Monday , September 24 2018
ಕೇಳ್ರಪ್ಪೋ ಕೇಳಿ
Home / Sandalwood (page 10)

Sandalwood

ಬಣ್ಣದ ಲೋಕಕ್ಕೆ ಉಪೇಂದ್ರ ಪುತ್ರಿ ಐಶ್ವರ್ಯ

ಬೆಂಗಳೂರು : ಚಿಕ್ಕಮ್ಮ ಪ್ರಿಯಾಂಕಾ ಜೊತೆ ಉಪೇಂದ್ರ ಅಣ್ಣನ ಮಗ ನಟಿಸುತ್ತಾರೆ ಎಂದು ಈ ಹಿಂದೆ ಸುದ್ದಿಯಾಗಿತ್ತು. ಇದೀಗ, ಉಪೇಂದ್ರ ಅವರ ಕುಟುಂಬದ ಮತ್ತೊಂದು ಕುಡಿ ಸಿನಿಲೋಕಕ್ಕೆ ಬರುತ್ತಿದೆ. ಅದು ಬೇರೆ ಯಾರೂ ಅಲ್ಲ. ಉಪೇಂದ್ರ, ಪ್ರಿಯಾಂಕಾ ದಂಪತಿ ಪುತ್ರಿ ಐಶ್ವರ್ಯ. ತಾಯಿ ಪ್ರಿಯಾಂಕಾ ಜೊತೆಗೇ ಐಶ್ವರ್ಯ ಸ್ಕ್ರೀನ್ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಹೌರಾ ಬ್ರಿಡ್ಜ್​​​​​​​​​​​​ ಚಿತ್ರದಲ್ಲಿ ತಾಯಿ ಮಗಳು ಒಂದಾಗುತ್ತಿದ್ದಾರೆ. ಪ್ರಿಯಾಂಕಾ ಅಭಿನಯದ ಮಮ್ಮಿ ಚಿತ್ರವನ್ನು ನಿರ್ದೇಶನ ಮಾಡಿದ್ದ ಲೋಹಿತ್​ …

Read More »

ಬಕಾಸುರ ಟ್ರೇಲರ್​ಗೆ ಭರ್ಜರಿ ರೆಸ್ಪಾನ್ಸ್​

ಬೆಂಗಳೂರು : ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ಆರ್​.ಜೆ ರೋಹಿತ್​ ಅಭಿನಯದ ಬಕಾಸುರ ಚಿತ್ರದ ಕೆಲಸಗಳು ಭರ್ಜರಿಯಾಗಿ ಸಾಗುತ್ತಿದೆ. ಈ ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು, ಟ್ರೇಲರ್​ಗೂ ಭರ್ಜರಿ ರೆಸ್ಪಾನ್ಸ್​ ಸಿಕ್ಕಿದೆ. ರೋಹಿತ್​ಗೆ ಇಲ್ಲಿ ಕಾವ್ಯಾ ನಾಯಕಿಯಾಗಿದ್ದಾರೆ. ಕರ್ವ ಖ್ಯಾತಿಯ ನಿರ್ದೇಶಕ ನವನೀತ್​ ಈ ಚಿತ್ರವನ್ನು ಡೈರೆಕ್ಟ್ ಮಾಡುತ್ತಿದ್ದಾರೆ.

Read More »

ಸ್ಯಾಂಡಲ್​ವುಡ್​ ಸ್ಟಾರ್​ಗಳ ಮನೆಯಲ್ಲಿ ಗಣೇಶೋತ್ಸವ ಸಂಭ್ರಮ

ಬೆಂಗಳೂರು : ಗಣೇಶೋತ್ಸವ ಸಂಭ್ರಮ ಎಲ್ಲೆಲ್ಲೂ ಮೇರೆ ಮೀರಿದೆ. ಸ್ಯಾಂಡಲ್​ವುಡ್ ಸ್ಟಾರ್​ಗಳೂ ತಮ್ಮ ಮನೆಯಲ್ಲಿ ಹಬ್ಬವನ್ನು ಆಚರಿಸಿ ಖುಷಿ ಅನುಭವಿಸುತ್ತಿದ್ದಾರೆ. ಮನೆ ಮಂದಿಯೆಲ್ಲಾ ಸೇರಿ ವಿಘ್ನೇಶನಿಗೆ ವಿಶೇಷ ಪೂಜೆ ಸಲ್ಲಿಸಿ ಸಂತಸ ಪಡುತ್ತಿದ್ದಾರೆ.

