Monday , June 25 2018
ಕೇಳ್ರಪ್ಪೋ ಕೇಳಿ
Home / Tag Archives: Sanjay Dutt

Tag Archives: Sanjay Dutt

ಸಂಜೂ ಟೀಕೆ : ಸಲ್ಮಾನ್ ಮಾತಿಗೆ ರಣಬೀರ್ ತಿರುಗೇಟು…!

ಮುಂಬೈ : ಬಾಲಿವುಡ್ ನಟ ಸಂಜಯ್ ದತ್ ಅವರ ಜೀವನವನ್ನೇ ತೆರೆಗೆ ತರುವ ‘ಸಂಜೂ’ ಚಿತ್ರ ಈಗ ಸಖತ್ ಹೈಪ್ ಕ್ರಿಯೇಟ್ ಮಾಡಿದೆ. ರಾಜ್​ಕುಮಾರ್ ಇರಾನಿ ನಿರ್ದೇಶನದ ಈ ಚಿತ್ರದಲ್ಲಿ ರಣಬೀರ್ ಕಪೂರ್ ಸಂಜಯ್ ದತ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಎಲ್ಲರೂ ರಣಬೀರ್ ನಟನೆಗೆ ಈಗಾಗಲೇ ಫಿದಾ ಆಗಿದ್ದಾರೆ. ಆದ್ರೆ, ಬಾಲಿವುಡ್​ನ ಸ್ಟಾರ್ ಹಾಗೂ ದತ್ ಸ್ನೇಹಿತ ಸಲ್ಮಾನ್ ಖಾನ್ ಮಾತ್ರ ಈ ಬಗ್ಗೆ ಡಿಫ್ರೆಂಟ್ ಆದ ಅಭಿಪ್ರಾಯವನ್ನೇ ಹೊಂದಿದ್ದಾರೆ. ‘ಈ …

Read More »

20 ವರ್ಷದ ಬಳಿಕ ಒಂದಾಗುತ್ತಿದ್ದಾರೆ ಮಾಧುರಿ, ಸಂಜಯ್ ದತ್…! : ಮಾಜಿ ಪ್ರೇಮಿಗಳನ್ನು ಒಂದಾಗಿಸುತ್ತಿದೆ `ಕಳಂಕ್’…!

ಮುಂಬೈ : ಬಾಲಿವುಡ್ ಲೋಕದ ಬಗ್ಗೆ ಗೊತ್ತಿರುವವರಿಗೆ ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಮತ್ತು ಸಂಜಯ್ ದತ್ ನಡುವಣ ಸಂಬಂಧದ ಬಗೆಗೂ ಗೊತ್ತಿರುತ್ತದೆ. ಒಂದು ಕಾಲದಲ್ಲಿ ಈ ಜೋಡಿ ಆನ್‍ಸ್ಕ್ರೀನ್ ಮತ್ತು ಆಫ್‍ಸ್ಕ್ರೀನ್ ಎರಡರಲ್ಲೂ ಸುದ್ದಿ ಮಾಡಿತ್ತು. ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದ ಈ ಜೋಡಿ ಹಲವು ಕಡೆ ಒಟ್ಟಾಗಿ ಕಾಣಿಸಿಕೊಳ್ಳುವ ಮೂಲಕ ಗಾಸಿಪ್ ಕಾಲಂಗೆ ಆಹಾರವಾಗಿದ್ದರು. ಅದರಲ್ಲೂ ಇವರಿಬ್ಬರು ಪ್ರೀತಿಗೆ ಬಿದ್ದಿದ್ದು, ಇನ್ನೇನು ಮದ್ವೆ ಆಗಿಯೇ ಬಿಡುತ್ತಾರೆ …

Read More »

ನೆಚ್ಚಿನ ನಟನ ಹೆಸರಿಗೆ ತನ್ನೆಲ್ಲಾ ಆಸ್ತಿ ಬರೆದಿಟ್ಟು ಕೊನೆಯುಸಿರೆಳೆದ ಅಭಿಮಾನಿ…!

