Saturday , October 20 2018
ಕೇಳ್ರಪ್ಪೋ ಕೇಳಿ
Home / Sandalwood (page 2)

Sandalwood

ಇದು ಲೂಸಿಯಾ ನಿರ್ದೇಶಕ ಪವನ್ ಕುಮಾರ್…!

ಬೆಂಗಳೂರು : ಲೂಸಿಯಾ ಮತ್ತು ಯೂಟರ್ನ್​​ನಂತಹ ಸೂಪರ್ ಹಿಟ್​ ಚಿತ್ರಗಳನ್ನು ಕೊಟ್ಟಿರುವ ಪವನ್ ಕುಮಾರ್ ಈಗ ಏನು ಮಾಡುತ್ತಿದ್ದಾರೆ..? ಒಂದು ಮೊಟ್ಟೆಯ ಕತೆ ಚಿತ್ರದ ನಿರ್ಮಾಣ ಮಾಡಿ ಗೆದ್ದ ಬಳಿಕ ಪವನ್ ಕುಮಾರ್​ ಸದ್ಯ ಏನು ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಹಲವರಿಗೆ ಕಾಡಿದ್ದೂ ಇದೆ. ಆದರೆ, ಈ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಪವನ್ ಕುಮಾರ್​ ಅಳಿದುಳಿದವರು ಎಂಬ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಲಾಂಗ್ ಗ್ಯಾಪ್​​ನ ಬಳಿಕ ಪವನ್ ಬಣ್ಣ …

Read More »

ಪೊಲೀಸ್ ಗೆಟಪ್ ನಲ್ಲಿ ಯಶ್

ಬೆಂಗಳೂರು : ರಾಕಿಂಗ್ ಸ್ಟಾರ್ ಯಶ್​ ಖಾಕಿಯಲ್ಲಿ ಮಿಂಚಲಿದ್ದಾರೆ. ಸದ್ಯ ಪುನೀತ್ ರಾಜ್​ಕುಮಾರ್ ಅಭಿನಯದ ಅಂಜನೀಪುತ್ರ ಚಿತ್ರ ನಿರ್ದೇಶನ ಮಾಡುತ್ತಿರುವ ಹರ್ಷ ಅವರ ಮತ್ತೊಂದು ಪ್ರಾಜೆಕ್ಟ್​​ ಕೂಡಾ ಸಿದ್ಧವಾಗಿದ್ದು, ಈ ಪ್ರಾಜೆಕ್ಟ್​ನಲ್ಲಿ ಹರ್ಷ ಜೊತೆ ಯಶ್​ ಇರಲಿದ್ದಾರೆ. ಹರ್ಷ ಮತ್ತು ಯಶ್ ಕಾಂಬಿನೇಷನ್​ನ ಈ ಹೊಸ ಚಿತ್ರದ ಹೆಸರು ‘ರಾಣಾ’. ಸಿಂಹಾದ್ರಿ ಪ್ರೊಡಕ್ಷನ್​​​​​ ಬ್ಯಾನರ್​ನಲ್ಲಿ ರಮೇಶ್​ ಕಶ್ಯಪ್​​ ಈ ಚಿತ್ರ ನಿರ್ಮಾಣ ಮಾಡಲಿದ್ದಾರೆ. ಈ ಸಿನೆಮಾದಲ್ಲಿ ಯಶ್​​ ಪೊಲೀಸ್ ಅಧಿಕಾರಿಯ …

Read More »

