Sunday , February 17 2019
ಕೇಳ್ರಪ್ಪೋ ಕೇಳಿ
Home / Sandalwood (page 5)

Sandalwood

ಕಾಲಿವುಡ್​, ಬಾಲಿವುಡ್​ಗೆ ನೀನಾಸಂ ಸತೀಶ್​ ಎಂಟ್ರಿ

ಬೆಂಗಳೂರು : ಸ್ಯಾಂಡಲ್​ವುಡ್​ನ ಪ್ರತಿಭಾವಂತ ಕಲಾವಿದ ನೀನಾಸಂ ಸತೀಶ್ ಈಗ ಬೇರೆ ಚಿತ್ರರಂಗದ ಗಮನ ಸೆಳೆದಿದ್ದಾರೆ. ರಂಗಭೂಮಿಯಿಂದ ಬಂದು ಸಿನಿಲೋಕದಲ್ಲಿ ಮಿಂಚುತ್ತಿರುವ ಸತೀಶ್​ರನ್ನು ಈಗ ಕಾಲಿವುಡ್ ಮತ್ತು ಬಾಲಿವುಡ್​ ಕೈ ಬೀಸಿ ಕರೆದಿದೆ. ಸ್ವತಃ ಸತೀಶ್ ಅವರೇ ಈ ವಿಷಯ ತಿಳಿಸಿದ್ದಾರೆ. ಆದರೆ, ಸತೀಶ್​ ಅವರ ಕೈ ಹಿಡಿದಿರುವ ಆ ಪ್ರಾಜೆಕ್ಟ್ ಯಾವುದು ಎಂಬ ಗುಟ್ಟನ್ನು ಅವರು ಬಿಟ್ಟುಕೊಟ್ಟಿಲ್ಲ. ಆಲ್​ ದಿ ಬೆಸ್ಟ್​ ಸತೀಶ್​… ತಮಿಳು ಮತ್ತು ಹಿಂದಿ ಚಿತ್ರರಂಗಕ್ಕೆ …

Read More »

ತಾರಕ್​ ಹಾಡಿಗೆ ಡಿಫ್ರೆಂಟ್ ಸ್ಟೆಪ್ಸ್ ಹಾಕಿ, ಬಹುಮಾನ ನಿಮ್ಮದಾಗಿಸಿಕೊಳ್ಳಿ : ಅಭಿಮಾನಿಗಳಿಗೆ ಆಫರ್

ಬೆಂಗಳೂರು : ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ತಾರಕ್ ಚಿತ್ರ ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ದರ್ಶನ್ ಈ ಚಿತ್ರದಲ್ಲಿ ಡಿಫ್ರೆಂಟ್​ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ, ಅಭಿಮಾನಿಗಳೂ ಈ ಚಿತ್ರವನ್ನು ಕುತೂಹಲದಿಂದಲೇ ಕಾಯುತ್ತಿದ್ದಾರೆ. ಅಭಿಮಾನಿಗಳ ಈ ಕುತೂಹಲಕ್ಕೆ ಸರಿಯಾಗಿ ತಾರಕ್​ ಚಿತ್ರತಂಡ ಒಂದು ಆಫರ್ ಕೊಟ್ಟಿದೆ. ತಾರಕ್ ಚಿತ್ರದ ಯಾವುದಾದರೊಂದು ಹಾಡಿಗೆ ಡಿಫ್ರೆಂಟ್ ಸ್ಟೆಪ್ಸ್ ಹಾಕಿ ಅದನ್ನು ಚಿತ್ರತಂಡಕ್ಕೆ ಕಳುಹಿಸುವಂತೆ ಕೋರಿದೆ. ಹೀಗೆ ಕಳುಹಿಸಿದ ನೃತ್ಯದಲ್ಲಿ ಆಯ್ಕೆಯಾದ ನೃತ್ಯಕ್ಕೆ ಬಹುಮಾನ …

Read More »

