Sunday , July 22 2018
ಕೇಳ್ರಪ್ಪೋ ಕೇಳಿ
Home / Sudina Special (page 2)

Sudina Special

83 ವರ್ಷದ ವರನಿಗೆ 30 ವರ್ಷದ ವಧು…! ಹೆಂಡ್ತಿ, ಮಗಳ ಎದುರೇ ವೃದ್ಧನ ಮದುವೆ…!

ಜೈಪುರ : ಇದೊಂದು ವೃದ್ಧನ ಮದುವೆ. ಈ ವೃದ್ಧನ ವಯಸ್ಸು ಬರೋಬ್ಬರಿ 83. ಮೊಮ್ಮಕ್ಕನ್ನು ಆಡಿಸು ಮುದ್ದಿಸುವ ವಯಸ್ಸಿದು. ಈ ವಯಸ್ಸಿನಲ್ಲಿ ಈ ವ್ಯಕ್ತಿ ಮತ್ತೊಂದು ಮದುವೆಯಾಗಿದ್ದಾರೆ. 83 ವರ್ಷದ ಈ ನವ ವರನ ಹೆಸರು ಸುಕ್ರಾಂ ಬರುವಾ. ಈ ವೃದ್ಧನ ಕೈ ಹಿಡಿದಾಕೆ ರಮೇಶಿ. ವಯಸ್ಸು 30. ಅಂದರೆ, ಬರೋಬ್ಬರಿ 53 ವರ್ಷ ಕಿರಿಯವಳು…! ಇವರಿಬ್ಬರ ಮದುವೆ ರಾಜಸ್ಥಾನದ ಸಮೃದ್ಧಾ ಗ್ರಾಮದಲ್ಲಿ ನಡೆದಿದೆ. ಈ ವರ ಮೆರವಣಿಗೆ ಮೂಲಕ …

Read More »

ಇಲ್ಲಿ ಈ ಮೋಡಗಳು ಏನೋ ಕತೆ ಹೇಳುತ್ತಿವೆ…

ಆಕಾಶ ಸದಾ ನಮಗೆ ಕೌತುಕದ ಮೂಟೆ. ನಭದಲ್ಲಿ ಆಗುವ ಒಂದೊಂದು ಬದಲಾವಣೆಯೂ ಸಾಮಾನ್ಯರಾದ ನಮಗೆ ಕುತೂಹಲವನ್ನು ಮೂಡಿಸುತ್ತವೆ. ಕೆಲವೊಮ್ಮೆ ನಾವೆ ಚಂದ್ರನಲ್ಲಿ ಮೊಲ ಕಾಣ್ತಿದೆ, ಮೋಡದಲ್ಲಿ ಭಾರತ ಗೋಚರಿಸಿದೆ ಎಂತ ಹೇಳಿಕೊಂಡು ಖುಷಿ ಪಟ್ಟಿದ್ದೇವೆ. ಈಗ ಇಲ್ಲಿ ಅಂತಹದ್ದೇ ಕೆಲವೊಂದು ಚಿತ್ರಗಳಿವೆ. Image Courtesy: Facebook/Tintu-Mon

Read More »

ಯಕ್ಷಗಾನದಲ್ಲಿ ಚುಂಬನದ ಸನ್ನಿವೇಶ : ಶುರುವಾಗಿದೆ ಪಾವಿತ್ರ್ಯದ ಚರ್ಚೆ

ಮಂಗಳೂರು : ಕರಾವಳಿಯಲ್ಲಿ ಯಕ್ಷಗಾನ ಎಂಬುದು ಬರೀ ಕಲೆಯಲ್ಲ. ಅದು ದೈವೀ ಸ್ವರೂಪ. ಇಂದಿಗೂ ಭಕ್ತಿಭಾವದಿಂದ ಹರಕೆ ಆಟಗಳನ್ನು ಆಡುವ ಸಂಪ್ರದಾಯ ಕರಾವಳಿ ಭಾಗದಲ್ಲಿ ಇದೆ ಮತ್ತು ಅದು ಹೀಗೆಯೇ ಇರುತ್ತದೆ. ಅದೆಷ್ಟು ಆಧುನಿಕತೆಯ ಹೊಡೆತದ ನಡುವೆಯೂ ಯಕ್ಷಗಾನ ಎಂಬುದು ತನ್ನ ಸ್ವಂತಿಕೆ, ಜೀವಂತಿಕೆ, ಶ್ರೀಮಂತಿಕೆಯನ್ನು ಉಳಿಸಿಕೊಂಡಿದೆ ಎಂದರೆ ಅದು ಯಕ್ಷಗಾನಕ್ಕಿರುವ ತಾಕತ್ತು… ಬಗೆಬಗೆ ಮನೋರಂಜನಾ ಮಾಧ್ಯಮಗಳ ನಾಗಾಲೋಟದ ನಡುವೆಯೂ ಯಕ್ಷಗಾನ ಇನ್ನೂ ಮೇರು ಸ್ಥಾನದಲ್ಲಿ ಇದೆ ಎನ್ನುವುದು ಕರಾವಳಿಗರ …

