Sunday , February 17 2019
ಕೇಳ್ರಪ್ಪೋ ಕೇಳಿ
Home / Tag Archives: kannada

Tag Archives: kannada

ಜೂಹಿ ಚಾವ್ಲಾ ಈಗ ಕನ್ನಡ ಶಿಕ್ಷಕಿ, ಕನ್ನಡ ಗಾಯಕಿ…!

ಬೆಂಗಳೂರು : ಬಾಲಿವುಡ್ ನಟಿ ಜೂಹಿ ಚಾವ್ಲಾ ಮತ್ತೊಮ್ಮೆ ಕನ್ನಡಕ್ಕೆ ಬಂದಿದ್ದಾರೆ. ಈ ಹಿಂದೆ ರವಿಚಂದ್ರನ್ ಅಭಿನಯದ ಪ್ರೇಮಲೋಕ, ಶಾಂತಿಕ್ರಾಂತಿ ಮತ್ತು ಕಿಂದರಿಜೋಗಿ ಚಿತ್ರಗಳಲ್ಲಿ ಅಭಿನಯಿಸಿ ಕನ್ನಡಿಗರ ಮನಗೆದ್ದಿದ್ದ ಜೂಹಿ ಇತ್ತೀಚೆಗೆ ರಮೇಶ್ ಅರವಿಂದ್ ಅವರ 100ನೇ ಚಿತ್ರ ಪುಷ್ಪಕ ವಿಮಾನದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಇದೇ ಜೂಹಿ ಮತ್ತೆ ಸ್ಯಾಂಡಲ್‍ವುಡ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ, ಸ್ವಲ್ಪ ಡಿಫ್ರೆಂಟ್ ಆದ ರೋಲ್ ಅನ್ನೇ ಜೂಹಿ ಇಲ್ಲಿ ನಿಭಾಯಿಸುತ್ತಿದ್ದಾರೆ. ಈ ಬಾರಿ ಜೂಹಿ ಅಭಿನಯಿಸುತ್ತಿರುವ …

Read More »

ಕನ್ನಡದಲ್ಲೂ ಆರು ಚಿತ್ರಗಳಲ್ಲಿ ನಟಿಸಿದ್ದರು ಶ್ರೀದೇವಿ…

ಬೆಂಗಳೂರು : ದಕ್ಷಿಣ ಭಾರತದ ಚಿತ್ರರಂಗದಲ್ಲಿ ಪಯಣ ಆರಂಭಿಸಿ ಬಾಲಿವುಡ್‍ನಲ್ಲಿ ಸ್ಟಾರ್ ಆಗಿ ಅರಳಿದ್ದ ನಟಿ ಶ್ರೀದೇವಿ ಕನ್ನಡದಲ್ಲೂ ಆರು ಚಿತ್ರಗಳಲ್ಲಿ ನಟಿಸಿದ್ದರು… 1974ರಲ್ಲಿ ಬಾಲಭಾರತ, ಸಂಪೂರ್ಣ ರಾಮಾಯಣ, ಯಶೋಧಾ ಕೃಷ್ಣ ಚಿತ್ರಗಳಲ್ಲಿ ಶ್ರೀದೇವಿ ನಟಿಸಿದ್ದರು. ಇನ್ನು, ವರನಟ ರಾಜ್‍ಕುಮಾರ್ ಅಭಿನಯದ ಭಕ್ತಕುಂಬಾರ ಚಿತ್ರದಲ್ಲಿ ಸಂತ ನಾಮದೇವನ ಸಹೋದರಿಯ ಪಾತ್ರದಲ್ಲಿ ಶ್ರೀದೇವಿ ಬಣ್ಣ ಹಚ್ಚಿದ್ದರು. ಇನ್ನು, ಹೆಣ್ಣು ಸಂಸಾರದ ಕಣ್ಣು ಚಿತ್ರದಲ್ಲೂ ಶ್ರೀದೇವಿ ನಾಯಕಿ. ಇದಾದ ಬಳಿಕ ಪ್ರಿಯಾ ಎಂಬ …

Read More »