ರಕ್ಷಿತ್ ಶೆಟ್ಟಿ ಚಿತ್ರದಲ್ಲಿ ನವೀನ್ ಪೌಲಿ…

ಬೆಂಗಳೂರು : ಮಲಯಾಳಂ ಸಿನೆಮಾ ಸ್ಟಾರ್​ ನವೀನ್ ಪೌಲಿ ಈಗ ಮಂಗಳೂರಿನಲ್ಲಿ ಶೂಟಿಂಗ್​​ನಲ್ಲಿ ಬ್ಯುಸಿ ಇದ್ದಾರೆ. ಸೆಪ್ಟೆಂಬರ್​ 25 ರಿಂದ ನವೀನ್​ ಕರಾವಳಿಯಲ್ಲಿ ಇದ್ದಾರೆ. ಇವರ ‘ಕಯಾಮ್ಕುಲಮ್​​​ ಕುಚುನಿ’ ಚಿತ್ರದ ಶೂಟಿಂಗ್ ಇಲ್ಲೇ ನಡೆಯುತ್ತಿದೆ. ದಕ್ಷಿಣ ಕನ್ನಡದ ಭಾಗದಲ್ಲೇ ಬಹುದಿನಗಳ ಕಾಲ ಈ ಚಿತ್ರದ ಶೂಟಿಂಗ್ ನಡೆಯುತ್ತಿದೆ. ನವೀನ್​​ಗೆ ಈ ಚಿತ್ರದಲ್ಲಿ ರಾಬಿನ್​ ಹುಡ್​ ಗೆಟಪ್​​. ಕೇರಳದ ಕಳ್ಳನೊಬ್ಬನ ಕತೆಯೇ ಇದು. ಈ ಚಿತ್ರದ ಶೂಟಿಂಗ್ ಮಂಜೇಶ್ವರ, ಉಡುಪಿ ಸೇರಿದಂತೆ …

Read More »

ದಿ ವಿಲನ್ ಟೀಂನಿಂದ ದಸರಾ ಪೂಜೆ

ಬೆಂಗಳೂರು : ದಸರಾ ಸಂಭ್ರಮ ಎಲ್ಲೆಲ್ಲೂ ಮೇರೆ ಮೀರಿದೆ. ಆಯುಧ ಪೂಜೆ ಮಾಡಿ ಎಲ್ಲರೂ ಸಂಭ್ರಮಿಸಿದ್ದಾರೆ. ಈ ಸಂಭ್ರಮ ದಿ ವಿಲನ್​ ಟೀಮ್​ನಲ್ಲೂ ಮನೆ ಮಾಡಿದೆ. ಚಿತ್ರತಂಡದ ಸದಸ್ಯರೆಲ್ಲಾ ಪೂಜೆ ಮಾಡಿ ಹಬ್ಬವನ್ನು ಆಚರಿಸಿದ್ದಾರೆ. ಕಿಚ್ಚ ಸುದೀಪ್, ನಟಿ ಆಮಿ ಜಾಕ್ಸನ್, ನಿರ್ದೇಶಕ ಪ್ರೇಮ್ ಸೇರಿದಂತೆ ಎಲ್ಲರೂ ಈ ಸಂದರ್ಭದಲ್ಲಿ ಹಾಜರಿದ್ದರು. ಈ ವೀಡಿಯೋವನ್ನು ಚಿತ್ರತಂಡ ಫೇಸ್​ಬುಕ್​ನಲ್ಲಿ ಹಂಚಿಕೊಂಡಿದೆ. ಅಲ್ಲದೆ, ಎಲ್ಲರಿಗೂ ದಸರಾ ಶುಭಾಶಯ ತಿಳಿಸಿದೆ.

Read More »

ದರ್ಶನ್ ಅಭಿಮಾನಿಗಳಿಗೆ ಡಬಲ್ ಖುಷಿ : ರಿಲೀಸ್ ಆಗಿದೆ ಕುರುಕ್ಷೇತ್ರ ಚಿತ್ರದ ಟೀಸರ್​

ಬೆಂಗಳೂರು : ಚಾಲೆಂಜಿಂಗ್ ಸ್ಟಾರ್ ದರ್ಶನ್​ ಅಭಿನಯದ ತಾರಕ್ ಚಿತ್ರ ಬಿಡುಗಡೆಯಾಗಿ ಭರ್ಜರಿ ಓಪನಿಂಗ್ ಕಂಡಿದೆ. ಈ ನಡುವೆ, ದರ್ಶನ್ ಅಭಿಮಾನಿಗಳಿಗೆ ಮತ್ತೊಂದು ಖುಷಿಯ ಸಿಕ್ಕಿದೆ. ಅದು ದರ್ಶನ್ ಅಭಿನಯದ 50ನೇ ಚಿತ್ರ ಕುರುಕ್ಷೇತ್ರದ ಹೊಸ ಟೀಸರ್​ ರಿಲೀಸ್ ಆಗಿದೆ. ಬಹುತಾರಾಗಣದ ಈ ಬಿಗ್​ ಬಜೆಟ್​ ಚಿತ್ರ ಈಗಾಗಲೇ ಸ್ಯಾಂಡಲ್​ವುಡ್​ನಲ್ಲಿ ಭರ್ಜರಿ ನಿರೀಕ್ಷೆ ಹುಟ್ಟಿಸಿದೆ. ಹೈದರಾಬಾದ್​ನ ರಾಮೋಜಿ ಫಿಲಂ ಸಿಟಿಯಲ್ಲಿ ಚಿತ್ರದ ಶೂಟಿಂಗ್ ಕೂಡಾ ಭರದಿಂದ ಸಾಗುತ್ತಿದೆ.

