Monday , August 20 2018
ಕೇಳ್ರಪ್ಪೋ ಕೇಳಿ
Home / Sudina Special

Sudina Special

ಅಬುದಾಭಿಯಲ್ಲಿ ನಿರ್ಮಾಣವಾಗುತ್ತಿದೆ ಬೃಹತ್ ಹಿಂದೂ ದೇವಾಲಯ

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ ಅಬುದಾಭಿ : ಸಂಯುಕ್ತ ಅರಬ್ ರಾಷ್ಟ್ರದಲ್ಲಿ ಬೃಹತ್ ಹಿಂದೂ ದೇವಾಲಯದ ನಿರ್ಮಾಣದ ಸಿದ್ಧತೆ ಶುರುವಾಗಿದೆ. ಅಬುದಾಭಿಯಲ್ಲಿ ಮೊದಲ ಹಿಂದೂ ದೇವಾಲಯ ನಿರ್ಮಾಣವಾಗುತ್ತಿದ್ದು, ಇದರ ಸಿದ್ಧತೆ ಕೂಡಾ ಗರಿಗೆದರಿದೆ. ಇದು ಒಂದು ಸಾಧನೆಯ ಮೈಲುಗಲ್ಲು ಕೂಡಾ ಹೌದು. ಮಂದಿರ್ ಲಿಮಿಡೆಟ್ ಹಾಗೂ ಸ್ವಾಮಿ ನಾರಾಯಣ ಸಂಸ್ಥಾ ಸಹಯೋಗದಲ್ಲಿ ಈ ಬೃಹತ್ ಮಂದಿರ ನಿರ್ಮಾಣವಾಗಲಿದೆ. ಇನ್ನು, ಈ ದೇವಸ್ಥಾನದ ನಿರ್ಮಾಣದ ಬಗೆಗಿನ ಮಾತುಕತೆಯೂ ನಡೆದಿದ್ದು, ಸಿಂಗಾಪುರ …

Read More »

ಆಟೋ ಚಾಲಕರೂ ಹೆಲ್ಮೆಟ್ ಹಾಕೋಬೇಕಾ…? : ಹಾಕಿಲ್ಲಂತ ಫೈನ್ ಹಾಕಿದ್ದಾರೆ ಪುತ್ತೂರು ಪೊಲೀಸ್ರು…!

ಪುತ್ತೂರು : ಇದೊಂದು ಅಚ್ಚರಿಯ ಘಟನೆ. ತಕ್ಷಣಕ್ಕೆ ನಂಬುವುದಕ್ಕೂ ಅಸಾಧ್ಯ. ಆದರೆ, ಈ ಘಟನೆ ನಡೆದಿರೋದಂತೂ ಸತ್ಯ. ಟೂವೀಲರ್ ಚಾಲಕರಿಗೆ ಹೆಲ್ಮೆಟ್ ಕಡ್ಡಾಯ. ಹಿಂಬದಿ ಸವಾರರಿಗೂ ಕಡ್ಡಾಯ. ಆದರೆ, ಆಟೋ ಚಲಾಯಿಸುವಾಗಲೂ ಹೆಲ್ಮೆಟ್ ಹಾಕೋಬೇಕಾ…? ಈ ಪ್ರಶ್ನೆಯನ್ನು ಹುಟ್ಟುಹಾಕಿದ್ದು ಪುತ್ತೂರಿನ ಸಂಚಾರಿ ಪೊಲೀಸರು. ಯಾಕೆಂದರೆ, ಇಲ್ಲಿನ ಆಟೋ ಚಾಲಕರೊಬ್ಬರಿಗೆ ಪೊಲೀಸರು ಫೈನ್ ಹಾಕಿದ್ದರು. ನಿಗದಿಗಿಂತ ಜಾಸ್ತಿ ಜನ ಆಟೋದಲ್ಲಿ ಕೂರಿಸಿಕೊಂಡು ಹೋಗಿದ್ದಕ್ಕೆ ಈ ಫೈನ್ ಹಾಕಲಾಗಿತ್ತು. ಆಟೋ ಚಾಲಕ ವಿಠಲ್ …