ಅಮೂಲ್ಯ ಬರ್ತ್​ಡೇಗೆ ಮರ್ಸಿಡಿಸ್​ ಬೆಂಜ್ ಕಾರು ಗಿಫ್ಟ್​ ಕೊಟ್ಟ ಪತಿ

ಬೆಂಗಳೂರು : ಇತ್ತೀಚೆಗಷ್ಟೇ ದಾಂಪತ್ಯಕ್ಕೆ ಕಾಲಿಟ್ಟ ನಟಿ ಅಮೂಲ್ಯಗೆ ಈ ಬಾರಿಯ ಹುಟ್ಟುಹಬ್ಬಕ್ಕೆ ಭರ್ಜರಿ ಗಿಫ್ಟ್​ ಸಿಕ್ಕಿದೆ. ಸೆಪ್ಟೆಂಬರ್​ 14 ರಂದು 24ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿರುವ ಅಮೂಲ್ಯಗೆ ಪತಿ ಜಗದೀಶ್​ ಮರ್ಸಿಡಿಸ್ ಬೆಂಜ್​ ಕಾರು ಗಿಫ್ಟ್​ ಕೊಟ್ಟಿದ್ದಾರೆ. ಮದುವೆಯ ನಂತರದ ಚೊಚ್ಚಲ ಹುಟ್ಟುಹಬ್ಬ ಇದಾಗಿದ್ದು ಈ ಗಿಫ್ಟ್​ ಬರ್ತ್​ಡೇಯನ್ನು ಇನ್ನಷ್ಟು ಸ್ಪೆಷಲ್ ಆಗಿಸಿದೆ.  ಇನ್ನು, ಅಮೂಲ್ಯ ಪತಿ ಜಗದೀಶ್ ಜೊತೆಗೂಡಿ ಅಭಿಮಾನಿಗಳ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸಿದ್ದರು. ಪತಿಯಿಂದ …

Read More »

ಕುರುಕ್ಷೇತ್ರಕ್ಕೆ ಭಾನುಮತಿ ಸಿಕ್ಕರು… : ಇವರೇ ದರ್ಶನ್​ಗೆ ನಾಯಕಿ…

ಬೆಂಗಳೂರು : ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕುರುಕ್ಷೇತ್ರ ಚಿತ್ರದ ನಾಯಕಿ ಯಾರು ಎಂಬ ಕುತೂಹಲ ಈ ತನಕ ಇತ್ತು. ಆದರೆ, ಈ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ದಕ್ಷಿಣ ಭಾರತದ ನಟಿ ರಮ್ಯಾ ನಂಬೀಸನ್​​ ದರ್ಶನ್​ಗೆ ನಾಯಕಿಯಾಗಿ ಅಭಿನಯಿಸಲಿದ್ದಾರೆ. ಕುರುಕ್ಷೇತ್ರದ ಚಿತ್ರದಲ್ಲಿ ರಮ್ಯಾಗೆ ದುರ್ಯೋಧನನ ಪತ್ನಿ ಭಾನುಮತಿ ಪಾತ್ರ. ಆರಂಭದಲ್ಲಿ ಈ ಪಾತ್ರಕ್ಕೆ ರೆಜೀನಾ ಹೆಸರು ಕೇಳಿ ಬಂದಿತ್ತು. ಆದರೆ, ಈಗ ಈ ಜಾಗಕ್ಕೆ ನಂಬೀಸನ್​ ಬಂದಿದ್ದಾರೆ. ಹೈದರಾಬಾದ್​ನ …

Read More »

ಬರುತ್ತಿದೆ ಆಪ್ತಮಿತ್ರ 2 ಚಿತ್ರ

ಬೆಂಗಳೂರು : ಆಪ್ತಮಿತ್ರ ಸಾಹಸಸಿಂಹ ವಿಷ್ಣುವರ್ಧನ್ ಅಭಿನಯದ ಸೂಪರ್ ಹಿಟ್ ಚಿತ್ರ. ಇದೀಗ ಇದೇ ಹೆಸರಿನೊಂದಿಗೆ ಮತ್ತೊಂದು ಚಿತ್ರ ಬರುತ್ತಿದೆ. ಆಪ್ತಮಿತ್ರ 2 ಚಿತ್ರದ ಸಿದ್ಧತೆ ಈಗ ನಡೆಯುತ್ತಿದೆ. ವಿಷ್ಣುವರ್ಧನ್​ ಹುಟ್ಟುಹಬ್ಬದಂದೇ ಈ ಚಿತ್ರ ಸೆಟ್ಟೇರಲಿದೆ ಎಂದು ಗೊತ್ತಾಗಿದೆ. ಸೆಪ್ಟೆಂಬರ್ 18 ವಿಷ್ಣು ಹುಟ್ಟಿದ ದಿನ. ಇದೇ ದಿನ ಈ ಚಿತ್ರ ಕೂಡಾ ಸೆಟ್ಟೇರಲಿದೆ. ರಮೇಶ್ ಬಾಬು ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಆಪ್ತಮಿತ್ರ ಚಿತ್ರದ ನಿರ್ದೇಶಕ ಪಿ ವಾಸು ಅವರೇ …

