Tuesday , November 13 2018
ಕೇಳ್ರಪ್ಪೋ ಕೇಳಿ
Home / Sudina Special (page 3)

Sudina Special

ಸೊನ್ನೆಯ ಇತಿಹಾಸ : ಅಧ್ಯಯನದಿಂದ ಗೊತ್ತಾಯ್ತು ಮತ್ತೊಂದು ಸತ್ಯ : 500 ವರ್ಷ ಮತ್ತೆ ಹಿಂದಕ್ಕೆ ಹೋಗುತ್ತದೆ ಹಿಸ್ಟರಿ

ನವದೆಹಲಿ : ಗಣಿತಶಾಸ್ತ್ರದಲ್ಲಿ ಪ್ರಮುಖ ಪಾತ್ರ ವಹಿಸುವ ಸೊನ್ನೆಯನ್ನು ಕಂಡು ಹಿಡಿದದ್ದು ಭಾರತೀಯರು ಎಂಬ ಹೆಮ್ಮೆ ಎಲ್ಲರಿಗೂ ಇದೆ. ಈ ಹೆಮ್ಮೆಗೆ ಇನ್ನೊಂದು ಗರಿ ಸಂದಿದೆ… ಇತ್ತೀಚೆಗೆ ನಡೆದ ಅಧ್ಯಯನ ಸೊನ್ನೆಯ ಆವಿಷ್ಕಾರದ ದಿನಗಳನ್ನು ಈಗ ಗುರುತಿಸುವುದಕ್ಕಿಂತ ಮತ್ತೆ 500 ವರ್ಷಗಳಷ್ಟು ಹಿಂದಕ್ಕೆ ಕೊಂಡು ಹೋಗಿದೆ. ಭಾರತದ ಪ್ರಾಚೀನ ಬಖ್ಯಾಲಿ ಎಂಬ ಹಸ್ತಪ್ರತಿಯಲ್ಲಿ ಸೊನ್ನೆಯಂತಹ ಸಂಕೇತವನ್ನು ಬಳಸಲಾಗಿದೆ. ಗಣಿತಕ್ಕೆ ಸಂಬಂಧಿಸಿದಂತ ಅಂಶ ಕೂಡಾ ಇಲ್ಲಿವೆ. ಬರ್ಚ್​ ಎಂಬ ಮರದ ತೊಗಟೆಯಲ್ಲಿ …

Read More »

ಆಪಲ್​ನ ಮೂರು ಹೊಸ ಐಫೋನ್​ಗಳ ಬೆಲೆ ಎಷ್ಟು..? ಭಾರತದಲ್ಲಿ ಯಾವಾಗ ಬಿಡುಗಡೆ…?

ನವದೆಹಲಿ : ಆಪಲ್​ ಹೊಸ ಫೋನ್​ಗಳನ್ನು ಮಾರುಕಟ್ಟೆಗೆ ಬಿಟ್ಟಿರುವ ಸುದ್ದಿಯನ್ನು ನೀವು ಕೇಳಿರಬಹುದು. ಮೂರು ಹೊಸ ನಮೂನೆಯ ಫೋನ್​​ಗಳನ್ನು ಆಪಲ್​ ಬಿಡುಗಡೆ ಮಾಡಿದೆ. ಐಫೋನ್​8, ಐಫೋನ್​8 ಪ್ಲಸ್​ ಮತ್ತು ಐಫೋನ್​ ಎಕ್ಸ್​​​. ಇದರಲ್ಲಿ ಐಫೋನ್​8 ಮತ್ತು ಐಫೋನ್​8 ಪ್ಲಸ್​ನ ಆರಂಭಿಕ ಬೆಲೆ ಸುಮಾರು ಐಫೋನ್​7 ಮತ್ತು ಐಫೋನ್​7 ಪ್ಲಸ್ನ ಬೆಲೆಗಿಂತ ಸ್ವಲ್ಪ ಹೆಚ್ಚಿದೆ. ​ಐಫೋನ್​ 8 64ಜಿಬಿಗೆ 64,000 ರೂಪಾಯಿ, ಐಫೋನ್​​​8 256ಜಿಬಿಗೆ 77,000, ಐಫೋನ್​​8 ಪ್ಲಸ್​ 64ಜಿಬಿ 73,000, …

Read More »

ಡೆಡ್ಲಿ ಬ್ಲೂವೇಲ್ : ಏನಿದು ಆಟ…? : ಮಕ್ಕಳು ಬಲಿಯಾಗುವುದು ಯಾಕೆ?, ಹೇಗೆ?

