ಬೆಂಗಳೂರು : ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ತಾರಕ್ ಚಿತ್ರದ ಟ್ರೈಲರ್ ಸಿದ್ಧವಾಗಿದೆ. ಸೆಪ್ಟೆಂಬರ್ 21ಕ್ಕೆ ಅಂದರೆ ನಾಳೆ ಈ ಟ್ರೈಲರ್ ರಿಲೀಸ್ ಆಗಲಿದೆ. ಈಗಾಗಲೇ ಟೀಸರ್ ನೋಡಿ ಖುಷಿ ಪಟ್ಟಿದ್ದ ಅಭಿಮಾನಿಗಳು ಟ್ರೈಲರ್ಗಾಗಿ ಕಾತರದಿಂದ ಕಾಯಲು ಆರಂಭಿಸಿದ್ದಾರೆ.
Read More »ಸಂಚಾರಿ ನಿಯಮ ಉಲ್ಲಂಘನೆ : ನಟ ಜಗ್ಗೇಶ್ ಪುತ್ರ ಯತಿರಾಜ್ಗೆ ದಂಡ
ಮಡಿಕೇರಿ : ಸಂಚಾರಿ ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ನಟ ಜಗ್ಗೇಶ್ ಕಿರಿಯ ಪುತ್ರ ಯತಿರಾಜ್ಗೆ ಪೊಲೀಸರು ದಂಡ ವಿಧಿಸಿರುವ ಘಟನೆ ಮಡಿಕೇರಿಯಲ್ಲಿ ನಡೆದಿದೆ. ಮಡಿಕೇರಿಗೆ ತೆರಳುತ್ತಿದ್ದ ಯತಿರಾಜ್ ವನ್ವೇ ನಲ್ಲಿ ವಿರುದ್ಧ ದಿಕ್ಕಿನಲ್ಲಿ ಕಾರು ಚಲಾಯಿಸಿದ ಹಿನ್ನೆಲೆಯಲ್ಲಿ ದಂಡ ವಿಧಿಸಲಾಗಿದೆ. ಪೊಲೀಸರು ಯತಿರಾಜ್ಗೆ 500 ರೂಪಾಯಿ ದಂಡ ವಿಧಿಸಿದ್ದಾರೆ. ಇನ್ನು, ಯತಿರಾಜ್ ದಂಡ ಕಟ್ಟಲು ಕಾರಿನಿಂದ ಇಳಿಯುತ್ತಿದ್ದಂತೆಯೇ ಗುರುತು ಹಿಡಿದ ಸ್ಥಳೀಯರು ಜಗ್ಗೇಶ್ ಪುತ್ರನನ್ನು ನೋಡಲು ಜಮಾಯಿಸಿದ್ದರು.
Read More »ಶ್…! ಹೆದರಲು ರೆಡಿ ಆಗಿ…!
ಬೆಂಗಳೂರು : ಶ್…! ಈ ಹೆಸರು ಕೇಳಿದರೆ ಸಾಕು ಒಮ್ಮೆ ಆ ದಿನ ಥಿಯೇಟರ್ನಲ್ಲಿ ಭಯಗೊಂಡದ್ದು ನಿಮಗೆ ನೆನಪಾಗಬಹುದು. ಕನ್ನಡದ ದಿ ಬೆಸ್ಟ್ ಹಾರರ್ ಫಿಲಂ ಇದು. ರಿಯಲ್ಸ್ಟಾರ್ ಉಪೇಂದ್ರ ನಿರ್ದೇಶನದ ಶ್ ಚಿತ್ರವನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಇದೀಗ ಈ ಚಿತ್ರ ಮತ್ತೆ ತೆರೆಗೆ ಬರುತ್ತಿದೆ. ಚಿತ್ರದ ನಿರ್ಮಾಪಕ ಮತ್ತು ನಾಯಕ ಕುಮಾರ್ ಗೋವಿಂದ್ ಈ ನಿರ್ಧಾರಕ್ಕೆ ಬಂದಿದ್ದಾರೆ. ಆದರೆ, ಬಿಡುಗಡೆ ದಿನಾಂಕ ಇನ್ನೂ ಹೊರಬಿದ್ದಿದೆ. ಹೊಸ ತಂತ್ರಜ್ಞಾನ …
Read More »ಹೊಸ ಬೈಕ್ನಲ್ಲಿ ಅಮ್ಮನೊಂದಿಗೆ ಮನೋರಂಜನ್ ರೈಡ್
ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ಈಗ ಸಖತ್ ಖುಷಿಯಲ್ಲಿದ್ದಾರೆ. ಬೈಕ್ ಖರೀದಿಸಿರುವ ಮನೋರಂಜನ್ ತಾಯಿಯೊಂದಿಗೆ ಬೆಂಗಳೂರಿನ ರಾಜಾಜಿನಗರದಲ್ಲಿ ಒಂದು ರೌಂಡ್ಸ್ ಬಂದಿದ್ದಾರೆ. ಬ್ರ್ಯಾಂಡ್ ನ್ಯೂ ಅವೆಂಜರ್ ಬೈಕ್ ಇದು. ಪೂಜೆಯ ಬಳಿಕ ತಾಯಿಯೊಂದಿಗೆ ಬೈಕ್ನಲ್ಲಿ ಮನೋರಂಜನ್ ರೌಂಡ್ಸ್ ಬಂದಿದ್ದಾರೆ.
Read More »ಒಂದೇ ಫ್ರೇಮ್ನಲ್ಲಿ ಟಾಲಿವುಡ್, ಸ್ಯಾಂಡಲ್ವುಡ್ ಸ್ಟಾರ್ಗಳು : ಸುಂದರ ಸ್ನೇಹಕ್ಕೆ ಸಾಕ್ಷಿ ಈ ಫೋಟೋ
ಬೆಂಗಳೂರು : ಹಿರಿಯ ನಟಿ ಸುಮಲತಾ ಅಂಬರೀಷ್ ಹಳೇ ಫೋಟೋವೊಂದನ್ನು ಟ್ವಿಟರ್ನಲ್ಲಿ ಹಾಕಿಕೊಂಡಿದ್ದಾರೆ. ಸುಂದರ ನೆನಪುಗಳುಳ್ಳ ಅಪರೂಪದ ಫೋಟೋಗಳು ಇವು. ಸುಮಲತಾ ಅವರ ಹುಟ್ಟುಹಬ್ಬದ ಆಚರಣೆ ಸಂದರ್ಭದಲ್ಲಿ ಸ್ಟಾರ್ಗಳೆಲ್ಲಾ ಒಟ್ಟಾಗಿದ್ದ ಫೋಟೋ ಇದು. ಅಪೂರ್ವ ಮತ್ತು ಅಷ್ಟೇ ಅಮೂಲ್ಯ ಫೋಟೋ ಇದು… A legendary line-up ! #bhartiji #vishnuvardhan #jayasudha #chiranjeevi #Balakrishna #ambareesh..at my bday a long long time ago pic.twitter.com/64tp4381fn — sumalatha …
Read More »‘ಉಪೇಂದ್ರ ಮತ್ತೆ ಬಾ… ಇಂತಿ ನಿನ್ನ ಪ್ರೇಮಾ’ ಚಿತ್ರದ ಟ್ರೇಲರ್ ರಿಲೀಸ್
ಬೆಂಗಳೂರು : ರಿಯಲ್ ಸ್ಟಾರ್ ಉಪೇಂದ್ರ ಮತ್ತು ನಟಿ ಪ್ರೇಮಾ ಅಭಿನಯದ ‘ಉಪೇಂದ್ರ ಮತ್ತೆ ಬಾ… ಇಂತಿ ನಿನ್ನ ಪ್ರೇಮಾ’ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಉಪ್ಪಿ ಹುಟ್ಟುಹಬ್ಬ ಸಂದರ್ಭದಲ್ಲಿ ಈ ಟ್ರೇಲರ್ ಅನ್ನು ಬಿಡುಗಡೆ ಮಾಡಲಾಗಿದೆ. ಇದು ಫಾಮಿಲಿ ಓರಿಯೆಂಟೆಡ್ ಸಿನೆಮಾ. ಎರಡು ಗೆಟಪ್ನಲ್ಲಿ ಉಪ್ಪಿ ಇಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ 19 ವರ್ಷದ ಬಳಿಕ ಪ್ರೇಮಾ ಮತ್ತು ಉಪೇಂದ್ರ ಜೊತೆಯಾಗಿದ್ದಾರೆ.