Read More »

ಯುವತಿಯರೇ ಎಚ್ಚರ : ಪ್ರೀತಿಯ ಮಾಯೆಯಲ್ಲಿ ನಗ್ನ ಫೋಟೋ ಕಳುಹಿಸಿದ ಯುವತಿಗೆ ಸಾಲು ಸಾಲು ಸಂಕಷ್ಟ…!

ಬೆಂಗಳೂರು : ಪ್ರೀತಿ ಎಂಬುದು ಮಾಯೆ. ಅದರಲ್ಲೂ ಹದಿಹರೆಯದ ಪ್ರೀತಿ ಇದೆಯಲ್ವಾ ಅದು ತುಂಬಾ ಡೇಂಜರ್​. ಈಗಿನ ಸುದ್ದಿ ಕೂಡಾ ಅಂತಹದ್ದೇ… ವಾಟ್ಸ್​ ಆಪ್​ ಮೂಲಕ ತನ್ನ ಪ್ರಿಯತಮನಿಗೆ ಅಂದು ನಗ್ನ ಫೋಟೋ ಕಳುಹಿಸಿದ್ದ ಯುವತಿಗೆ ಈಗ ಮದುವೆ ಬಳಿಕವೂ ಕಷ್ಟ ತಪ್ಪಿಲ್ಲ…! ಸದ್ಯ ಈ ಯುವತಿಗೆ 20 ವರ್ಷ. ಬೆಂಗಳೂರಿನಲ್ಲಿ ಡೆಂಟಲ್​ ಸೈನ್ಸ್​ ಓದುತ್ತಿದ್ದಳು. ಆದರೆ, ಸುಮಾರು 18 ವರ್ಷ ಇರುವಾಗ ಈಕೆ ಪ್ರೀತಿಗೆ ಬಿದ್ದಿದ್ದಳು. ಹೀಗೆ ಪ್ರೀತಿಗೆ …

Read More »

ಸೊನ್ನೆಯ ಇತಿಹಾಸ : ಅಧ್ಯಯನದಿಂದ ಗೊತ್ತಾಯ್ತು ಮತ್ತೊಂದು ಸತ್ಯ : 500 ವರ್ಷ ಮತ್ತೆ ಹಿಂದಕ್ಕೆ ಹೋಗುತ್ತದೆ ಹಿಸ್ಟರಿ

ನವದೆಹಲಿ : ಗಣಿತಶಾಸ್ತ್ರದಲ್ಲಿ ಪ್ರಮುಖ ಪಾತ್ರ ವಹಿಸುವ ಸೊನ್ನೆಯನ್ನು ಕಂಡು ಹಿಡಿದದ್ದು ಭಾರತೀಯರು ಎಂಬ ಹೆಮ್ಮೆ ಎಲ್ಲರಿಗೂ ಇದೆ. ಈ ಹೆಮ್ಮೆಗೆ ಇನ್ನೊಂದು ಗರಿ ಸಂದಿದೆ… ಇತ್ತೀಚೆಗೆ ನಡೆದ ಅಧ್ಯಯನ ಸೊನ್ನೆಯ ಆವಿಷ್ಕಾರದ ದಿನಗಳನ್ನು ಈಗ ಗುರುತಿಸುವುದಕ್ಕಿಂತ ಮತ್ತೆ 500 ವರ್ಷಗಳಷ್ಟು ಹಿಂದಕ್ಕೆ ಕೊಂಡು ಹೋಗಿದೆ. ಭಾರತದ ಪ್ರಾಚೀನ ಬಖ್ಯಾಲಿ ಎಂಬ ಹಸ್ತಪ್ರತಿಯಲ್ಲಿ ಸೊನ್ನೆಯಂತಹ ಸಂಕೇತವನ್ನು ಬಳಸಲಾಗಿದೆ. ಗಣಿತಕ್ಕೆ ಸಂಬಂಧಿಸಿದಂತ ಅಂಶ ಕೂಡಾ ಇಲ್ಲಿವೆ. ಬರ್ಚ್​ ಎಂಬ ಮರದ ತೊಗಟೆಯಲ್ಲಿ …

Read More »

ಆಪಲ್​ನ ಮೂರು ಹೊಸ ಐಫೋನ್​ಗಳ ಬೆಲೆ ಎಷ್ಟು..? ಭಾರತದಲ್ಲಿ ಯಾವಾಗ ಬಿಡುಗಡೆ…?