Read More »

ಯುವತಿಗೆ ಕಾಮುಕನ ಕಾಟ… : ಸ್ಥಳದಲ್ಲೇ ಕಾಮಿಗೆ ಪಾಠ ಕಲಿಸಿದ ಗಟ್ಟಿಗಿತ್ತಿ… : ಇಲ್ಲಿದೆ ವೀಡಿಯೋ

ಕಾಮುಕನೊಬ್ಬನಿಗೆ ಯುವತಿಯೊಬ್ಬಳು ಸಖತ್ ಪಾಠ ಕಲಿಸಿದ್ದಾಳೆ. ತನ್ನ ಅಂಗಾಂಗಗಳನ್ನು ಮುಟ್ಟಿ ಸಾಗಿದ ಪಾಪಿಗೆ ಚೆನ್ನಾಗಿಯೇ ಗೂಸಾ ಕೊಟ್ಟಿದ್ದಾಳೆ. ಈ ವೀಡಿಯೋ ಈಗ ಇಂಟರ್‍ನೆಟ್‍ನಲ್ಲಿ ಸಖತ್ ಸೌಂಡ್ ಮಾಡ್ತಿದೆ… ಈಕೆ ಕಾಲೇಜು ವಿದ್ಯಾರ್ಥಿನಿಯಾಗಿದ್ದು, ಇನ್ನೂ ವಯಸ್ಸು 21. ಯುಎಸ್‍ಎನ ಜಾರ್ಜಿಯಾದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಉದ್ದೇಶಪೂರ್ವಕವಾಗಿಯೇ ಯುವಕನೊಬ್ಬ ಈಕೆಯ ಮೈ ಮುಟ್ಟಿದ್ದ… ಅಷ್ಟೇ… ಸಡನ್ ಸಿಡಿದೆದ್ದ ಯುವತಿ ಆ ಕಾಮಕ್ರಿಮಿಗೆ ಪಾಠ ಕಲಿಸಿದ್ದಾಳೆ. ಇದನ್ನು ನೋಡಿ ಅಲ್ಲಿದ್ದವರೆಲ್ಲಾ …

Read More »

ಮಾಲಕನಿಗೆ ಆಸರೆಯಾದ ಶ್ವಾನ… : ಹೃದಯವೇ ಭಾರವಾಗಿಸುತ್ತದೆ ಮಮತೆಯ ಈ ವೀಡಿಯೋ…

ಪಿಲಿಫೇನ್ಸ್ : ಶ್ವಾನ ನಿಯತ್ತಿಗೆ ಮತ್ತೊಂದು ಹೆಸರು… ಅನ್ನ ಇಟ್ಟ ಮನೆಗೆ ಯಾವತ್ತೂ ದ್ರೋಹ ಬಗೆಯುವ ಪ್ರಾಣಿ ನಾಯಿಯಲ್ಲ… ಇದೂ ಕೂಡಾ ಅಂತಹದ್ದೇ ಶ್ವಾನದ ನಿಯತ್ತಿನ ಕತೆ. ಮಾಲಕನಿಗೆ ಆಸರೆಯಾದ ಹೃದಯ ಸ್ಪರ್ಶಿ ಸನ್ನಿವೇಶ… ಇದು ಸೆರೆ ಆಗಿರುವುದು ಪಿಲಿಫೇನ್ಸ್‍ನಲ್ಲಿ.. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸೌಂಡ್ ಮಾಡುತ್ತಿದೆ… 46 ವರ್ಷದ ಡೇನಿಲೋ ಅಲರ್ಕನ್ ಈ ಶ್ವಾನವನ್ನು ಸಾಕಿದ ಅದೃಷ್ಟವಂತ. ವರ್ಷದ ಹಿಂದೆ ಡೇನಿಲೋ ಅಪಘಾತದಲ್ಲಿ ಕಾಲು …

Read More »

ಕಂದನ ಅಳು ಕೇಳಿ ಎದ್ದಳು ಆರು ತಿಂಗಳಿನಿಂದ ಕೋಮಾದಲ್ಲಿದ್ದ ತಾಯಿ…!