ಈಗ ಎಲ್ಲಿ ನೋಡಿದರೂ `ಬ್ಲೂವೇಲ್’ ಎಂಬ ಡೆಡ್ಲಿ ಗೇಮ್‍ನದ್ದೇ ಸದ್ದು. ಡೆಡ್ಲಿ ಚಾಲೆಂಜ್‍ಗಳ್ಳುಳ್ಳ ಈ 50 ದಿನಗಳ ಆಟ ಮುಗ್ಧ ಮಕ್ಕಳ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದೆ. ಕೊನೆಗೆ ಅದೇ ಮಕ್ಕಳನ್ನು ಬಲಿ ತೆಗೆದುಕೊಳ್ಳುತ್ತಿದೆ. ಇಂತಹ ಭಯಾನಕ ಗೇಮ್‍ಗೆ ಮರುಳಾಗಿ, ಮಕ್ಕಳು ಹಾಗೂ ಹದಿಹರೆಯದವರು ತಮ್ಮ ಅಮೂಲ್ಯ ಜೀವವನ್ನು ಕಳೆದುಕೊಳ್ಳುತ್ತಿದ್ದಾರೆ. ಈ ಡೆಡ್ಲಿ ಗೇಮ್‍ನ ರೂವಾರಿ ಫಿಲಿಪ್ ಬುಡ್ಡಿಟೀನ್. ಈತ ಮನಃಶಾಸ್ತ್ರದ ವಿದ್ಯಾರ್ಥಿ. ಅವನ ಪ್ರಕಾರ ಈ ಗೇಮ್‍ನ ಬಲಿಪಶುಗಳು `ಬಯೋಲಾಜಿಕಲ್ ವೇಸ್ಟ್’ …

Read More »

ಮಹೇಂದ್ರಾದಿಂದ ಇ ರಿಕ್ಷಾ ಲೋಕಾರ್ಪಣೆ : 1.12 ಲಕ್ಷಕ್ಕೆ ಸಿಗುತ್ತದೆ ಮಿನಿ ವಾಹನ

ನವದೆಹಲಿ : ಭಾರತವನ್ನು ಇ ವಾಹನಯುಕ್ತ ಮಾಡಬೇಕು ಎಂಬ ಕೇಂದ್ರ ಸರ್ಕಾರದ ಕನಸಿಗೆ ಸರಿಯಾಗಿ ಮಹೇಂದ್ರ ಕಂಪೆನಿ ತನ್ನ ಮೊದಲ ಇ ರಿಕ್ಷಾವನ್ನು ಲೋಕಾರ್ಪಣೆ ಮಾಡಿದೆ. ಈ ಇ ರಿಕ್ಷಾಗೆ ಇ ಅಲ್ಫಾ ಮಿನಿ ಎಂದು ಹೆಸರಿಡಲಾಗಿದೆ. ಇದರ ಬೆಲೆ ಸುಮಾರು 1.12 ಲಕ್ಷ ಆಗಿದ್ದು, ನವದೆಹಲಿ, ಕೋಲ್ಕತ್ತಾ ಮತ್ತು ಲಕ್ನೋದಲ್ಲಿ ಕಡೆ ಮಾರುಕಟ್ಟೆಯಲ್ಲಿ ಲಭ್ಯವಿದೆ. ಸದ್ಯದ ವರೆಗೆ ದೇಶದಲ್ಲಿ ಮಹೇಂದ್ರ ಸಂಸ್ಥೆ ಮಾತ್ರ ಬ್ಯಾಟರಿ ಚಾಲಿತ ವಾಹನವನ್ನು ತಯಾರು …

Read More »

ನೋವು ತೋಡಿಕೊಂಡಿದ್ದಾಳೆ ಹುಟ್ಟುಹಬ್ಬದಂದೇ ಆಸೀಡ್ ದಾಳಿಗೊಳಗಾದ 21 ವರ್ಷದ ಹುಡುಗಿ…!

