Monday , October 22 2018
ಕೇಳ್ರಪ್ಪೋ ಕೇಳಿ
Home / Sandalwood (page 20)

Sandalwood

ಪುನೀತ್ ಚಿತ್ರದಲ್ಲಿ ರಮ್ಯಾಕೃಷ್ಣ ಅಭಿನಯ

ಬೆಂಗಳೂರು: ಬಹುಭಾಷಾ ನಟಿ ರಮ್ಯಾಕೃಷ್ಣ ಮತ್ತೆ ಕನ್ನಡಕ್ಕೆ ಬರುತ್ತಿದ್ದಾರೆ. ಪುನೀತ್ ರಾಜ್‍ಕುಮಾರ್ ಅಭಿನಯದ ಮುಂದಿನ ಚಿತ್ರದಲ್ಲಿ ರಮ್ಯಾ ನಟಿಸಲಿದ್ದಾರೆ. ತಮಿಳಿನ ಪೂಜಾಯ್ ಚಿತ್ರ ಕನ್ನಡಕ್ಕೆ ರಿಮೇಕ್ ಆಗುತ್ತಿದೆ. ಹರ್ಷ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದ ನಾಯಕಿಯ ಆಯ್ಕೆ ಇನ್ನೂ ಆಗಿಲ್ಲ. ಆದರೆ, ಹನ್ಸಿಕಾ ಮೊಟ್ವಾನಿ ಹೆಸರು ರೇಸ್‍ನಲ್ಲಿ ಮುಂಚೂಣಿಯಲ್ಲಿದೆ.

Read More »

`ಫಸ್ಟ್ ರ್ಯಾಂಕ್ ರಾಜು’ ಚಿತ್ರದ ಮತ್ತೊಂದು ಚಿತ್ರ

ಬೆಂಗಳೂರು: ಸೂಪರ್‍ಹಿಟ್ `ಫಸ್ಟ್ ರ್ಯಾಂಕ್ ರಾಜು’ ಚಿತ್ರ ತಂಡ ಮತ್ತೊಂದು ಚಿತ್ರದೊಂದಿಗೆ ಇನ್ನೊಂದು ಸಲ ಬರುವುದಕ್ಕೆ ರೆಡಿಯಾಗಿದೆ. `ಫಸ್ಟ್ ರ್ಯಾಂಕ್ ರಾಜು’ ಚಿತ್ರದ ಮೂಲಕ ಮೊದಲ ಪ್ರಯತ್ನದಲ್ಲೇ ಗಮನ ಸೆಳೆದಿದ್ದ ನಿರ್ದೇಶಕ ನರೇಶ್ ಕುಮಾರ್ ಎರಡನೇ ಚಿತ್ರ `ರಾಜು ಕನ್ನಡ ಮೀಡಿಯಮ್’ ಚಿತ್ರದ ಮೂಲಕ ಮತ್ತೆ ಬರುತ್ತಿದ್ದಾರೆ. ನಟ ಗುರುನಂದನ್ ಕೂಡಾ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. `ರಂಗಿತರಂಗ’ ಖ್ಯಾತಿಯ ಅವಂತಿಕಾ ಶೆಟ್ಟಿ ಈ ಚಿತ್ರದ ನಾಯಕಿ ಆಗಿದ್ದಾರೆ. ಈ ಚಿತ್ರದ …

Read More »

ಭೂಗತ ದೊರೆ ಜಯರಾಜ್ ಪಾತ್ರದಲ್ಲಿ ಉಪ್ಪಿ

ಬೆಂಗಳೂರು : ರಿಯಲ್‍ಸ್ಟಾರ್ ಉಪೇಂದ್ರ ಭೂಗತ ದೊರೆ  ಜಯರಾಜ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. `ಮಮ್ಮಿ ಸೇವ್ ಮಿ’ ಎಂಬ ಯಶಸ್ವಿ ಚಿತ್ರ ನಿರ್ದೇಶಿಸಿದ್ದ ಲೋಹಿತ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಜನವರಿ 15ರ ನಂತರ ಅಧಿಕೃತ ಮಾಹಿತಿ ಹೊರಬೀಳಲಿದೆ ಎಂದು ಗೊತ್ತಾಗಿದೆ. ಈ ಚಿತ್ರದಲ್ಲಿ ಅಗ್ನಿಶ್ರೀಧರ್ ಕೂಡಾ ನಟಿಸುತ್ತಿದ್ದಾರೆ. ಜಯರಾಜ್ ಪಾತ್ರವನ್ನು ಉಪೇಂದ್ರ ನಿರ್ವಹಿಸಲಿದ್ದಾರೆ.