ನವದೆಹಲಿ : ಆಪಲ್​ ಹೊಸ ಫೋನ್​ಗಳನ್ನು ಮಾರುಕಟ್ಟೆಗೆ ಬಿಟ್ಟಿರುವ ಸುದ್ದಿಯನ್ನು ನೀವು ಕೇಳಿರಬಹುದು. ಮೂರು ಹೊಸ ನಮೂನೆಯ ಫೋನ್​​ಗಳನ್ನು ಆಪಲ್​ ಬಿಡುಗಡೆ ಮಾಡಿದೆ. ಐಫೋನ್​8, ಐಫೋನ್​8 ಪ್ಲಸ್​ ಮತ್ತು ಐಫೋನ್​ ಎಕ್ಸ್​​​. ಇದರಲ್ಲಿ ಐಫೋನ್​8 ಮತ್ತು ಐಫೋನ್​8 ಪ್ಲಸ್​ನ ಆರಂಭಿಕ ಬೆಲೆ ಸುಮಾರು ಐಫೋನ್​7 ಮತ್ತು ಐಫೋನ್​7 ಪ್ಲಸ್ನ ಬೆಲೆಗಿಂತ ಸ್ವಲ್ಪ ಹೆಚ್ಚಿದೆ. ​ಐಫೋನ್​ 8 64ಜಿಬಿಗೆ 64,000 ರೂಪಾಯಿ, ಐಫೋನ್​​​8 256ಜಿಬಿಗೆ 77,000, ಐಫೋನ್​​8 ಪ್ಲಸ್​ 64ಜಿಬಿ 73,000, …

Read More »

ಡೆಡ್ಲಿ ಬ್ಲೂವೇಲ್ : ಏನಿದು ಆಟ…? : ಮಕ್ಕಳು ಬಲಿಯಾಗುವುದು ಯಾಕೆ?, ಹೇಗೆ?

ಈಗ ಎಲ್ಲಿ ನೋಡಿದರೂ `ಬ್ಲೂವೇಲ್’ ಎಂಬ ಡೆಡ್ಲಿ ಗೇಮ್‍ನದ್ದೇ ಸದ್ದು. ಡೆಡ್ಲಿ ಚಾಲೆಂಜ್‍ಗಳ್ಳುಳ್ಳ ಈ 50 ದಿನಗಳ ಆಟ ಮುಗ್ಧ ಮಕ್ಕಳ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದೆ. ಕೊನೆಗೆ ಅದೇ ಮಕ್ಕಳನ್ನು ಬಲಿ ತೆಗೆದುಕೊಳ್ಳುತ್ತಿದೆ. ಇಂತಹ ಭಯಾನಕ ಗೇಮ್‍ಗೆ ಮರುಳಾಗಿ, ಮಕ್ಕಳು ಹಾಗೂ ಹದಿಹರೆಯದವರು ತಮ್ಮ ಅಮೂಲ್ಯ ಜೀವವನ್ನು ಕಳೆದುಕೊಳ್ಳುತ್ತಿದ್ದಾರೆ. ಈ ಡೆಡ್ಲಿ ಗೇಮ್‍ನ ರೂವಾರಿ ಫಿಲಿಪ್ ಬುಡ್ಡಿಟೀನ್. ಈತ ಮನಃಶಾಸ್ತ್ರದ ವಿದ್ಯಾರ್ಥಿ. ಅವನ ಪ್ರಕಾರ ಈ ಗೇಮ್‍ನ ಬಲಿಪಶುಗಳು `ಬಯೋಲಾಜಿಕಲ್ ವೇಸ್ಟ್’ …

Read More »