ಬಾಲಿವುಡ್‍ಗೆ ಹಾರುತ್ತಿದ್ದಾರೆ ಶೃದ್ಧಾ ಶ್ರೀನಾಥ್…

ಬೆಂಗಳೂರು : ಯು ಟರ್ನ್ ಮೂಲಕ ಬೆಳಕಿಗೆ ಬಂದಿದ್ದ ಶೃದ್ಧಾ ಶ್ರೀನಾಥ್ ಈಗ ಬೇಡಿಕೆಯ ನಟಿಯಾಗಿ ಹೊರಹೊಮ್ಮಿದ್ದಾರೆ. ಸ್ಟಾರ್ ನಟರೊಂದಿಗೆಲ್ಲಾ ಶೃದ್ಧಾ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದಾರೆ. ತೆಲುಗು, ತಮಿಳಿನಲ್ಲೂ ತನ್ನ ಪ್ರತಿಭೆಯನ್ನು ಪ್ರದರ್ಶಿಸಿರುವ ಶೃದ್ಧಾ ಬಾಲಿವುಡ್‍ಗೆ ಹಾರಲು ಸಿದ್ಧರಾಗಿದ್ದಾರೆ. ತಮಿಳಿನಲ್ಲಿ ಮಾಧವನ್ ಜೊತೆಗಿನ ವಿಕ್ರಮ್ ವೇದಾ ಚಿತ್ರದಲ್ಲಿ ಲಾಯರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಶೃದ್ಧಾಗೆ ಈಗ ಬಾಲಿವುಡ್ ಭಾಗ್ಯದ ಬಾಗಿಲು ತೆರೆದಿದೆ. ಟಿಗ್ಮಾನ್ಶು ದುಲಿಯಾ ಅವರ `ಮಿಲನ್ ಟಾಕೀಸ್’ ಚಿತ್ರಕ್ಕೆ ಶೃದ್ಧಾ …

Read More »

ಕಾಲೇಜು ದಿನಗಳ ಮೆಲುಕು : ರಂಗಿತರಂಗ ಸಹೋದರರ `ರಾಜರಥ’ದ ಕಾಲೇಜು ಹಾಡು ರಿಲೀಸ್

ಬೆಂಗಳೂರು : ರಂಗಿತರಂಗ ಚಿತ್ರದ ಮೂಲಕ ಹೊಸ ಭರವಸೆ ಮೂಡಿಸಿದ್ದ ನಿರೂಪ್, ಅನೂಪ್ ಭಂಡಾರಿ ಸಹೋದರರು ಈಗ ರಾಜರಥ ಚಿತ್ರದ ಮೂಲಕ ಮತ್ತೊಂದು ಸಲ ತೆರೆಗೆ ಬರಲು ಸಿದ್ಧವಾಗುತ್ತಿದ್ದಾರೆ. ಈ ರಾಜರಥ ಈಗಾಗಲೇ ಜನರಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಈ ನಿರೀಕ್ಷೆ ತಣಿಸುವ ಸಲುವಾಗಿ ರಾಜರಥದ ಮೊದಲ ಹಾಡು ರಿಲೀಸ್ ಆಗಿದೆ. ಈ ಹಾಡು ಕಾಲೇಜು ದಿನಗಳನ್ನು ನೆನಪಿಸುತ್ತದೆ. ಕಾಲೇಜು ದಿನಗಳ ತುಂಟಾಟ, ಪ್ರೀತಿ ಪ್ರೇಮದ ಆಕರ್ಷಣೆ ಈ ಹಾಡಿನಲ್ಲಿ …

Read More »

ಬಿಗ್​ಬಾಸ್​ ಬಗ್ಗೆ ವೈರಲ್ ಆದ ವೀಡಿಯೋ : ಸ್ಪಷ್ಟನೆ ನೀಡಿದ್ದಾರೆ ಪರಮೇಶ್ವರ್ ಗುಂಡ್ಕಲ್​

ಬೆಂಗಳೂರು : ಕಲರ್ಸ್​ ಕನ್ನಡ ವಾಹಿನಿಯ ಬ್ಯುಸಿನೆಸ್ ಹೆಡ್ ಮತ್ತು ನಟಿ ಮಾಳವಿಕಾ ಅವರ ವೀಡಿಯೋವೊಂದು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಬಿಗ್​ಬಾಸ್​ ಸೀಸನ್​ 4 ರಲ್ಲಿ ನಟಿ ಮಾಳವಿಕಾ ಸೀಕ್ರೆಟ್​ ರೂಮ್​ಗೆ ಹೋಗುವ ಸಂದರ್ಭದ ಈ ವೀಡಿಯೋದಲ್ಲಿ ಪರಮೇಶ್ವರ್​ ಗುಂಡ್ಕಲ್​ ಕೂಡಾ ಕಾಣಿಸಿಕೊಂಡಿದ್ದರು. ಈ ವೀಡಿಯೋ ವೈರಲ್ ಆಗಿ ವಿವಾದದ ರೂಪ ತಾಳಿತ್ತು. ಆದರೆ, ಈಗ ಈ ವೀಡಿಯೋ ಬಗ್ಗೆ ಬಿಗ್​ಬಾಸ್​ ನಿರ್ದೇಶಕರೂ ಆದ ಪರಮೇಶ್ವರ್​ …

Read More »

