Monday , October 22 2018
ಕೇಳ್ರಪ್ಪೋ ಕೇಳಿ
Home / Sandalwood (page 30)

Sandalwood

ಕಿಚ್ಚ ಸುದೀಪ್‍ಗೆ ಶಿವಣ್ಣನ ಶುಭಾಶಯ : ಗೆಳೆಯನಿಗೆ ಮೊದಲು ವಿಶ್ ಮಾಡಿದ ಹ್ಯಾಟ್ರಿಕ್ ಹೀರೋ : ಇಲ್ಲಿದೆ ವೀಡಿಯೋ

ಬೆಂಗಳೂರು : ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಾಳೆ 43ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ, ಈ ವರ್ಷ ಕಿಚ್ಚನಿಗೆ ಮೊದಲಿಗರಾಗಿ ಶಿವರಾಜ್‍ಕುಮಾರ್ ಶುಭಹಾರೈಸಿದ್ದಾರೆ. ಸುದೀಪ್ ಇನ್ನೂ ಎಲ್ಲಾ ಚಿತ್ರರಂಗದಲ್ಲೂ ಇದೇ ರೀತಿ ಖ್ಯಾತಿ ಗಳಿಸಲಿ ಎಂದು ಶಿವಣ್ಣ ಹಾರೈಸಿದ್ದಾರೆ. ಕಿಚ್ಚ ಸುದೀಪ್ ಈಗಾಗಲೇ ಕನ್ನಡದಲ್ಲಿ ಮಾತ್ರವಲ್ಲದೆ ತೆಲುಗು, ತಮಿಳು ಮತ್ತು ಹಿಂದಿ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಅದೇ ರೀತಿ ರಾಷ್ಟ್ರಿಯ ಮತ್ತು ಅಂತರಾಷ್ಟ್ರಿಯ ಮಟ್ಟದಲ್ಲಿ ಕೂಡಾ ಕಿಚ್ಚನ …

Read More »

ಸೆಪ್ಟೆಂಬರ್ 2ಕ್ಕೆ 8 ಕನ್ನಡ ಚಿತ್ರಗಳ ಬಿಡುಗಡೆ

ಬೆಂಗಳೂರು : ಸೆಪ್ಟೆಂಬರ್ 2 ರಂದು ಸ್ಯಾಂಡಲ್‍ವುಡ್‍ನಲ್ಲಿ ಚಿತ್ರ ರಿಲೀಸ್‍ಗಳ ಸುಗ್ಗಿ. ಈ ಒಂದೇ ದಿನ 8 ಕನ್ನಡ ಚಿತ್ರಗಳು ಬಿಡುಗಡೆಯಾಗುತ್ತಿವೆ. ಈ ವರ್ಷ ಏಳು ಚಿತ್ರಗಳು ಒಂದೇ ದಿನ ಬಿಡುಗಡೆಯಾದ ದಾಖಲೆ ಇದೆ. ಇದು ಈ ದಾಖಲೆಯನ್ನು ಮುರಿಯಲಿದೆ. ನವರಸ ನಾಯಕ ಜಗ್ಗೇಶ್ ಅಭಿನಯದ ಬಹುನಿರೀಕ್ಷಿತ `ನೀರುದೋಸೆ’ ಚಿತ್ರ ಸೇರಿದಂತೆ ಎಂಟು ಚಿತ್ರಗಳು ಇವತ್ತು ತೆರೆಗೆ ಬರುತ್ತಿದೆ… ಈ ವಾರ ಬಿಡುಗಡೆಯಾಗುವ ಚಿತ್ರಗಳ ಪಟ್ಟಿ ಇಂತಿವೆ. ನೀರುದೋಸೆ ಕೆಂಪಮ್ಮನ …

Read More »