Read More »

ಭರ್ಜರಿಯಾಗಿದೆ ಭರ್ಜರಿ : ಧ್ರುವ ಅಭಿಮಾನಿಗಳಿಗೆ ಫುಲ್ ಮೀಲ್ಸ್​​

ಬೆಂಗಳೂರು : ಆಕ್ಷನ್​ ಪ್ರಿನ್ಸ್​ ಧ್ರುವ ಸರ್ಜಾ ಮತ್ತು ಡಿಂಪಲ್​ ಕ್ವೀನ್​ ರಚಿತಾ ರಾಮ್​ ಈಗ ಭರ್ಜರಿಯಾಗಿಯೇ ಥಿಯೇಟರ್​ಗೆ ಲಗ್ಗೆ ಇಟ್ಟಿದ್ದಾರೆ… ಭರ್ಜರಿಗೆ ಮೊದಲ ದಿನವೇ ಭರ್ಜರಿ ರೆಸ್ಪಾನ್ಸ್​ ಸಿಕ್ಕಿದೆ… ಪ್ರೇಕ್ಷಕರು ಬಹಳ ಅದ್ಧೂರಿಯಾಗಿಯೇ ಈ ಚಿತ್ರವನ್ನು ಸ್ವಾಗತಿಸಿದ್ದಾರೆ…  ಈ ಚಿತ್ರ ಸೆಟ್ಟೇರಿ ಬರೋಬ್ಬರಿ ಎರಡು ವರ್ಷ ಆಗಿದೆ. ಆದರೂ, ಚಿತ್ರದ ಬಗೆಗಿನ ಕ್ರೇಜ್​ ಒಂದಿನಿತೂ ಕಡಿಮೆ ಆಗಿರಲಿಲ್ಲ. ಅದು ಚಿತ್ರದ ಹೆಚ್ಚುಗಾರಿಕೆ. ಅಲ್ಲದೆ, ಇತ್ತೀಚೆಗೆ ರಿಲೀಸ್ ಆಗಿರುವ ಟೀಸರ್​, …

Read More »

ಕದ್ರಿ ದೇಗುಲದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಪೂಜೆ

ಮಂಗಳೂರು : ಕರುನಾಡ ಚಕ್ರವರ್ತಿ ಡಾ.ಶಿವರಾಜ್‍ಕುಮಾರ್ ಇವತ್ತು ಮಂಗಳೂರಿನ ಕದ್ರಿ ಮಂಜುನಾಥೇಶ್ವರ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಕದ್ರಿ ಮೈದಾನದಲ್ಲಿ ನಡೆಯಲಿರುವ ಸ್ಟಾರ್ ನೈಟ್ ಕಾರ್ಯಕ್ರಮಕ್ಕೆಂದು ಬಂದಿದ್ದ ಶಿವಣ್ಣ ದೇಗುಲಕ್ಕೂ ಭೇಟಿ ನೀಡಿ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಶಿವರಾಜ್‍ಕುಮಾರ್ ಅವರನ್ನು ನೋಡಲು ಸಾಕಷ್ಟು ಜನರು ಸೇರಿದ್ದರು ಮತ್ತು ಹಲವರು ಸೆಲ್ಫಿ ತೆಗೆದು ಸಂಭ್ರಮಿಸಿದ್ದರು.

Read More »

ಬಿಗ್​ಬಾಸ್​ 5 : ಭರ್ಜರಿ ಪ್ರೋಮೋ ರಿಲೀಸ್

ಬೆಂಗಳೂರು : ಕನ್ನಡದ ಪ್ರಸಿದ್ಧ ರಿಯಾಲಿಟಿ ಶೋ ಬಿಗ್​ ಬಾಸ್​ನ ಹವಾ ಶುರುವಾಗಿದೆ. ಕಿಚ್ಚ ಸುದೀಪ್ ನಿರೂಪಣೆಯ ಈ ರಿಯಾಲಿಟಿ ಶೋ ಕುತೂಹಲ ಕೆರಳಿಸಿದೆ. ಈಗಾಗಲೇ ನಾಲ್ಕು ಸೀಸನ್ ಪೂರ್ಣಗೊಳಿಸಿರುವ ಬಿಗ್​ಬಾಸ್​ ಐದನೇ ಸೀಸನ್​​ನ ಸಿದ್ಧತೆಯಲ್ಲಿದೆ. ಅಲ್ಲದೆ, ಈ ಶೋಗೆ ದಿನಗಣನೆ ಶುರುವಾಗಿದೆ. ಜನರ ಈ ಕುತೂಹಲಕ್ಕೆ ಸರಿಯಾಗಿ ಒಂದು ಪ್ರೋಮೋ ಕೂಡಾ ರಿಲೀಸ್ ಆಗಿದೆ…