ಲಂಡನ್ : 21 ವರ್ಷದ ಬ್ರಿಟಿಷ್​ ಯುವತಿಯೊಬ್ಬಳು ಕಳೆದ ಜೂನ್​ನಲ್ಲಿ ಆಸೀಡ್ ದಾಳಿಗೊಳಗಾಗಿದ್ದಳು. ಆಗ ನೋವಿನಿಂದ ಬಳಲುತ್ತಾ ಸಂಕಷ್ಟ ಅನುಭವಿಸಿದ್ದ ಈ ಯುವತಿ ಈಗ ಗುಣಮುಖಳಾಗುತ್ತಿದ್ದಾಳೆ. ತನ್ನ ಚೇತರಿಕೆಯ ಮೊದಲ ಫೋಟೋವನ್ನು ಈ ಯುವತಿ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡು ತನ್ನ ನೋವನ್ನು ಹಂಚಿಕೊಂಡಿದ್ದಾಳೆ. Nazar na lagey – 02/09/17 pic.twitter.com/F2Inu07kwH — Resh (@ReshKhan_) September 2, 2017 ರೇಶಮ್​ ಖಾನ್​, ಬ್ಯುಸಿನೆಸ್ ಮ್ಯಾನೇಜ್​ಮೆಂಟ್​ ವಿದ್ಯಾರ್ಥಿನಿ. ಜೂನ್​ 21 …

Read More »

ಬ್ಲೂವೇಲ್ ಗೇಮ್​ನಿಂದ ಮಕ್ಕಳನ್ನು ರಕ್ಷಿಸುವುದು ಹೇಗೆ…? : ಇಲ್ಲಿದೆ ಪಂಚಸೂತ್ರಗಳು..

ಬೆಂಗಳೂರು : ಮಕ್ಕಳ ಜೀವದೊಂದಿಗೆ ಆಟ ಆಡುವ ಬ್ಲೂ ವೇಲ್​ ಎಂಬ ಗೇಮ್​ ಈಗ ಭೀತಿ ಮೂಡಿಸಿದೆ. ಮುಗ್ದ ಮಕ್ಕಳು ಈ ಇಂಟರ್​ನೆಟ್ ಆಟದ ಮೋಡಿಗೆ ಮರುಳಾಗಿ ಜೀವ ಕಳೆದುಕೊಳ್ಳುತ್ತಿದ್ದಾರೆ. ಕರ್ನಾಟಕದಲ್ಲಿ ಇಂತಹ ಪ್ರಕರಣ ದಾಖಲಾಗಿಲ್ಲವಾದರೂ ಜಾಗೃತಿ ಮೂಡಿಸುವ ಕೆಲಸವಂತೂ ಕಡ್ಡಾಯವಾಗಿ ಆಗಬೇಕಾಗಿದೆ. ಶಾಲೆಯಲ್ಲೇ ಮಕ್ಕಳಿಗೆ ಇಂತಹ ಜಾಗೃತಿ ಮೂಡಿಸಬೇಕಾಗಿದೆ, ಜೊತೆಗೆ ಪೋಷಕರು ಮತ್ತು ಶಿಕ್ಷಕರು ಮಕ್ಕಳ ಚಲನವಲನದ ಮೇಲೆ ಒಂದು ಕಣ್ಣಿಡಬೇಕಾಗಿದೆ. ಏನು ಆ ಪಂಚಸೂತ್ರಗಳು…? ಮಕ್ಕಳ ದೇಹ …

Read More »