Read More »

ಭರ್ಜರಿ ಆಯ್ತು, ಈಗ ತಾರಕ್ ಸಿನೆಮಾಕ್ಕೂ ಪೈರಸಿ ಕಾಟ…!

ಬೆಂಗಳೂರು : ದರ್ಶನ್ ಅಭಿನಯದ ತಾರಕ್​ ಸಿನೆಮಾಕ್ಕೆ ಭರ್ಜರಿ ಓಪನಿಂಗ್​ ಸಿಕ್ಕಿದೆ. ದಚ್ಚು ಚಿತ್ರವನ್ನು ಅಭಿಮಾನಿಗಳು ಉತ್ಸಾಹದಿಂದಲೇ ಸ್ವಾಗತಿಸಿದ್ದಾರೆ. ಆದರೆ, ಪೈರಸಿ ಕಾಟ ಚಾಲೆಂಜಿಂಗ್ ಸ್ಟಾರ್ ಚಿತ್ರಕ್ಕೂ ಶುರುವಾಗಿದೆ. ಪೈರಸಿ ಎಂಬ ಭೂತ ಸಿನೆಮಾ ಲೋಕವನ್ನು ಬಿಟ್ಟೂ ಬಿಡದಂತೆ ಕಾಡುತ್ತಿದೆ. ನಿರ್ಮಾಪಕರು, ನಿರ್ದೇಶಕರು, ತಂತ್ರಜ್ಞರು ಶ್ರಮವಹಿಸಿ ಒಂದು ಚಿತ್ರವನ್ನು ಮಾಡುತ್ತಾರೆ. ಇವರೆಲ್ಲರ ಪಾಲಿಗೆ ಸಿನೆಮಾ ಎನ್ನುವುದು ಒಂದು ಮಗು. ಆದರೆ, ಪೈರಸಿ ಮೂಲಕ ಈ ಮಗುವಿನ ಕತ್ತು ಹಿಸುಕುತ್ತಿದ್ದಾರೆ ಕೆಲ …

Read More »

ದರ್ಶನ್ ತಾರಕ್ ರಿಲೀಸ್ : ಮೊದಲ ದಿನವೇ ಭರ್ಜರಿ ರೆಸ್ಪಾನ್ಸ್

ಬೆಂಗಳೂರು : ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ತಾರಕ್ ಚಿತ್ರ ರಾಜ್ಯಾದ್ಯಂತ ಬಿಡುಗಡೆ ಆಗಿದೆ. ಈ ಚಿತ್ರಕ್ಕೆ ಎಲ್ಲೆಲ್ಲೂ ಒಳ್ಳೆಯ ಓಪನಿಂಗ್ ಸಿಕ್ಕಿದೆ. ದರ್ಶನ್ ಅಭಿಮಾನಿಗಳು ತಾರಕ್ ಚಿತ್ರದಿಂದ ಮತ್ತಷ್ಟು ಖುಷಿಗೊಂಡಿದ್ದಾರೆ. Long weekend is here with #Tarak. FDFS- positive immediate responses-Thank you ❤ I'm a nervous ball and have all my fingers crossed 😜 pic.twitter.com/qhIxAlbojd — sruthihariharan (@sruthihariharan) …

Read More »