Read More »

`ಕರಿಗಂಬಳಿಯಲ್ಲಿ ಮಿಡಿನಾಗ’ ಹೊಸ ಕನ್ನಡ ಥ್ರಿಲ್ಲರ್ ಚಲನಚಿತ್ರ

ನಿರ್ದೇಶಕರು – ತೆಲುಗಿನಲ್ಲಿ ಐದು ಚಲನಚಿತ್ರಗಳನ್ನೂ, ಹಲವು ಧಾರಾವಾಹಿಗಳನ್ನೂ ನಿರ್ದೇಶಿರುವವರು. ಅವರ ಕೆಲವು ಚಿತ್ರಗಳಲ್ಲಿ ಮೆಗಾಸ್ಟಾರ್ ಚಿರಂಜೀವಿ ನಾಯಕನಾಗಿ ಅಭಿನಯಿಸಿದ್ದಾರೆ. ಬರವಣಿಗೆಯ ಕ್ಷೇತ್ರದಲ್ಲಿ ನಿರ್ದೇಶಕರು ಖ್ಯಾತನಾಮರು! ಅವರ ಹೆಸರನ್ನು ಕೇಳದ ತೆಲುಗು ಮತ್ತು ಕನ್ನಡದ ಓದುಗರು ಇಲ್ಲವೆಂದೇ ಹೇಳಬಹುದು. ತಮಿಳು ಮತ್ತು ಮಲಯಾಳಂ ಓದುಗರಿಗೂ ಕೂಡ ಇವರ ಹೆಸರು ತಿಳಿದಿದೆ! ಖ್ಯಾತ ಕಾದಂಬರಿಕಾರ, ವ್ಯಕ್ತಿತ್ವ ವಿಕಸನದ ಪುಸ್ತಕಗಳ ಲೇಖಕ, ಮೇಲಾಗಿ ವ್ಯಕ್ತಿತ್ವ ವಿಕಸನದ ತರಗತಿಗಳನ್ನು ಮಾಧ್ಯಮಿಕ ಶಾಲಾ ಮಕ್ಕಳಿಂದ ಉದ್ಯೋಗಿಗಳ …

Read More »

ನವೀನ್ ತೀರ್ಥಹಳ್ಳಿ – ಚಲನಚಿತ್ರ ಆಗಸದಲ್ಲಿನ ಹೊಸ ತಾರೆ

ತೀರ್ಥಹಳ್ಳಿ ತಾಲೂಕಿನ ಮೇಗರವಳ್ಳಿ ಎನ್ನುವ ಪುಟ್ಟ ಜಾಗದಲ್ಲಿನ ಸಾಮಾನ್ಯ ಕುಟುಂಬದ ಯುವಕ. ಚಿಕ್ಕಂದಿನಿಂದ ಸಿನಿಮಾ ನಟನಾಗುವ ಆಸೆ ಹೊತ್ತ ನವೀನ್ ತೀರ್ಥಹಳ್ಳಿ, ಜವಾಬ್ದಾರಿಯನ್ನು ಮರೆಯದೇ ಪದವಿಯನ್ನು ಪಡೆದು ಬೆಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗ ಮಾಡಿದರು. ಜೊತೆಜೊತೆಗೆ ಎಸ್. ಆರ್. ಫಿಲ್ಮ್ ಇನ್ಸ್‍ಟಿಟ್ಯೂಟ್‍ನಲ್ಲಿ ನಟನೆಯ ತರಬೇತಿ ಪಡೆದುಕೊಂಡು, ಹವ್ಯಾಸಿ ತಂಡಗಳ ನಾಟಕಗಳಲ್ಲಿ ಅಭಿನಯಿಸಿದ ನವೀನ್ ತೀರ್ಥಹಳ್ಳಿ, ತಮ್ಮ ಮುಂದಿನ ಹೆಜ್ಜೆಯಾಗಿ ಆರಿಸಿಕೊಂಡಿದ್ದು ಕಿರುತೆರೆ ಧಾರಾವಾಹಿಗಳನ್ನು. ಎಸ್. ನಾರಾಯಣ್ ಅವರ ‘ದುಷ್ಟ’ ಮತ್ತು …

Read More »

