Monday , February 18 2019
ಕೇಳ್ರಪ್ಪೋ ಕೇಳಿ
Home / News NOW (page 57)

News NOW

ಈ ದಂಪತಿ ಮೌಂಟ್ ಎವರೆಸ್ಟ್ ಹತ್ತಿಯೇ ಇಲ್ವಂತೆ…! ಸುಳ್ಳು ಫೋಟೋ ಕೊಟ್ಟು ಸುದ್ದಿ ಮಾಡಿದ್ದ ಜೋಡಿ…!

ನವದೆಹಲಿ : ಪುಣೆಯ ಪೊಲೀಸ್ ಕಾನ್ಸ್‍ಸ್ಟೇಬಲ್ ದಂಪತಿ ಮೌಂಟ್ ಎವರೆಸ್ಟ್ ಏರಿ ಸಾಧನೆ ಮಾಡಿದ್ದಾರೆ ಎಂದು ಇತ್ತೀಚೆಗೆ ಬಾರೀ ಸುದ್ದಿಯಾಗಿತ್ತು. ಪುಣೆ ಪೊಲೀಸ್ ಫೋರ್ಸ್‍ನ ಬ್ಯಾನರ್ ಹಿಡಿದು ಈ ದಂಪತಿ ಮೌಂಟ್ ಎವರೆಸ್ಟ್ ಮೇಲೆ ನಿಂತಿದ್ದ ಫೋಟೋ ಹಾಕಿದ್ದರು. ಇವರಿಬ್ಬರ ಸಾಧನೆಯನ್ನು ಇಡೀ ದೇಶವೇ ಕೊಂಡಾಡಿತ್ತು… ಪ್ರಶಂಸೆಯ ಸುರಿಮಳೆಯೇ ಹರಿದಿತ್ತು… ಆದರೆ, ಒಟ್ಟು ಈ ಪ್ರಕರಣಕ್ಕೆ ಈಗ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಅಸಲಿಗೆ ಈ ದಂಪತಿ ಮೌಂಟ್ ಎವರೆಸ್ಟ್ ಏರಿಯೇ …

Read More »

ಪೋಷಕರೇ ನಿಮಗಿದು ಎಚ್ಚರಿಕೆ ಗಂಟೆ : 4 ವರ್ಷದ ಕಂದನ ದುರಂತ ಅಂತ್ಯ…!

ಹೈದರಾಬಾದ್ : ಆಟವಾಡುತ್ತಿದ್ದ ನಾಲ್ಕು ವರ್ಷದ ಹುಡುಗನೊಬ್ಬ ಮುಖಕ್ಕೆ ಪ್ಲಾಸ್ಟಿಕ್ ಕವರ್ ಸುತ್ತಿಕೊಂಡು ಬಳಿಕ ಅದನ್ನು ತೆಗೆಯಲಾಗದೆ ಉಸಿರುಗಟ್ಟಿ ಮೃತಪಟ್ಟಿರುವ ದಾರುಣ ಘಟನೆ ನಿಜಾಂಪೇಟ್‍ನಲ್ಲಿ ನಡೆದಿದೆ. ಕುಕಟಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಶ್ರೀಯಾನ್ ಮೃತಪಟ್ಟ ಕಂದ. ಶ್ರೀಯಾನ್ ಪ್ಲಾಸ್ಟಿಕ್ ಕವರ್‍ನಲ್ಲಿ ಆಟವಾಡುತ್ತಿದ್ದಾಗ ಅಚಾನಕ್ಕಾಗಿ ತಲೆಗೆ ಹಾಕಿಕೊಂಡಿದ್ದ. ಆದರೆ, ಬಳಿಕ ಈ ಪ್ಲಾಸ್ಟಿಕ್ ಕುತ್ತಿಗೆಗೆ ಗಟ್ಟಿಯಾಗಿ ಬಿಗಿದ ಪರಿಣಾಮ ಉಸಿರುಗಟ್ಟಿ ಬಾಲಕ ಸಾವನ್ನಪ್ಪಿದ್ದಾನೆ. ಗಟ್ಟಿಯಾದ ಪ್ಲಾಸ್ಟಿಕ್‍ನ್ನು ತೆಗೆಯಲು …

Read More »

