Saturday , September 22 2018
ಕೇಳ್ರಪ್ಪೋ ಕೇಳಿ
Home / Sudina Special (page 5)

Sudina Special

ನಕ್ಸಲ್ ಪೀಡಿತ ಪ್ರದೇಶಕ್ಕೆ ಸಿಆರ್‍ಪಿಎಫ್‍ನ ಮೊದಲ ಮಹಿಳಾ ಆಫೀಸರ್ ನೇಮಕ : ಇಲ್ಲಿದೆ ಧೀರೆ ಉಷಾ ಕಿರಣ್ ಕತೆ

ಬಸ್ತಾರ್ : ಛತ್ತೀಸ್‍ಗಡ ನಕ್ಸಲ್ ಪೀಡಿತ ಪ್ರದೇಶ. ನಕ್ಸಲರು ಇಲ್ಲಿ ರಕ್ತದೋಕುಳಿಯನ್ನೇ ಹರಿಸಿದ್ದಿದೆ. ಇಂತಹ ಪ್ರದೇಶಕ್ಕೆ ಸಿಆರ್‍ಪಿಎಫ್ ಮೊದಲ ಮಹಿಳಾ ಅಧಿಕಾರಿಯನ್ನು ನೇಮಿಸಿದೆ. ನಕ್ಸಲ್ ಪೀಡಿತ ಬಸ್ತಾರ್ ಪ್ರದೇಶದಲ್ಲಿ ಉಷಾ ಕಿರಣ್ ಎಂಬ ಧೀರ ವನಿತೆ ಕಾರ್ಯನಿರ್ವಹಿಸಲಿದ್ದಾರೆ. ಇದು ಮಹಿಳೆಯರಿಗೆ ನಿಜಕ್ಕೂ ಒಂದು ಮಾದರಿ ಮತ್ತು ಸ್ಫೂರ್ತಿದಾಯಕ ನಡೆ ಆಗಿದೆ. 27 ವರ್ಷದ ಉಷಾ ಕಿರಣ್ ಇಲ್ಲಿ ತನ್ನ ಎಕೆ 47 ರೈಫಲ್‍ನಿಂದ ಬುಡಕಟ್ಟು ಸಮುದಾಯದ ಜನರನ್ನು ರಕ್ಷಣೆ ಮಾಡುತ್ತಿದ್ದಾರೆ. …

Read More »

ಸಲ್ಮಾನ್ ಖಾನ್ ತುಳು ಮಾತನಾಡಿದ್ದನ್ನು ಕೇಳಿದ್ದೀರಾ…?

ಐಶ್ವರ್ಯ ರೈ, ಶಿಲ್ಪಾ ಶೆಟ್ಟಿ, ಸುನಿಲ್ ಶೆಟ್ಟಿ ಹೀಗೆ ತುಳುನಾಡಿನಲ್ಲಿ ಹುಟ್ಟಿ ಬಾಲಿವುಡ್‍ನಲ್ಲಿ ಹೆಸರು ಮಾಡಿರುವ ಹಲವರು ತುಳು ಮಾತನಾಡುವ ಮೂಲಕ ಈ ನೆಲದ ಘಮವನ್ನು ಅಲ್ಲೂ ಪಸರಿಸಿದ್ದಾರೆ. ಆದರೆ, ಬಾಲಿವುಡ್‍ನ ಇನ್ನೋರ್ವ ನಟ ಸಲ್ಮಾನ್ ಖಾನ್ ಕೂಡಾ ಚೆನ್ನಾಗಿಯೇ ತುಳು ಮಾತನಾಡುತ್ತಾರೆ ಅಂದರೆ ನಂಬ್ತೀರಾ…? ಸಲ್ಮಾನ್ ತುಳು ಮಾತನಾಡುವುದಕ್ಕೆ ಈ ವೀಡಿಯೋನೇ ಸಾಕ್ಷಿ. ಇದು ಹಳೆಯ ವೀಡಿಯೋ. ಸಲ್ಮಾನ್ ನಡೆಸಿಕೊಡುತ್ತಿರುವ ಬಿಗ್‍ಬಾಸ್ ಸೀಸನ್ 6ರ ವೀಡಿಯೋ. ಇಲ್ಲಿ ಸಲ್ಮಾನ್ …

Read More »