Read More »ಸಂಗೊಳ್ಳಿ ರಾಯಣ್ಣ ಚಿತ್ರ ನಿರ್ಮಾಪಕ ಆನಂದ್ ಅಪ್ಪುಗೊಳ್ ಬಂಧನ
ಬೆಳಗಾವಿ : ಸ್ಯಾಂಡಲ್ವುಡ್ ಸೂಪರ್ಹಿಟ್ ಸಂಗೊಳ್ಳಿ ರಾಯಣ್ಣ ಚಿತ್ರದ ನಿರ್ಮಾಪಕ ಆನಂದ್ ಅಪ್ಪಿಗೊಳ್ ಬಂಧನಕ್ಕೊಳಗಾಗಿದ್ದಾರೆ. ಕೋ ಆಪರೇಟಿವ್ ಸೊಸೈಟಿಯಿಂದ ಗ್ರಾಹಕರಿಗೆ ವಂಚನೆ ಆರೋಪ ಮೇಲೆ ಆನಂದ್ ಅವರನ್ನು ಬಂಧಿಸಲಾಗಿದೆ. ಸುಮಾರು ೩೦೦ ಕೋಟಿಗೂ ಹೆಚ್ಚು ಹಣ ವಂಚನೆ ಮಾಡಿದ ಆರೋಪ ಇವರ ಮೇಲಿತ್ತು. ಬ್ಯಾಂಕ್ನ ಗ್ರಾಹಕರು ಕಳೆದ ತಿಂಗಳಿಂದ ತಮ್ಮ ಹಣಕ್ಕಾಗಿ ಪರದಾಡುತ್ತಿದ್ದರು. ಅಲ್ಲದೆ, ಅಪ್ಪುಗೊಳ್ ವಿರುದ್ಧ ದೂರು ನೀಡಿದ್ದರು. ಇದಾದ ಬಳಿಕ ಆನಂದ್ ಅವರು ತಲೆ ಮರೆಸಿಕೊಂಡಿದ್ದರು. ಹೀಗಾಗಿ, ಆನಂದ್ ಅವರಿಗಾಗಿ …
Read More »ಅರೇಂಜ್ ಚಿತ್ರಕ್ಕಾಗಿ ದೇಹ ದಂಡಿಸುತ್ತಿದ್ದಾರೆ ಗಣೇಶ್
ಬೆಂಗಳೂರು : ಮುಗುಳುನಗೆ ಸಕ್ಸಸ್ನಲ್ಲಿ ತೇಲುತ್ತಿರುವ ಗೋಲ್ಡನ್ ಸ್ಟಾರ್ ಗಣೇಶ್ ತಮ್ಮ ಮುಂದಿನ ಅರೇಂಜ್ ಚಿತ್ರಕ್ಕಾಗಿ ಭರ್ಜರಿ ಕಸರತ್ತು ಮಾಡುತ್ತಿದ್ದಾರೆ. ಅರೇಂಜ್ ಪ್ರಶಾಂತ್ರಾಜ್ ನಿರ್ದೇಶನದ ಚಿತ್ರ. ಈ ಚಿತ್ರಕ್ಕೆ ಇನ್ನಷ್ಟು ಫಿಟ್ ಆಗಲು ಗಣಿ ಸಖತ್ ಬೆವರಿಳಿಸುತ್ತಿದ್ದಾರೆ. ಮನೆಯ ಬಳಿಯೇ ಭಾರೀ ವಾಹನ ಟೈರ್ಗಳನ್ನು ಹೊತ್ತು ಗಣೇಶ್ ವರ್ಕೌಟ್ ಮಾಡುತ್ತಿದ್ದಾರೆ. ಈ ವೀಡಿಯೋವನ್ನು ಗಣೇಶ್ ತನ್ನ ಫೇಸ್ಬುಕ್ನಲ್ಲಿ ಹಾಕಿಕೊಂಡಿದ್ದಾರೆ.