ಅಂಧೇರಿಯಲ್ಲಿ ಅಗ್ನಿ ಆಕಸ್ಮಿಕ : 8 ಮಂದಿಯ ಸಜೀವ ದಹನ

ಮುಂಬೈ : ಅಂಧೇರಿಯ ಕಟ್ಟಡವೊಂದರಲ್ಲಿ ಇಂದು ಮುಂಜಾನೆ ಅಗ್ನಿ ಆಕಸ್ಮಿಕ ಸಂಭವಿಸಿದೆ. ಈ ದುರಂತದಲ್ಲಿ 8 ಮಂದಿ ಸಜೀವ ದಹನವಾಗಿದ್ದಾರೆ. ಬೆಳಗ್ಗೆ ಸುಮಾರು 5.15ಕ್ಕೆ ಈ ಘಟನೆ ನಡೆದಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಕಟ್ಟಡದ ಕೆಳಮಹಡಿಯಲ್ಲಿದ್ದ ಮೆಡಿಕಲ್ ಶಾಪ್‍ನಲ್ಲಿ ಕಾಣಿಸಿಕೊಂಡ ಬೆಂಕಿ ಬಳಿಕ ಮೊದಲ ಮಹಡಿಗೆ ಹಬ್ಬಿತ್ತು. ಮೊದಲ ಮಹಡಿಯಲ್ಲಿ ಕೆಲವೊಂದು ಕುಟುಂಬಗಳು ವಾಸವಾಗಿದ್ದವು. ಇನ್ನು, ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಬೆಂಕಿ ನಂದಿಸಿದೆ. ವಿದ್ಯುತ್ ಶಾರ್ಟ್ …

Read More »

ಎಚ್ಚರ…! ದೆಹಲಿ ಏರ್‍ಪೋರ್ಟ್‍ನಲ್ಲಿ ಸಿಬ್ಬಂದಿಯೇ ಕಳ್ಳತನ ಮಾಡುತ್ತಿದ್ದಾರೆ…! : ಇಲ್ಲಿದೆ ವೀಡಿಯೋ

ನವದೆಹಲಿ : ದೆಹಲಿ ಏರ್‍ಪೋರ್ಟ್‍ನಲ್ಲಿ ಪ್ರಯಾಣಿಕರು ತಮ್ಮ ವಸ್ತುಗಳ ಬಗ್ಗೆ ತುಂಬಾ ಜಾಗರೂಕರಾಗಿರಬೇಕಾಗಿದೆ. ಯಾಕೆಂದರೆ, ಏರ್‍ಪೋರ್ಟ್ ಸಿಬ್ಬಂದಿಯೇ ಪ್ರಯಾಣಿಕರ ವಸ್ತುಗಳನ್ನು ಕಳ್ಳತನ ಮಾಡುವ ಪ್ರವೃತ್ತಿಗೆ ಇಳಿದಿದ್ದಾರೆ. ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಡಿ ದರ್ಜೆ ನೌಕರರು ಪ್ರಯಾಣಿಕರ ಬ್ಯಾಗ್‍ನಿಂದ ಚಿನ್ನಾಭರಣ ಕದ್ದಿದ್ದಾರೆ. ಈ ಕಳ್ಳತನದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದಾದ ಬಳಿಕ ಕಾರ್ಯಾಚರಣೆಗಿಳಿದ ದೆಹಲಿ ಪೊಲೀಸರು ಈ ಇಬ್ಬರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಒಂದು ತಿಂಗಳ ಹಿಂದೆ ಮಹಿಳೆಯೊಬ್ಬರು ಏರ್‍ಪೋರ್ಟ್‍ನಲ್ಲಿ …

Read More »

ಇಸ್ತಾಂಬುಲ್ ಏರ್‍ಪೋರ್ಟ್‍ನಲ್ಲಿ ಉಗ್ರರ ದಾಳಿ : ಇಲ್ಲಿದೆ ಭಾರತೀಯರಿಗೆ ಸಹಾಯವಾಣಿ ಸಂಖ್ಯೆ

ನವದೆಹಲಿ : ಇಸ್ತಾಂಬುಲ್ ಏರ್‍ಪೋರ್ಟ್‍ನಲ್ಲಿ ಮೂರು ಕಡೆ ಉಗ್ರರು ಆತ್ಮಾಹುತಿ ದಾಳಿ ನಡೆದಿದ್ದಾರೆ. ಈ ಸ್ಫೋಟದಲ್ಲಿ ಕನಿಷ್ಠ 36 ಮಂದಿ ಸಾವನ್ನಪ್ಪಿರುವುದಾಗಿ ಪ್ರಾಥಮಿಕ ಮಾಹಿತಿಯಿಂದ ದೃಢಪಟ್ಟಿದೆ. ಮೃತಪಟ್ಟವರಲ್ಲಿ ವಿದೇಶಿಗರೂ ಸೇರಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿ, ಭಾರತೀಯರಿಗೆ ಇಲ್ಲಿ ಸಹಾಯವಾಣಿ ಸಂಖ್ಯೆಯನ್ನು ನೀಡಲಾಗಿದೆ…