ದೇವರಾಜ್ ಎರಡನೇ ಪುತ್ರ ಚಿತ್ರರಂಗಕ್ಕೆ ಎಂಟ್ರಿ

ಬೆಂಗಳೂರು : ಡೈನಾಮಿಕ್ ಅವರ ಎರಡನೇ ಪುತ್ರ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾರೆ. ದೇವರಾಜ್‍ರವರ ಎರಡನೇ ಪುತ್ರ ಪ್ರಣಮ್ ಅವರ ಚಿತ್ರ ಇವತ್ತು ಲಾಂಚ್ ಆಗಿದೆ… ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಈ ಚಿತ್ರದ ಮುಹೂರ್ತ ನಡೆಯಿತು. ನಟ ಶಿವರಾಜ್‍ಕುಮಾರ್ ಚಿತ್ರಕ್ಕೆ ಕ್ಲಾಪ್ ಮಾಡಿ ಶುಭ ಕೋರಿದರು. ಕಾರ್ಯಕ್ರಮದಲ್ಲಿ ತೆಲುಗಿನ ಕಥೆಗಾರ ವಿಜಯೇಂದ್ರ ಪ್ರಸಾದ್, ನಿರ್ದೇಶಕ ಸುಕುಮಾರ್ ಮುಖ್ಯ ಅಥಿತಿಗಳಾಗಿದ್ರು. ಇದು ಕುಮಾರಿ 21 ಎಫ್ ಎಂಬ ತೆಲುಗು ಸಿನಿಮಾದ ರಿಮೇಕ್ ಆಗಿದೆ…

Read More »

ಬಣ್ಣದ ಲೋಕಕ್ಕೆ ದೇವರಾಜ್ ಎರಡನೇ ಪುತ್ರ ಪ್ರಣಮ್

ಬೆಂಗಳೂರು : ಡೈನಾಮಿಕ್ ಹೀರೋ ದೇವರಾಜ್ ಅವರ ಎರಡನೇ ಪುತ್ರ ಪ್ರಣಮ್ ಬಣ್ಣದ ಲೋಕಕ್ಕೆ ಕಾಲಿಡುತ್ತಿದ್ದಾರೆ. ಪ್ರಜ್ವಲ್ ಬಳಿಕ ಪ್ರಣಮ್ ನಟನಾ ಲೋಕಕ್ಕೆ ಬರುತ್ತಿದ್ದಾರೆ. ಇನ್ನೂ ಹೆಸರಿಡದ ಚಿತ್ರಕ್ಕೆ ಪ್ರಣಮ್ ನಾಯಕನಾಗಲಿದ್ದಾರೆ… ಕಂಠೀರವ ಸ್ಟುಡಿಯೋದಲ್ಲಿ 28ಕ್ಕೆ ಅಂದರೆ ಭಾನುವಾರ ಈ ಚಿತ್ರ ಲಾಂಚ್ ಆಗಲಿದೆ. ಈ ಚಿತ್ರವನ್ನು ಶ್ರೀಮನ್ ವೇಮುಲಾ ನಿರ್ದೇಶನ ಮಾಡುತ್ತಿದ್ದಾರೆ. ಸಂಪತ್ ಕುಮಾರ್ ಹಾಗೂ ಶ್ರೀಧರ್ ಈ ಚಿತ್ರ ನಿರ್ಮಾಣ ಮಾಡಲಿದ್ದಾರೆ. ನಿಧಿ ಕುಶಾಲಪ್ಪ ಪ್ರಣಮ್‍ಗೆ ನಾಯಕಿಯಾಗಲಿದ್ದಾರೆ…

Read More »

ಫಸ್ಟ್ ರ್ಯಾಂಕ್ ರಾಜು ಗುರುನಂದನ್ ಹುಬ್ಬಳ್ಳಿಯಲ್ಲಿ ಮಿಸ್ಸಿಂಗ್…!

ಹುಬ್ಬಳ್ಳಿ : ಅವಳಿ ನಗರಗಳಾದ ಹುಬ್ಬಳ್ಳಿ ಧಾರವಾಡ ಸ್ಯಾಂಡಲ್‍ವುಡ್ ಮಂದಿಗೆ ಹೆಚ್ಚು ಪ್ರಿಯ… ಅನೇಕ ಚಿತ್ರಗಳು ಇಲ್ಲಿ ಶೂಟಿಂಗ್ ಆಗಿವೆ… ಈಗ ಮಿಸ್ಸಿಂಗ್ ಬಾಯ್ ಚಿತ್ರದ ಶೂಟಿಂಗ್ ಇಲ್ಲಿ ನಡೆಯುತ್ತಿದೆ. ಫಸ್ಟ್ ರ್ಯಾಂಕ್ ರಾಝು ಖ್ಯಾತಿಯ ಗುರುನಂದನ್ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಎರಡು ವರ್ಷಗಳ ಹಿಂದೆ ನಡೆದ ಸತ್ಯ ಘಟನೆ ಆಧರಿಸಿ ಈ ಚಿತ್ರ ಸಿದ್ಧವಾಗುತ್ತಿದೆ… ಇನ್ನು, ರಂಗಾಯಣ ರಘು ಮತ್ತು ರವಿಶಂಕರ್ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Read More »