ಮುಂಬೈ : ಸಿನೆಮಾ ಸ್ಟಾರ್‍ಗಳ ಅಭಿಮಾನಿಗಳು ತಮ್ಮ ಅಭಿಮಾನವನ್ನು ಬೇರೆ ಬೇರೆ ರೀತಿ ವ್ಯಕ್ತಪಡಿಸುತ್ತಾರೆ… ಮಕ್ಕಳಿಗೆ ಹೆಸರಿಟ್ಟು, ತನ್ನ ಕೈಯಲ್ಲಿ ಹಚ್ಚೆ ಹಾಕಿಕೊಂಡು ಅಥವಾ ಊರಿನ ರಸ್ತೆಗೆ ಹೆಸರಿಟ್ಟು, ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿ ಅಭಿಮಾನಿಗಳು ತಮ್ಮ ಪ್ರೀತಿ ಗೌರವವನ್ನು ಸಾರುತ್ತಾರೆ. ಆದರೆ, ಇಲ್ಲೊಬ್ಬರು ಅಭಿಮಾನಿ ತುಂಬಾ ಡಿಫ್ರೆಂಟ್… ಇವರು ತನ್ನೆಲ್ಲಾ ಆಸ್ತಿಯನ್ನು ತಾನು ಮೆಚ್ಚುವ ನಟನ ಹೆಸರಿಗೆ ಬರೆದಿಟ್ಟು ಕೊನೆಯುಸಿರೆಳೆದಿದ್ದಾರೆ. ಇಂತಹ ದೊಡ್ಡ ಅಭಿಮಾನಿಯನ್ನು ಪಡೆದವರು ಬಾಲಿವುಡ್ ನಟ ಸಂಜಯ್ …

Read More »

ಬಿ ಟೌನ್​ನಲ್ಲಿ ಸುನಿಲ್ ಶೆಟ್ಟಿ ‘ಅಣ್ಣ’ ಆಗಿದ್ದು ಹೇಗೆ ಗೊತ್ತಾ…?

ಸುನಿಲ್ ಶೆಟ್ಟಿ ಬಾಲಿವುಡ್​ನ ಕಟ್​ಮಸ್ತ್​ ಹೀರೋ. ಕರುನಾಡ ಕುವರ ಇವರು. ಸುನಿಲ್ ಶೆಟ್ಟಿ ಮೂಲ ಕರ್ನಾಟಕದ ದಕ್ಷಿಣ ಕನ್ನಡ. ಇಂತಹ ಹುಡುಗ ಒಂದು ಕಾಲದಲ್ಲಿ ಬಾಲಿವುಡ್​ನಲ್ಲಿ ಆಳಿದ್ದ ಹೀರೋ. ಈಗಲೂ ಸುನಿಲ್ ಶೆಟ್ಟಿಗೆ ಬಿ ಟೌನ್​ನಲ್ಲಿ ತನ್ನದೇ ಆದ ಸ್ಥಾನಮಾನ ಇದೆ. ಸಿನಿಲೋಕ ಕಂಡ ಸಚ್ಚಾರಿತ್ರ ಹೀರೋಗಳಲ್ಲಿ ಸುನಿಲ್ ಶೆಟ್ಟಿ ಕೂಡಾ ಒಬ್ಬರು. ಇಂತಹ ಸುನಿಲ್ ಬಾಲಿವುಡ್​ಗೆ ‘ಅಣ್ಣ’ ಎಂಬುದು ಬಹುಶಃ ಬಹುತೇಕರಿಗೆ ಗೊತ್ತಿಲ್ಲ. ಸಂಜಯ್​ ದತ್​ರಿಂದ ಅಣ್ಣ ಆದ …

Read More »

ರಣಬೀರ್​​​ಗೆ ಪದೇ ಪದೇ ಕರೆ ಮಾಡುತ್ತಿರುವ ಸಂಜಯ್​ ಪತ್ನಿ…! : ಕಾರಣ ಕೇಳಿದ್ರೆ ನಿಮ್ಗೆ ಶಾಕ್​ ಆಗ್ಬಹುದು, ನಗೂ ಬರಬಹುದು…!