Read More »

ಇಸ್ತಾಂಬುಲ್ ಏರ್‍ಪೋರ್ಟ್‍ನಲ್ಲಿ ಆತ್ಮಾಹುತಿ ದಾಳಿ : 36 ಮಂದಿ ಸಾವು

ಇಸ್ತಾಂಬುಲ್ : ಟರ್ಕಿಯ ಪ್ರಮುಖ ನಗರ ಇಸ್ತಾಂಬುಲ್ ಏರ್‍ಪೋರ್ಟ್‍ನಲ್ಲಿ ಪ್ರಬಲ ಬಾಂಬ್ ಸ್ಫೋಟ ಸಂಭವಿಸಿದೆ. ಈ ಸ್ಫೋಟದಲ್ಲಿ ಕನಿಷ್ಟ 36 ಮಂದಿ ಸಾವನ್ನಪ್ಪಿರುವುದಾಗಿ ಪ್ರಾಥಮಿಕ ಮಾಹಿತಿಗಳು ದೃಢಪಡಿಸಿವೆ. ಇದಲ್ಲದೆ 150ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಏರ್‍ಪೋರ್ಟ್‍ನ ಮೂರು ಭಾಗದಲ್ಲಿ ಆತ್ಮಾಹುತಿ ದಾಳಿ ನಡೆದಿದೆ. ಜೊತೆಗೆ, ಉಗ್ರರು ಗುಂಡಿನ ಮಳೆಗರೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಾಯಗೊಂಡವರಲ್ಲಿ ಹಲವರ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಇದು ಐಸಿಸ್ …

Read More »

ಗೋಮೂತ್ರದಲ್ಲಿ ಇದೆ ಬಂಗಾರದ ಅಂಶ…!

ಜುನಗಢ್ : ಗೋವು ಕಲಿಯುಗ ಕಾಮಧೇನು. ಹಿಂದೂ ಧರ್ಮೀಯರ ಪಾಲಿಗೆ ಪವಿತ್ರ ಗೋ ಮಾತೆ. ಇಂತಹ ಗೋ ಮಾತೆಯೊಳಗೆ ಈಗ ಬಂಗಾರ ಅಡಗಿದೆ. ಜುನಗಢ್ ಕೃಷಿ ವಿವಿಯ ಸಂಶೋಧಕರ ಅಧ್ಯಯನದಲ್ಲಿ ಇದು ಬಯಲಾಗಿದೆ. ಗಿರ್ ಎಂಬ ತಳಿಯ ಹಸುವಿನ ಮೂತ್ರದಲ್ಲಿ ಬಂಗಾರದ ಅಂಶವಿದೆ ಎಂಬುದು ಈ ಸಂಶೋಧಕರು ಕಂಡುಕೊಂಡ ಸತ್ಯ. ಸುಮಾರು 400 ಗಿರ್ ತಳಿಗಳ ಮೂತ್ರದ ಮಾದರಿಯನ್ನು ಕೃಷಿ ವಿಶ್ವವಿದ್ಯಾನಿಲಯದ ಸಂಶೋಧಕರು ಪರೀಕ್ಷೆ ಮಾಡಿದ್ದರು. ಈ ಸಂದರ್ಭದಲ್ಲಿ ಒಂದು …

Read More »

ಪೇಸ್‍ಬುಕ್‍ನಲ್ಲಿ ನಗ್ನ ಫೋಟೋ : ಮನನೊಂದು ಯುವತಿ ಆತ್ಮಹತ್ಯೆ

ಚೆನ್ನೈ : ತನ್ನ ಫೋಟೋವನ್ನು ಯಾರೋ ತಿರುಚಿ ಅರೆನಗ್ನ ಇರುವಂತೆ ಚಿತ್ರಿಸಿ ಫೇಸ್‍ಬುಕ್‍ನಲ್ಲಿ ಅಪ್‍ಲೋಡ್ ಮಾಡಿದ್ದಕ್ಕೆ ನೊಂದ ಯುವತಿಯೊಬ್ಬಳು ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಸೇಲಂನ ವಿನುಪ್ರಿಯಾ ಆತ್ಮಹತ್ಯೆ ಮಾಡಿಕೊಂಡ ಯುವತಿ. 21 ವರ್ಷದ ವಿನುಪ್ರಿಯಾಳ ಫೋಟೋವನ್ನು ದುಷ್ಕರ್ಮಿಗಳು ತಿರುಚಿ ಫೇಸ್‍ಬುಕ್‍ಗೆ ಹಾಕಿದ್ದರು. ಇದರ ವಿರುದ್ಧ ಯುವತಿ ಪೊಲೀಸರಿಗೂ ದೂರು ಕೊಟ್ಟಿದ್ದರು. ಆದರೆ, ಪೊಲೀಸರು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಇದರಿಂದ ಮನನೊಂದ ಯುವತಿ ಸಾವಿಗೆ ಶರಣಾಗಿದ್ದಾರೆ. ಸ್ನೇಹಿತರು …