Read More »ಭರ್ಜರಿಯಾಗಿದೆ ಧ್ರುವ ಚಿತ್ರದ ಕಲೆಕ್ಷನ್
ಬೆಂಗಳೂರು : ಸಾಕಷ್ಟು ನಿರೀಕ್ಷೆ ಮೂಡಿಸಿ ಬಿಡುಗಡೆಯಾಗಿದ್ದ ಧ್ರುವ ಸರ್ಜಾ ಅಭಿನಯದ ಭರ್ಜರಿ ಚಿತ್ರ ಗಳಿಕೆಯಲ್ಲೂ ಸಖತ್ ಸೌಂಡ್ ಮಾಡುತ್ತಿದೆ. ಇದೇ ತಿಂಗಳ 15 ರಂದು ರಿಲೀಸ್ ಆದ ಭರ್ಜರಿ ಚಿತ್ರಕ್ಕೆ ಉತ್ತಮ ಸ್ಪಂದನೆ ಸಿಕ್ಕಿದ್ದು, ಮೊದಲ ದಿನವೇ ಚಿತ್ರ ಸುಮಾರು 4,18 ಕೋಟಿಯಷ್ಟು ಗಳಿಸಿದೆ. ಈ ಮೂಲಕ ಮೊದಲ ದಿನವೇ ಅತೀ ಹೆಚ್ಚು ಗಳಿಕೆ ಮಾಡಿರುವ ಕನ್ನಡದ ಚಿತ್ರ ಎಂಬ ಹೆಗ್ಗಳಿಕೆಗೂ ಭರ್ಜರಿ ಪಾತ್ರವಾಗಿದೆ ಎಂದು ಚಿತ್ರದ ವಿತರಕ …
Read More »ಸ್ಯಾಂಡಲ್ವುಡ್ನಲ್ಲಿ ಸ್ಟಾರ್ ಡೇ : ಮೂವರು ಸ್ಟಾರ್ಗಳ ಹುಟ್ಟುಹಬ್ಬಕ್ಕೆ ಶುಭಹಾರೈಕೆ
ಬೆಂಗಳೂರು : ಸೆಪ್ಟೆಂಬರ್ 18 ಅದು ಸ್ಯಾಂಡಲ್ವುಡ್ನಲ್ಲಿ ಸಖತ್ ಖುಷಿಯ ದಿನ. ಮೂವರು ಸ್ಟಾರ್ ಕಲಾವಿದರ ಬರ್ತ್ಡೇ ಕ್ಷಣ ಇದು. ಸ್ಯಾಂಡಲ್ವುಡ್ನ ಮೂರು ರತ್ನಗಳು ಜನಿಸಿದ ಈ ದಿನ ಇಡೀ ಚಿತ್ರರಂಗದಲ್ಲೂ ಸಂಭ್ರಮ ಮೂಡಿಸಿರುತ್ತದೆ… ಕನ್ನಡ ಸಿನಿಮಾ ಲೋಕದ ಮೇರು ಪ್ರತಿಭೆ, ಸಾಹಸಸಿಂಹ ವಿಷ್ಣುವರ್ಧನ್ ಜನಿಸಿದ್ದು ಇದೇ ದಿನ. ವಿಷ್ಣು ಬರೀ ನಟನಲ್ಲ. ಅವರು ಕನ್ನಡದ ಸಾಂಸ್ಕೃತಿಕ ರಾಯಭಾರಿ. ಕನ್ನಡದ ಸಾಕ್ಷಿಪ್ರಜ್ಞೆ… ಇಂದು ಭೌತಿಕವಾಗಿ ವಿಷ್ಣು ನಮ್ಮೊಂದಿಗಿಲ್ಲದೇ ಇರಬಹುದು. ಆದರೆ, …
Read More »