಲಾಖೆ ಸಿಬ್ಬಂದಿ ಮುಷ್ಕರ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಶಾಲಾ ಕಾಲೇಜುಗಳಿಗೆ ಸರ್ಕಾರ ರಜೆ ಘೋಷಣೆ ಮಾಡಿದೆ. ಆದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ರಜೆ ಇರುವುದಿಲ್ಲ. ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಈ ಆದೇಶ ಹೊರಡಿಸಿದ್ದಾರೆ. ಹೇಳಿಕೇಳಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಾಸಗಿ ಬಸ್‍ಗಳೇ ಪಾರಮ್ಯ ಹೊಂದಿವೆ. ಇಲ್ಲಿ ಕೆಎಸ್‍ಆರ್‍ಟಿಸಿ ಬಸ್ ಓಡಾಟ ಕಡಿಮೆ. ಹೀಗಾಗಿ, ಜಿಲ್ಲಾಧಿಕಾರಿಗಳು ಈ ಆದೇಶ ಹೊರಡಿಸಿದ್ದಾರೆ. ಇನ್ನು, ಬೆಳಗಾವಿಯಲ್ಲೂ ನಾಳೆ ಒಂದು ದಿನ ಶಾಲಾ …

Read More »

ನಾಳೆ ಶಾಲಾ ಕಾಲೇಜುಗಳಿಗೆ ರಜೆ : ಪರೀಕ್ಷೆ ಕೂಡಾ ಮುಂದೂಡಿಕೆ

ಬೆಂಗಳೂರು : ರಾಜ್ಯ ಸಾರಿಗೆ ಸಂಸ್ಥೆ ನೌಕರರ ಪ್ರತಿಭಟನೆಯ ಬಿಸಿ ಈಗ ಶಾಲಾ ಕಾಲೇಜುಗಳಿಗೂ ತಟ್ಟಿದೆ. ಮುಷ್ಕರ ಹಿನ್ನೆಲೆಯಲ್ಲಿ ನಾಳೆ ಮತ್ತು ನಾಡಿದ್ದು ಎರಡು ದಿನ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ. ಸರ್ಕಾರ ಈ ಬಗ್ಗೆ ಅಧಿಕೃತ ಆದೇಶ ಹೊರಡಿಸಿದೆ. ಪರೀಕ್ಷೆ ಮುಂದೂಡಿಕೆ : ಇನ್ನು, ಮುಷ್ಕರದ ಹಿನ್ನೆಲೆಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಪರೀಕ್ಷೆ ಮುಂದೂಡಿಕೆ ಮುಂದೂಡಲಾಗಿದೆ. ನಾಳೆ ನಡೆಯಬೇಕಾಗಿದ್ದ ಎಂಬಿಎ, ಎಂಸಿಎ ಪರೀಕ್ಷೆಗಳನ್ನು ವಿವಿ ಮುಂದೂಡಿದೆ. ವೇತನ ಹೆಚ್ಚಳ ಅಸಾಧ್ಯ …

Read More »

ಹೆರಿಗೆ ರಜೆ ಕೇಳಿದ ಸಿಬ್ಬಂದಿಗೆ ಕಂಪೆನಿಯಿಂದಲೇ ಗೇಟ್‍ಪಾಸ್…!

ನೋಯ್ಡಾ : ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ 26 ವಾರಗಳ ಹೆರಿಗೆ ರಜೆ ಕಡ್ಡಾಯವಾಗಿ ನೀಡಬೇಕೆಂದು ಎಂದು ಕೇಂದ್ರ ಸರ್ಕಾರ ಆದೇಶ ನೀಡಿದೆ. ಆದರೆ, ದೆಹಲಿಯಲ್ಲಿ ನೋಯ್ಡಾ ಮೂಲದ ಕಂಪೆನಿಯೊಂದು ಹೆರಿಗೆ ರಜೆ ಕೇಳಿದ ಅಸಿಸ್ಟೆಂಟ್ ಎಚ್‍ಆರ್ ಮ್ಯಾನೇಜರ್‍ರನ್ನು ಕೆಲಸದಿಂದಲೇ ವಜಾ ಮಾಡಿದೆ…! 28 ವರ್ಷದ ರಾಧಿಕಾ ಗುಪ್ತ ಎಂಬುವವರು ರಾಡಿಯಸ್ ಸೈನೇರ್ಜೀಸ್ ಇಂಟರ್‍ನ್ಯಾಷನಲ್ ಪ್ರೈವೇಟ್ ಲಿಮಿಟೆಡ್‍ನಲ್ಲಿ ಕೆಲಸ ಮಾಡುತ್ತಿದ್ದರು. ಎಲ್ಲರಂತೆ ಇವರು ಕೂಡಾ ತಮ್ಮ …

Read More »