ಶೀಘ್ರ ತೆರೆಗೆ ರವಿಶಂಕರ್ ಪುತ್ರ

ಬೆಂಗಳೂರು : ಸ್ಯಾಂಡಲ್‍ವುಡ್‍ನ ಖಡಕ್ ವಿಲನ್ ರವಿಶಂಕರ್ ಪುತ್ರ ಚಿತ್ರರಂಗಕ್ಕೆ ಬರಲು ಸಿದ್ಧರಾಗಿದ್ದಾರೆ. ರವಿಶಂಕರ್ ಸದ್ಯ ಫುಲ್ ಬ್ಯುಸಿಯಾಗಿದ್ದಾರೆ. ಈ ಬ್ಯುಸಿ ನಡುವೆಯೂ ರವಿಶಂಕರ್ ಚಿತ್ರವೊಂದಕ್ಕೆ ಸ್ಕ್ರಿಪ್ಟ್ ಸಿದ್ಧ ಮಾಡುತ್ತಿದ್ದಾರೆ. ಈ ಚಿತ್ರ ಯಾರಿಗೆ ಗೊತ್ತಾ? ರವಿ ಪುತ್ರ ಅದ್ವಯ್ ಶಂಕರ್‍ಗಾಗಿ… ಸದ್ಯ ಇತಿಹಾಸ ವಿಷಯದಲ್ಲಿ ಬಿಎ ಪದವಿ ಮುಗಿಸಿರುವ ಅದ್ವಯ್ ನಟನಾ ಕ್ಷೇತ್ರಕ್ಕೆ ಬರಲು ತುದಿಗಾಲಲ್ಲಿ ನಿಂತಿದ್ದಾರೆ. ಇದಕ್ಕಾಗಿ ಹಲವು ವಿಧದ ತರಬೇತಿಯನ್ನೂ ಅದ್ವಯ್ ಪಡೆದಿದ್ದಾರೆ. ಸದ್ಯ ಅದ್ವಯ್ …

Read More »

ಶೀಘ್ರ 10 ಕೋಟಿ ಕ್ಲಬ್ ಸೇರಲಿದ್ಯಾ ಕಿರಿಕ್ ಪಾರ್ಟಿ

ಬೆಂಗಳೂರು : ರಕ್ಷಿತ್ ಶೆಟ್ಟಿ ಅಭಿನಯದ `ಕಿರಿಕ್ ಪಾರ್ಟಿ’ ಚಿತ್ರ ಗಳಿಕೆಯ ನಾಗಾಲೋಟದಲ್ಲಿ ಓಡುತ್ತಿದೆ. ರಾಜ್ಯಾದ್ಯಂತ ತುಂಬಿದ ಚಿತ್ರಮಂದಿರದೊಂದಿಗೆ ಈ ಚಿತ್ರ ಪ್ರದರ್ಶನವಾಗುತ್ತಿದೆ. ಹೀಗಾಗಿಯೇ, ಬಿಡುಗಡೆಯಾದ ಮೊದಲವಾರದಲ್ಲೇ ಕಿರಿಕ್ ಪಾರ್ಟಿ 10 ಕೋಟಿ ಕ್ಲಬ್ ಸೇರಲಿದೆ ಎಂಬ ನಿರೀಕ್ಷೆ ಹೆಚ್ಚಾಗಿದೆ. ಈ ಚಿತ್ರಕ್ಕೆ ಕತೆ ಬರೆದಿರುವ ರಕ್ಷಿತ್ ಶೆಟ್ಟಿ ಕನ್ನಡದ ಟಾಪ್ ಆಕ್ಟರ್‍ಗಳ ಪಟ್ಟಿಯಲ್ಲೂ ಸ್ಥಾನ ಪಡೆದಿದ್ದಾರೆ. ಈ ಚಿತ್ರ ಕೇವಲ 115 ಚಿತ್ರಮಂದಿರದಲ್ಲಿ ಬಿಡುಗಡೆ ಆಗಿದೆ. ಆದರೆ, ಚಿತ್ರದ …

Read More »