ಕೊಟ್ಟಾಯಂ : ತಾಯಿ ಅಂದರೇನೇ ಹಾಗೆ… ಮಮತಾಮೂರ್ತಿ… ನಿಸ್ವಾರ್ಥತೆಯ ದೇವತಾ ರೂಪ… ಅದಕ್ಕೇ ತಾಯಿಗೆ ಭೂಮಿ ಮೇಲಿರುವ ಪ್ರತ್ಯಕ್ಷ ದೇವರ ಸ್ಥಾನ ಇರುವುದು… ಇದು ಕೂಡಾ ಅಂತಹದ್ದೇ ಸುದ್ದಿ… ಕೇಳಿದರೇನೇ ಹೃದಯ ತುಂಬಿ ಬರುತ್ತದೆ… ಪೆರೂರಿನ ನಿವಾಸಿ ಅನೂಪ್ ಎಂಬುವವರ ಪತ್ನಿ ಬೆಥೆನಾ ಕಳೆದ ಆರು ತಿಂಗಳಿನಿಂದ ಕೋಮಾಕ್ಕೆ ಹೋಗಿದ್ದರು. ಸೆಲೆಬ್ರಲ್ ಟ್ರಾಮಾ(ಮಿದುಳು ಸಂಬಂಧಿತ ಸಮಸ್ಯೆ)ದಿಂದಾಗಿ ಜನವರಿಯಿಂದಾಗಿ ಬೆಥೆನಾ ಕೋಮಾಕ್ಕೆ ಹೋಗಿದ್ದರು. ಈ ವೇಳೆ, ಇವರು ಮೂರು ತಿಂಗಳ ಗರ್ಭಿಣಿ. …

Read More »

ಜೀವನೋತ್ಸಾಹಕ್ಕೆ ಸಾಕ್ಷಿ : ವೈರಲ್ ಆಗುತ್ತಿದೆ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ಯುವಕನ ಹಾಡು…

ತಿರುವನಂತಪುರ : ಜೀವನೋತ್ಸಾಹ ಅಂದರೆ ಇದು… ಇದೊಂದು ಯುವಕನೊಬ್ಬನ ನೋವಿನ ಕತೆ… ಈ ನೋವಿನಲ್ಲೂ ಈ ಯುವಕ ಮಾದರಿ ಜೀವನ ಮಾಡುತ್ತಿದ್ದಾರೆ. ಹೆಸರು ನಂದು ಮಹಾದೇವ. ರಾತ್ರೋರಾತ್ರಿ ಇವರೀಗ ಸ್ಟಾರ್ ಆಗಿದ್ದಾರೆ. ಸಂದು ಕ್ಯಾನ್ಸರ್ ವಿರುದ್ಧ ಸೆಣಸಾಡುತ್ತಿರುವ ಯುವಕ. ಕಿಮೊಥೆರಪಿ ಪಡೆಯುತ್ತಿದ್ದಾರೆ. ಇಂತಹ ಸ್ಥಿತಿಯಲ್ಲೂ ಇವರು ರೆಕಾರ್ಡಿಂಗ್ ಸ್ಟುಡಿಯೋಗೆ ಬಂದು ಹಾಡಿದ್ದಾರೆ. ಈ ಹಾಡು ಈಗ ಸಖತ್ ವೈರಲ್ ಆಗುತ್ತಿದೆ. ಫೇಸ್‍ಬುಕ್‍ನಲ್ಲಿ ಇವರ ಹಾಡುವ ದೃಶ್ಯವನ್ನು ಎಲ್ಲರೂ ಕೊಂಡಾಡಿದ್ದಾರೆ. ಜೊತೆಗೆ, …

Read More »

ಕ್ಷಮಾಪನಾ ಪತ್ರದೊಂದಿಗೆ ಕದ್ದ ಚಿನ್ನ ಹಿಂದಿರುಗಿಸಿದ ಕಳ್ಳ…!