Read More »

ಅದ್ಧೂರಿಯಾಗಿ ನಡೆದ ಪ್ರಿಯಾಮಣಿ – ಮುಸ್ತಫಾರಾಜ್​ ಆರತಕ್ಷತೆ

ಬೆಂಗಳೂರು : ಆಗಸ್ಟ್​ 23 ರಂದು ದಾಂಪತ್ಯಕ್ಕೆ ಕಾಲಿಟ್ಟಿದ್ದ ಬಹುಭಾಷಾ ನಟಿ, ಕನ್ನಡತಿ ಪ್ರಿಯಾಮಣಿ ಆರತಕ್ಷತೆ ಅದ್ಧೂರಿಯಾಗಿ ನಡೆದಿದೆ. ಬೆಂಗಳೂರಿನ ಕೊತ್ತನೂರಿನ ಎಲಾನ್​ ಕನ್ವೆಷನಲ್​ ಹಾಲ್​ನಲ್ಲಿ ಪ್ರಿಯಾಮಣಿ ಮುಸ್ತಫಾ ಆರತಕ್ಷತೆ ತುಂಬಾ ಖುಷಿಯಿಂದಲೇ ನಡೆದಿದೆ… ರೆಡ್​​​ ಆಂಡ್​ ಗೋಲ್ಡ್​ ಥೀಮ್​​ನಲ್ಲಿ ಈ ಹಾಲ್​ ಸಿದ್ಧಗೊಂಡಿತ್ತು.. ಒಂದು ಸುಂದರ ಲೋಕವೇ ಧರೆಗಿಳಿದ ಅನುಭವ ಅಲ್ಲಾಗುತ್ತಿತ್ತು… ಪ್ರಿಯಾಮಣಿ ಮದುವೆಯಲ್ಲಿ ಮನೆಯವರು ಮಾತ್ರ ಪಾಲ್ಗೊಂಡಿದ್ದರು… ಮನೆಯವರು ಬಿಟ್ಟು ಬೇರೆ ಯಾರಿಗೂ ಆಹ್ವಾನವಿರಲಿಲ್ಲ. ಹೀಗಾಗಿ, ಸ್ನೇಹಿತರು, …

Read More »

ಟಗರು ಚಿತ್ರದ ಚೆಲುವೆಯರ ಫೇಸ್​ಬುಕ್​ ಲೈವ್​ : ಅಭಿಮಾನಿಗಳೊಂದಿಗೆ ಒಂದಷ್ಟು ಮಾತು

ಬೆಂಗಳೂರು : ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅಭಿನಯದ ಟಗರು ಚಿತ್ರ ಸ್ಯಾಂಡಲ್​ವುಡ್​ನಲ್ಲಿ ಸಖತ್​ ನಿರೀಕ್ಷೆ ಮೂಡಿಸಿದೆ. ದುನಿಯಾ ಸೂರಿ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಟಗರು ಚಿತ್ರದಲ್ಲಿ ಮಾನ್ವಿತಾ ಹರೀಶ್ ಮತ್ತು ಭಾವನಾ ಇಬ್ಬರು ನಾಯಕಿಯರು. ಚಿತ್ರದ ಫೋಟೋಗಳಲ್ಲಿ ಒಂದೇ ರೀತಿಯ ಬಟ್ಟೆ ತೊಟ್ಟು ಗಮನ ಸೆಳೆದಿರುವ ಇವರು ಅದೇ ರೀತಿಯ ಬಟ್ಟೆ ತೊಟ್ಟು ಫೇಸ್​ಬುಕ್​ನಲ್ಲೂ ಲೈವ್ ಆಗಿ ಮಾತನಾಡಿದ್ದಾರೆ…

Read More »