ಬಾಲಿವುಡ್‍ಗೆ ಹಾರಿದ ಕನ್ನಡದ ನಿರ್ದೇಶಕ

ಬೆಂಗಳೂರು : ಮಮ್ಮಿ ಚಿತ್ರದ ನಿರ್ದೇಶಕ ಲೋಹಿತ್ ಎಚ್ ಈಗ ಟಾಲಿವುಡ್ ಮತ್ತು ಬಾಲಿವುಡ್ ಮೇಲೆ ಕಣ್ಣಿಟ್ಟಿದ್ದಾರೆ. ತೆಲುಗಿನಲ್ಲೂ ರೆಡಿಯಾಗಿರುವ ಈ ಚಿತ್ರದ ಡಬ್ಬಿಂಗ್ ರೈಟ್ಸ್ ಹಿಂದಿಗೆ ಒಳ್ಳೆಯ ರೇಟ್‍ನಲ್ಲೇ ಮಾರಾಟವಾಗಿದೆ. ಒಂದು ಮೂಲಗಳ ಪ್ರಕಾರ ಸುಮಾರು 30 ಲಕ್ಷ ರೂಪಾಯಿಗೆ ಈ ಚಿತ್ರದ ಹಿಂದಿ ರೈಟ್ಸ್ ಸೇಲ್ ಆಗಿದೆ. ಆದರೆ, ಯಾವುದೇ ದೊಡ್ಡ ಸ್ಟಾರ್‍ಗಳಿಲ್ಲದ ಈ ಚಿತ್ರ ಹಿಂದಿಗೆ ಇಷ್ಟು ದೊಡ್ಡ ಮೊತ್ತದಲ್ಲಿ ಮಾರಾಟವಾಗಿದ್ದು ಒಳ್ಳೆಯ ಬೆಳವಣಿಗೆಯೇ ಆಗಿದೆ. …

Read More »

ರಜನಿಕಾಂತ್ ಗಿರಿಕನ್ಯೆ ಚಿತ್ರದ ವಿಲನ್ ಆಗಬೇಕಿತ್ತು!

ಲೇಖನ : ವಿನಾಯಕರಾಮ್ ಕಲಗಾರು ರಜನಿ ಇಂದು ಇಡೀ ವಿಶ್ವವನ್ನೇ ವ್ಯಾಪಿಸಿದ್ದಾರೆ. ಸೂಪರ್ ಸ್ಟಾರ್ ಸಿನಿಮಾ ರಿಲೀಸ್ ಆಗುತ್ತಿದೆ ಎಂದರೆ ಇಡೀ ಜಗತ್ತು ಒಮ್ಮೆ ಜಗ್ಗಿ ಜಿಗಿಯುತ್ತದೆ. ಅಂಥ ರಜನಿಕಾಂತ್ ಒಂದು ಕಾಲದಲ್ಲಿ ಕನ್ನಡದ ಸಾಮಾನ್ಯ ನಟರಲ್ಲಿ ಸಾಮಾನ್ಯರಾಗಿದ್ದರು. ಬಸ್ ಕಂಡಕ್ಟರ್ ಆಗಿದ್ದುಕೊಂಡು ಅದೆಷ್ಟೋ ನಿರ್ಮಾಪಕರ-ನಿರ್ದೇಶಕರ ಮುಂದೆ ಹಲ್ಲುಗಿಂಜಿದ್ದರು. ಕೆಲಸಕ್ಕೆ ಕೈ ಕಟ್ಟಿ ನಿಂತಿದ್ದರು… ಅಂಥ ರಜನಿ ಕುರಿತು, ಅವರು ಬೆಳೆದುಬಂದ ಹಾದಿಯ ಕುರಿತು ಉತ್ಖನನ ಮಾಡುತ್ತಾ ಹೋದಂತೇ ಒಂದಷ್ಟು …

Read More »

ಅಮೇರಿಕಾದ ಹವಾಯಿ ದ್ವೀಪದಲ್ಲಿ ಯಶ್ – ರಾಧಿಕಾ ನ್ಯೂಇಯರ್

ಬೆಂಗಳೂರು : ಇತ್ತೀಚೆಗಷ್ಟೇ ದಾಂಪತ್ಯಕ್ಕೆ ಕಾಲಿಟ್ಟ ರಾಕಿಂಗ್ ಜೋಡಿ ಯಶ್ ರಾಧಿಕಾ ವಿದೇಶದಲ್ಲಿ ಹೊಸವರ್ಷವನ್ನು ಆಚರಿಸಿದ್ದಾರೆ. ಹನಿಮೂನ್‍ಗೆಂದು ಅಮೇರಿಕಾಕ್ಕೆ ಹೋದ ಈ ಜೋಡಿ ಅಲ್ಲೇ ಹೊಸವರ್ಷವನ್ನು ಆಚರಿಸಿಕೊಂಡಿದೆ. ಇಲ್ಲೇ ಹೊಸ ವರ್ಷವನ್ನು ಆಚರಿಸಿಕೊಂಡ ಈ ಜೋಡಿ ಆ ಫೋಟೋವನ್ನು ಸಾಮಾಜಿಕ ಜಾಲತಾಣಕ್ಕೆ ಹಾಕಿ, ಅಭಿಮಾನಿಗಳಿಗೂ ಶುಭ ಹಾರೈಸಿದ್ದಾರೆ.

Read More »
error: Content is protected !!