ಮಹೇಂದ್ರಾದಿಂದ ಇ ರಿಕ್ಷಾ ಲೋಕಾರ್ಪಣೆ : 1.12 ಲಕ್ಷಕ್ಕೆ ಸಿಗುತ್ತದೆ ಮಿನಿ ವಾಹನ

ನವದೆಹಲಿ : ಭಾರತವನ್ನು ಇ ವಾಹನಯುಕ್ತ ಮಾಡಬೇಕು ಎಂಬ ಕೇಂದ್ರ ಸರ್ಕಾರದ ಕನಸಿಗೆ ಸರಿಯಾಗಿ ಮಹೇಂದ್ರ ಕಂಪೆನಿ ತನ್ನ ಮೊದಲ ಇ ರಿಕ್ಷಾವನ್ನು ಲೋಕಾರ್ಪಣೆ ಮಾಡಿದೆ. ಈ ಇ ರಿಕ್ಷಾಗೆ ಇ ಅಲ್ಫಾ ಮಿನಿ ಎಂದು ಹೆಸರಿಡಲಾಗಿದೆ. ಇದರ ಬೆಲೆ ಸುಮಾರು 1.12 ಲಕ್ಷ ಆಗಿದ್ದು, ನವದೆಹಲಿ, ಕೋಲ್ಕತ್ತಾ ಮತ್ತು ಲಕ್ನೋದಲ್ಲಿ ಕಡೆ ಮಾರುಕಟ್ಟೆಯಲ್ಲಿ ಲಭ್ಯವಿದೆ. ಸದ್ಯದ ವರೆಗೆ ದೇಶದಲ್ಲಿ ಮಹೇಂದ್ರ ಸಂಸ್ಥೆ ಮಾತ್ರ ಬ್ಯಾಟರಿ ಚಾಲಿತ ವಾಹನವನ್ನು ತಯಾರು …

Read More »

ನೋವು ತೋಡಿಕೊಂಡಿದ್ದಾಳೆ ಹುಟ್ಟುಹಬ್ಬದಂದೇ ಆಸೀಡ್ ದಾಳಿಗೊಳಗಾದ 21 ವರ್ಷದ ಹುಡುಗಿ…!

ಲಂಡನ್ : 21 ವರ್ಷದ ಬ್ರಿಟಿಷ್​ ಯುವತಿಯೊಬ್ಬಳು ಕಳೆದ ಜೂನ್​ನಲ್ಲಿ ಆಸೀಡ್ ದಾಳಿಗೊಳಗಾಗಿದ್ದಳು. ಆಗ ನೋವಿನಿಂದ ಬಳಲುತ್ತಾ ಸಂಕಷ್ಟ ಅನುಭವಿಸಿದ್ದ ಈ ಯುವತಿ ಈಗ ಗುಣಮುಖಳಾಗುತ್ತಿದ್ದಾಳೆ. ತನ್ನ ಚೇತರಿಕೆಯ ಮೊದಲ ಫೋಟೋವನ್ನು ಈ ಯುವತಿ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡು ತನ್ನ ನೋವನ್ನು ಹಂಚಿಕೊಂಡಿದ್ದಾಳೆ. Nazar na lagey – 02/09/17 pic.twitter.com/F2Inu07kwH — Resh (@ReshKhan_) September 2, 2017 ರೇಶಮ್​ ಖಾನ್​, ಬ್ಯುಸಿನೆಸ್ ಮ್ಯಾನೇಜ್​ಮೆಂಟ್​ ವಿದ್ಯಾರ್ಥಿನಿ. ಜೂನ್​ 21 …

Read More »

ಬ್ಲೂವೇಲ್ ಗೇಮ್​ನಿಂದ ಮಕ್ಕಳನ್ನು ರಕ್ಷಿಸುವುದು ಹೇಗೆ…? : ಇಲ್ಲಿದೆ ಪಂಚಸೂತ್ರಗಳು..

ಬೆಂಗಳೂರು : ಮಕ್ಕಳ ಜೀವದೊಂದಿಗೆ ಆಟ ಆಡುವ ಬ್ಲೂ ವೇಲ್​ ಎಂಬ ಗೇಮ್​ ಈಗ ಭೀತಿ ಮೂಡಿಸಿದೆ. ಮುಗ್ದ ಮಕ್ಕಳು ಈ ಇಂಟರ್​ನೆಟ್ ಆಟದ ಮೋಡಿಗೆ ಮರುಳಾಗಿ ಜೀವ ಕಳೆದುಕೊಳ್ಳುತ್ತಿದ್ದಾರೆ. ಕರ್ನಾಟಕದಲ್ಲಿ ಇಂತಹ ಪ್ರಕರಣ ದಾಖಲಾಗಿಲ್ಲವಾದರೂ ಜಾಗೃತಿ ಮೂಡಿಸುವ ಕೆಲಸವಂತೂ ಕಡ್ಡಾಯವಾಗಿ ಆಗಬೇಕಾಗಿದೆ. ಶಾಲೆಯಲ್ಲೇ ಮಕ್ಕಳಿಗೆ ಇಂತಹ ಜಾಗೃತಿ ಮೂಡಿಸಬೇಕಾಗಿದೆ, ಜೊತೆಗೆ ಪೋಷಕರು ಮತ್ತು ಶಿಕ್ಷಕರು ಮಕ್ಕಳ ಚಲನವಲನದ ಮೇಲೆ ಒಂದು ಕಣ್ಣಿಡಬೇಕಾಗಿದೆ. ಏನು ಆ ಪಂಚಸೂತ್ರಗಳು…? ಮಕ್ಕಳ ದೇಹ …

Read More »
error: Content is protected !!