ಅಲಫ್ಫುಜಾ : ಕೇರಳದ ಅಲಫ್ಫುಜಾದಲ್ಲಿ ವಿಚಿತ್ರ ಕಳ್ಳತನ ನಡೆದಿದೆ. ಕಳ್ಳನೊಬ್ಬ ತಾನು ಕದ್ದ ಚಿನ್ನವನ್ನು ಮತ್ತೆ ಅದೇ ಮನೆಗೆ ಹಿಂದಿರುಗಿಸಿ ಕ್ಷಮೆಯನ್ನೂ ಕೇಳಿ ಪತ್ರ ಬರೆದಿದ್ದಾನೆ…! ಇಲ್ಲಿನ ಮಧು ಕುಮಾರ್ ಎಂಬುವವರು ಕುಟುಂಬದ ಕಾರ್ಯಕ್ರಮಕ್ಕೆಂದು ಬೇರೆ ಕಡೆ ತೆರಳಿದ್ದರು. ಆದರೆ, ಆವತ್ತು ಇವರು ಗೇಟ್ ಬಾಗಿಲು ಹಾಕಲು ಮರೆತಿದ್ದರು. ಇದನ್ನು ಗಮನಿಸಿದ್ದ ಕಳ್ಳ ಅದೇ ದಿನ ಮಧು ಕುಮಾರ್ ಮನೆಗೆ ನುಗ್ಗಿದ್ದ. ಜೊತೆಗೆ, ಚಿನ್ನಾಭರಣವನ್ನೂ ಕದ್ದು ಪರಾರಿಯಾಗಿದ್ದ. ಇತ್ತ, ಕಾರ್ಯಕ್ರಮ …

Read More »

96 ರ ಅಜ್ಜಿಯ ಓದುವ ಆಸೆ… : ನೂರು ವರ್ಷ ಆಗುವುದರೊಳಗೆ 10ನೇ ಕ್ಲಾಸ್ ಪೂರೈಸುವ ಹೆಬ್ಬಯಕೆ…!

ಅಳಪುಳಾ (ಕೇರಳ) : ದೇವರನಾಡು ಕೇರಳದಲ್ಲಿ ಈಗ ಅಜ್ಜಿಯೊಬ್ಬರು ಗಮನ ಸೆಳೆದಿದ್ದಾರೆ. ತಮ್ಮ ಓದುವ ಬಯಕೆಯಿಂದಲೇ ಇವರು ಸುದ್ದಿಯಾಗಿದ್ದಾರೆ…! ಇವರ ಹೆಸರು ಕಾತ್ಯಾಯಿನಿ. ವಯಸ್ಸು ಬರೋಬ್ಬರಿ 96. ಆದ್ರೆ, ಚಿಕ್ಕಂದಿನಲ್ಲಿ ಇವರಿಗೆ ಓದುವ ಆಸೆ ಇದ್ದರೂ ಅದು ಸಾಧ್ಯವಾಗಲಿಲ್ಲ. ಹೀಗಾಗಿ, ಈ ಅಜ್ಜಿ ಈಗ ಶಿಕ್ಷಣ ಕಲಿಯುತ್ತಿದ್ದಾರೆ…! ರಾಜ್ಯ ಸಾಕ್ಷರತಾ ಮಿಷನ್​ನ ಬೋಧಕರಾದ ಕೆ.ಸತಿ ಅವರ ಮುಂದೆ ಕಾತ್ಯಾಯಿನಿ ಅಮ್ಮ ತಮ್ಮ ಬಯಕೆಯನ್ನು ಬಿಚ್ಚಿಟ್ಟಾಗಿ ಅವರೂ ಒಮ್ಮೆ ಅಚ್ಚರಿಗೊಳಗಾಗಿದ್ದರು. ಕಾತ್ಯಾಯಿನಿ …

Read More »