`ದೊಡ್ಮನೆ ಹುಡುಗ’ ಚಿತ್ರದ ಟೀಸರ್ ರಿಲೀಸ್

ಬೆಂಗಳೂರು : ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ `ದೊಡ್ಮನೆ ಹುಡುಗ’ ಸಿನಿಮಾ ಟ್ರೇಲರ್ ರಿಲೀಸ್ ಆಗಿದೆ. ಪಾರ್ವತಮ್ಮ ರಾಜ್‍ಕುಮಾರ್ ಈ ಟ್ರೇಲರ್ ರಿಲೀಸ್ ಮಾಡಿದ್ದಾರೆ. ದುನಿಯಾ ಸೂರಿ ನಿರ್ದೇಶನದ ಈ ಚಿತ್ರದಲ್ಲಿ ರಾಧಿಕಾ ಪಂಡಿತ್ ಪುನಿತ್‍ಗೆ ನಾಯಕಿಯಾಗಿದ್ದಾರೆ.

Read More »

ಮಂಗಳೂರು ಎಂದರೆ ನನಗಿಷ್ಟ, ಮಂಗಳೂರಿಗರೆಂದರೆ ನನಗಿಷ್ಟ : ಪ್ರತಿಭಟನೆಯ ಸ್ವಾಗತ ಬಳಿಕ ರಮ್ಯಾ ಮಾತು

ಮಂಗಳೂರು : ಪಾಕಿಸ್ತಾನವನ್ನು ಹೊಗಳಿ ವಿವಾದಕ್ಕೆ ಗುರಿಯಾಗಿರುವ ಚಿತ್ರನಟಿ ಮತ್ತು ಮಾಜಿ ಸಂಸದೆ ರಮ್ಯಾಗೆ ಮಂಗಳೂರಿನಲ್ಲಿ ಇವತ್ತು ಪ್ರತಿಭಟನೆಯ ಸ್ವಾಗತ ಸಿಕ್ಕಿತ್ತು. ಪಾಕಿಸ್ತಾನದ ಪರ ಹೇಳಿಕೆ ನೀಡಿದ ಸಂದರ್ಭದಲ್ಲಿ ರಮ್ಯಾ ಮಂಗಳೂರನ್ನು ನರಕ ಎಂದು ಹೇಳಿದ್ದರು ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಇದು ಕರಾವಳಿಗರ ಸಿಟ್ಟನ್ನು ನೆತ್ತಗೇರುವಂತೆ ಮಾಡಿತ್ತು. ಹೀಗಾಗಿ, ಇವತ್ತು ಕದ್ರಿಯಲ್ಲಿ ನಡೆಯುವ ಮೊಸರು ಕುಡಿಕೆ ಸಮಾರಂಭಕ್ಕೆ ಆಗಮಿಸಿದ್ದ ರಮ್ಯಾಗೆ ಪ್ರತಿಭಟನೆಯ ಸ್ವಾಗತ ಸಿಕ್ಕಿತ್ತು. ಬಜ್ಪೆ ವಿಮಾನ ನಿಲ್ದಾಣದಲ್ಲಿ ರಮ್ಯಾಗೆ …

Read More »

ಯು ಟರ್ನ್ ಬೆಡಗಿಗೆ ತಮಿಳಿನಲ್ಲಿ ಅವಕಾಶಗಳ ಸುರಿಮಳೆ

ಬೆಂಗಳೂರು : ಯು ಟರ್ನ್ ಚಿತ್ರ ರಿಲೀಸ್ ಆದ ಬಳಿಕ ನಟಿ ಶೃದ್ಧಾ ಶ್ರೀನಾಥ್‍ಗೆ ಕಾಲಿವುಡ್‍ನಲ್ಲಿ ಅವಕಾಶಗಳ ಸುರಿಮಳೆಯೇ ಬರುತ್ತಿದೆ. ನಟ ನವೀನ್ ಅಭಿನಯದ ಚಿತ್ರದ ಮೂಲಕ ಶೃದ್ಧಾ ತಮಿಳುಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಇದರ ಬೆನ್ನಲ್ಲೇ ಗೌತಮ್ ಕಾರ್ತಿಕ್ ಅವರ ಮುಂದಿನ ಚಿತ್ರದಲ್ಲೂ ಶೃದ್ಧಾ ನಟಿಸಲಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಶೃದ್ಧಾ ಈ ಪ್ರಾಜೆಕ್ಟ್‍ಗೆ ಇನ್ನೂ ಸಹಿ ಹಾಕಿಲ್ಲ. ಆದರೂ ಬಹುತೇಕ ಮಾತುಕತೆ ಅಂತಿಮ ಹಂತ ತಲುಪಿದೆ. ಜೊತೆಗೆ, ಇನ್ನೋರ್ವ ನಿರ್ದೇಶಕ …

Read More »
error: Content is protected !!