ರಕ್ಷಿತ್ ಶೆಟ್ಟಿ ಚಿತ್ರದಲ್ಲಿ ನವೀನ್ ಪೌಲಿ…

ಬೆಂಗಳೂರು : ಮಲಯಾಳಂ ಸಿನೆಮಾ ಸ್ಟಾರ್​ ನವೀನ್ ಪೌಲಿ ಈಗ ಮಂಗಳೂರಿನಲ್ಲಿ ಶೂಟಿಂಗ್​​ನಲ್ಲಿ ಬ್ಯುಸಿ ಇದ್ದಾರೆ. ಸೆಪ್ಟೆಂಬರ್​ 25 ರಿಂದ ನವೀನ್​ ಕರಾವಳಿಯಲ್ಲಿ ಇದ್ದಾರೆ. ಇವರ ‘ಕಯಾಮ್ಕುಲಮ್​​​ ಕುಚುನಿ’ ಚಿತ್ರದ ಶೂಟಿಂಗ್ ಇಲ್ಲೇ ನಡೆಯುತ್ತಿದೆ. ದಕ್ಷಿಣ ಕನ್ನಡದ ಭಾಗದಲ್ಲೇ ಬಹುದಿನಗಳ ಕಾಲ ಈ ಚಿತ್ರದ ಶೂಟಿಂಗ್ ನಡೆಯುತ್ತಿದೆ. ನವೀನ್​​ಗೆ ಈ ಚಿತ್ರದಲ್ಲಿ ರಾಬಿನ್​ ಹುಡ್​ ಗೆಟಪ್​​. ಕೇರಳದ ಕಳ್ಳನೊಬ್ಬನ ಕತೆಯೇ ಇದು. ಈ ಚಿತ್ರದ ಶೂಟಿಂಗ್ ಮಂಜೇಶ್ವರ, ಉಡುಪಿ ಸೇರಿದಂತೆ …

Read More »

ಕನ್ನಡಕ್ಕೆ ವಿಕ್ರಂ ವೇದ… : ಮೂರು ಭಾಷೆಯ ರಿಮೇಕ್​​ನಲ್ಲಿ ಇರಲಿದ್ದಾರಾ ಕಿಚ್ಚ…?

ಬೆಂಗಳೂರು : ಕಾಲಿವುಡ್​​ನ ಸೂಪರ್​ಹಿಟ್​ ಚಿತ್ರ ವಿಕ್ರಂ ವೇದ ಈಗ ಕನ್ನಡ ಸೇರಿದಂತೆ ಬೇರೆ ಭಾಷೆಗೆ ರಿಮೇಕ್ ಆಗುತ್ತಿದೆ. ಈ ಬಗ್ಗೆ ಮಾತುಕತೆ  ನಡೆಯುತ್ತಿದೆ. ಮಾಧವನ್ ಮತ್ತು ವಿಜಯ್​ ಸೇತುಪತಿ ಅಭಿನಯದ ಈ ಚಿತ್ರ ಬಾಕ್ಸ್ ಆಫೀಸ್​ನಲ್ಲಿ ಸಖತ್​ ಹೆಸರು ಮಾಡಿತ್ತು. ವಿಮರ್ಶಕರಿಂದಲೂ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ಮಾಧವನ್​ ಪೊಲೀಸ್ ಅಧಿಕಾರಿಯ ಪಾತ್ರ ನಿರ್ವಹಿಸಿದ್ದರೆ, ವಿಜಯ್ ಸೇತುಪತಿ ಗ್ಯಾಂಗ್​ಸ್ಟರ್ ಪಾತ್ರ ಮಾಡಿದ್ದರು. ಕನ್ನಡತಿ ಶೃದ್ಧಾ ಶ್ರೀನಾಥ್​ ಅವರು ಕೂಡಾ ಮಾಧವನ್ …

Read More »

ಬಿಗ್​ಬಾಸ್​ 5 : ಭರ್ಜರಿ ಪ್ರೋಮೋ ರಿಲೀಸ್

ಬೆಂಗಳೂರು : ಕನ್ನಡದ ಪ್ರಸಿದ್ಧ ರಿಯಾಲಿಟಿ ಶೋ ಬಿಗ್​ ಬಾಸ್​ನ ಹವಾ ಶುರುವಾಗಿದೆ. ಕಿಚ್ಚ ಸುದೀಪ್ ನಿರೂಪಣೆಯ ಈ ರಿಯಾಲಿಟಿ ಶೋ ಕುತೂಹಲ ಕೆರಳಿಸಿದೆ. ಈಗಾಗಲೇ ನಾಲ್ಕು ಸೀಸನ್ ಪೂರ್ಣಗೊಳಿಸಿರುವ ಬಿಗ್​ಬಾಸ್​ ಐದನೇ ಸೀಸನ್​​ನ ಸಿದ್ಧತೆಯಲ್ಲಿದೆ. ಅಲ್ಲದೆ, ಈ ಶೋಗೆ ದಿನಗಣನೆ ಶುರುವಾಗಿದೆ. ಜನರ ಈ ಕುತೂಹಲಕ್ಕೆ ಸರಿಯಾಗಿ ಒಂದು ಪ್ರೋಮೋ ಕೂಡಾ ರಿಲೀಸ್ ಆಗಿದೆ…