Read More »

‘ಹಂಬಲ್ ಪಾಲಿಟಿಷಿಯನ್ ನೋಗರಾಜ್‘ಗೆ ವಿರಾಟ್ ಕೊಹ್ಲಿ ಶುಭಹಾರೈಕೆ : ಇಲ್ಲಿದೆ ವೀಡಿಯೋ

ಬೆಂಗಳೂರು : ಕಲಾವಿದ ಡ್ಯಾನಿಶ್​ ಸೇಟ್ ಅಭಿನಯದ ‘ಹಂಬಲ್ ಪಾಲಿಟಿಷಿಯನ್ ನೋಗರಾಜ್‘ ಸ್ಯಾಂಡಲ್​ವುಡ್​ನಲ್ಲಿ ಸಖತ್ ನಿರೀಕ್ಷೆ ಮೂಡಿಸಿದೆ. ಹಲವರು ಈ ಚಿತ್ರಕ್ಕೆ ಶುಭಹಾರೈಸಿದ್ದಾರೆ. ಕ್ರಿಕೆಟಿಗ ವಿರಾಟ್ ಕೊಹ್ಲಿ ಕೂಡಾ ಡ್ಯಾನಿಶ್ ಅವರಿಗೆ ಶುಭಹಾರೈಸಿದ್ದಾರೆ. ಸಾದ್ ಖಾನ್ ಈ ಚಿತ್ರದ ನಿರ್ದೇಶಕ, ರೋಜರ್ ನಾರಾಯಣ್ ಮತ್ತು ಶೃತಿ ಹರಿಹರನ್ ಮುಖ್ಯಪಾತ್ರದಲ್ಲಿ ಇದ್ದಾರೆ. ರಾಜಕೀಯ ವ್ಯವಸ್ಥೆಯ ವಿಡಂಬನೆಯನ್ನು ಈ ಚಿತ್ರದಲ್ಲಿ ಕಾಣಬಹುದು. ನಟ ರಕ್ಷಿತ್ ಶೆಟ್ಟಿ, ಗೋದಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರದ …

Read More »

ಸೂಜಿದಾರ ಮುಗಿಸಿರುವ ಹರಿಪ್ರಿಯಾ ಫೇಸ್​ಬುಕ್ ಲೈವ್

ಬೆಂಗಳೂರು : ಸ್ಯಾಂಡಲ್​ವುಡ್​ ನಟಿ ಹಲವು ಚಿತ್ರಗಳಲ್ಲಿ ಈಗ ಬ್ಯುಸಿ ಇದ್ದಾರೆ. ವಿಭಿನ್ನ ಪಾತ್ರಗಳನ್ನು ಮಾಡುತ್ತಿರುವ ಹರಿಪ್ರಿಯಾ ಈಗಷ್ಟೇ ಸೂಜಿದಾರ ಚಿತ್ರವನ್ನು ಮುಗಿಸಿದ್ದಾರೆ. ಇದಾದ ಬಳಿಕ ಅಭಿಮಾನಿಗಳೊಂದಿಗೆ ಒಂದಷ್ಟು ಹೊತ್ತು ಫೇಸ್​ಬುಕ್​ ಲೈವ್​ನಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಈ ಲೈವ್​ನಲ್ಲಿ ಹಲವು ವಿಷಯಗಳ ಬಗ್ಗೆ ಹರಿಪ್ರಿಯಾ ಮಾತನಾಡಿದ್ದಾರೆ. ಕಿಚ್ಚ ಸುದೀಪ್ ಜೊತೆಗೆ ಇನ್ನೂ ಹಲವು ಚಿತ್ರ ಮಾಡುವ ಆಸೆ ಎಂದು ಹೇಳಿರುವ ಹರಿಪ್ರಿಯಾ, ಸದ್ಯ ದರ್ಶನ್​ ಅಭಿನಯದ ಕುರುಕ್ಷೇತ್ರ ಚಿತ್ರದ …

Read More »
error: Content is protected !!