Saturday , September 22 2018
ಕೇಳ್ರಪ್ಪೋ ಕೇಳಿ
Home / Yashasse Haadi

Yashasse Haadi

ಅಂದು ಕಡುಬಡವನಾಗಿದ್ದವ – ಇಂದು ಎರಡು ಕಂಪೆನಿಗಳ ಒಡೆಯನಾದವ

ನೀವು ಒಂದು ಬಲವಾದ ಉದ್ದೇಶಕ್ಕಾಗಿ ಜೀವಿಸುವಾಗ ಶ್ರಮವೆನ್ನುವುದು ಒಂದು ಆಯ್ಕೆಯಾಗಿ ಉಳಿಯುವುದಿಲ್ಲ. ಅದು ಅವಶ್ಯಕತೆಯಾಗಿ ಬದಲಾಗುತ್ತದೆ ಎಂದ ಸ್ಟೀವ್ ಪಾವ್ಲಿನಾ ಮಾತುಗಳು ಗಮನಾರ್ಹ. ಯಾವೆಲ್ಲ ರಸ್ತೆಗಳೂ ಯಶಸ್ಸಿನತ್ತ ಒಯ್ಯುವುವೋ ಅವೆಲ್ಲಾ ರಸ್ತೆಗಳು ಯಾವುದೋ ಒಂದು ಸಮಯದಲ್ಲಿ ಶ್ರಮದ ಕೆಲಸವೆನ್ನುವ ರಸ್ತೆಯಲ್ಲಿ ಹೋಗಲೇಬೇಕು. ನಿಮಗೆ ಏನು ಎಷ್ಟು ಅವಶ್ಯಕವಾಗಿ ಬೇಕೆನ್ನುವುದನ್ನು ಅದನ್ನು ಪಡೆಯಲು ನೀವೆಷ್ಟು ಕಷ್ಟಪಡಲು ಸಿದ್ಧ ಎನ್ನುವುದರ ಮೇಲೆ ಅವಲಂಬಿತವಾಗಿರುತ್ತದೆ. ಇಂತಹ ಕಷ್ಟಪಟ್ಟು ಎರಡೆರಡು ದೋಣಿಗಳಲ್ಲಿ ಯಶಸ್ವಿಯಾಗಿ ಪ್ರಯಾಣ ಮಾಡುತ್ತಿರುವ …

Read More »

ದುಡಿಯುವ ಕೈಗಳು

ಎಲ್ಲರಿಗೂ ಓದುವ ಅದೃಷ್ಟವಿರುವುದಿಲ್ಲ. ಕೆಲವರಿಗೆ ಅವಕಾಶವಿದ್ದೂ ಓದುವುದಿಲ್ಲ. ಮತ್ತೆ ಕೆಲವರು ಅವಕಾಶ ವಂಚಿತರೆಂದೇ ಹೇಳಬೇಕು. ಆದರೆ, ಅದು ಅವರನ್ನು ಏನೂ ಮಾಡದೇ ನಿರಾಶರಾಗಿ ಬದುಕು ಕಳೆಯಲು, ಕಳೆದುಕೊಳ್ಳಲು ನಿರ್ಧಾರ ತೆಗೆದುಕೊಳ್ಳುವಂತೆ ಮಾಡಬಾರದು. ಅವಕಾಶವೆನ್ನುವುದು ಒಂದು ಬಾಗಿಲಿನ ಆಚೆ ಕಡೆ ಇರುವ ಶಕ್ತಿ. ಅದು ಯಾವಾಗ ಬೇಕಾದರೂ ಆ ಬಾಗಿಲನ್ನು ತಟ್ಟಬಹುದು. ಆದರೆ, ಅದು ತಟ್ಟಲಿದೆ ಎಂದು ನಾವು ಕಾಯುವ ಅಗತ್ಯವಿಲ್ಲ. ಬಾಗಿಲು ತೆರೆದಿಟ್ಟು ಅದು ಯಾವಾಗ ಕದ ತಟ್ಟಲು ಬರುವುದೋ …

Read More »

ಯಶಸ್ಸೇ ಹಾದಿ : ನೇಪಥ್ಯ ಗಾನ

ಸಕ್ಸೆಸ್ ಈಸ್ ನಾಟ್ ದಿ ಡೆಸ್ಟಿನೇಷನ್… ಇಟ್ಸ್ ದಿ ಜರ್ನಿ ಎನ್ನುವ ಫಲಕವನ್ನು ಯಾವುದೋ ಆಫೀಸಿನಲ್ಲಿ ನೋಡಿದ್ದೆ. ಕೆಲ ಕಾಲ ಯೋಚಿಸಿದ ಮೇಲೆ ನಿಜ ಅಲ್ಲವೇ ಎನ್ನಿಸತೊಡಗಿತು. ಯಶಸ್ಸು ನಮ್ಮ ಗುರಿಯಾಗಬಾರದು, ಅದರತ್ತ ಪಯಣ ನಮ್ಮದಾಗಬೇಕು. ಅಂದರೆ ನಾವು ನಡೆಯುವ ದಾರಿಯೇ ಯಶಸ್ಸಿನದಾಗಬೇಕು. ಇದನ್ನು ಮಸ್ತಕದಲ್ಲಿ ಮಥಿಸುತ್ತಿದ್ದಂತೆ ನನಗೆ ಮಹಾಭಾರತದ ಪಾಂಡವರ ನೆನಪಾಯಿತು. `ಪಾಪ, ಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯ ಇಲ್ಲ’ ಎನ್ನುವ ಗಾದೆ ಮಾತು ಎಲ್ಲರಿಗೂ ತಿಳಿದಿರುವಂತಹದ್ದೇ. …

Read More »

ಯಶಸ್ಸಿನ ಕೀಲಿಕೈ

ಯಶಸ್ಸಿನ ಸಾಮಥ್ರ್ಯವೇ ಅಂತಹದ್ದು. ಅದು ಸದಾ ಸಕಾರಾತ್ಮಕ ಕ್ರಿಯೆಗಳನ್ನು ನಮ್ಮಿಂದ ಮಾಡಿಸುತ್ತಿದೆಯೇ ಹೊರತು ಬೇರೇನಿಲ್ಲ. ಯಶಸ್ಸು ಎನ್ನುವುದು ಒಂದಷ್ಟು ಪ್ರಮಾಣದಲ್ಲಿ ಬರುತ್ತದೆಂದು ಹಿರಿಯರು ಹೇಳುವುದುಂಟು. ಅದು ನಿಜವೇ ಅಥವಾ ಹೊಸ ವ್ಯಾಖ್ಯೆಯ ಅವಶ್ಯಕತೆ ಇದೆಯೇ? ಲಕ್ಷ್ಯ ಸಿನಿಮಾ ನೋಡಿರುವಿರಾ? ಅದರಲ್ಲಿ ನಾಯಕನಿಗೆ ನಾಯಕಿಯ ತಂದೆ ಹೇಳುತ್ತಾನೆ : ನೋಡು ಮಗೂ, ನೀನು ಚಹಾ ತಯಾರಿಸುವವನಾದರೆ, ಅತ್ಯಂತ ಶ್ರೇಷ್ಠ ಚಹಾ ಸಿದ್ಧಗೊಳಿಸಬೇಕು. ಹುಲ್ಲು ಹಾಸನ್ನು ಅಂದಗೊಳಿಸುವವನಾದರೆ ಅದನ್ನು ಬಹಳ ಚೆನ್ನಾಗಿ ಕತ್ತರಿಸಬೇಕು. …

Read More »
error: Content is protected !!