ಸೂಜಿದಾರ ಚಿತ್ರದಲ್ಲಿ ಹರಿಪ್ರಿಯಾ ಲುಕ್ ರಿವೀಲ್​

ಬೆಂಗಳೂರು : ಮೌನೇಶ್​ ಬಡಿಗೇರ್ ಅವರ ನಿರ್ದೇಶನದ ಸೂಜಿದಾರ ಚಿತ್ರ ಈಗ ಸ್ಯಾಂಡಲ್​ವುಡ್​ನಲ್ಲಿ ನಿರೀಕ್ಷೆ ಮೂಡಿಸುತ್ತಿದೆ. ನಟಿ ಹರಿಪ್ರಿಯಾ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನೀರ್​ ದೋಸೆ ಚಿತ್ರದ ಬಳಿಕ ಬ್ಯುಸಿ ಆಗಿರುವ ಹರಿಪ್ರಿಯಾ ಕೈಯಲ್ಲಿ ಹಲವು ಪ್ರಾಜೆಕ್ಟ್​ಗಳಿವೆ. ದಿನಕರ್​ ತೂಗುದೀಪ್ ನಿರ್ದೇಶನದ ಹೊಸ ಚಿತ್ರದಲ್ಲೂ ಇವರು ಅಭಿನಯಿಸುತ್ತಿದ್ದಾರೆ. ಈ ನಡುವೆ ಸೂಜಿದಾರದ ಚಿತ್ರದ ಕೆಲಸವೂ ಪ್ರಗತಿಯಲ್ಲಿದೆ… ಕಥೆಗಾರ ಇಂದ್ರಕುಮಾರ್‌ ಅವರ ಸಣ್ಣಕಥೆಯೇ ಈ ಚಿತ್ರಕ್ಕೆ ಸ್ಫೂರ್ತಿ.

Read More »

ಒಂದಾದ ಕಿಚ್ಚ ಸುದೀಪ್​-ಪ್ರಿಯಾ ದಂಪತಿ : ವಿಚ್ಛೇದನ ಅರ್ಜಿ ವಾಪಸ್​​…

ಬೆಂಗಳೂರು : ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬಾಳಲ್ಲಿ ಹೊಸ ಭರವಸೆ ಮೂಡಿದೆ. ಪರಸ್ಪರ ದೂರವಾಗಿದ್ದ ಸುದೀಪ್​​ ಪ್ರಿಯಾ ದಂಪತಿ ಮತ್ತೆ ಒಂದಾಗಿದ್ದಾರೆ. ಕೌಟುಂಬಿಕ ನ್ಯಾಯಾಲಯಕ್ಕೆ ಸಲ್ಲಿಸಿದ್ದ ವಿಚ್ಛೇದನ ಅರ್ಜಿಯನ್ನು ವಾಪಸ್ ಪಡೆಯುವ ಮೂಲಕ ದಂಪತಿ ಮತ್ತೆ ಒಂದಾಗುತ್ತಿರುವುದು ಎಲ್ಲರಿಗೂ ಖುಷಿ ತಂದಿದೆ. 2001ರಲ್ಲಿ ವಿವಾಹವಾಗಿದ್ದ ಸುದೀಪ್ ಪ್ರಿಯಾ ದಂಪತಿ 2015ರ ಸೆಪ್ಟೆಂಬರ್‌ನಲ್ಲಿ ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನ ಕೋರಿ ಅರ್ಜಿ ಹಾಕಿದ್ದರು. ಈ ಮೂಲಕ 14 ವರ್ಷಗಳ ದಾಂಪತ್ಯ …

Read More »

ಸ್ಕಾಟ್​ಲ್ಯೆಂಡ್​​​​ನಿಂದ ಮರಳಿದ ಅಂಜನೀಪುತ್ರ ಟೀಂ : ಪುನೀತ್​ ಜೊತೆ ರಶ್ಮಿಕಾ ಭರ್ಜರಿ ಸ್ಟೆಪ್ಸ್​​

ಬೆಂಗಳೂರು : ಪವರ್​ಸ್ಟಾರ್ ಪುನೀತ್​ ರಾಜ್​ಕುಮಾರ್ ಈಗ ಅಂಜನೀಪುತ್ರ ಚಿತ್ರದ ಶೂಟಿಂಗ್​ನಲ್ಲಿ ಬ್ಯುಸಿ ಇದ್ದಾರೆ. ಅಂಜನೀಪುತ್ರದಲ್ಲಿ ರಕ್ಷಿತ್ ಶೆಟ್ಟಿ ಮನದನ್ನೆ ರಶ್ಮಿಕಾ ಮಂದಣ್ಣ ಅಪ್ಪುಗೆ ನಾಯಕಿಯಾಗಿದ್ದಾರೆ. ಈಗಾಗಲೇ ಸ್ಕಾಟ್​ಲೆಂಡ್​ನಲ್ಲಿ ಬೀಡು ಬಿಟ್ಟಿದ್ದ ತಂಡ ಈಗ ಮರಳಿದೆ. ಹಾಡುಗಳ ಚಿತ್ರೀಕರಣಕ್ಕಾಗಿ ಸಿನೆಮಾ ಟೀಂ ಸ್ಕಾಟ್​ಲೆಂಡ್​ಗೆ ತೆರಳಿತ್ತು. ಅಂಜನೀಪುತ್ರ ತಮಿಳಿನ ಪೂಜೈ ಚಿತ್ರದ ರಿಮೇಕ್​. ಆದರೆ, ಇಲ್ಲಿನ ನೇಟಿವಿಟಿಗೆ ತಕ್ಕಂತೆ ಚಿತ್ರದ ಕತೆಯನ್ನು ಬದಲಾವಣೆ ಮಾಡಲಾಗಿದೆಯಂತೆ. ಈ ಚಿತ್ರದಲ್ಲಿ ಬಹುಭಾಷಾ ನಟಿ ರಮ್ಯಾ …