ಶಾರೂಖ್ ಖಾನ್ ಹುಟ್ಟಿದ್ದು, ಬೆಳೆದದ್ದು ಮಂಗಳೂರಿನಲ್ಲಿ…! : ಇಲ್ಲಿದೆ ಶಾರೂಖ್ ಮಾತು

ಮಂಗಳೂರು : ಬಾಲಿವುಡ್‍ನಲ್ಲಿ ಕರಾವಳಿಯ ಕುಡಿಗಳು ಸಾಕಷ್ಟು ಹೆಸರು ಮಾಡಿವೆ. ಐಶ್ವರ್ಯ ರೈ (ಈಗ ಐಶ್ವರ್ಯ ರೈ ಬಚ್ಚನ್), ಶಿಲ್ಪಾ ಶೆಟ್ಟಿ, ಸುನಿಲ್ ಶೆಟ್ಟಿ, ಸ್ನೇಹಾ ಉಳ್ಳಾಲ್, ದೀಪಿಕಾ ಪಡುಕೋಣೆ, ಯಜ್ಞೇಶ್ ಶೆಟ್ಟಿ… ಹೀಗೆ ಪಟ್ಟಿ ಬಲು ದೊಡ್ಡದೇ ಇದೆ. ಇದು ಕರಾವಳಿಗರಿಗೆ ಹೆಮ್ಮೆಯ ವಿಷಯವೂ ಹೌದು. ಈ ಹೆಮ್ಮೆಗೆ ಶಾರೂಖ್ ಹೆಸರು ಕೂಡಾ ಕರಾವಳಿಗರು ಸೇರಿಸಿಕೊಳ್ಳಬಹುದು. ಯಾಕೆಂದರೆ, ಬಾಲಿವುಡ್ ಕಿಂಗ್‍ಖಾನ್ ಶಾರೂಖ್ ಹುಟ್ಟಿದ್ದು ಮತ್ತು ಬಾಲ್ಯವನ್ನು ಕಳೆದದ್ದು ನಮ್ಮ …

Read More »

ಗವಿ ಗಂಗಾಧರೇಶ್ವರನಿಗೆ ಸೂರ್ಯಾಭಿಷೇಕ : ಇಲ್ಲಿದೆ ವೀಡಿಯೋ

ಬೆಂಗಳೂರು : ರಾಜಧಾನಿ ಬೆಂಗಳೂರಿನ ಐತಿಹಾಸಿಕ ಗವಿಗಂಗಾಧರೇಶ್ವರ ದೇಗುಲದಲ್ಲಿ ಮಕರ ಸಂಕ್ರಮಣದಂದು ದೇವರಿಗೆ ಸೂರ್ಯಾಭಿಷೇಕ ನಡೆದಿದೆ. ಪಥ ಬದಲಾಯಿಸಿದ ಸೂರ್ಯ ಗವಿಗಂಗಾಧರೇಶ್ವರ ದೇಗುಲದ ಶಿವಲಿಂಗವನ್ನು ಸ್ಪರ್ಶಿಸಿದೆ. ಸಾವಿರಾರು ಭಕ್ತರು ಈ ದೃಶ್ಯವನ್ನು ಕಂಡು ಪುಳಕಗೊಂಡಿದ್ದಾರೆ. ದಕ್ಷಿಣಾಯನದಿಂದ ಉತ್ತರಾಯಣಕ್ಕೆ ಪ್ರಯಾಣಿಸುವ ಸೂರ್ಯನ ಕಿರಣಗಳು ದೇಗುಲದ ಬಲಬದಿ ಕಿಂಡಿಯಿಂದ ಪ್ರವೇಶಿಸಿ, ನಂದಿಯ ಕೊಂಬಿನ ಮೂಲಕ ರಶ್ಮಿಯ ಶಿವನ ಪಾದ ಸ್ಪರ್ಶ ಮಾಡುತ್ತದೆ. ಪಾಣಿಪೀಠದಿಂದ ನಿಧಾನವಾಗಿ ಶಿವಲಿಂಗದ ಪೂರ್ತಿ ಸೂರ್ಯರಶ್ಮಿ ವ್ಯಾಪಿಸುತ್ತದೆ. ಗವಿಪುರಂ ಗುಟ್ಟಹಳ್ಳಿಯಲ್ಲಿ …

Read More »