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಕಾರು ಅಪಘಾತ

ಉಪ್ಪಿನಂಗಡಿ : ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಎ.ಬಿ.ಇಬ್ರಾಹಿಂ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. ಹೆದ್ದಾರಿ ವೀಕ್ಷಣೆಗೆಂದು ಹೋಗುತ್ತಿದ್ದ ಸಂದರ್ಭದಲ್ಲಿ ನೆಲ್ಯಾಡಿ ಸಮೀಪದ ಗುಂಡ್ಯದ ಬಳಿ ಈ ದುರ್ಘಟನೆ ಸಂಭವಿಸಿದೆ. ಎ.ಬಿ.ಇಬ್ರಾಹಿಂ ಅವರು ಪ್ರಯಾಣಿಸುತ್ತಿದ್ದ ಪಾರ್ಚೂನರ್ ಕಾರಿಗೆ ಬೆಂಗಳೂರು ಕಡೆಯಿಂದ ಬರುತ್ತಿದ್ದ ಸ್ಕಾರ್ಪಿಯೋ ಕಾರು ಡಿಕ್ಕಿಯಾಗಿದೆ. ಪರಿಣಾಮ, ಇಬ್ರಾಹಿಂ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಅಪಘಾತದಿಂದಾಗಿ ಮಂಗಳೂರು – ಬೆಂಗಳೂರು ಹೆದ್ದಾರಿಯಲ್ಲಿ ಸುಮಾರು ಅರ್ಧ ತಾಸು ಸಂಚಾರ ಅಸ್ತವ್ಯಸ್ತವಾಗಿತ್ತು.

Read More »

29 ಜನರಿದ್ದ ವಾಯುಪಡೆಯ ವಿಮಾನ ನಾಪತ್ತೆ

ನವದೆಹಲಿ : ಭಾರತೀಯ ವಾಯುಪಡೆಗೆ ಸೇರಿದ ವಿಮಾನವೊಂದು ಇವತ್ತು ನಾಪತ್ತೆಯಾಗಿದೆ. ಈ ವಿಮಾನದಲ್ಲಿ 29 ಜನ ಪ್ರಯಾಣಿಸುತ್ತಿದ್ದರು. ಇದರಲ್ಲಿ 6 ಜನ ಸಿಬ್ಬಂದಿ ಮತ್ತು 23 ಜನ ಪ್ರಯಾಣಿಕರಿದ್ದರು. ಈ ವಿಮಾನ ಬಂಗಾಲಕೊಳ್ಳಿಯಲ್ಲಿ ಸಂಚರಿಸುವಾಗ ಸಂಪರ್ಕ ಕಳೆದುಕೊಂಡಿದೆ. ಎಎನ್ 32 ಎಂಬ ವಿಮಾನ ಚೆನ್ನೈನ ತಾಂಬರಂ ವಿಮಾನ ನಿಲ್ದಾಣದಿಂದ ಅಂಡಮಾನ್ ನಿಕೋಬಾರ್‍ನ ಪೋರ್ಟ್ ಬ್ಲೇರ್‍ಗೆ ಪ್ರಯಾಣ ಬೆಳೆಸಿತ್ತು. ಆದರೆ, ಈ ವಿಮಾನ ಬೆಳಗ್ಗೆ 8.45ರ ಸುಮಾರಿಗೆ ರಡಾರ್ ಸಂಪರ್ಕ ಕಳೆದುಕೊಂಡಿದೆ. …

Read More »

ಸೋಮವಾರ ದೂರದೂರಿನ ಪ್ರಯಾಣ ಬೇಡ : ಬಸ್ ಸ್ಟ್ರೈಕ್ ಇರಬಹುದು

ಬೆಂಗಳೂರು : ಮುಂದಿನ ಸೋಮವಾರ ದೂರದ ಊರಿನ ಪ್ರಯಾಣಕ್ಕೆ ಯಾವುದೇ ಪ್ಲಾನ್ ಮಾಡಿಕೊಳ್ಳಬೇಡಿ. ಯಾಕೆಂದರೆ, ಸಾರಿಗೆ ಸಿಬ್ಬಂದಿ ಮುಷ್ಕರ ಇರಬಹುದು. ಶೇ.30ರಷ್ಟು ವೇತನ ಹೆಚ್ಚಳಕ್ಕೆ ಸರ್ಕಾರ ಒಪ್ಪದೇ ಇರುವುದರಿಂದ ರಾಜ್ಯಾದ್ಯಂತ ಸಾಮೂಹಿಕ ಪ್ರತಿಭಟನೆಗೆ ನಿರ್ಧರಿಸಿರುವ ಸಾರಿಗೆ ಸಿಬ್ಬಂದಿ ನಿರ್ಧಾರ ಮಾಡಿದ್ದಾರೆ. ಈ ಬಗ್ಗೆ ಸಿಎಂ ಜೊತೆ ನಡೆದ ಸಭೆಯೂ ವಿಫಲವಾಗಿದೆ. ಹೀಗಾಗಿ, ಸೋಮವಾರ ಬಸ್ ಸಂಚಾರ ಇರುವುದು ಕಷ್ಟ. ಇನ್ನು, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಾರಿಗೆ ಸಚಿವ ರಾಮಲಿಂಗಾ …

Read More »
error: Content is protected !!