Read More »

ರಸ್ತೆ ಅಪಘಾತ ಕಿರುತೆರೆ ನಟಿ ಸೇರಿ ಇಬ್ಬರ ದುರ್ಮರಣ

ಬೆಂಗಳೂರು : ಗೌರಿ ಗಣೇಶ ಹಬ್ಬದ ಸಂದರ್ಭದಲ್ಲೇ ಬೆಂಗಳೂರಿನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಕಿರುತೆರೆಯ ಖ್ಯಾತ ನಟಿ ರಚನಾ ಮತ್ತು ಸಹ ನಟ ಜೀವನ್ ದುರ್ಮರಣಕ್ಕೀಡಾಗಿದ್ದಾರೆ. ಬೆಂಗಳೂರು ಹೊರವಲಯದ ನೆಲಮಂಗಲ ಸಮೀಪ ಈ ದುರ್ಘಟನೆ ಸಂಭವಿಸಿದೆ. ಕುಕ್ಕೆ ಸುಬ್ರಹ್ಮಣ್ಯ ಸೇರಿ ಹಲವು ತೀರ್ಥಸ್ಥಳಗಳಿಗೆ ಭೇಟಿ ನೀಡಿ ಮರಳುವಾಗ ಈ ದುರ್ಘಟನೆ ಸಂಭವಿಸಿದೆ. ನಿಂತಿದ್ದ ಲಾರಿಗೆ ಇವರು ಪಯಾಣಿಸುತ್ತಿದ್ದ ಕಾರು ಡಿಕ್ಕಿಯಾಗಿದ್ದೇ ಅಪಘಾತಕ್ಕೆ ಕಾರಣ ಎಂದು ತಿಳಿದು ಬಂದಿದೆ. ರಚನಾ …

Read More »

ಕನ್ನಡದ ಕ್ವೀನ್‍ನ ಸಾಹಸ : ಬಾಲ್ಯದ ಕನಸು ನನಸು ಮಾಡಿದ ನಟಿ…

ಪ್ರತಿಯೊಬ್ಬರಿಗೂ ಬಾಲ್ಯದಲ್ಲಿ ಏನಾದರೂ ಒಂದು ಆಸೆ ಇದ್ದೇ ಇರುತ್ತದೆ. ಕೆಲವರಿಗೆ ವಿಮಾನದಲ್ಲಿ ಹಾರಬೇಕು, ಬಾಹ್ಯಾಕಾಶಕ್ಕೆ ಹೋಗಬೇಕೆಂಬ ಆಸೆ ಎಲ್ಲ ಇರಬಹುದು. ಆದರೆ, ಬೆಳೆದು ದೊಡ್ಡದಾದ ಮೇಲೆ ಈ ಆಸೆ ಈಡೇರುವುದಿಲ್ಲ. ಹೀಗಾಗಿ, ಈ ನೋವು ಮನಸ್ಸಿನ ಒಂದು ಮೂಲೆಯಲ್ಲಿ ಹಾಗೆಯೇ ಇರುತ್ತದೆ. ಅದ್ದರಿಂದ ಇಂತಹ ನಮ್ಮ ಆಸೆ ಈಡೇರಿಸಲು ಸರಿಯಾದ ಸಮಯಕ್ಕೆ ನಾವೆಲ್ಲಾ ಕಾಯುತ್ತಿರುತ್ತೇವೆ. ಅಂತಹ ಸಮಯ ಬಂದಾಗ ನಮ್ಮ ಸಂತೋಷಕ್ಕೆ ಪಾರವೇ ಇರುವುದಿಲ್ಲ. ಈಗ ಇಂತಹದ್ದೇ ಖುಷಿಯಲ್ಲಿ ಕನ್ನಡದ …

Read More »
error: Content is protected !!