Read More »

ಮಾಸ್​ ಲೀಡರ್​ ಬಿಡುಗಡೆಗೆ ಇದ್ದ ಅಡ್ಡಿ ನಿವಾರಣೆ : ಆಗಸ್ಟ್​ 11ಕ್ಕೆ ಶಿವಣ್ಣನ ಚಿತ್ರ ರಿಲೀಸ್​

ಬೆಂಗಳೂರು : ಕರುನಾಡ ಚಕ್ರವರ್ತಿ ಶಿವರಾಜ್​ಕುಮಾರ್​​ ಅಭಿನಯದ ಮಾಸ್ ಲೀಡರ್​ ಚಿತ್ರಕ್ಕೆ ಇದ್ದ ಅಡ್ಡಿ ನಿವಾರಣೆಯಾಗಿದೆ. ಟೈಟಲ್​​ಗೆ ಸಂಬಂಧಿಸಿದ ವಿವಾದ ಚಿತ್ರದ ಬಿಡುಗಡೆಗೆ ತಡೆಯಾಜ್ಞೆ ತರುವ ತನಕ ಬಂದಿತ್ತು. ಇದೀಗ ಈ ವಿವಾದ ಬಗೆಹರಿದಿದ್ದು, ನಿಗದಿಯಂತೆ ಆಗಸ್ಟ್​ 11 ರಂದು ಮಾಸ್​ ಲೀಡರ್​ ತೆರೆಗಪ್ಪಳಿಸಲಿದೆ. ಲೀಡರ್​ ಟೈಟಲ್​ ತನ್ನ ಬಳಿ ಇರುವುದರಿಂದ ಮಾಸ್​ ಲೀಡರ್​ ಚಿತ್ರ ರಿಲೀಸ್ ಮಾಡಬಾರದು ಎಂದು ನಿರ್ದೇಶಕ ಎಎಂಆರ್ ರಮೇಶ್​ ಆರಂಭದಿಂದಲೂ ಆಗ್ರಹಿಸುತ್ತಿದ್ದರು. ಮೊನ್ನೆ ರಮೇಶ್ …

Read More »

ಆಗಸ್ಟ್​ 23ಕ್ಕೆ ಪ್ರಿಯಾಮಣಿ ವಿವಾಹ…? : ಸರಳ ಮದುವೆಗೆ ನಿರ್ಧಾರ…?

ಬೆಂಗಳೂರು : ಬಹುಭಾಷಾ ನಟಿ ಪ್ರಿಯಾಮಣಿ ಇದೀಗ ಮದುವೆಯ ಸಿದ್ಧತೆಯಲ್ಲಿದ್ದಾರಾ…? ಹೌದು ಎನ್ನುತ್ತಿದೆ ಒಂದಷ್ಟು ಮೂಲಗಳು… ಸದ್ಯ ಹರಿದಾಡುತ್ತಿರುವ ಸುದ್ದಿಗಳ ಪ್ರಕಾರ ಆಗಸ್ಟ್​ 23ಕ್ಕೆ ಪ್ರಿಯಾಮಣಿ ಮದುವೆಯಾಗಲಿದ್ದಾರಂತೆ. ಕನ್ನಡತಿ ಪ್ರಿಯಾಮಣಿ ಪ್ರೀತಿಗೆ ಬಿದ್ದು ಬಹಳ ವರ್ಷವೇ ಆಗಿದೆ… ಪ್ರಿಯಾಮಣಿ ಪ್ರೀತಿಯ ಸುದ್ದಿ ಬಹಳ ಹಳೆಯದ್ದೇ… ಆದರೆ, ಈ ಪ್ರೀತಿ ಈಗ ಮದುವೆಯ ಮಟ್ಟಕ್ಕೆ ತಲುಪಿದೆ ಎಂಬುದು ಈಗ ಹೊಸ ಸುದ್ದಿ… ಮುಸ್ತಾಫ ರಾಜ್​ ಪ್ರಿಯಾಮಣಿ ಬಾಳ ಸಂಗಾತಿಯಾಗಿ ಬರಲಿದ್ದಾರೆ. ಕಳೆದ …

Read More »
error: Content is protected !!