6 ಲಕ್ಷ ವಿದ್ಯಾರ್ಥಿಗಳನ್ನು ಹಿಂದಿಕ್ಕಿದ ಸಾಧಕಿ : ಏರ್ ಫೋರ್ಸ್ ಟೀಂ ಸೇರಿದ ಟೀ ವ್ಯಾಪಾರಿಯ ಮಗಳು

ಸಾಧಿಸುವ ಛಲವೊಂದಿದ್ದರೆ ಏನನ್ನೂ ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಈ ಯುವತಿ ಸಾಕ್ಷಿ… ಮನೆಯಲ್ಲಿ ಬಡತನ ಇತ್ತು. ತಂದೆಯ ಟೀ ವ್ಯಾಪಾರದಿಂದಲೇ ಬದುಕು ಸಾಗಬೇಕಿತ್ತು. ಆದರೂ ಆ ಹುಡುಗಿ ಸಾಧನೆಯ ಕನಸು ಕಂಡಿದ್ದರು. ಸತತ ಪ್ರಯತ್ನ ಮಾಡಿದರು. ಶೃದ್ಧೆಯಿಂದ ಓದಿದರು. ಇದೇ ಶೃದ್ಧೆ ಈಗ ಆಕೆಯನ್ನು ಗುರಿ ಮುಟ್ಟಿಸಿದೆ. ಆರು ಲಕ್ಷ ವಿದ್ಯಾರ್ಥಿಗಳನ್ನು ಹಿಂದಿಕ್ಕಿ ಸಾಧನೆಗೆ ಮುತ್ತಿಕ್ಕುವ ಸಂತಸ ತಂದಿದೆ…! ಇವರೇ ಈ ಸ್ಟೋರಿಯ ನಾಯಕಿ. ಹೆಸರು ಅಂಚಲ್ ಗ್ಯಾಂಗ್‍ವಾಲ್. ಇಡೀ …

Read More »

ಬೆಳುವಾಯಿಯ ಕೀರ್ತಿ ಪತಾಕೆ ಹಾರಿಸಿದ ಸಮ್ಮಿಲನ್ ಶೆಟ್ಟಿ : ವರ್ಲ್ಡ್ ಬುಕ್ ಆಫ್ ರೆಕಾರ್ಡ್ ನಲ್ಲಿ ಸ್ಥಾನ ಪಡೆದ `ಚಿಟ್ಟೆ ಪಾರ್ಕ್’

ಮಂಗಳೂರು : ದಕ್ಷಿಣ ಕನ್ನಡದ ಮೂಡಬಿದಿರೆ ಸಮೀಪದ ಬೆಳುವಾಯಿ ಹೆಸರು ಈಗ ವಿಶ್ವಮಟ್ಟದಲ್ಲಿ ಅನುರಣಿಸಿದೆ. ಯುವ ಸಾಹಸಿ ಸಮ್ಮಿಲನ್ ಶೆಟ್ಟಿ ಅವರ ಪ್ರಯತ್ನದ ಫಲವಾಗಿ ಬೆಳುವಾಯಿ ಹೆಸರು ಬೆಳಗುತ್ತಿದೆ. ಇದಕ್ಕೆ ಕಾರಣ ಬೆಳುವಾಯಿಯಲ್ಲಿರುವ `ಸಮ್ಮಿಲನ್ ಶೆಟ್ಟೀಸ್ ಬಟರ್ ಫ್ಲೈ ಪಾರ್ಕ್’. ಈ ಪಾರ್ಕ್ ಈಗ ವರ್ಲ್ಡ್ ಬುಕ್ ಆಫ್ ರೆಕಾರ್ಡ್ ನಲ್ಲಿ  ಸ್ಥಾನ ಪಡೆದಿದೆ. ಪರಿಸರ ಸಂರಕ್ಷಣೆ ಮತ್ತು ಪರಿಸರ ಕಾಳಜಿಯ ಕಾರಣಕ್ಕೆ ಚಿಟ್ಟೆ ಪಾರ್ಕ್ ಈಗಾಗಲೇ ವಿಶ್ವದ ಗಮನ ಸೆಳೆದಿದೆ. ಸುಮಾರು …

Read More »
error: Content is protected !!