ಕೈಗೆ ಹಾಕಿದ್ದ ಕೋಳ ತೆಗೆದು ಪೊಲೀಸ್​ ವಾಹನದೊಂದಿಗೆ ಪರಾರಿಯಾದ ಮಹಿಳೆ…! : ಇಲ್ಲಿದೆ ವೀಡಿಯೋ

ಲುಫ್ಕಿನ್ (ಟೆಕ್ಸಾಸ್​) : ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿದ 33 ವರ್ಷದ ಮಹಿಳೆಯನ್ನು ಪೊಲೀಸರು ವಾಹನದಲ್ಲಿ ಕರೆದುಕೊಂಡು ಹೋಗುವಾಗ ದೊಡ್ಡ ಹೈಡ್ರಾಮಾವೇ ನಡೆದಿದೆ. ಈ ಮಹಿಳೆ ತನ್ನ ಕೈಗೆ ಹಾಕಿದ್ದ ಕೋಳವನ್ನು ತೆಗೆದು ಪೊಲೀಸ್​ ವಾಹನದೊಂದಿಗೆಯೇ ಪರಾರಿಯಾಗಿದ್ದಾಳೆ. ಈ ವೀಡಿಯೋವನ್ನು ಲುಫ್ಕಿನ್​ ಪೊಲೀಸರು ಬಿಡುಗಡೆ ಮಾಡಿದ್ದಾರೆ. ಈ ವೀಡಿಯೋ ಈಗ ಸಖತ್ ವೈರಲ್ ಆಗಿದೆ. ವಾಹನದೊಂದಿಗೆ ಪರಾರಿಯಾದ ಮಹಿಳೆಯನ್ನು ಸ್ವಲ್ಪ ಹೊತ್ತಿನಲ್ಲೇ ಬಂಧಿಸಲಾಗಿದೆ. ಬಂಧಿತ ಮಹಿಳೆಯನ್ನು 33 ವರ್ಷದ ಟೋಸ್ಚಾ ಫೇ …

Read More »

ಕ್ರೀಸ್​​ನಲ್ಲೇ 4.5 ಕೆಜಿ ತೂಕ ಕಳೆದುಕೊಂಡ ಆಸ್ಟ್ರೇಲಿಯಾ ಬ್ಯಾಟ್ಸ್​​ಮನ್​​..!

ಚಿತ್ತಗಾಂಗ್​​, ಬಾಂಗ್ಲಾದೇಶ: ಮೈಸುಡುವ ಬಿಸಿಲು, ಜೊತೆಗೆ ಆಯಾಸ ಬ್ಯಾಟ್ಸ್​ಮನ್​​​ ಮೇಲೆ ಇದು ಎಷ್ಟು ಪರಿಣಾಮ ಬೀರಿತ್ತು ಎಂದರೆ ಊಹಿಸಲೂ ಅಸಾಧ್ಯ. ಆಸ್ಟ್ರೇಲಿಯಾದ ಬ್ಯಾಟ್ಸ್​​ಮನ್​​ ಪೀಟರ್​ ಹ್ಯಾಂಡ್ಸ್​ಕೊಂಬ್​ ಎರಡೂವರೆ ಗಂಟೆಗಳ ಕಾಲ ಕ್ರೀಸ್​​ನಲ್ಲಿ ಬ್ಯಾಟಿಂಗ್​ ನಡೆಸಿ 4.5 ಕೆ.ಜಿ. ತೂಕ ಕಳೆದುಕೊಂಡಿದ್ದಾರೆ. ಆತಿಥೇಯ ಬಾಂಗ್ಲಾದೇಶ ವಿರುದ್ಧ ಚಿತ್ತಗಾಂಗ್​​ನಲ್ಲಿ ಆಸ್ಟ್ರೇಲಿಯಾ 2 ನೇ ಟೆಸ್ಟ್​​ ಆಡುತ್ತಿದೆ. 2ನೇ ದಿನದಾಟದ ವೇಳೆ ಚಿತ್ತಗಾಂಗ್​ನಲ್ಲಿ ಉಷ್ಣತೆ 30 ಡಿಗ್ರಿ ಸೆಲ್ಸಿಯಸ್​ ಇತ್ತು. ತೇವಾಂಶ ಶೇ80ಕ್ಕೆ ತಲುಪಿತ್ತು. …

Read More »

ಜೀವ ತೆಗೆಯುವ ‘ಬ್ಲೂ ವೇಲ್​’  : ಸಾವಿನಂಚಿಗೆ ಹೋಗಿಬಂದವ ಹೇಳಿದ್ದೇನು..?