ವೃಥಾ ಆರೋಪಕ್ಕೆ ಪ್ರಜ್ವಲ್, ದಿಗಂತ್ ಕಿಡಿಕಿಡಿ…

ಬೆಂಗಳೂರು : ಮೊನ್ನೆ ಬೆಂಗಳೂರಿನ ಜಯನಗರದ ಸೌತ್ ಎಂಡ್ ಸರ್ಕಲ್ನಲ್ಲಿ ಉದ್ಯಮಿ ಆದಿಕೇಶವಲು ಮೊಮ್ಮಗ ವಿಷ್ಣು ಚಲಾಯಿಸುತ್ತಿದ್ದ ವಾಹನ ಅಪಘಾತಕ್ಕೀಡಾಗಿತ್ತು. ಈ ವೇಳೆ, ಸುಮಾರು 300 ಗ್ರಾಮ್​ನಷ್ಟು ಗಾಂಜಾ ಕೂಡಾ ಸಿಕ್ಕಿತ್ತು ಎಂದು ಪೊಲೀಸರು ತಿಳಿಸಿದ್ದರು. ಈ ನಡುವೆ, ಅಪಘಾತಕ್ಕೀಡಾಗಿದ್ದ ಈ ವಾಹನದಲ್ಲಿ ಸ್ಯಾಂಡಲ್ವುಡ್ ನಟರಾದ ಪ್ರಜ್ವಲ್ ದೇವರಾಜ್ ಮತ್ತು ದಿಗಂತ್ ಕೂಡಾ ಇದ್ದರು ಎಂದು ಸುದ್ದಿಯಾಗಿತ್ತು. ಆದರೆ, ಈ ಆರೋಪವನ್ನು ಇಬ್ಬರೂ ನಟರು ತಳ್ಳಿ ಹಾಕಿದ್ದಾರೆ. ಫೇಸ್​​ಬುಕ್​ನಲ್ಲಿ ಸ್ಪಷ್ಟನೆ ನೀಡಿದ …

Read More »

ಶ್ವಾನ ಮತ್ತು ಮನುಷ್ಯನ ಬಾಂಧವ್ಯದ ಕತೆಗೆ ರಕ್ಷಿತ್ ಶೆಟ್ಟಿ ಪ್ರೊಡ್ಯೂಸರ್​​

ಬೆಂಗಳೂರು : ರಕ್ಷಿತ್ ಶೆಟ್ಟಿ ಸ್ಯಾಂಡಲ್​ವುಡ್​ನ ಡಿಫ್ರೆಂಟ್​ ಕಲಾವಿದ. ಹೊಸ ಮಾದರಿಯ ಚಿತ್ರಗಳ ಮೂಲಕ ಹೆಸರಾದವರು ರಕ್ಷಿತ್​… ಉಳಿದವರು ಕಂಡಂತೆ ಎಂಬ ಡಿಫ್ರೆಂಟ್​ ರೀತಿಯ ಚಿತ್ರ ಮಾಡುವ ಮೂಲಕವೇ ರಕ್ಷಿತ್​ ಗಮನ ಸೆಳೆಯಲು ಆರಂಭಿಸಿದ್ದರು. ಉಳಿದವರು ಕಂಡಂತೆ ಚಿತ್ರದಲ್ಲಿ ನಿರೂಪಣಾ ಶೈಲಿಯೇ ವಿಭಿನ್ನ. ಕೊಂಚ ಹಾಲಿವುಡ್​​​ ಚಿತ್ರಗಳ ನೆರಳು ಈ ಚಿತ್ರದ ನಿರೂಪಣೆಯಲ್ಲಿತ್ತು… ಈ ಚಿತ್ರ ಕ್ಲಾಸ್ ಪ್ರೇಕ್ಷಕರಿಗೆ ತುಂಬಾ ಇಷ್ಟವಾಗಿತ್ತು… ಇದಾದ ಬಳಿಕ ಒಂದಷ್ಟು ಚಿತ್ರಗಳಲ್ಲಿ ಅಭಿನಯಿಸಿದ್ದ ರಕ್ಷಿತ್ …

Read More »

ಎಲ್ಲೆಲ್ಲೂ ತಾರಕ್ ಹವಾ : ಕ್ರೇಜ್​ ಸೃಷ್ಟಿಸಿದೆ ಮತ್ತೊಂದು ಹಾಡು

ಬೆಂಗಳೂರು : ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ತಾರಕ್ ಚಿತ್ರ ಬಿಡುಗಡೆಗೆ ಇನ್ನು ಕೆಲವೇ ಗಂಟೆಗಳು ಬಾಕಿ. ಶುಕ್ರವಾರ ರಾಜ್ಯದ ಎಲ್ಲಾ ಚಿತ್ರಮಂದಿರಗಳಲ್ಲಿ ತಾರಕ್ ದರ್ಶನವಾಗಲಿದೆ. ಅಭಿಮಾನಿಗಳ ಈ ಕಾತರಕ್ಕೆ ಸರಿಯಾಗಿ ಮತ್ತೊಂದು ಹಾಡು ರಿಲೀಸ್ ಆಗಿದ್ದು, ಅದು ಕೂಡಾ ಕ್ರೇಜ್​ ಸೃಷ್ಟಿಸಿದೆ.

Read More »
error: Content is protected !!