Read More »

ಮಲಾರ್ ಜಯರಾಂ ರೈರಿಗೆ ಪತ್ರಿಕಾ ದಿನದ ಗೌರವ ಜೂ.30 ರಂದು ಪ್ರದಾನ

ಅಜೆಕಾರು: ಬೆಂಗಳೂರಿನ ಪರ್ತಕರ್ತರ ವೇದಿಕೆ(ರಿ)ಯ ಉಡುಪಿ-ದ.ಕ ಘಟಕ ನೀಡುವ ವರ್ಷದ ಪತ್ರಿಕಾ ದಿನದ 9ನೇ ವರ್ಷದ ಗೌರವಕ್ಕೆ ಹಿರಿಯ ಪತ್ರಕರ್ತ ಡೆಕ್ಕನ್ ಹೆರಾಲ್ಡ್ ಮತ್ತು ನವಭಾರತದ 71ರ ಹರೆಯದ ಮಲಾರ್ ಜಯರಾಂ ರೈ ಅವರು ಆಯ್ಕೆಯಾಗಿದ್ದಾರೆ. ಹಿರಿಯರೆಡೆಗೆ ನಮ್ಮ ನಡಿಗೆ ಧ್ಯೇಯದೊಂದಿಗೆ ವೇದಿಕೆಯ ಘಟಕ ಆರಂಭಿಸಿರುವ ಈ ಮಹತ್ವದ ಕಾರ್ಯಕ್ರಮದಲ್ಲಿ ಈ ಬಾರಿ ಮಂಗಳೂರು ಮತ್ತು ಬೆಂಗಳೂರಿನಲ್ಲಿ ಕನ್ನಡ-ಆಂಗ್ಲ ಪತ್ರಕರ್ತರಾಗಿದ್ದು ತುಳು-ಕನ್ನಡ ನೆಲಜಲಕ್ಕೆ ವಿಶಿಷ್ಟ ಸೇವೆ ಸಲ್ಲಿಸಿದ ರೈಗಳನ್ನು ಪತ್ರಿಕೋದ್ಯಮ …

Read More »

ಬೆಂಗಳೂರಿನಲ್ಲಿ ಭಾರೀ ಮಳೆ : ಮರ ಬಿದ್ದು ಬೈಕ್ ಸವಾರ ಸಾವು

ಬೆಂಗಳೂರು : ರಾಜಧಾನಿ ಬೆಂಗಳೂರಿನ ಹಲವೆಡೆ ಇವತ್ತು ಭಾರೀ ಮಳೆಯಾಗಿದೆ. ಮಳೆಯಿಂದಾಗಿ ಅಲ್ಲಲ್ಲಿ ಮರಗಳು ಬಿದ್ದ ಘಟನೆಯೂ ನಡೆದಿದೆ. ಜೊತೆಗೆ, ಮಲ್ಲೇಶ್ವರಂನ 18ನೇ ಕ್ರಾಸ್ ಬಳಿ ಬೈಕ್‍ಗೆ ಮರ ಬಿದ್ದು ಸವಾರರೊಬ್ಬರು ಕೊನೆಯುಸಿರೆಳೆದಿದ್ದಾರೆ. ಮೃತರನ್ನು ಕಲ್ಯಾಣ ನಗರದ ಅಸಾವುಲ್ ಷರೀಫ್ ಎಂದು ಗುರುತಿಸಲಾಗಿದೆ. ಕಬ್ಬನ್ ಪಾರ್ಕ್‍ನಲ್ಲೂ ಮರವೊಂದು ಬುಡಸಮೇತ ಬಿದ್ದಿದೆ. ಈ ಸಂದರ್ಭದಲ್ಲಿ ಮರದಡಿ ಕುಳಿತು ಮಾತನಾಡುತ್ತಿದ್ದ ಪ್ರೇಮಿಗಳು ಸ್ವಲ್ಪದರಲ್ಲೇ ಪಾರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು, ಮಳೆಯಿಂದಾಗಿ ಉಂಟಾದ ಟ್ರಾಫಿಕ್ …

Read More »
error: Content is protected !!