ಕಾರೈಕಲ್​​, ಪುದುಚೇರಿ : 22 ವರ್ಷದ ಪುದುಚೇರಿಯ ಯುವಕ ಅಲೆಕ್ಸಾಂಡರ್​.. ಬ್ಲೂ ವೇಲ್​ ಗೇಮ್​​ನ ಎಲ್ಲಾ ಕಠಿಣ ಸವಾಲುಗಳನ್ನು ದಾಟಿ ಅಂತಿಮ ಹಂತಕ್ಕೆ ಬಂದು ತಲುಪಿದ್ದ. 50ನೇ ದಿನದ ಕೊನೆಯ ಟಾಸ್ಕ್​​ ಆತ್ಮಹತ್ಯೆ ಮಾಡಿಕೊಳ್ಳುವುದಷ್ಟೇ ಬಾಕಿ ಇತ್ತು. ಹೇಗೋ ಈ ಸುದ್ದಿ ಕಾರೈಕಲ್​ ಪೊಲೀಸರಿಗೆ ಗೊತ್ತಾಗಿ ಹೋಗಿತ್ತು. ಈತನ ಮನೆಗೆ ಧಾವಿಸಿದ ಪೊಲೀಸರು ಯುವಕನನ್ನು ಸಾವಿನ ದವಡೆಯಿಂದ ಎಳೆದು ತಂದಿದ್ದರು. ಈ ಯುವಕ ಭಯಾನಕ ಅನುಭವವನ್ನು ಪೊಲೀಸರ ಮುಂದೆ ಹಂಚಿಕೊಂಡಿದ್ದಾನೆ. …

Read More »

ಚಂಡಮಾರುತವನ್ನೇ ಬೆನ್ನಟ್ಟಿದ್ದನ್ನು ನೋಡಿದ್ದೀರಾ..?- ಇಲ್ಲಿದೆ ಭಯಾನಕ ವೀಡಿಯೊ..!

ಟೆಕ್ಸಾಸ್​ : ಅಮೇರಿಕಾದ ಟೆಕ್ಸಾಸ್​  ರಾಜ್ಯದಲ್ಲಿ ‘ಹಾರ್ವೆ’ ಚಂಡಮಾರುತ ರುದ್ರನರ್ತನಗೈದ ಬೆನ್ನಿಗೇ ಇನ್ನೊಂದು ಚಂಡಮಾರುತ ‘ಇರ್ಮಾ’ ಕೆರಿಬಿಯನ್​ ದ್ವೀಪಗಳು ಮತ್ತು ಅಮೆರಿಕಾದ ಫ್ಲೊರಿಡಾ ರಾಜ್ಯದತ್ತ ಮುನ್ನುಗ್ಗುತ್ತಿದೆ. ‘ಕೆಟಗರಿ-4’ ಬಿರುಗಾಳಿಯಾಗಿ ಧಾವಿಸುತ್ತಿರುವ ‘ಇರ್ಮಾ’ ಮತ್ತಷ್ಟು ಪ್ರಬಲಗೊಂಡು ಇವತ್ತೇ ತೀರಕ್ಕೆ ಅಪ್ಪಳಿಸುವ ನಿರೀಕ್ಷೆ ಇದೆ. ಆದರೆ ನಾವು ನಿಮಗೆ ಹೇಳಲಿಕ್ಕೆ ಹೊರಟಿರೋ ವಿಷಯ ಇದಲ್ಲ. ಚಂಡಮಾರುತವನ್ನೇ ಬೆನ್ನಟ್ಟಿದರೆ ಏನಾಗತ್ತೆ..? ಊಹಿಸಲೂ ಕಷ್ಟ ಅಲ್ವೇ..? ಆದರೆ ನಮ್ಮ ವಿಜ್ಞಾನ ಎಷ್ಟು ಮುಂದುವರೆದಿದೆ ಎಂದರೆ ಈಗ ಚಂಡಮಾರುತವನ್ನೇ …

Read More »
error: Content is protected !!