ನಾಗರಹಾವಿನ ಹೆಡೆಯಲ್ಲಿ ಹೃದಯಾಕೃತಿ…! ಇಲ್ಲಿದೆ ವೀಡಿಯೋ

ಉಡುಪಿ : ಕೃಷ್ಣನೂರು ಉಡುಪಿಯಲ್ಲಿ ಅಪರೂಪದ ನಾಗರಹಾವು ಪತ್ತೆ ಆಗಿದೆ. ಈ ನಾಗರಹಾವಿನ ಹೆಡೆಯಲ್ಲಿ ಹೃದಯಾಕೃತಿ ಇದೆ. ಸಾಮಾನ್ಯವಾಗಿ ಇರುವ ಹಾವಿಗಿಂತ ವಿಭಿನ್ನ ಹೆಡೆ ಇದಕ್ಕಿದೆ… ಪರ್ಕಳದ ರಾಜೇಶ್ ಕೋಟ್ಯಾನ್ ಅವರ ಮನೆ ಬಳಿ ಈ ಹಾವು ಕಾಣಸಿಕ್ಕಿದೆ. ಈ ಹಾವನ್ನು ಕಂಡು ಭಯಭೀತರಾದ ಮನೆಯವರು ತಕ್ಷಣವೇ ಸ್ಥಳಕ್ಕೆ ಉರಗ ತಜ್ಞ ಗುರುರಾಜ ಸನಿಲ್ ಅವರಿಗೆ ವಿಷಯ ತಿಳಿಸಿದರು. ಗುರುರಾಜ್ ಬಂದು ಇಲ್ಲಿ ಹಾವು ಹಿಡಿದು ನೋಡಿದಾಗ ಈ ಹಾವಿನ …

Read More »

ಮಹಿಳಾ ಕ್ರಿಕೆಟ್ ತಂಡದ `ಲೇಡಿ ಸಚಿನ್’ : ಗ್ಲಾಮರ್ ಲೋಕದಲ್ಲೂ ಗಮನ ಸೆಳೆದ ಚೆಲುವೆ

ಮುಂಬೈ : ಭಾರತ ಮಹಿಳಾ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ಮೈಥಿಲಿ ರಾಜ್ ಇತ್ತೀಚೆಗಷ್ಟೇ 34ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ನಡುವೆ, ಮೈಥಿಲಿಗೆ ಖುಷಿ ಕೊಡುವ ಸುದ್ದಿಯೂ ಬಂದಿದೆ. ಐಸಿಸಿ ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ತಂಡವನ್ನು ಮುನ್ನಡೆಸುವ ಹೊಣೆಯೂ ಇವರಿಗೆ ಸಿಕ್ಕಿದೆ. ಮಹಿಳಾ ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಅತ್ಯಧಿಕ ರನ್ ಗಳಿಸಿದ ಎರಡನೇ ಆಟಗಾರ್ತಿ ಮೈಥಿಲಿ ರಾಜ್. ಇದಾದ ಬಳಿಕವೇ ಇವರನ್ನು `ಲೇಡಿ ಸಚಿನ್’ ಎಂದು ಎಲ್ಲರೂ ಪ್ರೀತಿಯಿಂದ ಕರೆಯುತ್ತಾರೆ. ತನ್ನ …

Read More »

ನಾಯಕತ್ವ ತೊರೆದ ಧೋನಿ : ಇಲ್ಲಿದೆ ಧೋನಿಯ ಕೆಲವು ಅಪರೂಪದ ಫೋಟೋಗಳು

ರಾಂಚಿ : ಟೀಂ ಇಂಡಿಯಾ ನಾಯಕನ ಸ್ಥಾನಕ್ಕೆ ಧೋನಿ ರಾಜೀನಾಮೆ ಕೊಟ್ಟಿದ್ದಾರೆ. ಬರೀ ಆಟಗಾರನಾಗಿ ಇರುವ ಇಂಗಿತವನ್ನು ಇವರು ವ್ಯಕ್ತಪಡಿಸಿದ್ದಾರೆ. ಧೋನಿ ಅಭಿಮಾನಿಗಳಿಗೆ ಈ ನಿರ್ಧಾರ ದೊಡ್ಡ ಆಘಾತ ತಂದಿದೆ. ಈ ಎಲ್ಲಾ ನೋವಿನ ನಡುವೆಯೂ ಧೋನಿ ಬಗೆಗಿನ ಅಪರೂಪದ ಚಿತ್ರಗಳು ನಿಮಗಾಗಿ…

Read More »
error: Content is protected !!