ಮುಂಬೈ : ಬಾಲಿವುಡ್ ನಿರ್ದೇಶಕ ರಾಜ್​ಕುಮಾರ್ ಇರಾನಿ ಬಾಲಿವುಡ್​ ನಟ ಸಂಜಯ್​ ದತ್​ ಜೀವನವನ್ನು ಚಿತ್ರ ಮಾಡುತ್ತಿದ್ದಾರೆ. ರಣಬೀರ್ ಕಪೂರ್​​​​​​ ಸಂಜಯ್​ ದತ್​ ಪಾತ್ರದಲ್ಲಿ ಇಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರಕ್ಕೆ ಸಂಜು ಎಂದು ಹೆಸರೂ ಇಡಲಾಗಿದೆ. 2018 ರ ಬಹುನಿರೀಕ್ಷಿತ ಚಿತ್ರಗಳ ಸಾಲಿನಲ್ಲಿ ಸಂಜು ಕೂಡಾ ಇದೆ. ರಣಬೀರ್ ಕೂಡಾ ಸಂಜಯ್ ಪಾತ್ರಕ್ಕೆ ಸಾಕಷ್ಟು ಬೆವರಳಿಸಿದ್ದಾರೆ. ಆದರೆ, ಈ ಎಲ್ಲದರ ನಡುವೆ ಒಬ್ಬರು ಮಾತ್ರ ಈ ಚಿತ್ರದ ಬಗ್ಗೆ ತುಂಬಾ …

Read More »

‘ಏಕಕಾಲದಲ್ಲಿ ಮೂವರನ್ನು ಲವ್ ಮಾಡುತ್ತಿದ್ದೆ…!’

ಮುಂಬೈ : ಬಾಲಿವುಡ್​ ನಟ ಸಂಜಯ್​ ದತ್​ ಇತ್ತೀಚಿನ ದಿನಗಳಲ್ಲಿ ತುಂಬಾ ಓಪನ್ ಆಗಿ ಮಾತನಾಡುತ್ತಿದ್ದಾರೆ. ತಮ್ಮ ಜೈಲು ಜೀವನ, ಮಾದಕ ವ್ಯಸನ ಹೀಗೆ ವೈಯಕ್ತಿಕ ಬದುಕಿನ ಬಗ್ಗೆ ದತ್​ ಯಾವುದೇ ಮುಚ್ಚುಮರೆ ಮಾಡುತ್ತಿಲ್ಲ. ಈ ಮೂಲಕ ನನ್ನಂತೆ ಯಾರೂ ಆಗಬೇಡಿ ಎಂದೂ ಮನವಿ ಮಾಡಿಕೊಳ್ಳುತ್ತಿದ್ದಾರೆ. ಹೀಗೆ ಮಾತನಾಡುತ್ತಾ ಸಂಜಯ್ ತನ್ನ ಲವ್ ಅಫೇರ್​ಗಳ ಬಗ್ಗೆಯೂ ಹೇಳಿಕೊಂಡಿದ್ದಾರೆ. ಏಕಕಾಲದಲ್ಲಿ ಮೂವರೊಂದಿಗೆ ನಾನು ಅಫೇರ್ ಹೊಂದಿದ್ದೆ ಎನ್ನುವುದು ಸಂಜಯ್ ಮಾತು. ಆದರೆ, …

Read More »

‘ನನ್ನ ಮಗ ನನ್ನಂತೆ ಆಗುವುದು ಬೇಡ. ಇದು ನನ್ನ ಪ್ರಾರ್ಥನೆ’

ಮುಂಬೈ : ಮಾದಕ ದ್ರವ್ಯ ವ್ಯಸನ, ಜೈಲು ಜೀವನ ಸೇರಿದಂತೆ ಹಲವು ಕಷ್ಟಗಳನ್ನು ಎದುರಿಸಿರುವ ಸಂಜಯ್​ ದತ್​ ಮನಸ್ಸು ಈಗ ಮಾಗಿದೆ. ಬಿಸಿರಕ್ತದ ಸಂದರ್ಭದಲ್ಲಿ ಮಾಡಿದ ಕೆಲವೊಂದು ತಪ್ಪುಗಳು ಈಗ ಕಾಡಲಾರಂಭಿಸಿದೆ. ಹೀಗಾಗಿ, ನನ್ನ ಮಗ ನನ್ನಂತೆ ಆಗುವುದು ಬೇಡ ಎಂದು ಬಾಲಿವುಡ್​​ ನಟ ಸಂಜಯ್​ ದತ್​ ದಿನ ಪ್ರಾರ್ಥಿಸುತ್ತಿದ್ದಾರಂತೆ. ಅದೂ ಅಲ್ಲದೆ, ನನ್ನಂತೆ ಯಾರೂ ಆಗುವುದು ಬೇಡ, ನನ್ನ ಜೀವನವನ್ನೇ ಉದಾಹರಣೆಯಾಗಿ ತೆಗೆದುಕೊಂಡು ಬದುಕು ಬದಲಾಯಿಸಿಕೊಳ್ಳಿ ಎಂದೂ ಸಂಜೂಬಾಬಾ …

Read More »
error: Content is protected !!